Breaking News

ಕರ್ನಾಟಕ

ಮುಂದಿನ 3 ದಿನ ಒಂದೂವರೆ ಮೀಟರ್ ಎತ್ತರಕ್ಕೆ ಅಬ್ಬರಿಸಲಿವೆಯಂತೆ ಸಮುದ್ರದ

ಮಂಗಳೂರು:  ಸಮುದ್ರದ ಅಲೆಗಳು ಒಂದೂವರೆ ಮೀಟರ್ ಎತ್ತರಕ್ಕೆ ಅಬ್ಬರಿಸುವ ಸಾಧ್ಯತೆಯಿದೆ ಎಂದು ಭಾರತೀಯ ಸಾಗರ ಮಾಹಿತಿ ಕೇಂದ್ರ ಜಿಲ್ಲಾಡಳಿಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ, ಪೂರ್ವ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ. ಸಮುದ್ರ ತೀರದಲ್ಲಿ ಮೀನುಗಾರರು ಬೋಟ್ ಚಲಾಯಿಸದಂತೆ ಎಚ್ಚರಿಕೆ ನೀಡಲಾಗಿದೆ. ಹಾಗೂ ಬೀಚ್​ಗಳಲ್ಲಿ ಮನರಂಜನಾ ಆಟಗಳನ್ನು ರದ್ದುಪಡಿಸಲು ಸೂಚನೆ ನೀಡಲಾಗಿದೆ.

Read More »

ಗಂಗಾಂಬಿಕೆ ನೂತನ ಮೇಯರ್‌?: ಡಿಸಿಎಂ ಪರಮೇಶ್ವರ್‌ಗೆ ಮುಖಭಂಗ.

ಬೆಂಗಳೂರು: ಕುತೂಹಲ ಕೆರಳಿಸಿದ್ದ ಕಾಂಗ್ರೆಸ್​ ಮೇಯರ್​ ಅಭ್ಯರ್ಥಿ ಆಯ್ಕೆ ಗೊಂದಲ ಕೊನೆಗೆ ಬಗೆಹರಿದಿದೆ. ಪಕ್ಷೇತರ ಪಾಲಿಕೆ ಸದಸ್ಯರು ಸೇರಿದಂತೆ, ರಾಮಲಿಂಗಾರೆಡ್ಡಿ ಬೆಂಬಲಿತ ಶಾಸಕರು ಗಂಗಾಂಬಿಕೆ ಪರ ಬ್ಯಾಟಿಂಗ್ ಮಾಡುತ್ತಿರುವುದರಿಂದ ಮೇಯರ್​ ಪಟ್ಟ ಶಾಸಕ ರಾಮಲಿಂಗ ರೆಡ್ಡಿ ಬೆಂಬಲಿತ ಜಯನಗರ ಕಾರ್ಪೊರೇಟರ್​ ಗಂಗಾಂಬಿಕೆಗೆ ಬಹುತೇಕ ಖಚಿತ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಸರನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಎರಡನೇ ಬಾರಿಯೂ ಶಾಂತಿನಗರ ವಾರ್ಡ್‌ ಕಾರ್ಪೋರೇಟರ್‌ …

Read More »

ಅಶೋಕ್‌ಗೆ ಶಾ ಕ್ಲಾಸ್‌: ಮೇಯರ್‌ ಎಲೆಕ್ಷನ್‌ನಿಂದ ಹಿಂದಕ್ಕೆ ಸರಿದ ಕಮಲ.

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣಾ ಅಖಾಡದಿಂದ ಬಿಜೆಪಿ ಹಿಂದೆ ಸರಿದಿದೆ. ಬಿಜೆಪಿ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಮೇಯರ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಲಾಗಿದೆ. ಇದುವರೆಗೆ ಆಗಿರುವ ಮುಖಭಂಗವೇ ಸಾಕು. ಮೇಯರ್ ಚುನಾವಣೆಯಲ್ಲಿ ಈ ಹಿಂದೆ ಎರಡು ಬಾರಿ ಮುಖಭಂಗ ಅನುಭವಿಸಿದ್ದೀರಿ. ಜೊತೆಗೆ ರಾಜ್ಯದ ಚುಕ್ಕಾಣಿ ಹಿಡಿಯಲು ಹೋಗಿ ಪಕ್ಷದ ಮರ್ಯಾದೆ ಹಾಳಾಗಿದೆ. ಹೀಗಾಗಿ ಮೇಯರ್ ಗೋಜಿಗೆ ಹೋಗದಿದ್ದರೆ ಒಳಿತು. ಅಭ್ಯರ್ಥಿ ಕಣಕ್ಕಿಳಿಸಿ ನಿಮ್ಮ ಜೊತೆಗೆ ನಮ್ಮ ಮತ್ತು ಪಕ್ಷದ …

Read More »

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಗಿಣಿ ದ್ವಿವೇದಿ ನಿರ್ಧಾರ

ಬೆಂಗಳೂರು: ಸ್ಯಾಂಡಲ್’ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ಸಮಾಜ ಸೇವೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಕೆಲವು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿದ್ದು, ‘ಸರ್ಕಾರಿ ಶಾಲೆ ಉಳಿಸಿ’ ಆಂದೋಲನ ಆರಂಭಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಕರಿದ್ದರೂ, ಮೂಲಭೂತ ಸೌಕರ್ಯಗಳಿಲ್ಲದ ಹಿನ್ನೆಲೆಯಲ್ಲಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಹಿಂಜರಿಯುತ್ತಿದ್ದಾರೆ. ವಿಧ್ಯಾರ್ಥಿಗಳಿಗೆ ಕೂರಲು ಬೆಂಚಿಲ್ಲ, ಹಲವೆಡೆ ಶಾಲೆಗಳಲ್ಲಿ ಬೋರ್ಡೆ ಇಲ್ಲ. ಮತ್ತೊಂದೆಡೆ ಕೊಠಡಿಗಳೇ ಇಲ್ಲ. ಒಂದಲ ಎರಡಲ್ಲ, ಹಲವು …

Read More »

ಸಿಎಂ ಕುಮಾರಸ್ವಾಮಿಯಿಂದ ಮತ್ತೆ ಟೆಂಪಲ್ ರನ್

ಮಂಡ್ಯ  ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಸಿಗದಿರುವವರು ಬಿಪಿಎಲ್ ಹಾಗೂ ಆಧಾರ್ ಕಾರ್ಡ್‍ನ್ನು ನೀಡಿ ಈ ಯೋಜನೆಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಆಸ್ಪತ್ರೆಗಳಲ್ಲಿ ರಾತ್ರಿ ವೇಳೆ ವೈದ್ಯರ ಸೇವೆಯ ಕೊರತೆಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಆರೋಗ್ಯ ಇಲಾಖೆಯು ರಾತ್ರಿ ವೇಳೆ ವೈದ್ಯರ ಸೇವೆ …

Read More »

ಕೊಳಚೆ ಪ್ರದೇಶ ಮುಕ್ತಕ್ಕೆ ಆದ್ಯತೆ..

ಬೆಂಗಳೂರು: ನಗರದಲ್ಲಿ ಸ್ಲಂಗಳನ್ನು ಮುಕ್ತಗೊಳಿಸುವ‌ ಮೂಲಕ ಅವರಿಗೆ ಉತ್ತಮ ಜೀವನ ಕಟ್ಟಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.‌ ಬಿಬಿಎಂಪಿ ಯಲಹಂಕ ಉಪನಗರ ವಾರ್ಡ್ 4 ವ್ಯಾಪ್ತಿಯ‌ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ 259 ದಲಿತ ಮತ್ತು ಹಿಂದುಳಿದ ಕುಟುಂಬಗಳಿಗೆ ನಿವೇಶನದ ಕ್ರಯಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಯಲಹಂಕದ ಅಂಬೇಡ್ಕರ್ ಭವನದಲ್ಲಿ ಹಲವು ವರ್ಷದಿಂದ‌ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಇಂದು ಕ್ರಯ ಪತ್ರ ವಿತರಿಸುತ್ತಿದ್ದು …

Read More »

ಕಾಂಪೀಟ್ ವಿತ್ ಚೈನಾ ಯೋಜನೆ: ಪ್ರಸಕ್ತ ವರ್ಷ 500 ಕೋಟಿ ರೂ..

ಬೆಂಗಳೂರು: ರಾಜ್ಯ ಸರ್ಕಾರವು ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‍ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಮುಂದಿನ ವರ್ಷ 2000 ಕೋಟಿ ರೂ. ಗಳನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಮಂಗಳವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಪೀಟ್ ವಿತ್ ಚೈನಾ’ ಯೋಜನೆಯಡಿ ಸ್ಥಾಪಿಸಲಾದ ವಿವಿಧ ವಲಯಗಳ ಉದ್ಯಮಿಗಳನ್ನೊಳಗೊಂಡ 6 ವಿಷನ್ ಗ್ರೂಪ್‍ಗಳ …

Read More »

ದುನಿಯಾ ವಿಜಿ ಮೇಲೆ ಸೀಕ್ರೆಟ್ಟಾಗಿ ರೆಡಿಯಾಗ್ತಿದೆಯಾ ರೌಡಿ ಶೀಟ್!?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬ ಯುವಕನನ್ನು ಅಪಹರಿಸಿ, ಹಲ್ಲೆ ಮಾಡಿದ ಆರೋಪದಡಿ ಬಂಧಿತರಾಗಿರೋ ನಟ ದುನಿಯಾ ವಿಜಯ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ದುನಿಯಾ ವಿಜಯ್ ವಿರುದ್ಧ ರೌಡಿ ಶೀಟ್ ಓಪನ್ ಮಾಡೋ ಬಗ್ಗೆಯೂ ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ರೌಡಿ ಶೀಟ್ ಓಪನ್ ಆಗಲು ಎಷ್ಟು ಕೇಸ್ ಮಾಡಿರಬೇಕು? ರೌಡಿ ಶೀಟ್ ಓಪನ್ ಆಗಲು ಸಾಮಾನ್ಯವಾಗಿ ಒಂದು ಹೀನಸ್ ಕೇಸ್ (Heinous case) ಹಾಗೂ …

Read More »

ಮಿತ್ರರ ಮುನಿಸಿಗೆ ಮಣಿದ ಹೆಚ್​​ಡಿಕೆ, 141 ಇನ್ಸ್​​ಪೆಕ್ಟರ್​​ ವರ್ಗಾವಣೆಗೆ ಬ್ರೇಕ್​..!

ಬೆಂಗಳೂರು: ಸರ್ಕಾರ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನ ನೋಡಿದ್ರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲವೇನೋ ಅನ್ನೋ ಅನುಮಾನ ಸಹಜವಾಗಿಯೇ ಹುಟ್ಟಿಕೊಳ್ಳುತ್ತಿದೆ. ಯಾಕಂದ್ರೆ ಮೊನ್ನೆ ಸಾರಿಗೆ ಇಲಾಖೆ ಬಸ್​ ದರಲ್ಲಿ ಶೇ.18 ರಷ್ಟು ಏರಿಸಿ ಆದೇಶ ಹೊರಡಿಸಿತ್ತು. ಆದೇಶ ಹೊರ ಬಿದ್ದ ನಿಮಿಷಾರ್ಧದಲ್ಲೇ ಸಿಎಂ ಕುಮಾರಸ್ವಾಮಿ ಆದೇಶಕ್ಕೆ ತಡೆ ನೀಡಿದ್ದರು. ಇದೀಗ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಆದೇಶದಲ್ಲೂ ಸಿಎಂ ಹೆಚ್​ಡಿಕೆ ಅದನ್ನೇ ಮಾಡಿದ್ದಾರೆ. ನಿನ್ನೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, …

Read More »

ಹಾಸನ-ಸಕಲೇಶಪುರ ರೈಲು ಸಂಚಾರ ಪುನರಾರಂಭ

ಹಾಸನ: ಕಳೆದ ಆಗಸ್ಟ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ರೈಲ್ವೆ ಹಳಿಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆದರೆ ಈಗ ರಿಪೇರಿ ಕಾಮಗಾರಿ ನಂತರ, ರೈಲು ಸಂಚಾರ ಪುನರಾರಂಭವಾಗಿದೆ. ಸದ್ಯ ಯಶವಂತಪುರದಿಂದ ಸಕಲೇಶಪುರವರೆಗೆ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಮಾರ್ಗ ಇನ್ನೂ ದುರಸ್ತಿಯಾಗದ ಕಾರಣ ಸರಕು ಸಾಗಣೆ ರೈಲು ಓಡಾಟ ಮತ್ತಷ್ಟು ವಿಳಂಬವಾಗಲಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ರಿಪೇರಿ ಕಾರ್ಯ ಪೂರ್ಣವಾಗೋ ನಿರೀಕ್ಷೆಯಿದ್ದು, ಮೊದಲು …

Read More »