Breaking News

ಸುದ್ದಿ

ಮೊಬೈಲ್ ಅಂಗಡಿಯಲ್ಲಿ ಕೈಚಳಕ ತೋರಿದ ಕಳ್ಳರು

ಆನೇಕಲ್ : ಪಟ್ಟಣದ ಮೊಬೈಲ್ ಅಂಗಡಿವೊಂದರಲ್ಲಿ ಕದೀಮರ ಗ್ಯಾಂಗ್ ಒಂದು ಅಂಗಡಿಯ ಮೇಲ್ಭಾಗದ ಶೀಟ್ ಕಟ್ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ರಸ್ತೆಯಲ್ಲಿ ನಡೆದಿದೆ.ಆನೇಕಲ್ ಪಟ್ಟಣದ ಅತ್ತಿಬೆಲೆ ರಸ್ತೆಯಲ್ಲಿರುವ ಅಂಜನಾದ್ರಿ ಮೊಬೈಲ್ ಅಂಗಡಿಯ ಮೇಲ್ಬಾಗದಲ್ಲಿದ್ದ ಕಬ್ಬಿಣದ ಶೀಟ್ ಗಳನ್ನು ಕಟ್ ಮಾಡಿ ಮಧ್ಯರಾತ್ರಿ ಅಂಗಡಿಯಲ್ಲಿದ್ದ ಇಪ್ಪತ್ತು ಸಾವಿರ ನಗದು ಸೇರಿದಂತೆ ಐವತ್ತು ಸಾವಿರ ಬೆಲೆ ಬಾಳುವ ವಸ್ತುಗಳನ್ನು ಕದಿಮರು ಕಳ್ಳತನ …

Read More »

ಜಾನುವಾರದೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿ ವಿಶಿಷ್ಟ ರೀತಿಯ ಪ್ರತಿಭಟನೆ.

ಕೋಲಾರ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ರೈತಸಂಘದ ಕಾರ್ಯಕರ್ತರುಕೋಲಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು.‌ಜಾನುವಾರುಗಳ ಸಹಿತ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಅಧಿಕಾರಿಗಳು ಕಚೇರಿಯ ಒಳ ಪ್ರವೇಶ ಮಾಡದಂತೆ ಮುಳ್ಳುಗಿಡ ಅಡ್ಡಹಾಕಿ ಕಚೇರಿಗೆ ಪ್ರವೇಶ ನಿರ್ಬಂಧಿಸಿದರು.

Read More »

ಧರೆಗೆ ವರುಣನ ಸಿಂಚನ

ಆನೇಕಲ್: ತಾಲ್ಲೂಕಿನಾದ್ಯಂತ ತುಂತುರು ಮಳೆ ಆರಂಭವಾಗಿದ್ದು, ವರುಣ ತನ್ನ ಕೃಪೆಯನ್ನು ಬೀರಿದ್ದಾನೆ. ತಾಲೂಕಿನಾದ್ಯಂತ ಬೆಳಗಿನಿಂದಲೂ ಮೋಡ ಕವಿದ ವಾತಾವರಣದ ನಡುವೆ ಮಳೆರಾಯನ ಆಗಮನ ಗ್ರಾಮಸ್ಥರಲ್ಲಿ ಸಂತಸವನ್ನು ಉಂಟು ಮಾಡಿದೆ. ತಾಲೂಕಿನ ಆನೇಕಲ್,ಅತ್ತಿಬೆಲೆ, ಸರ್ಜಾಪುರ,ಸೇರಿದಂತೆ ಚಂದಾಪುರ ಬೊಮ್ಮಸಂದ್ರ ಹಲವು ಕಡೆ ತುಂತುರು ಮಳೆ ಸುರಿದಿದೆ.‌ ಮಳೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳ ಪರದಾಟ ಪಡುವಂತಾಗಿದ್ದು, ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆದ ಚಿತ್ರಣ ಕಂಡು …

Read More »

ಸಣ್ಣ ಉದ್ಯಮಗಳ ಅಭಿವೃದ್ಧಿಯ ಚಿಂತನೆಯಲ್ಲಿ ಫಿನೋ ಪೇಮೆಂಟ್ಸ್ ಬ್ಯಾಂಕ್

ಹುಬ್ಬಳ್ಳಿ: ಫಿನೋ ಪೇಮೆಂಟ್ಸ್ ಬ್ಯಾಂಕ್ ಕರ್ನಾಟಕಕ್ಕೆ ಅನುಕೂಲಕರ ಮತ್ತು ಸರಳ ಬ್ಯಾಂಕಿಂಗ್ ಪರಿಚಯಿಸುವ ಮೂಲಕ ಹೊಸ ಯುಗದ ಬ್ಯಾಂಕಿನ ಡಿಜಿಟಲ್ ಮಾದರಿಯ ಸೇವೆ ಒದಗಿಸುತ್ತಿದೆ. ನೆರೆ ಹೊರೆಯ ಸಣ್ಣಸಣ್ಣ ಉದ್ಯಮಗಳನ್ನು ಬ್ಯಾಂಕಿಂಗ್ ಪಾಯಿಂಟಗಳಾಗಿ ಪರಿವರ್ತಿಸಿರುವ ಗೌರವ ಫಿನೋ ಪೇಮೆಂಟ್ಸ್ ಬ್ಯಾಂಕಗೆ ಸಲ್ಲುತ್ತದೆ ಎಂದು ಹಿರಿಯ ವಿಭಾಗೀಯ ಮುಖ್ಯಸ್ಥರಾದ ಹಿಮಾಂಶು ಮಿಶ್ರಾ ತಿಳಿಸಿದರು.ನಗರದಲ್ಲಿಂದು ಖಾಸಗಿ ಹೊಟೇಲನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಫಿನೋ ಬ್ಯಾಂಕ್ ಕರ್ನಾಟಕದಾದ್ಯಂತ ನಾಲ್ಕು ಶಾಖೆಗಳನ್ನು ಹೊಂದಿದ್ದು, …

Read More »

ಸಮಗ್ರ ಕೃಷಿ ಅಭಿಯಾನ ರಥಯಾತ್ರೆಗೆ ಚಾಲನೆ

ಮಂಡ್ಯ: ಜಿಲ್ಲೆಯ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮದಲ್ಲಿ ಸಮಗ್ರ ಕೃಷಿ ಅಭಿಯಾನ ರಥಯಾತ್ರೆ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ಕೆ ಜಿಲ್ಲಾ ಪಂಚಾಯತ ಕೃಷಿಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಚಾಲನೆ ನೀಡಿದರು. ಅನ್ನದಾತನಾದ ರೈತನು ಕೃಷಿಯಲ್ಲಿ ಲಾಭಗಳಿಸುವ ಬದಲಿಗೆ ಸಯಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸದೇ ಸತತವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಅನ್ನದಾತ ರೈತನ ಮೊಗದಲ್ಲಿ ಮಂದಹಾಸ ಮೂಡಿಸಲು, ಬೇಸಾಯದಿಂದ ದೂರ ಸರಿಯುತ್ತಿರುವ ಯುವಜನಾಂಗವನ್ನು ಮರಳಿ ಬೇಸಾಯದತ್ತ ಆಕರ್ಷಿಸಲು ಸಮಗ್ರವಾದ ಕೃಷಿಪದ್ಧತಿಯ ಬಗ್ಗೆ …

Read More »

ಮೆಟ್ಟುಪಾಳ್ಯಂ ರೈಲ್ವೆ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಚಾಮರಾಜನಗರ : ಮೆಟ್ಟುಪಾಳ್ಯಂ ರೈಲ್ವೆ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ತಮಟೆ ಚಳುವಳಿ ನಡೆಸುವುದರ ಮೂಲಕ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚಾಮರಾಜನಗರ- ಮೇಟುಪಾಳ್ಯಂ ರೈಲ್ವೆ ಯೋಜನೆಯನ್ನು ನಾಳಿನ ಬಜೆಟ್ನಲ್ಲಿ ಜಾರಿಗೊಳಿಸಬೇಕು. ರಾಜ್ಯದವರೇ ಆದ ರೈಲ್ವೆ ಸಚಿವ ಸುರೇಶ್ ಅಂಗಡಿರವರು, ನಮ್ಮ‌ ಈ ನಿರೀಕ್ಷೆಯನ್ನ ಪೂರೈಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಜೊತೆಗೆ ರೈಲ್ವೆಯ ದಕ್ಷಿಣದ ಕೊನೆಯ …

Read More »

ವಿಶೇಷ ಪೂಜೆಯಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ ದೇವಿ.

ಆಷಾಢ ಮಾಸದ ಸಂಭ್ರಮದಲ್ಲಿ ಯುವತಿಯರುಚಾಮರಾಜನಗರ:ಆಷಾಢ ಮಾಸ ಬಂತೆಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಒಂದೆಡೆ ನವವಿವಾಹಿತ ಹೆಣ್ಣು ಮಗಳು ತಿಂಗಳ ಕಾಲ ತವರು ಮನೆಯಲ್ಲೆ ಇರುವ ಖುಷಿಯಾದ್ರೆ, ಇದೇ ಮಾಸದಲ್ಲಿ ಬರುವ ಆಷಾಢ ಶುಕ್ರವಾರದಂದು ಮುತ್ತೆದೆ ಸ್ಥಾನ ಗಟ್ಟಿಯಾಗಲೆಂದು ಚಾಮುಂಡೇಶ್ವರಿಗೆ ಪ್ರಾರ್ಥಿಸುವ ಸುವರ್ಣಾವಕಾಶ ಮತ್ತೊಂದೆಡೆ. ಈ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರದ ಚಾಮರಾಜೇಶ್ವರ ಸನ್ನಿಧಿಯಲ್ಲೂ ಆಷಾಢ ಶುಕ್ರವಾರದ ವಿಶೇಷ ಪೂಜೆ ನಡೆಯಿತು. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.ಆಷಾಢ …

Read More »

ರಮೇಶ ಜಾರಕಿಹೊಳಿ ರಾಜೀನಾಮೆ ಅಧಿಕೃತವಲ್ಲ

ಚಿಕ್ಕೋಡಿ : ರಮೇಶ ಜಾರಕಿಹೊಳಿ ಕಾಂಗ್ರೆಸ್ ನವರು. ಕಾಂಗ್ರೆಸ್ ನಲ್ಲಿಯೇ ಅವರು ಮುಂದುವರೆಯಲಿದ್ದಾರೆ ಎಂದು ಸಕ್ಕರೆ ಸಚೀವ ಆರ್ ಬಿ ತಿಮ್ಮಾಪೂರ ವಿಶ್ವಾಸ ವ್ಯಕ್ತಪಡಿಸಿದರು. ಅಥಣಿ ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ನನ್ನ ಒಳ್ಳೆಯ ಸ್ನೇಹಿತ. ‌ಅವರು ಪಕ್ಷ ಬಿಟ್ಟು ಹೋಗುತ್ತಿಲ್ಲ. ಹಾಗೂ ಅವರ ಮನವೊಲಿಸುವ ಅಗತ್ಯವಿಲ್ಲ.‌ ರಮೇಶ ಅವರ ರಾಜೀನಾಮೆ ಅಧಿಕೃತವಲ್ಲ ಎಂದು ಸಭಾಪತಿ ಸ್ಪಷ್ಟಪಡಿಸಿದ್ದಾರೆ ಎಂದರು. ರಾಜ್ಯದ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಿನಾಮೆ ಪರ್ವ …

Read More »

ನವಭಾರತಕ್ಕೆ ಪೂರಕವಾದ ಬಜೆಟ್

ಮಂಗಳೂರು: ಪ್ರಧಾನಿ ಮೋದಿ ಅವರ ನವ ಭಾರತ ನಿರ್ಮಾಣದ ಆಶಯಕ್ಕೆ ಪೂರಕವಾದ ಐತಿಹಾಸಿಕ ಬಜೆಟ್ ಇದಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ಪಾಶ್ಚಾತ್ಯ ಸಂಸ್ಕೃತಿಯ ಸೂಟ್ಕೇಸ್ ಬದಿಗಿರಿಸಿ ಭಾರತೀಯತೆಯಂತೆ ಕೆಂಪು ವಸ್ತ್ರದಲ್ಲಿ ಬಜೆಟ್ ಪ್ರತಿಗಳ ಕಟ್ಟನ್ನು ತರುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರಕಾರದ ನಮ್ಮ ಪರಂಪರೆಯನ್ನು ಉಳಿಸುವತ್ತ ಹೆಜ್ಜೆಯಿರಿಸುತ್ತಿದೆ ಎಂದರು.ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 30 ಸಾವಿರ ಕಿ.ಮೀ. ರಸ್ತೆ ನಿರ್ಮಾಣ …

Read More »

ಟ್ರಾನ್ಸ್ ಫಾರ್ಮರ್ ಬಿದ್ದು ಎತ್ತುಗಳಿಗೆ ಗಾಯ ರೈತ ಬಚಾವ್

ದಾವಣಗೆರೆ; ಜಮೀನಿನಲ್ಲಿದ್ದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಕಂಬ ಬಿದ್ದು ಎತ್ತುಗಳು ತೀವ್ರ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ ನಡೆದಿದೆ.ಇಂದು ಬೆಳಿಗ್ಗೆ‌ ರೈತ ಈಶಪ್ಪ ಎತ್ತಿನಗಾಡಿ‌ ಸಮೇತ ಬೇಸಾಯಕ್ಕೆ ಹೊರಟ್ಟಿದ್ದ ಇದೇ ಸಮಯದಲ್ಲೆ ಟಿಸಿ ಇದ್ದ ಕಂಬ ಕುಸಿದು‌ ಬಿದ್ದಿದೆ. ಪರಿಣಾಮ ಎತ್ತುಗಳು ಗಾಯಗೊಂಡಿದ್ದು, ಅದೃಷ್ಟವಶಾತ್ ರೈತ ಹಾಗೂ ಎತ್ತುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರೆಲ್ಲ ಸೇರಿ ಕಂಬದ ಕೆಳಗೆ ಸಿಲುಕಿದ್ದ ಎತ್ತುಗಳನ್ನು ಹೊರಕ್ಕೆ ತೆಗೆದಿದ್ದು, ಬೆಸ್ಕಾಂ‌ …

Read More »