admin
September 12, 2019
ಕರ್ನಾಟಕ, ಸುದ್ದಿ
ರಾಯಚೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಡ್ಡ ಮೇಲೆ ದಾಳಿ ನಡೆಸಿ ಪೋಲಿಸರು ೧೦೦೦ ಮೆಟ್ಟಿಕ್ ಟನ್ ಮರಳು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಸ್ಪಿ ಡಾ.ಸಿ.ಬಿ ವೇದಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಪೋಲಿಸರು ಮಾನಶಯ್ಯ , ಶಿವು ನಿಲವಂಜಿ, ಭೀಮಪ್ಪ ಎಂಬುವವರನ್ನು ಬಂಧಿಸಿದ್ದಾರೆ. ದೇವದುರ್ಗ ತಾಲೂಕಿನ ಹೇರುಂಡಿ, ನಿಲವಂಜಿ ಗ್ರಾಮಗಳಲ್ಲಿ ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು. ಒಟ್ಟು ಸುಮಾರು ೫ ಲಕ್ಷ ೧೦ ಸಾವಿರ ಬೆಲೆ …
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ; ದೂಧಗಂಗಾ ನದಿಗೆ ಮೀನು ಹಿಡಿಯಲು ಹೋದ ಬಾಲಕ ಸಂಗ್ರಾಮ ಪವಾರ (೧೪) ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಸಂಗ್ರಾಮ ಪವಾರ ಚಿಕ್ಕೋಡಿ ತಾಲೂಕಿನ ಚಾಂದಶಿರದವಾಡ ಗ್ರಾಮದವನು. ದೂಧಗಂಗಾ ಮಳೆಯಿಂದಾಗಿ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನ ಶವ ಪತ್ತೆ ಮಾಡಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಗಳೂರು: ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ದನಕಳ್ಳತನ ಮತ್ತು ಮಾರಾಟದ ಆರೋಪಿಸಿದ್ದಾರೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಶೀರ್ ಯಾನೆ ಆರ್ಗಾ ಬಶೀರ್, ಬಂಧಿತ ವ್ಯಕ್ತಿ ಮೂಡಬಿದ್ರೆಯ ತೋಡಾರ್ ಬಳಿ ಆರೋಪಿ ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಹಲವಾರು ದನಕಳ್ಳತನ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ದನ ಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ. ಈತನ ಸಹಚರರು ದಸ್ತಗಿರಿಯಾದರೂ ಘಟನೆಯ ಬಳಿಕ …
Read More »
admin
September 12, 2019
ಕರ್ನಾಟಕ, ಸುದ್ದಿ
ಮಂಡ್ಯ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2019-20ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಮಾರಂಭವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಆಶಾಕಾಮತ್ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಜೀವನದಲ್ಲಿ ಯಶಸ್ಸುಗಳಿಸಬೇಕು..ವಿಶ್ವಕಂಡ ಶ್ರೇಷ್ಠ ಎಂಜಿನಿಯರುಗಳಲ್ಲಿ ಒಬ್ಬರಾಗಿರುವ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರಂತೆ ಶ್ರೇಷ್ಠ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು..ಸರ್.ಎಂ.ವಿ ಅವರ ಜೀವನದ ಆದರ್ಶಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಭವಿಷ್ಯದ ಎಂಜಿನಿಯರುಗಳಾಗಲು ಪ್ರಯತ್ನ …
Read More »
admin
September 12, 2019
ಕರ್ನಾಟಕ, ಸುದ್ದಿ
ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ವ್ಯಕ್ತಿಗಳ ನಡುವೆ ಮಾರಾಮಾರಿಯಾಗಿದ್ದು, ಜಗಳ ಅತಿರೇಕಕ್ಕೇರಿದ್ದು, ಗಲಾಟೆ ಒಬ್ಬನ ಕೊಲೆಯ ಮುಖಾಂತರ ಅಂತ್ಯಗೊಂಡಿರುವ ಘಟನೆ ದಾವಣಗೆರೆಯ ಅಣಜಿ ಗ್ರಾಮದಲ್ಲಿ ನಡೆದಿದೆ.ಇಲ್ಲಿನ ಅಂಜಿನಿ (24) ಕೊಲೆಯಾದ ವ್ಯಕ್ತಿ. ಅಂಜನಿ ಹಾಗೂ ಬಾಬು ಎಂಬುವವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಏರ್ಪಟ್ಟಿದೆ. ಜಗಳ ತಾರಕಕ್ಕೇರಿ ಬಾಬು ಅಂಜಿನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಕೂಡಲೇ ಅಂಜನಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬೀಗುವಿನ …
Read More »
admin
September 12, 2019
ಕರ್ನಾಟಕ, ಸುದ್ದಿ
ಉಡುಪಿ: ಇಂದು ಬೆಳ್ಳಂಬೆಳಿಗ್ಗೆ ದುಷ್ಟ್ಕರ್ಮಿಗಳು ಮಗುವನ್ನು ಅಪಹರಣ ಮಾಡಿದ ಘಟನೆ ಕುಂದಾಪುರ ತಾಲ್ಲೂಕಿನ ಎಡಮೊಗೆ ಕುಮ್ಟಿ ಬೇರಿನಲ್ಲಿ ನಡೆದಿದೆ.ಇವತ್ತು ಮುಂಜಾನೆ ಸಂತೋಷ್ ನಾಯ್ಕ್ ಎಂಬುವರ ಎರಡು ವರ್ಷ ಪ್ರಾಯದ ಹೆಣ್ಣು ಮಗು “ಸಾನ್ವಿಕಾ” ತಾಯಿಯೊಂದಿಗೆ ಮಲಗಿರುವಾಗ ಮುಸುಕು ಧಾರಿ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿಕೊಂಡು ತುಂಬಿ ಹರಿಯುವ ಕುಮ್ಜಾ ನದಿಯನ್ನು ದಾಟಿ ಕಾಡಿನ ಮೂಲಕ ಹೊಸಂಗಡಿಯತ್ತಾ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಗುವನ್ನು ಅಪಹರಿಸಿಕೊಂಡು ಹೋಗುವಾಗ ತಾಯಿಗೆ ಎಚ್ಚರವಾಗಿ ಕೂಡಲೇ ಆ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಾಮರಾಜನಗರ: ಆನೆ ದಾಳಿ ನಡೆಸಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಈ ಘಟನೆ ನಡೆದಿದ್ದು, ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದ ಬಾಬು (27) ಮೃತ ದುರ್ದೈವಿ ಎಂದು ಹೇಳಲಾಗಿದೆ. ತಾಳ ಬೆಟ್ಟದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಡ್ಡ ಬಂದ ಆನೆ ದಾಳಿ ನಡೆಸಿದೆ. ಮಲೆ ಮಹದೇಶ್ವರ ಬೆಟ್ಟ ಪೋಲಿಸ್ ಠಾಣೆಯಲ್ಲಿ ಪ್ರಕರಣ …
Read More »
admin
September 12, 2019
ಕರ್ನಾಟಕ, ಸುದ್ದಿ
ಚಿತ್ರದುರ್ಗ : ಬೈಕ್ ಅಡ್ಡಾದಿಡ್ಡಿ ಚಲಾಯಿಸದರಿಂದ ಬೈಕ್ ಸವಾರ ಮೃತಪಟ್ಟಿರುವ ಘಟನೆ ಚಳ್ಳಕೆರೆಯ ಹೊರವಲಯದಲ್ಲಿ ನಡೆದಿದೆ.ಚಿತ್ರದುರ್ಗದ ನಿವಾಸಿ ಇಂತಿಯಾಜ್ ಮೃತನೆಂದು ಗುರುತಿಸಲಾಗಿದೆ.ಚಳ್ಳಕೆರೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »
admin
September 12, 2019
ಕರ್ನಾಟಕ, ಸುದ್ದಿ
ಬೆಳಗಾವಿ: ಜಿಲ್ಲೆಯಲ್ಲಿ ೨೫ ಸಕ್ಕರೆ ಕಾರ್ಖಾನೆಗಳು ಇವೆ. ಅದರಲ್ಲಿ, ಒಂದು ಕಾರ್ಖಾನೆ ಮಾತ್ರ ಕಾರ್ಯನಿರ್ವಸುತ್ತಿಲ್ಲ. ಕಾರ್ಯನಿರ್ವಸುತ್ತಿರುವ ೨೪ ಕಾರ್ಖಾನೆಗಳ ಪೈಕಿ ೧೮ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷದ ಬಾಕಿ ಬಿಲ್ಲನ್ನು ಸಂಪೂರ್ಣವಾಗಿ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಜಿಲ್ಲಾಡಳಿತದಿಂದ ಸೂಚನೆ ಹಾಗೂ ನೋಟಿಸ್ ಜಾರಿ ಮಾಡಿ, ಒತ್ತಡ ಹೆರಿದ ಬಳಿಕ ೧೮ ಕಾರ್ಖಾನೆಗಳು ಸಂಪೂರ್ಣವಾಗಿ ಬಾಕಿ ಬಿಲ್ಲನ್ನು ರೈತರಿಗೆ ಪಾವತಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಕೊಪ್ಪಳ ಸರ್ಕಾರಿ ನೌಕರರ ಸಂಘದ ಫಲಿತಾಂಶ ಪ್ರಕಟ ಕೊಪ್ಪಳ : ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕೊಪ್ಪಳ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಾಗರಾಜ್ ಜುಮ್ಮಣ್ಣವರ್ ಬಣ ಜಯ ಸಾಧಿಸಿದೆ. ಆರೋಗ್ಯ ಇಲಾಖೆಯ ನಾಗರಾಜ್ ಜುಮ್ಮಣ್ಣವರ ಕಂದಾಯ ಇಲಾಖೆಯ ಮಂಜುನಾಥ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಜಿಲ್ಲಾ ಅದ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಸಮಿತಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಒಟ್ಟು ೬೮ ಮತಗಳಿದ್ದು ಇದರಲ್ಲಿ ೫೧ ಮತಗಳನ್ನು ಪಡೆದು …
Read More »