ಮಂಡ್ಯ: ಪಟ್ಟಣದ ಹೇಮಗಿರಿ ಬಳಿ ಹೇಮಾವತಿ ನದಿಯಲ್ಲಿ ನೀರಿಲ್ಲದೇ ಬರಿದಾದ ಹೇಮೆಯ ಒಡಲಿನಿಂದಾಗಿ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ತತ್ವಾರ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ಹೇಮಗಿರಿ ಪಂಪ್ ಹೌಸ್ ನಲ್ಲಿ 180 ಹೆಚ್.ಪಿ ಸಾಮರ್ಥ್ಯದ ಮೋಟಾರು ಸುಟ್ಟು ಇಂದು ಮತ್ತು ನಾಳೆ ಪುರಸಭೆಯಿಂದ ಕುಡಿಯುವ ನೀರಿನ ಸರಬರಾಜು ಬಂದ ಮಾಡಾಲಾಗಿದೆ. ಸಮರೋಪಾಧಿಯಲ್ಲಿ ಪಂಪ್ ದುರಸ್ಥಿಗೆ ಮುಂದಾಗಿರುವ ಪುರಸಭೆ ಕುಡಿಯುವ ನೀರು ನಿರ್ವಹಣೆ ವಿಭಾಗದ ಸಹಾಯಕ ಎಂಜಿನಿಯರ್ ಸೌಮ್ಯ ಅವರಿಂದ ನಿರ್ವಹಣೆ ಉಸ್ತುವಾರಿ ನಿರ್ವಹಿಸಲಾಗಿದೆ.ಹೇಮಗಿರಿ ಪಂಪ್ ಹೌಸ್ ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್ ಶೀಘ್ರವೇ ಮೋಟಾರನ್ನು ದುರಸ್ಥಿಪಡಿಸಿ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜನ್ನು ಸರಿಪಡಿಸುವುದಾಗಿ ತಿಳಿಸಿದರು…
bigtvnews | Hubli Dharwad News | Kannada News | Karnataka News Hubli News | News In Hubli | Local news





