Breaking News

ಕರ್ನಾಟಕ

8 KAS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: 8 ಮಂದಿ ಕೆಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತಾತ್ಮಕ ಹಿತದೃಷ್ಟಿಯನ್ನ ಇಟ್ಟುಕೊಂಡು ಹಿರಿಯ ಹಾಗೂ ಕಿರಿಯ ಎಂಟು ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸರ್ಕಾರದ ಸಚಿವಾಲಯ ವರ್ಗಾವಣೆ ಮಾಡಿ, ತಕ್ಷಣದಿಂದಲೇ ಜಾರಿಯಾಗುವಂತೆ ಸೂಚನೆ ನೀಡಿದೆ. ವರ್ಗಾವಣೆಯಾದ ಅಧಿಕಾರಿಗಳ ವಿವರ ಇಲ್ಲಿದೆ. ಅನುರಾಧ ಜಿ. (ಅಪರ ಜಿಲ್ಲಾಧಿಕಾರಿ ಶಿವಮೊಗ್ಗ ಜಿಲ್ಲೆ) ಸುರೇಶ್ ಬಿ.ಇಟ್ನಾಳ್ (ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ ಜಿಲ್ಲೆ) ಅನಿತಾ ಲಕ್ಷ್ಮಿ (ವಿಶೇಷ …

Read More »

ನಾವು ಊಟ ತಿಂದಿಲ್ಲ.. ನಿದ್ರೆ ಮಾಡಿಲ್ಲ.. ದರ್ಶನ್‌ ನೋಡಲು ಬಿಡಿ..!

ಮೈಸೂರು: ನಟ ದರ್ಶನ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ತಮ್ಮ ನೆಚ್ಚಿನ ನಟನನ್ನ ನೋಡುವ ತವಕ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆಸ್ಪತ್ರೆ ಬಳಿ ಅಭಿಮಾನಿಗಳು ಬರದಂತೆ ದರ್ಶನ್​ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಇಂದು ಮಹಿಳಾ ಪೌರಕಾರ್ಮಿಕರು ದರ್ಶನ್​ ನೋಡಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಆಗಮಿಸಿದ್ದು, ಸೆಕ್ಯೂರಿಟಿಗೆ ಒಳ ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ನಮಗೆ ವಿಚಾರ ಗೊತ್ತಾಯಿತು. ವಿಚಾರ ತಿಳಿದ ಮೇಲಿಂದ ಊಟವೇ ಸೇರುತ್ತಿಲ್ಲ. ರಾತ್ರಿಯೆಲ್ಲಾ …

Read More »

ಮಾಜಿ ಡಿಸಿಎಂ ಆರ್​.ಅಶೋಕ್​ಗೆ ‘ಭೂ’ ಕಂಟಕ..!

ಬೆಂಗಳೂರು: ಮಾಜಿ ಡಿಸಿಎಂ ಆರ್.ಅಶೋಕ್​​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೋಮನಹಳ್ಳಿಯ ಬಗರ್ ಹುಕ್ಕುಂ ಭೂ ಪ್ರದೇಶವನ್ನು ಅಕ್ರಮ ಮಾಡಿಕೊಂಡಿರುವ ಆರೋಪ ಸಂಬಂಧ ಆರ್.ಅಶೋಕ್ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ. ಎಸಿಬಿ ದಾಖಲಿಸಿದ್ದ ಎಫ್​ಐಆರ್​ ರದ್ದು ಮಾಡುವಂತೆ ಕೋರಿ ಆರ್​.ಅಶೋಕ್ ಹೈಕೋರ್ಟ್​ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್​, ಎಫ್ ಐಆರ್ ರದ್ದು ಮಾಡಲು ನಿರಾಕರಿಸಿದೆ. ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾಗುವುಂತೆ ಕಾಣುತ್ತಿದೆ. ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ …

Read More »

ವರನಟ ಡಾ.ರಾಜ್ ಕುಮಾರ್ ಅಪಹರಣ ಪ್ರಕರಣ: ಎಲ್ಲಾ ಆರೋಪಿಗಳು ಖುಲಾಸೆ

ಈರೋಡು: ವರನಟ ಡಾ.ರಾಜ್‌ ಕುಮಾರ್‌ ಅವರ ಅಪಹರಣ ಪ್ರಕರಣದಲ್ಲಿ ಎಲ್ಲಾ 9 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಈರೋಡ್‌ನ‌  ಜಿಲ್ಲಾ ಕೋರ್ಟ್‌ ಮಂಗಳವಾರ ತೀರ್ಪು ಪ್ರಕಟಿಸಿದೆ. ಜುಲೈ 30, 2000 ದಲ್ಲಿ , ಕುಖ್ಯಾತ ದಂತಚೋರ, ನರಹಂತಕ, ಕಾಡುಗಳ್ಳ ವೀರಪ್ಪನ್‌  ಡಾ.ರಾಜ್ ಅವರನ್ನು  ಗಾಜನೂರಿನಲ್ಲಿನ  ತೋಟದ ಮನೆಯಿಂದ ಅಪಹರಿಸಿದ್ದ. ಡಾ.ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾಗಿದ್ದರು.  108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.  …

Read More »

ಸಿಲಿಕಾನ್ ಸಿಟಿಯಲ್ಲಿ ಅಬ್ಬರಿಸಿದ ಮಳೆರಾಯ..

ಬೆಂಗಳೂರು: ಸೋಮವಾರ ರಾತ್ರಿಯಿಂದಲೂ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ  ಭಾರೀ ಮಳೆಯಾಗುತ್ತಿದ್ದು, ಮುಂದಿನ ಕೆಲ ಗಂಟೆಗಳು ಮಳೆ ಇನ್ನೂ ತೀವ್ರಗೊಳ್ಳಲಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ನೀಡಿದೆ.  ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ ಸೇರಿ ಹಳೇ ಮೈಸೂರು ಭಾಗದಲ್ಲಿ ಮಳೆ ಅಬ್ಬರಿಸಿದ್ದು, ಸಾಕಷ್ಟು ಹಾನಿ ಉಂಟು ಮಾಡಿದೆ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ …

Read More »

ಮಂಡ್ಯದ ಜನರ ಮನಸು ಸಕ್ಕರೆಯಷ್ಟೇ ಸಿಹಿ- ಮಾಜಿ ಸಿಎಂ ಸಿದ್ದರಾಮಯ್ಯ ಬಣ್ಣನೆ

ಮಂಡ್ಯ  ಮಂಡ್ಯ ಜನ್ರ ಹೃದಯವಂತಿಕೆ ಕೊಂಡಾಡಿದ ಮಾಜಿ ಸಿ.ಎಂ. ಸಿದ್ರಾಮಯ್ಯ.‌.. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ  ಮಾಜಿ ಸಿ.ಎಂ‌ ರಿಂದ  ಮಂಡ್ಯ ಜನ್ರು ಹೃದಯವಂತಿಕೆ ಹೊಗಳಿಕೆ…… ಸೆ-೨೩ ರಂದು ಮಂಡ್ಯಕ್ಕೆ ಬಂದಾಗ ಮಾಜಿ ಸಿ.ಎಂ‌.ಗೆ ಸ್ವಾಗತಕೋರಿದ ಬಗ್ಗೆ ಸಿದ್ರಾಮಯ್ಯ ಫುಲ್ ಫಿಧಾ…… ಮಂಡ್ಯ ಜನ್ರ ಮನಸ್ಸು ಸಕ್ಕರೆಯಂತೆ  ಸಿಹಿಯೆಂದು ಹೊಗಳಿಕೆ.. ಸೆ-೨೩ ರಂದು ಮಂಡ್ಯದ ಕನಕ ಉದ್ಘಾಟನೆಗೆ ಬಂದಿದ್ದ ಮಾಜಿ ಸಿ.ಎಂ. …Check out @siddaramaiah’s Tweet: https://twitter.com/siddaramaiah/status/1044112356895145984?s=09

Read More »

ಭದ್ರಾ ಜಲಾಶಯ ಪ್ರವಾಸಿ ತಾಣವಾಗಿ ಪರಿವರ್ತಿಸಲು ₹ 13 ಕೋಟಿ ಅನುದಾನ

ಶಿವಮೊಗ್ಗ: ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಗಡಿ ಭಾಗದಲ್ಲಿರುವ ಭದ್ರಾ ಜಲಾಶಯದ ಸುತ್ತಮುತ್ತಲ ಪ್ರದೇಶವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಸರ್ಕಾರ ₹ 13 ಕೋಟಿ ಮಂಜೂರು ಮಾಡಿದೆ ಅಂತಾ ಪ್ರವಾಸೋದ್ಯಮ, ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಭದ್ರಾ ಜಲಾಶಯ ಹಾಗೂ ಜಿಲ್ಲೆಯಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಇಲ್ಲಿರುವ 182 ಎಕರೆ ಪ್ರದೇಶದಲ್ಲಿ 105 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಲು ಕಾಯ್ದಿರಿಸಲಾಗಿದೆ. ಅಲ್ಲದೇ ಖಾಸಗಿ ಸಂಸ್ಥೆಯ …

Read More »

ಬೇಗ ಹುಷಾರಾಗು ಗೆಳೆಯ..! ದರ್ಶನ್​ಗೆ ಸುದೀಪ್​ ವಿಶ್​​.

ಸ್ಯಾಂಡಲ್​ವುಡ್​ನ ಒಂದು ಕಾಲದ ಜಿಗರಿ ದೋಸ್ತುಗಳೆಂದರೆ ದರ್ಶನ್- ಸುದೀಪ್​. ಆದರೆ, ಕಾರಣಾಂತರಗಳಿಂದ ಇಬ್ಬರಲ್ಲೂ ಮನಸ್ತಾಪ ಉಂಟಾಗಿತ್ತು. ಆದ್ರೀಗ, ಕುಚುಕು ಗೆಳಯನ ಅಪಘಾತ ಸುದ್ದಿ ಕೇಳಿ ಸುದೀಪ್​ ಆತಂಕಗೊಂಡಿದ್ದರು. ಮತ್ತೆ ಗೆಳೆಯನಿಗಾಗಿ ಕಿಚ್ಚನ ಹೃದಯ ಮಿಡಿದಿದ್ದು ದರ್ಶನ್​ ಅಪಾಯದಿಂದ ಪಾರಾಗಿ, ಗುಣಮುಖ ಆಗ್ತಿರೋ ಸುದ್ದಿ ಕೇಳಿ  ಸಮಾಧಾನಪಟ್ಟಿದ್ದಾರೆ. ಅಲ್ಲದೇ, ಟ್ವಿಟ್ಟರ್​ನಲ್ಲಿ ದರ್ಶನ್ ಕ್ಷೇಮದ ಬಗ್ಗೆ ಬರೆದುಕೊಂಡಿದ್ದಾರೆ. ‘ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಆದಷ್ಟು ಬೇಗ ಹುಷಾರಾಗು ಗೆಳೆಯ’ ಅಂತಾ ಸುದೀಪ್​ ಬರೆದುಕೊಂಡಿದ್ದಾರೆ.  https://twitter.com/KicchaSudeep/status/1044220802751766528?s=20

Read More »

ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಶಾಸಕಾಂಗ ಸಮಿತಿ ಸಭೆ ನಡೆಯಲಿದೆ.  ನಗರದ ಮೌಂಟ್‍ ಕಾರ್ಮೆಲ್‍ ಕಾಲೇಜು ಸಮೀಪ ಇರುವ ಶಾಂಗ್ರಿಲಾ ಹೋಟೆಲ್‍ನಲ್ಲಿ ಸೆಪ್ಟೆಂಬರ್ 25ರಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ವಿಧಾನಪರಿಷತ್ ಚುನಾವಣೆ, ವಿಧಾನ ಪರಿಷತ್​ನ ಆರು ಸ್ಥಾನಗಳಿಗೆ ಚುನಾವಣೆ, ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೇಮಕ, ಲೋಕಸಭಾ ಚುನಾವಣೆ ಸೇರಿದಂತೆ …

Read More »

ಎಲ್ಲ ಸಮುದಾಯಗಳಿಗೆ ನಾನು ಯೋಜನೆಗಳನ್ನ ಜಾರಿಗೆ ತಂದಿರುವೆ. ಆದರೂ ನೀವು ನನ್ ಕೈಬಿಟ್ರೀ- ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಹೇಳಿಕೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮ ಈ ಸಭೆ ಪ್ರಾಮುಖ್ಯವಾದ, ಸಂತೋಷ ಪಡುವ ಸಭೆ ಅಭಿಮಾನದಿಂದ ಸ್ವಾಗತ ಮಾಡಿದ್ದೀರಿ ನಿಮ್ಮೆಲ್ಲರಿಗೂ ಚಿರ‌ಋಣಿ ಆಗಿರ್ತಿನಿ ಕೆಲವರುವ ಮಾತಾಡುತ್ತಾರೆ ಧಾನ ಮಾಡಲ್ಲ ಕೆಲವರು ಮಾತಡಲ್ಲ ಧಾನ ಮಾಡ್ತಾರೆ ನಾನು ಸಿಎಂ ಆದಾಗ ಸಮುದಾಯ ಭವನಗಳ ನಿರ್ಮಾಣಕ್ಕೆ 300ಕೋಟಿ ರೂಪಾಯಿ ನೀಡಿದ್ದೇನೆ ಬಡವರ ಮದುವೆಗಾಗಿ ನೀಡಿದ್ದೇನೆ ಪುಟ್ಟರಂಗಶೆಟ್ಟಿಗೆ ಹೇಳಿದ್ದೇನೆ ಸಿಎಂಗೆ ಹೇಳಿ ಮತ್ತಷ್ಟು ಕೇಳು ಅಂತ ಬೆಂಗಳೂರಿನಲ್ಲಿ 70 ಸಂಘಗಳಿಗೆ …

Read More »