Breaking News

Breaking News

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ಪ್ರಕರಣ: ಹೊರಗುತ್ತಿಗೆ ನೌಕರ ರವೀಂದ್ರ ಕುಮಾರ್‌ಗೆ ಪೊಲೀಸ್ ಬಲೆ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (KUDA) ₹8.43 ಕೋಟಿ ಅಕ್ರಮ ವರ್ಗಾವಣೆಯಾಗಿರುವುದು ಆಡಿಟ್ ವೇಳೆ ಬಯಲಾಗಿದೆ. ಅಧ್ಯಕ್ಷರು ಹಾಗೂ ಸದಸ್ಯರಿಲ್ಲದ ಅವಧಿಯಲ್ಲಿ ಪ್ರಾಧಿಕಾರದ ಹೆಸರಿನಲ್ಲಿ ಅನಧಿಕೃತ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. 2022-23ರ ಅವಧಿಯಲ್ಲಿ ಹಾಗೂ ನಂತರ ಸುಮಾರು ಒಂದೂವರೆ ವರ್ಷಗಳ ಕಾಲ ಅಧ್ಯಕ್ಷರ ನೇಮಕವಾಗಿರಲಿಲ್ಲ. ಇದೇ ಸಮಯದಲ್ಲಿ ಕೊಪ್ಪಳದ ವಿವಿಧ ಬ್ಯಾಂಕ್‌ಗಳಲ್ಲಿ ನಕಲಿ ಖಾತೆಗಳನ್ನು ತೆರೆದು ₹8.43 ಕೋಟಿ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು, …

Read More »

ಕರ್ತವ್ಯನಿರತ ಕಾನ್ಸ್‌ಟೇಬಲ್‌ ಗೆ ಕಾಲಿನಿಂದ ಒದ್ದು ಹಲ್ಲೆ : ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ ‘FIR’

ಬೆಂಗಳೂರು: ಕರ್ತವ್ಯನಿರತ ಸಂಚಾರ ಪೊಲೀಸ್ ಕಾನ್ಸ್‌ಟೇಬಲ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅಲಿಯಾಸ್ ಗೊಟ್ಟಿಗೆರೆ ಮಂಜಣ್ಣ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಆಗಸ್ಟ್ 16ರಂದು ಹುಳಿಮಾವು ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಿಸುತ್ತಿದ್ದ ಕಾನ್ಸ್‌ಟೇಬಲ್ ಅರುಣ್ ಮಂಜಪ್ಪ ಅವರು ಮಂಜುನಾಥ್ ಅವರ ಕಾರನ್ನು ತಡೆದಿದ್ದಾರೆ. ಇದರಿಂದ ಕೋಪಗೊಂಡ ಮಂಜುನಾಥ್ ಹಾಗೂ ಅವರ ಬೆಂಬಲಿಗರು ಕಾನ್ಸ್‌ಟೇಬಲ್ ಜೊತೆ ವಾಗ್ವಾದ …

Read More »

ಬೆಂಗಳೂರಿನಲ್ಲಿ ‘ಪಾರ್ಕಿಂಗ್’ ಗಲಾಟೆ: ಕಾರಿನ ಬಾನೆಟ್ ಮೇಲೆ ಕಲ್ಲಿನಿಂದ ‘ನೋ ಪಾರ್ಕಿಂಗ್’ ಎಂದು ಕೆತ್ತಿ ವಿಕೃತ ಮೆರೆದ ದಂಪತಿ!

ಬೆಂಗಳೂರು ಬಿಟಿಎಂ ಲೇಔಟ್‌ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಬಲೀನೋ ಕಾರಿನ ಮೇಲೆ ಕಲ್ಲು ಹಾಗೂ ಚೂಪಾದ ವಸ್ತುವಿನಿಂದ ಗೀಚಿ, ಬಾನೆಟ್ ಮೇಲೆ ‘NO PARKING’ ಎಂದು ಕೆತ್ತಲಾಗಿದೆ. ಜೋಶ್ವಾ ಜಯ್‌ಕುಮಾರ್ ಎಂಬವರು ಸ್ನೇಹಿತನನ್ನು ಭೇಟಿಯಾಗಲು ರಾತ್ರಿ 11.30ರ ಸುಮಾರಿಗೆ ಬಿಟಿಎಂ ಲೇಔಟ್‌ಗೆ ಬಂದಿದ್ದರು. ರಸ್ತೆಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಯಾರಿಗೂ ಅಡ್ಡಿಯಾಗದಂತೆ ಕಾರು ನಿಲ್ಲಿಸಿದ್ದರು. ಆದರೆ ಬೆಳಗ್ಗೆ …

Read More »

ಅಮೈ: ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಸಾಗಣೆ; ಓರ್ವನ ಸೆರೆ

ಬಂಟ್ವಾಳದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಾರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕವಸ್ತು ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಬಂಧಿತನಾಗಿದ್ದು, ಆತನಿಂದ 538.63 ಗ್ರಾಂ ಎಂಡಿಎಂಎ ಹಾಗೂ 99.12 ಗ್ರಾಂ ಕೊಕೈನ್ ಸೇರಿ ಒಟ್ಟು ₹1.05 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ.15ರ ಮಧ್ಯರಾತ್ರಿ ಹಾಸನದಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟವಾಗುತ್ತಿರುವ ಖಚಿತ ಮಾಹಿತಿ ಮೇರೆಗೆ ಕಡೇಶಿವಾಲಯ ಗ್ರಾಮದ ಅಮೈ ಬಳಿ …

Read More »

ನಿವೃತ್ತ ಶಿಕ್ಷಕನ ಕೊಲೆ: ಮಗಳು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ರಸ್ತೆ ಬಳಿ ನಿವೃತ್ತ ಶಿಕ್ಷಕ ಸಿದ್ದಪ್ಪ ಬಸಣ್ಣ ಅಂಜುಟಗಿ (62) ಅವರನ್ನು ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಆಗಸ್ಟ್ 15ರ ರಾತ್ರಿ ಕೊಲೆ ನಡೆದಿದ್ದು, ಆಗಸ್ಟ್ 16ರಂದು ರಸ್ತೆ ಬದಿಯಲ್ಲಿ ಬೆಡ್‌ಶೀಟ್ ಹಾಗೂ ತಲೆದಿಂಬಿನ ಕವರ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅಕ್ರಮ ಸಂಬಂಧಕ್ಕೆ ತಂದೆ ವಿರೋಧ ವ್ಯಕ್ತಪಡಿಸುತ್ತಿದ್ದ ಹಾಗೂ ಪಿಂಚಣಿ ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ಹಿರಿಯ ಮಗಳು ಪ್ರಿಯಾಂಕಾ …

Read More »

ಹಾಡು ಹಗಲೇ ಖಾಕಿ ದರ್ಪ; ಜಗಳ ಬಿಡಿಸಲು ಹೋದ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಪಿಎಸ್‌ಐ! ಅತಂತ್ರವಾದ ಸಂತ್ರಸ್ತರು!

ಬೆಂಗಳೂರು ಕೆ.ಆರ್. ಪುರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಪಿಎಸ್‌ಐ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿಬಂದಿದೆ. ಭಟ್ಟರಹಳ್ಳಿ ಸಿಗ್ನಲ್ ಬಳಿ ಎರಡು ಕಾರುಗಳ ನಡುವೆ ಜಗಳ ನಡೆಯುತ್ತಿದ್ದ ವೇಳೆ, ಅದನ್ನು ಬಿಡಿಸಲು ಬಂದ ರಾಹುಲ್ ಎಂಬ ವಿದ್ಯಾರ್ಥಿಯ ಕಾಲರ್ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. ಬಳಿಕ ಮೊಬೈಲ್ ಕಸಿದು ನೆಲಕ್ಕೆ ಅಪ್ಪಳಿಸಿ ಹಾನಿ ಮಾಡಿದ್ದಾರೆ ಎಂಬ ಆರೋಪವೂ ಇದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ …

Read More »

ಬೆಂಗಳೂರಲ್ಲಿ ಡಬಲ್ ಮರ್ಡರ್ : ಮಲಗಿದ್ದಾಗಲೇ ಪತಿ & ಮಗನನ್ನು ಹತ್ಯೆಗೈದ ಪತ್ನಿ!

ಬೆಂಗಳೂರು ಚಿಕ್ಕಬಾಣಾವರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದ 35 ವರ್ಷದ ಅಭಿನಂದನ್ ಹಾಗೂ ಅವರ 5 ವರ್ಷದ ಪುತ್ರ ಯದವೀರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳು ಮಲಗಿದ್ದ ಜಾಗದಲ್ಲೇ ಪತ್ತೆಯಾಗಿದ್ದು, ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಭಿನಂದನ್ ಅವರ ಪತ್ನಿ ಹರಿಣಿ ಮೇಲೆಯೇ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ರಾತ್ರಿ ಕಿವಿಯಲ್ಲಿ ರಕ್ತ ಬಂದಿತ್ತು ಎಂದು ಹರಿಣಿ ಹೇಳಿದ್ದು, ತಾನೇ ಅರಿಶಿಣ ಹಚ್ಚಿದ್ದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. …

Read More »

ದಕ್ಷಿಣ ಕನ್ನಡದಲ್ಲಿ ಮುಂದುವರೆದ ನೈತಿಕ ಪೊಲೀಸ್ ಗಿರಿ: 9 ಜನರ ವಿರುದ್ಧ FIR ದಾಖಲು

ದಕ್ಷಿಣ ಕನ್ನಡ: ಕಡಬ ತಾಲೂಕಿನ ಕೋಲ್ಪೆಯಲ್ಲಿ ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಆಗಸ್ಟ್ 12ರಂದು ರಾತ್ರಿ ಯುವತಿ ತಾಯಿ ಜೊತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಕೆಲವರು ವಾಹನ ಅಡ್ಡಗಟ್ಟಿ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ ಎನ್ನಲಾಗಿದೆ. ಯುವತಿಗೆ ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ್ದು, ಜಗಳ ಬಿಡಿಸಲು ಬಂದ ಜಮಾಲ್‌ ಮೇಲೂ ಹಲ್ಲೆ ನಡೆಸಲಾಗಿದೆ. ಬಳಿಕ ಅಕ್ಕನನ್ನು ಮೇಲೆತ್ತಲು ಬಂದ ಸಹೋದರಿ ಫಾಸಿಲಾಗೂ ಕಪಾಳಕ್ಕೆ …

Read More »

ಮಹಿಳೆಯ ಮೈಕೈ ಮುಟ್ಟಿ ಅಸಭ್ಯ ವರ್ತನೆ! ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಬಿತ್ತು ಗೂಸಾ!

ಚಿತ್ರದುರ್ಗ: ಅನಾರೋಗ್ಯ ನಿವಾರಣೆ ಹಾಗೂ ವಾಮಾಚಾರದ ನೆಪದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಮಠದ ಸ್ವಾಮೀಜಿಗೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಕ್ಕೆ ಗುರಿಯಾಗಿರುವವರು ತಮ್ಮೇನಹಳ್ಳಿ ಮಠದ ಜಮ್ಮಣ್ಣ ಸ್ವಾಮೀಜಿ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ಬಳ್ಳಾರಿ ಮೂಲದ ಮಹಿಳೆಯೊಬ್ಬರಿಗೆ ಅನಾರೋಗ್ಯ ನಿವಾರಣೆ ಮಾಡಿಕೊಡುವ ನೆಪದಲ್ಲಿ ಸ್ವಾಮೀಜಿ ಅಸಭ್ಯವಾಗಿ …

Read More »

ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಕೊಲೆಗೈದ ಪತಿ

ಹೊಸಪೇಟೆ: ತಾಲ್ಲೂಕಿನ ಭುವನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಶಿಕಲಾ (‌35) ಕೊಲೆಯಾದ ಮಹಿಳೆ. ಈ ಸಂಬಂಧ ಪತಿ ಬಸವರಾಜ್‌ (36) ಎಂಬಾತನನ್ನು ಬಂಧಿಸಲಾಗಿದೆ. ಎಸ್‌ಪಿ ಎಸ್.ಜಾಹ್ನವಿ, ಡಿವೈಎಸ್‌ಪಿ ಮುರಳೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »