Breaking News

Breaking News

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳ ಬಂಧನ

ಬೆಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಗಾಂಜಾ, ಎಂಡಿಎಂಎ ಹಾಗೂ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಹೊರ ರಾಜ್ಯದವರು ಹಾಗೂ ಮೂವರು ಸ್ಥಳೀಯರು. ಆರೋಪಿಗಳಿಂದ ಒಟ್ಟು ₹14.94 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬೊಮ್ಮನಹಳ್ಳಿ, ಸಿಟಿ ಮಾರ್ಕೆಟ್, ಡಿ.ಜೆ.ಹಳ್ಳಿ ಹಾಗೂ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟದ ಬಗ್ಗೆ ಬಂದ ಮಾಹಿತಿ ಆಧರಿಸಿ …

Read More »

ಕುಣಿಗಲ್‌: ಅಣ್ಣನನ್ನು ಕೊಲೆ ಮಾಡಿ ಮಲ ಗುಂಡಿಯಲ್ಲಿ ಮುಚ್ಚಿಟ್ಟ ತಮ್ಮ

ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಬೆನವಾರ ಕೊಪ್ಪಲು ಗ್ರಾಮದಲ್ಲಿ ಜಮೀನು ವಿಚಾರಕ್ಕೆ ತಮ್ಮನೇ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವರದರಾಜು (65) ಕೊಲೆಯಾದವರು, ರಾಮದಾಸ್ (62) ಆರೋಪಿಯಾಗಿದ್ದು, ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದರು. ಆಗಸ್ಟ್ 15ರಂದು ಒಂದು ಎಕರೆ ಜಮೀನು ಹಂಚಿಕೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಬಳಿಕ ವರದರಾಜು ಅವರನ್ನು ಕೊಲೆ ಮಾಡಲಾಗಿದೆ. ಮೃತದೇಹವನ್ನು ಮಲದ ಗುಂಡಿಗೆ ಹಾಕಿ ಚಪ್ಪಡಿಕಲ್ಲು ಹಾಗೂ ತೆಂಗಿನ ಗರಿಗಳಿಂದ …

Read More »

ಸ್ನ್ಯಾಪ್ ಚಾಟ್​​ನ ಮೂಲಕ ಪರಿಚಯ, ಪ್ರೀತಿ! ಗಂಡ-ಮಗನ ಹತ್ಯೆ ಹಿಂದಿನ ಸ್ಪೋಟಕ ವಿಚಾರ ರಿವೀಲ್

ಬೆಂಗಳೂರು: ಸ್ನ್ಯಾಪ್‌ಚಾಟ್ ಮೂಲಕ ಪರಿಚಯವಾಗಿ ಪ್ರೀತಿಗೆ ತಿರುಗಿದ ಸಂಬಂಧವೇ ತಂದೆ-ಮಗನ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಹರಿಣಿ ಹಾಗೂ ವಿನಯ್ ಎರಡು ವರ್ಷಗಳ ಹಿಂದೆ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. 2021ರಲ್ಲಿ ಹರಿಣಿ ಹಾಗೂ ಅಭಿನಂದನ್ ಮದುವೆಯಾಗಿದ್ದರು. ಆದರೆ ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದ್ದು, ವಿನಯ್ ಜೊತೆ ಹೋಗಲು ಹರಿಣಿ ಪತಿಗೆ ವಿಚ್ಛೇದನ ನೀಡುವಂತೆ ಕೇಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೂ ಮುನ್ನ …

Read More »

ಬಾಯಿಗೆ ಮಣ್ಣು ಹಾಕಿಕೊಂಡು ಬಿಜೆಪಿ ಕಾರ್ಯಕರ್ತರಿಂದ ವಿನೂತನ ಹೋರಾಟ!-

ಮಂಡ್ಯದಲ್ಲಿ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ CWMA ವಿರುದ್ಧ ವಿನೂತನ ಪ್ರತಿಭಟನೆ ನಡೆಯಿತು. ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಮಣ್ಣನ್ನು ತಿನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ರೈತರ ಬಾಯಿಗೆ ಮಣ್ಣು ಹಾಕಿದೆ ಎಂದು ಕಿಡಿಕಾರಿದರು. ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ, ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಘೋಷಣೆ ಕೂಗಿದರು. ರಾಜ್ಯದ ಜಲಾಶಯಗಳಲ್ಲಿ ನೀರು ಕಡಿಮೆಯಾಗುತ್ತಿರುವಾಗ ರೈತರ …

Read More »

ಕಲಬುರ್ಗಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ : ಪತಿಯನ್ನು ಕೊಡಲಿಯಿಂದ ಹೊಡೆದು ಕೊಂದ ಪತ್ನಿ!

ಕಲಬುರಗಿ: ಪತಿ-ಪತ್ನಿ ನಡುವಿನ ಕೌಟುಂಬಿಕ ಜಗಳ ತೀವ್ರ ವಿಕೋಪಕ್ಕೆ ತಿರುಗಿ, ಕೋಪಗೊಂಡ ಪತ್ನಿಯೇ ಕೊಡಲಿಯಿಂದ ಹಲ್ಲೆ ನಡೆಸಿ ಪತಿಯನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ನಡೆದಿದೆ. ಮೂಲತಃ ಸೇಡಂ ತಾಲೂಕಿನ ಯಡ್ಡಳ್ಳಿ ಗ್ರಾಮದ ನಿವಾಸಿಯಾದ ನಾಗೇಂದ್ರ ಮುಧೋಳ (35) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಸುಧಾರಾಣಿ ಮುಧೋಳ (30) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪತಿಯ ತವರೂರನ್ನು ಬಿಟ್ಟು ಪತ್ನಿಯ ತವರೂರಾದ …

Read More »

ಬೆಂಗಳೂರು | ಕಟ್ಟಡ ಕಾಮಗಾರಿ ಸ್ಥಳದಲ್ಲಿ ಜಿಲೆಟಿನ್‌ ಕಡ್ಡಿ ಪತ್ತೆ: ಇಬ್ಬರ ಬಂಧನ

ಬೆಂಗಳೂರು: ಬೆಳ್ಳಂದೂರು ಸಮೀಪದ ಭೋಗನಹಳ್ಳಿಯ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಸುಮಾರು 800 ಕೆ.ಜಿ. ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅರುಣ್‌ಕುಮಾರ್, ಜಗನ್, ಪ್ರಭಾಕರ್ ಹಾಗೂ ಆದರ್ಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಕಲ್ಲಿನ ಬಂಡೆಗಳನ್ನು ತೆರವುಗೊಳಿಸಲು ಸುರಕ್ಷತಾ ಕ್ರಮಗಳಿಲ್ಲದೆ ಜಿಲೆಟಿನ್ ಕಡ್ಡಿ ಬಳಸಿ ಸ್ಫೋಟಿಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಲೆಯ ಸಮೀಪವೇ ಸ್ಫೋಟಕ ವಸ್ತುಗಳನ್ನು ಬಳಸಲಾಗುತ್ತಿದ್ದು, ಇದರಿಂದ ಮಕ್ಕಳು ಆತಂಕದಲ್ಲಿದ್ದಾರೆ …

Read More »

ಅಂಗಡಿ ಮಾಲಕನಿಗೆ ಬೆದರಿಕೆಯೊಡ್ಡಿ ಆಗಸಕ್ಕೆ ಗುಂಡು ಹಾರಾಟ

ಕಾಸರಗೋಡು: ಬಟ್ಯಪದವಿನ ಜನರಲ್‌ ಸ್ಟೋರ್‌ ಮಾಲಕ ಶುಯೇಬ್‌ ಮೊಯಿನ್ ಶೇಖ್‌ ಅವರಿಗೆ ಬೆದರಿಕೆಯೊಡ್ಡಿದ ಬಳಿಕ ನಾಲ್ವರ ತಂಡ ಆಗಸದಲ್ಲಿ ಗುಂಡು ಹಾರಿಸಿ ಪರಾರಿಯಾದ ಘಟನೆ ಆ.17 ರಂದು ಸಂಭವಿಸಿದೆ. ಕಾರಿನಲ್ಲಿ ಬಂದ ರಹೀಂ ಖಾದರ್‌ ಹಾಗೂ ಇತರ ಇಬ್ಬರು ಸೇರಿ ಆಗಸಕ್ಕೆ ಗುಂಡು ಹಾರಿಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿಗಳು ಹಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬ ಸಮಸ್ಯೆ ಘಟನೆಗೆ ಕಾರಣವೆನ್ನಲಾಗಿದೆ.

Read More »

ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

ಮಂಗಳೂರು: ಮಾರಾಟ ಮಾಡುವ ಉದ್ದೇಶದಿಂದ ಸ್ಕೂಟರ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಜಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪೊಳಲಿ ದ್ವಾರದ ಬಳಿ ವಾಹನ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ರಕ್ಷಿತ್ (23) ಹಾಗೂ ಅಕ್ಷಯ್ ಬಿ. (23) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಸುಮಾರು 1 ಕೆಜಿ 124 ಗ್ರಾಂ ಗಾಂಜಾ, ಡಿಜಿಟಲ್ ತೂಕದ ಯಂತ್ರ, ಜಿಪ್‌ಲಾಕ್ ಕವರ್‌ಗಳು, ಎರಡು ಮೊಬೈಲ್‌ಗಳು ಹಾಗೂ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಮಾರಿಪಳ್ಳದ ಶಾಕೀರ್ …

Read More »

ವಿವಿಧೆಡೆ ಇಸ್ಪೀಟ್‌ ಅಡ್ಡೆಗೆ ಪೊಲೀಸ್‌ ದಾಳಿ: 7 ಜನ ಸೆರೆ; ಇಬ್ಬರು ಪರಾರಿ

ಉಡುಪಿ ಜಿಲ್ಲೆಯ ಕೊಡ್ಲಾಡಿ ಗ್ರಾಮದ ಮಾರ್ಡಿಯಲ್ಲಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಶಂಕರನಾರಾಯಣ ಠಾಣೆ ಪೊಲೀಸರು ದಾಳಿ ನಡೆಸಿ ಅಶೋಕ್ ಬೋವಿ, ಭಾಸ್ಕರ್ ನಾಯ್ಕ ಹಾಗೂ ಭಾಸ್ಕರ್ ಶೆಟ್ಟಿ ಎಂಬ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ₹1,390 ನಗದು ಹಾಗೂ ಇತರ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಇನ್ನೊಂದೆಡೆ ಮಡಾಮಕ್ಕಿ ಗ್ರಾಮದ ಅಡಿಕೆ ತೋಟದ ತೆರೆದ ಶೆಡ್‌ನಲ್ಲಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಅಮಾಸೆಬೈಲು ಪೊಲೀಸರು ದಾಳಿ ನಡೆಸಿದ್ದಾರೆ. …

Read More »

ಪ್ರಿಯಕರನ ಜೊತೆ ಸೇರಿ ನಾನೇ ಗಂಡ, ಮಗುವನ್ನು ಕೊಂದೆ – ಪೊಲೀಸರೆದುರು ವಿಷಕನ್ಯೆ ತಪ್ಪೊಪ್ಪಿಗೆ!

ಚಿಕ್ಕಬಾಣವಾರದಲ್ಲಿ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟ ತಂದೆ-ಮಗನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ಅಭಿನಂದನ್ ಹಾಗೂ ಆರು ವರ್ಷದ ಮಗ ಯದುವೀರ್ ಸಾವಿನ ಹಿಂದೆ ಪತ್ನಿ ಹರಿಣಿ ಹಾಗೂ ಆಕೆಯ ಪ್ರಿಯಕರ ವಿನಯ್ ಕೈವಾಡವಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರ ಪ್ರಕಾರ, ಘಟನೆ ನಡೆದ ರಾತ್ರಿ ಹರಿಣಿ ಮನೆಯ ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಸೌಟ್‌ನಿಂದ ಅಭಿನಂದನ್ ತಲೆಗೆ …

Read More »