Breaking News

ಕರ್ನಾಟಕ

ನಾರಾಯಣಗೌಡ ಹಣದಾಸೆಗೆ ಜೆಡಿಎಸ್ ತೊರೆದಿದ್ದಾರೆಂದು ಆರೋಪಿಸಿದ ಸಂತೋಷ ಕುಮಾರ್

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಹಣದಾಸೆಗಾಗಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಹೋಗುತ್ತಿದ್ದಾರೆ. ಅವರು ಪಕ್ಷವನ್ನು ಬಿಟ್ಟು ಹೋಗುತ್ತಿರುವುದರಿಂದ ಪಕ್ಷಕ್ಕೆ ಹಿಡುದಿರುವ ಗ್ರಹಣ ಬಿಟ್ಟಂತಾಗಿದೆ…ಪಕ್ಷ ಬಿಟ್ಟು ಹೋಗುವವರು ಗೌರವಯುತವಾಗಿ ಪಕ್ಷಬಿಟ್ಟು ಹೋಗಲಿ ಅದನ್ನು ಬಿಟ್ಟು ದೇವೇಗೌಡರ ಕುಟುಂಬವರ್ಗ ಹಾಗೂ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದರೆ ತಕ್ಕಶಾಸ್ತಿ ಮಾಡಬೇಕಾಗುತ್ತದೆ ಎಂದು ಪುರಸಭೆಯ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಅವರು ಇಂದು ಜೆಡಿಎಸ್ ಮುಖಂಡರು ಹಾಗೂ ಚುನಾಯಿತ ಜನಪ್ರತಿನಿಧಿಗಳೊಂದಿಗೆ …

Read More »

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಚಾಮರಾಜನಗರ: ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಮುಖ್ಯ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನ ತಲುಪಿ ಅಲ್ಲಿ ಕೆಲಕಾಲ ಧರಣಿ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುಜಾತ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ ಹಾಗೂ ಯು ಕೆ ಜಿ ಪ್ರಾರಂಭಿಸಲು ಸರ್ಕಾರ ಅನುಮತಿ …

Read More »

ಪೋಲೀಸ್ ಕಾರ್ಯಾಚರಣೆ: ಸ್ನೇಹಿತನ ಕೊಲೆಗೈದವರ ಬಂಧನ

ಆನೇಕಲ್ : ಹಣಕಾಸಿನ ವಿಚಾರಕ್ಕೆ ಕುಡಿದು ಗಲಾಟೆ ಮಾಡಿಕೊಂಡಿದ್ದ ಮೂವರು ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದ್ದ ಪ್ರಕರಣದ ಆರೋಪಗಳನ್ನು ಬಂಧಿಸುವಲ್ಲಿ ಸೂರ್ಯಸಿಟಿ ಪೋಲಿಸರು ಯಶಸ್ವಿಯಾಗಿದ್ದಾರೆ ಕಳೆದ ಭಾನುವಾರ ಬೆಂಗಳೂರು ಹೊರವಲಯ ಚಂದಾಪುರದ ಬೆಸ್ಟ್ ಆಸ್ಪತ್ರೆ ಸಮೀಪದ ನಿರ್ಜನ ಪ್ರದೇಶದಲ್ಲಿ ರಾತ್ರಿ ಕುಡಿದು ಗಲಾಟೆ ಮಾಡಿಕೊಂಡು ಆರೋಪಿಗಳು ಸ್ನೇಹಿತ ಜೀವನ್ ಬಹದ್ದೂರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ ಜೀವನ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. …

Read More »

ಬರಿದಾದ ಹೇಮಗಿರಿಯ ಒಡಲು

ಮಂಡ್ಯ: ಪಟ್ಟಣದ ಹೇಮಗಿರಿ ಬಳಿ ಹೇಮಾವತಿ ನದಿಯಲ್ಲಿ ನೀರಿಲ್ಲದೇ ಬರಿದಾದ ಹೇಮೆಯ ಒಡಲಿನಿಂದಾಗಿ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ತತ್ವಾರ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಹೇಮಗಿರಿ ಪಂಪ್ ಹೌಸ್ ನಲ್ಲಿ 180 ಹೆಚ್.ಪಿ ಸಾಮರ್ಥ್ಯದ ಮೋಟಾರು ಸುಟ್ಟು ಇಂದು ಮತ್ತು ನಾಳೆ ಪುರಸಭೆಯಿಂದ ಕುಡಿಯುವ ನೀರಿನ ಸರಬರಾಜು ಬಂದ ಮಾಡಾಲಾಗಿದೆ. ಸಮರೋಪಾಧಿಯಲ್ಲಿ ಪಂಪ್ ದುರಸ್ಥಿಗೆ ಮುಂದಾಗಿರುವ ಪುರಸಭೆ ಕುಡಿಯುವ ನೀರು ನಿರ್ವಹಣೆ ವಿಭಾಗದ ಸಹಾಯಕ ಎಂಜಿನಿಯರ್ ಸೌಮ್ಯ ಅವರಿಂದ ನಿರ್ವಹಣೆ ಉಸ್ತುವಾರಿ …

Read More »

ಕೈಕೊಟ್ಟ ಮುಂಗಾರು, ಶೇಂಗಾ ಬೆಳೆಗಾರರು ಕಂಗಾಲು.

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕೊನಲ್ಲಿ ಶೇಂಗಾ ಬೆಳೆ ಸಂಪೂರ್ಣ ನೆಲಕ್ಕಚಿದೆ.ಸಾಂಪ್ರದಾಯಿಕವಾಗಿ ಮಳೆ ಆಧಾರಿತ ಬೆಳೆಯಾದ ಸೇಂಗಾ ಬೆಳೆಗೆ ಬೇಕಾಗುವಷ್ಟು ಮಳೆ ಬಂದಿಲ್ಲ ಆದ್ದರಿಂದ ಈ ಮೊದಲು ಮಳೆಗೆ ಹಾಕಲಾದ ಸೇಂಗಾ ಬೆಳೆಯು ಸಂಪೂರ್ಣ ನೆಲಕ್ಕಚಿದೆ.ಈ ಎರಡೂ ತಾಲೂಕಿನ ಹಲವಾರು ಕಡೆ ಹಾಕಿದ್ದ ಸೇಂಗ ಕಲವೊಂದು ಕಡೆ ಮೊಳಕೆಯೇ ಹೊಡೆದಿಲ್ಲ ಕಲವೊಂದು ಕಡೆ ಬೆಳೆಯು ಕುಂಟಿತವಾಗಿದೆ.ನೂರಾರು ರೈತ ಆರ್ಥಿಕ ಚಟುವಟಿಕೆಯ ಮೂಲವಾಗಿದ್ದ ಬೆಳೆ ಕೈಕೊಟ್ಟಿರೋದು ರೈತರ ಜೀವನಕ್ಕೆ ತೊಂದರೆಯಾಗಲಿದೆ.

Read More »

ಧರ್ಮ ಪ್ರಚಾರಕ್ಕೆ ಆಗಮಿಸಿದ ವಿದ್ಯಾ ತಾಯಿ

ಚಿಕ್ಕೋಡಿ: ಕಲಿಯುಗದಲ್ಲಿ ಸುವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಧರ್ಮ ಪ್ರಚಾರಕ್ಕಾಗಿ ಗುಜರಾತ್ ವಿದ್ಯಾ ತಾಯಿ ಜೊನಲ್ ಇನ್ ಚಾರ್ಜ್ಆಗಮಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂತ ನಿರಂಕಾರಿ ಮಂಡಳದ ಅಥಣಿ ವಿಜಯಪುರ ಸೆಕ್ಟರ್ ಸಂಯೋಜಕ ರಾಜೇಂದ್ರ ಸಾತಪುತೆ ಹೇಳಿದರು.ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಸಂತ ನಿರಂಕಾರಿ ಮಂಡಳದ ವತಿಯಿಂದ ಸತ್ಸಂಗ ಕಾರ್ಯಕ್ರಮ ನಡೆಸುತ್ತಾ ಬರಲಾಗುತ್ತಿದ್ದು ನಾಳೆ ದಿನಾಂಕ ಹದಿನಾಲ್ಕರಂದು ಗುಜರಾತ್ ನ ವಿದ್ಯಾ ಬಹೆನಜಿ ಅವರು ಪ್ರಮುಖವಾಗಿ ಭಕ್ತಿಯ …

Read More »

ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಚಿತ್ರದುರ್ಗ: ರಾಜ್ಯ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಘಟಕಕ್ಕೆ ಬೆಳಗ್ಗೆಯಿಂದ ಮತದಾನ ಪ್ರಾರಂಭವಾಗಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಜಿಲ್ಲಾಧ್ಯಕ್ಷ ಖಜಾಂಶಿ ಕಾರ‍್ಯದರ್ಶಿ ಮತ್ತು ರಾಜ್ಯ ಸಂಘಕ್ಕೆ ಜಿಲ್ಲಾ ಪ್ರತಿನಿಧಿ ಆಯ್ಕೆ ಇಂದು ನಡೆಯಲಿದೆ.1ಘಂಟೆ ವರೆಗೂ ಚುನಾವಣೆ ನಡೆಯಲಿದ್ದು , 4 ಘಂಟೆಯಿಂದ ಮತಎಣಿಕೆ ನಡೆಯಲಿದೆ.

Read More »

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಸೊಸೆ ಪಿಎಸ್ ಐ ಮಗನಿಗೆ 7 ವರ್ಷ ಜೈಲು

ದಾವಣಗೆರೆ: ಮಹಿಳೆಗೆ ಏನಾದರೂ ತೊಂದರೆ ಆದರೆ ಮಹಿಳಾ ಪಡೆ ರಕ್ಷಣೆಗೆ ನಿಲ್ಲುತ್ತದೆ. ಆದರೆ, ಇಲ್ಲೋರ್ವ ಮಹಿಳಾ ಠಾಣೆ ಪಿಎಸ್​ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದಾಳೆ. ಪ್ರಕರಣ ಸಾಬೀತಾದ ಹಿನ್ನೆಲೆ ಪಿಎಸ್​ಐ ಹಾಗೂ ಇವರ ಪುತ್ರ ಜೈಲು ಪಾಲಾಗಿದ್ದಾರೆ.ಘಟನೆ ಹಿನ್ನೆಲೆ: ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್​ಐ ಲೀಲಾವತಿ ಎಂಬುವರ ಮಗನಾದ ನವೀನ್ ಕುಮಾರ್, ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಎಂಜಿನಿಯರ್ ಬಸಪ್ಪ …

Read More »

ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ

ಮಂಗಳೂರು: ಶಾರ್ಟ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡಿರುವ ಘಟನೆಮಂಗಳೂರಿನ ಪಂಪ್ ವೆಲ್ ನಂತೂರು ಬಳಿ ನಡೆದಿದೆ. ‌ ನವೀನ್ ತಾರೆತೋಟ ಎಂಬವವರಿಗೆ ಸೇರಿದ ಮನೆ ಇದಾಗಿದ್ದು, ರಾತ್ರಿ 12 ಗಂಟೆ ವೇಳೆ ನಡೆದ ಘಟನೆ ನಡೆದಿದೆ.‌ ಘಟನೆಯಲ್ಲಿ ಮನೆ ಸುಟ್ಟಿದ್ದು ಸುಮಾರು 4 ಲಕ್ಷ ನಷ್ಟ ಉಂಟಾಗಿದೆ.ಬೆಂಕಿ ನಂದಿಸುವಲ್ಲಿ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Read More »

ಎಡೆಬಿಡದೇ ಸುರಿಯುತ್ತಿರುವ ಮೇಘರಾಜ ಜನಜೀವನ ಅಸ್ತವ್ಯಸ್ತ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ .ಮಂಗಳವಾರ ಮಧ್ಯಾಹ್ನ ಆರಂಭಗೊಂಡ ಮಳೆ ಎಡೆ ಬಿಡದೆ ಸುರಿಯುತ್ತಿದೆ .ನಗರದ ಹೊರವಲಯದ ಆಕಾಶಭವನ ಎಂಬಲ್ಲಿ ಭೂ ಕುಸಿತ ಉಂಟಾಗಿದೆ .ಎರಡು ಮನೆಗಳಿಗೆ ಹಾನಿಯಾಗಿದೆ .ಮಂಗಳೂರು ಮಹಾನಗರ ಪಾಲಿಕೆ ಪರಿಹಾರ ಕಾರ್ಯಾಚರಣೆ ಆರಂಭಿಸಿದೆ .ಪುತ್ತೂರು ತಾಲೂಕಿನ ನರಿಮೊಗರು ಸರಕಾರಿ ಶಾಲೆಯ ಶೌಚಾಲಯದ ಮೇಲೆ ಮರ ಉರುಳಿ ಬಿದ್ದ ಕಾರಣ ಹಾನಿ ಆಗಿದ್ದು ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾರೆ .ನಿರಂತರ ಮಳೆ ಆಗುತಿರುವುದರಿಂದ …

Read More »