Breaking News

ಕರ್ನಾಟಕ

ಭಾರತ ಜಿಡಿಪಿ ಅಂದಾಜು ತಗ್ಗಿಸಿದ ‘ಎಡಿಬಿ’

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (ಒಟ್ಟು ಆಂತರಿಕ ಉತ್ಪಾದನೆ) ಕಾಣಲಿರುವ ಬೆಳವಣಿಗೆ ಕುರಿತು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಈ ಹಿಂದೆ ಮಾಡಿದ್ದ ಅಂದಾಜನ್ನು ತಗ್ಗಿಸಿದೆ. ಉದ್ಯಮ ವಲಯದಲ್ಲಿ ಪೂರೈಕೆ ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅದು ಹೇಳಿದೆ. ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 10ರಷ್ಟು ಬೆಳವಣಿಗೆ ಕಾಣಲಿದೆ ಎಂದು ಸೆಪ್ಟೆಂಬರ್‌ನಲ್ಲಿ ಅದು ಹೇಳಿತ್ತು. ಆದನ್ನು ಈಗ ಶೇ …

Read More »

ಮೂವರು ಮೊಬೈಲ್ ಕಳ್ಳರ ಬಂಧನ: ಗೋಕುಲ ರೋಡ್ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಹುಬ್ಬಳ್ಳಿ: ಸಂತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕದಿಯುತ್ತಿದ್ದ ಮೂವರು ಕಳ್ಳರನ್ನು ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿತರಿಂದ 6 ಲಕ್ಷ ರೂ. ಮೌಲ್ಯದ 25 ಮೊಬೈಲ್ ಫೋನ್‌ಗಳು ಹಾಗೂ ಅಟೋ ರಿಕ್ಷಾ ವಶಕ್ಕೆ ಪಡೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹುಲಗಿನಕೊಪ್ಪದ ಹನುಮಂತಪ್ಪ ಬಂಡಿವಡ್ಡರ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕುಮಾರ ಕುಳ್ಳ ಹಾಗೂ ಹುಬ್ಬಳ್ಳಿ ಜಗದೀಶ ನಗರದ ಸೋಮಶೇಖರ ಕುಂದಗೋಳ ಬಂಧಿತ ಆರೋಪಿಗಳು. ನಗರದ ವಿವಿಧ ಮಾರುಕಟ್ಟೆ, …

Read More »

‌ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ನಗರದ ಹೊರವಲಯದ ರಂಗ್ರೆತ್ ಪ್ರದೇಶದಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ರಂಗ್ರೆತ್ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ಶೋಧಕಾರ್ಯ ನಡೆಯಿತು. ಕಾರ್ಯಾಚರಣೆ ಸಂದರ್ಭದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡು ಹಾರಿಸಿದರು. ಇದಕ್ಕೆ ಭದ್ರತಾ ಪಡೆಗಳಿಂದ ಪ್ರತಿದಾಳಿ ನಡೆಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ …

Read More »

ಧಾರವಾಡ: ಹೆಬ್ಬಳ್ಳಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ರಸ್ತೆಯ ಬಳಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಸುಮಾರು 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿ ಈತನಾಗಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದಾನೆ. ಇದನ್ನು ನೋಡಿದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸಾವಿಗೀಡಾಗಿರುವ ವ್ಯಕ್ತಿ ಚಪ್ಪಲಿ ಬಿಟ್ಟ ಸ್ಥಳಕ್ಕೂ ಬಿದ್ದು ಸಾವಿಗೀಡಾಗಿರುವ ಸ್ಥಳಕ್ಕೂ‌ ಅಂತರವಿದೆ. ತಲೆಗೆ ಬಲವಾದ ಪೆಟ್ಟಾಗಿದೆ. ಸದ್ಯ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ

Read More »

ಅಂಡರ್‌ 19 ವಿಶ್ವಕಪ್ ಗೆ ಭಾರತ ತಂಡ ಪ್ರಕಟ

ಅಂಡರ್ -19 ವಿಶ್ವಕಪ್ ಜನವರಿ ಹಾಗೂ ಫೆಬ್ರವರಿಯಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಏಷ್ಯಾಕಪ್ ಯುಎಇನಲ್ಲಿ ಡಿ. 23ರಿಂದ ಆರಂಭವಾಗಲಿದೆ. ಅದಕ್ಕಾಗಿ ಭಾರತೀಯ ಕಿರಿಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಈ ಏಷ್ಯಾಕಪ್ ನಲ್ಲಿ 8 ತಂಡಗಳು ಭಾಗವಹಿಸಲಿವೆ. 8 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಯುಎಇ ಹಾಗೂ ಅಫ್ಘಾನಿಸ್ತಾನ ತಂಡಗಳಿವೆ. ಬಿ ಗುಂಪಿನಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಕುವೈತ್ ತಂಡಗಳು ಭಾಗವಹಿಸಲಿವೆ. ಪ್ರತಿ ಗುಂಪಿನಿಂದ …

Read More »

ಶಿರಸಂಗಿಯ ಕಾಳಿಕಾ ದೇವಸ್ಥಾನ ಟ್ರಸ್ಟಿಗೆ ದೇಣಿಗೆ ನೀಡಬೇಡಿ, ರಾಮಣ್ಣ ಬಡಿಗೇರ ವಿರುದ್ಧ ಅರ್ಚಕರ ಆಕ್ರೋಶ

ಹುಬ್ಬಳ್ಳಿ: ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಶಿರಸಂಗಿ ಕಾಳಿಕಾ ದೇವಸ್ಥಾನ ಟ್ರಸ್ಟಿಗೆ ದೇಣಿಗೆ ನೀಡಬೇಡಿ, ದವಸ ಧಾನ್ಯ ಕೊಡಬೇಡಿ ಎಂದು ಧಾರವಾಡ ವಿಶ್ವಕರ್ಮ ಸಮಾಜದ ವಾಟ್ಸ್​ ಆ್ಯಪ್​ ಗ್ರೂಪ್​ನಲ್ಲಿ ‌ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ್​ ಇವರು ಕಳಿಸಿರುವ ಸಂದೇಶ ದೇವಸ್ಥಾನಕ್ಕೆ ಅವಮಾನ ಮಾಡಿದಂತಾಗಿದೆ ಎಂದು ದೇವಸ್ಥಾನದ ಅರ್ಚಕ ನಾಗೇಂದ್ರಾಚಾರ್ಯ ಆರೋಪಿಸಿದ್ದಾರೆ. ದೇಣಿಗೆ ನೀಡಬೇಡಿ ಎಂದ ಪಾಲಿಕೆ ಸದಸ್ಯ: ಅರ್ಚಕರ ಆಕ್ರೋಶನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು …

Read More »

ಹಾಸ್ಟೆಲ್​ ಬಳಿ ಗಾಂಜಾ ಮಾರಾಟ ಪ್ರಕರಣ: ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿರೂರ ಪಾರ್ಕ್ ಖೋಡೆ ಹಾಸ್ಟೆಲ್ ಬಳಿ 2019ರಲ್ಲಿ ಗಾಂಜಾ ಮಾರಾಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಸಂಗಮೇಶ ಅಂದಾನಪ್ಪ ಅಂಗಡಿ ಶಿಕ್ಷೆಗೆ ಒಳಗಾದ ಅಪರಾಧಿ. 2019ರ ಜುಲೈ 31ರಂದು ಹಾಸ್ಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ …

Read More »

ವಿನೋದ್ ಕಾಂಬ್ಳಿಗೆ ಸೈಬರ್ ಕಳ್ಳರಿಂದ ವಂಚನೆ-ಕೆವೈಸಿ ಅಪಡಟ್‌ ನೆಪ ಹೇಳಿ 1 ಲಕ್ಷ ಎಗರಸಿದ ಭೂಪರು

ಮುಂಬೈ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ಸೈಬರ್ ವಂಚಕರು 1 ಲಕ್ಷ ರೂ. ವಂಚಿಸಿರುವ ಘಟನೆ ಬಾಂದ್ರಾದಲ್ಲಿ ನಡೆದಿದೆ.ಪ್ರಸಿದ್ಧ ಬ್ಯಾಂಕ್‌ನ ಪ್ರತಿನಿಧಿಯೆಂದು ಕಾಂಬ್ಳಿಗೆ ಕರೆ ಮಾಡಿದ್ದಾರೆ. ನಂತರ ಕೆವೈಸಿ ಅಪ್ಡೇಟ್ ಮಾಡಲು ತಿಳಿಸಿದ್ದಾರೆ. ಬಳಿಕ ಅವರ ಬ್ಯಾಂಕ್ ವಿವರಗಳನ್ನೆಲ್ಲಾ ತೆಗೆದುಕೊಂಡು ಅಪ್‌ಲೊಡ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.ಸ್ವಲ್ಪ ಸಮಯದ ನಂತರ ಅವರ ಖಾತೆಯಿಂದ ಒಂದು ಲಕ್ಷ ರೂ.ವನ್ನು ವಂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಕಾಂಬ್ಳಿ ಅಪರಿಚಿತ ವ್ಯಕ್ತಿಯ …

Read More »

ಆಶ್ರಯ ಮನೆಗಳ ಹರಿಕಾರ ಮಾಜಿ ಸಚಿವ ಎಸ್.ಆರ್.ಮೋರೆ ನಿಧನ

ಧಾರವಾಡ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಸ್.ಆರ್.ಮೋರೆ (84) ಇಲ್ಲಿನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಧಾರವಾಡ ಕ್ಷೇತ್ರದಿಂದ ನಾಲ್ಕು ಬಾರಿ ಅವರು ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹಕಾರ ಸಚಿವರಾಗಿದ್ದರು. ಧರ್ಮಸಿಂಗ್‌ ಅವರ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದರು. ಈ ಭಾಗದಲ್ಲಿ ಆಶ್ರಯ ಮನೆಗಳನ್ನು ಸಾಕಷ್ಟು ಬಡವರಿಗೆ ಕೊಡಿಸಿದ್ದರಿಂದ ಅವರನ್ನು ಆಶ್ರಯ ಮನೆಗಳ ಹರಿಕಾರ ಎಂದೇ ಕರೆಯಲಾಗುತ್ತಿತ್ತು. ಜತೆಗೆ ಹುಬ್ಬಳ್ಳಿ ಧಾರವಾಡ ಜನರಿಗೆ ಕುಡಿಯುವ ನೀರು …

Read More »

ನಡುರಸ್ತೆಯಲ್ಲೇ ಖಾಕಿ ಖಾಕಿ ನಡುವೇ ಕಪಾಳ ಮೋಕ್ಷ-ಬೆಳಗಾವಿಯಲ್ಲಿ ನೆಡೆದದ್ದು !

ಬೆಳಗಾವಿ: ಸಂಚಾರ ಪೊಲೀಸ್ ಕಾನ್ಸ್‌ಟೇಬಲ್‌ ಹಾಗೂ ಸರ್ಕಾರಿ ಬಸ್ ನಿರ್ವಾಹಕ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿರುವ ಘಟನೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ನಡೆಯಿತು. ಬಸ್ ನಿಲ್ಲಿಸುವ ವಿಚಾರಕ್ಕೆ ಇಬ್ಬರು ಸಾರ್ವಜನಿಕವಾಗಿ ಬಡಿದಾಡಿಕೊಂಡಿದ್ದಾರೆ. ಬಿ.ಕೆ.ಕಂಗ್ರಾಳಿಯಿಂದ ಸಿಬಿಟಿಗೆ ಬಸ್ ತೆರಳುತ್ತಿತ್ತು. ಚನ್ನಮ್ಮ ವೃತ್ತದ ಸಿಗ್ನಲ್ ಮಧ್ಯೆ ಬಸ್ ನಿಲ್ಲಿಸಿ ಪ್ರಯಾಣಿಕರ ಇಳಿಸಲಾಗುತ್ತಿತ್ತು. ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದ್ದ‌ನ್ನು‌ ಟ್ರಾಫಿಕ್ ಹೆಡ್‌ ಕಾನ್ಸ್‌ಟೇಬಲ್‌ ಪ್ರಶ್ನಿಸಿದ್ದಾರೆ. ಆಗ ಚಾಲಕ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ …

Read More »