Breaking News

ಸುದ್ದಿ

ಪೆಟ್ರೋಲ್ ಗೆ ಪರ್ಯಾಯ ಇಂಧನದ ಆವಿಷ್ಕಾರ ಮಾಡಿದ ಮುರುಘಾ ಮಠದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು

ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಇಂಧನದ ದರ ಕೂಡ ಮಿತಿ ಮೀರಿ ಬೆಳೆಯುತ್ತಿದೆ. ಹೀಗೇ ಆದ್ರೆ 2030ರ ವೇಳೆಗೆ ವಾಹನಗಳಿಗೆ ಬಳಸುವ ಪೆಟ್ರೋಲ್, ಡಿಸೇಲ್ ಕೂಡ ಸಿಗದಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಪರ್ಯಾಯ ಇಂಧನದ ಉತ್ಪಾದನೆ ಕಡೆ ಗಮನ ಹರಿಸಿರುವ ಮುರುಘಾ ಮಠಕ್ಕೆ ಸೇರಿದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು, ಕರ್ನಾಟಕ ಜೈವಿಕ ಇಂಧನ ಅಭಿವೃದ್ದಿ …

Read More »

ಜೋಡಿ ರೈಲು ಮಾರ್ಗದಲ್ಲಿ ಸಿಲುಕಿ ಅದೃಷ್ಟವಶಾತ್ ಬದುಕುಳಿದ ಮಗು

ಬೆಳಗಾವಿ: ಲೋಂಡಾ ತಿನೈಘಾಟ ರೈಲು ನಿಲ್ದಾಣ ನಡುವಿನ ರೈಲು ಮಾರ್ಗದಲ್ಲಿ ಒಂದು ವರ್ಷದ ಹೆಣ್ಣು ಮಗು ಜೋಡಿ ಮಾರ್ಗದ ನಡುವೆ ಬಿದ್ದ ಅದೃಷ್ಟವಶಾತ್ ಬದುಕುಳಿದಿದೆ. ರೈತರೊಬ್ಬರು ನೋಡಿ ಅಕರಾಳಿ ಗ್ರಾಮಸ್ಥರಿಗೆ ತಿಳಿಸಿದ್ದರಿಂದ ಅವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರಾವ ದೇಸಾಯಿ ಇವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಮಗುವನ್ನು ಯಲ್ಲಪ್ಪ ಕಾನರ ನಿಖಿಲ ಅಸುಕರ ಇವರೊಂದಿಗೆ ಎರಡು ಕಿಲೋಮೀಟರ್ ನಡೆದುಕೊಂಡೇ ಹೋಗಿ ಸ್ಥಳಕ್ಕೆ ಧಾವಿಸಿ ಮಗುವನ್ನು ರೈಲ್ವೆ …

Read More »

ಖಾಸಗಿ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ

ಮಂಗಳೂರು: ಖಾಸಗಿ ಬಸ್ ಮತ್ತು ಲಾರಿ ಮುಖಾಮುಖಿ ಢಿಕ್ಕಿಯಾದ ಘಟನೆ ಮಂಗಳೂರಿನ ಮೂಡಬಿದ್ರೆ ಸಮೀಪದ ತೋಡಾರ್ ಬಳಿ ನಡೆದಿದೆ. ಅಪಘಾತದಲ್ಲಿ ಹಲವರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಮೂಡಬಿದ್ರೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಎಕ್ಸ್ ಪ್ರೆಸ್ ಬಸ್ ಮತ್ತು ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ತೋಡಾರ್ ಮಸೀದಿ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಎದುರು ಭಾಗ ನುಜ್ಜುಗುಜ್ಜಾಗಿದೆ. ಎರಡೂ ವಾಹನಗಳ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು …

Read More »

ಕ್ರೂಷರ್ ಹಾಗು ಕಾರು ನಡುವೆ ಮುಖಾಮುಖಿ ಡಿಕ್ಕಿ ಓರ್ವ ಸಾವು

ಚಳ್ಳಕೆರೆ : ಕ್ರೂಷರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಡೆದಿದೆ. ತಾಲ್ಲೂಕಿನ ಲಕ್ಷ್ಮಿಪುರದ ಅಜಿತ್ (23) ಸ್ಥಳದಲ್ಲೆ ಮೃತ ಪಟ್ಟ ಯುವಕ.ಲಕ್ಷ್ಮಿ ಪುರದಿಂದ ಗೊಪನಹಳ್ಳಿ ಕಡೆ ಹೋಗುತ್ತಿದ್ದಾಗ ಹಿರಿಯೂರು ಕಡೆಯಿಂದ ಬಂದ ಕ್ರೂಷರ್ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.ಕ್ರೂಷರ್ ನಲ್ಲಿ ಇದ್ದವರು ಪರಾರಿಯಾಗಿದ್ದಾರೆ.ಸ್ಥಳಕ್ಕೆ ಪಿಎಸ್ಐ ಕೆ ಸತೀಸ್ ನಾಯ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕೇಸ್ …

Read More »

ನಿಲ್ಲದ ಆಧಾರ್ ಕಾರ್ಡ್ ಗೊಂದಲ ತಪ್ಪದ ನಾಗರೀಕರ ಪರದಾಟ

ಮಂಡ್ಯ:ಆಧಾರ ಕಾರ್ಡ್ ಮಾಡಸಿಕೊಳ್ಳಲು ಮಧ್ಯರಾತ್ರಿಯೇ ನಾಗರೀಕರು ಮಕ್ಕಳು ಮರಿಗಳೊಂದಿಗೆ ಆಗಮಿಸಿ ಜಾಗರಣೆ ನಡೆಸಿ ರಾತ್ರಿಯಿಡೀ ಬ್ಯಾಂಕ್ ಬಳಿ ಕಾದು ಆಧಾರ ಮಾಡಿಸಲು ಟೋಕನ್ ಪಡೆಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.ಒಂದು ದಿನಕ್ಕೆ ಕೇವಲ 20 ಜನರಿಗೆ ಮಾತ್ರ ಆಧಾರ್ ಕಾರ್ಡ್ ಮಾಡುತ್ತಿರುವುದರಿಂದ ನೂರಾರು ಜನರು ಆಧಾರ್ ಕಾರ್ಡಿಗೆ ಪರದಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.ಮಂಡ್ಯ ಕೆ.ಆರ್.ಪೇಟೆ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಮುಂದೆ ಪ್ರತಿದಿನವೂ ಆಧಾರ್ ಕಾರ್ಡ್ ಗೋಳನ್ನು ಕೇಳಿ ಪರಿಹಾರ ನೀಡುವವರೇ …

Read More »

ರಾಜಕೀಯ ಹೈಡ್ರಾಮಾ ಖಂಡಿಸಿ ಪ್ರತಿಭಟನೆ

ಕೋಲಾರ: ರಾಜ್ಯ ರಾಜಕೀಯದಲ್ಲಿ ಸಿಎಂ ಪದವಿಗಾಗಿ ನಡೆಯುತ್ತಿರುವ ಹೈಡ್ರಾಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಂದಿ ನಾಯಿಗಳನ್ನು ಕರೆತಂದು ಪ್ರತಿಭಟನೆ ನಡೆಸಿದರು. ರಾಜ್ಯದ ಶಾಸಕರನ್ನು ಹಂದಿನಾಯಿಗಳಿಗೆ ಹೋಲಿಸಿ ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ರೈತರಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ಅಲ್ಲದೇ 224 ಶಾಸಕರನ್ನು ಅನರ್ಹತೆ ಮಾಡಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದರು. ಸಿಎಂ ಪದವಿಗಾಗಿ ಹಂದಿನಾಯಿಗಳಂತೆ ಕಚ್ಚಾಡುತ್ತಿರುವ ಶಾಸಕರುಗಳು ಭಾವಚಿತ್ರಕ್ಕೆ ಸಗಣಿ ಎರಚಲಾಯಿತು. ಮತ ಪಡೆದು …

Read More »

ದುಷ್ಕರ್ಮಿಗಳಿಂದ ದ್ವಿಚಕ್ರ ವಾಹನಗಳಿಗೆ ಬೆಂಕಿ

ಚಿಕ್ಕೋಡಿ: ದುಷ್ಕರ್ಮಿಗಳು ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಶಂಕರ ನಗರದಲ್ಲಿ ನಡೆದಿದೆ. ‌ ಬೆಂಕಿ ನೋಡಿ ಗಾಬರಿಯಾದ ವಾಹನ ಮಾಲೀಕ ಆಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ತಡವಾಗಿ ಸ್ಥಳಕ್ಕೆ ಆಗಮಿಸಿದ್ದರಿಂದ ಒಂದು ಹೋಂಡಾ ಶೈನ್ 1 ಪಲ್ಸರ್ ಸೇರಿದಂತೆ ಎಚ್ಎಫ್ ಡಿಲಕ್ಸ್ ಅಗ್ನಿಗೆ ಆಹುತಿಯಾಗಿದೆ. ಎ ಕೆ ದೊಡ್ಡನವರ್ ,ವಿನೋದ್ ಕುಮಾರ್ ದೊಡ್ಡನವರ್, ರಾಮು ಬಾಡಗಿ …

Read More »

ರಾಜ್ಯ ಶಾಸಕರ ವಿರುದ್ಧ ಕಿಡಿ ಕಾರಿದ ಕೋಡಿಹಳ್ಳಿ

ಧಾರವಾಡ: ಇವತ್ತು ಮೂರು ಪಕ್ಷಗಳು ಮೂರು ಬಿಟ್ಟಿವೆ,ನಾಡಿನಲ್ಲಿ ಬರಗಾಲ, ರೈತರ ಸಮಸ್ಯೆ,ನೀರಿನ ಸಮಸ್ಯೆಗೆ ರಾಜೀನಾಮೆ ಕೊಡಲಿಲ್ಲ.ಇವತ್ತು 30 ಕೋಟಿ ಅಧಿಕಾರಕ್ಕೆ ರಾಜೀನಾಮೆ ನೀಡಿದ್ದಾರೆ, ಅಂತಹವರಿಗೆ ಚಿ..ಥೂ ಎಂದು ಉಗಿರಿ ಎಂದುಕರ್ನಾಟಕ ರಾಜ್ಯ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.ನಗರದ ಕಲಾಭವನದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಿಲ್ಲಾ ಹಸಿರು ಸೇನೆ ವತಿಯಿಂದ ಸಾಲಗಾರ ನಾನಲ್ಲ, ಸಾಲ ನನ್ನದಲ್ಲ ಎಂಬ ಘೋಷ ವಾಕ್ಯದ ಮೂಲಕ 39 ನೇ …

Read More »

ಪ್ರತಿ ಮನೆಗೆರೆಡು ಮರ ಕಡ್ಡಾಯವಾದರೆ ನಗರವೇ ಬೃಂದಾವನ : ಡಿವೈಎಸ್ಪಿ ಶಿವಕುಮಾರ

ಬಳ್ಳಾರಿ: ಮನೆಗೆರಡು ಮಕ್ಕಳು ಸಾಕು ಮನೆಗೆರೆಡು ಮರಗಳು ಬೇಕೆ ಬೇಕು” ವಾಕ್ಯ ಕಾಯ೯ರೂಪವಾದರೆ ಪಟ್ಟಣ ಮೃಂದಾವನ ಆಗಲಿದೆ ಎಂದು ಕೂಡ್ಲಿಗಿ ನೂತನ ಡಿವೈಎಸ್ಪಿ ಶಿವಕುಮಾರ ನುಡಿದರು.ಅವರು ಪಟ್ಟಣದಲ್ಲಿ ಮೈದಾನ ಗೆಳೆಯರ ಬಳಗ ಹಾಗೂ ಜೆಸಿಐ ಗೋಲ್ಡಾನ್.ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾಯ೯ಕ್ರಮದಲ್ಲಿ ಸಹಭಾಗಿತ್ವ ವಹಿಸಿ ಗಿಡನೆಡೋ ಕಾಯ೯ಕ್ಕೆ ಚಾಲನೆ ನೀಡಿ ಮಾತನಾಡಿದರು.ಪಟ್ಟಣದಲ್ಲಿ ವಾಹನ ದಟ್ಟಣೆ ಹಾಗೂ ತ್ಯಾಜ್ಯ ಉತ್ಪನ್ನದಿಂದಾಗಿ ವಾತಾವರಣ ಮಲಿನವಾಗುತ್ತಿದ್ದು ಶುದ್ಧ ವಾತಾವರಣಕ್ಕಾಗಿ ಸುರ್ರಲೂ ನೈಮ೯ಲ್ಯತೆ …

Read More »

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹೆಚ್.ಆರ್.ಹನುಮಂತೇಗೌಡ ನಿಧನ

ಮಂಡ್ಯ: ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ, ಜನಪರ ಹೋರಾಟಗಾರ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಹೆಚ್.ಆರ್.ಹನುಮಂತೇಗೌಡ ಅವರು ಅನಾರೋಗ್ಯದಿಂದ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ನಿಧನರಾದರು. ಶಿಕ್ಷಣ ಪ್ರೇಮಿಗಳಾಗಿ ಅಪಾರ ಸಂಖ್ಯೆಯ ಶಿಕ್ಷಕರು, ಸಾವಿರಾರು ವಿದ್ಯಾರ್ಥಿ ವೃಂದವನ್ನು ಹೊಂದಿದ್ದ ಗೌಡರ ಅಂತ್ಯಸಂಸ್ಕಾರವು ಮಂಡ್ಯ ಪಟ್ಟಣದ ಕೆ.ಆರ್.ಪೇಟೆ ತಾಲ್ಲೂಕಿನ ಗೋವಿಂದೇಗೌಡನಕೊಪ್ಪಲು ಗ್ರಾಮದಲ್ಲಿ ಜುಲೈ-23ರ ಮಂಗಳವಾರ ನಡೆಯಲಿದೆ ಎಂದು ಮೃತರ ಪುತ್ರ ಸತೀಶ್ ತಿಳಿಸಿದ್ದಾರೆ…

Read More »