Breaking News

ಸುದ್ದಿ

9 ಪೊಲೀಸ್ ಇನ್ಸ್​​​ಪೆಕ್ಟರ್​​​, ಇಬ್ಬರು ಡಿವೈಎಸ್​​​ಪಿಗಳ ವರ್ಗಾವಣೆ…?

ಬೆಂಗಳೂರು: ವಿವಿಧ ಠಾಣೆಗಳ ಒಂಬತ್ತು ಮಂದಿ ಪೊಲೀಸ್ ಇನ್ಸ್​​​ಪೆಕ್ಟರ್​​​, ಇಬ್ಬರು ಡಿವೈಎಸ್​​​ಪಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಐಜಿಪಿ ನೀಲಮಣಿ ಎನ್. ರಾಜು ಆದೇಶಿಸಿದ್ದಾರೆ.ವರ್ಗಾವಣೆಯಾದ ಡಿವೈಎಸ್​​ಪಿಗಳು(2):1. ಡಿವೈಎಸ್​​ಪಿ ಚಂದ್ರಶೇಖರ್, ಕೊಪ್ಪಳದ ಗಂಗಾವತಿಗೆ ವರ್ಗಾವಣೆ.2. ಸುಧಾಮ ಬೊಮ್ಮಯ್ಯ ನಾಯಕ್, ಸಿಐಡಿ ಯಿಂದ ಎಸಿಬಿಗೆ ವರ್ಗಾವಣೆ.ವರ್ಗಾವಣೆಯಾದ ಸಿವಿಲ್ ಇನ್ಸ್​​​​ಪೆಕ್ಟರ್​​ಗಳು 9):1. ಸೌಮ್ಯ ಎಸ್, ಎಸಿಬಿ ಯಿಂದ ಮಾಗಡಿ ರಸ್ತೆ ಸಂಚಾರ ಠಾಣೆಗೆ ವರ್ಗಾವಣೆ.2. ಕೆಂಪೇಗೌಡ, ಸುಬ್ರಹ್ಮಣ್ಯಪುರ ಠಾಣೆಯಿಂದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ …

Read More »

ಮಧ್ಯಂತರ ಬಜೆಟ್ 2019: ಕೃಷಿ, ರಿಯಲ್ ಎಸ್ಟೇಟ್, ಬ್ಯಾಂಕಿಂಗ್ ವಲಯಗಳಿಗೆ ದೊಡ್ಡ ಪ್ರಕಟಣೆ ನಿರೀಕ್ಷೆ.

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಪ್ರಸ್ತುತ ಅಧಿಕಾರವಧಿಯ ಕೊನೆಯ ಬಜೆಟ್ ಅನ್ನು ಸಚಿವ ಪಿಯೂಷ್ ಗೋಯಲ್ ಮಂಡಿಸುತ್ತಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಂಡಿಸಲಾಗುತ್ತಿರುವ ಮಧ್ಯಂತರ ಬಜೆಟ್ ನಲ್ಲಿ ವಿವಿಧ ವಲಯಗಳಿಗೆ ದೊಡ್ಡ ಘೋಷಣೆ ಮಾಡುವ ಸಾಧ್ಯತೆಯಿದೆ- ಇವುಗಳಲ್ಲಿ ಕೃಷಿ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಮತ್ತು ರೈಲ್ವೆ ವಲಯಗಳು ಮುಖ್ಯವಾಗಿವೆ.ಅರುಣ್ ಜೇಟ್ಲಿಯ ಅನುಪಸ್ಥಿತಿಯಲ್ಲಿ ಇತ್ತೀಚೆಗಷ್ಟೇ ಹಣಕಾಸು ಇಲಾಖೆಯ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿರುವ ರೈಲ್ವೆ ಸಚಿವ ಪಿಯೂಷ್ …

Read More »

ಹಿರಿಯ ನಾಗರಿಕರಿಗೆ ನಮೋ ಕೊಡುಗೆ..

ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಮೋದಿ ಸರ್ಕಾರ ತನ್ನ ಕೊನೆಯ ಬಜೆಟ್​ನಲ್ಲಿ ಭರ್ಜರಿ ಗಿಫ್ಟ್​ ನೀಡಿದೆ. 60 ವರ್ಷದ ಅಸಂಘಟಿತ ವಲಯದ ಕಾರ್ಮಿಕರಿಗೆ 3 ಸಾವಿರ ರೂಪಾಯಿ ಪ್ರತಿ ತಿಂಗಳು ಪೆನ್ಶನ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಮಂತ್ರಿ ಶ್ರಮ ಯೋಗಿ ಮಂಧನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಘೋಷಿಸಿದ್ದು, ಅಸಂಘಟಿತ ಕಾರ್ಮಿಕರಿಗೆ ಭರ್ಜರಿ ಉಡುಗೊರೆ ಇದಾಗಿದೆ.

Read More »

ಪಾತಕಿ ರವಿ ಪೂಜಾರಿ ಯಾರು ಅಂತಾ ಗೊತ್ತಾ….

ಮೋಸ್ಟ್​ ವಾಂಟೆಡ್​ ಪಾತಕಿ ರವಿ ಪೂಜಾರಿ ಇಂದು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಲ್ಲಿ ಅರೆಸ್ಟ್​ ಆಗಿದ್ದಾನೆ. ಇವನ ಹಿನ್ನೆಲೆಯನ್ನ ನೋಡುವುದಾದರೆ ಭೂಗತ ಪಾತಕಿ ಆಗಿರುವ ರವಿ ಪೂಜಾರಿ ಆಸ್ಟ್ರೇಲಿಯಾದಲ್ಲಿ ವಾಸವಿದ್ದ. ಮುಂಬೈನ ಅಂಧೇರಿಯಲ್ಲಿ ಭೂಗತ ಜಗತ್ತಿಗೆ ಕಾಲಿಟ್ಟಿದ್ದ ರವಿ ಪೂಜಾರಿ ಚಿಕ್ಕ‌ ವಯಸ್ಸಿನಲ್ಲೇ ಶಾಲೆ ಬಿಟ್ಟು ಕ್ರಿಮಿನಲ್ ಆ್ಯಕ್ಟಿವಿಟೀಸ್​​​ನಲ್ಲಿ ಭಾಗಿಯಾದ. ರವಿ ಪೂಜಾರಿ ಸಣ್ಣಪುಟ್ಟ ಕೊಲೆ ಮಾಡಿ ಹೆಸರು ವಾಸಿಯಾಗಿದ್ದ. ರವಿಪೂಜಾರಿ, ಬಾಲ ಸಾಲ್ತೆ ಕೊಲೆ ಮಾಡಿ ಚೋಟಾ ರಾಜನ್ …

Read More »

ರೈತರ ಖಾತೆಗೆ ₹6 ಸಾವಿರ..! ಮೋದಿ ಕೊಡುಗೆ..

ನರೇಂದ್ರ ಮೋದಿ ಸರ್ಕಾರದ ಕೊನೆ ಬಜೆಟ್​ನಲ್ಲಿ ರೈತರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಬಜೆಟ್​ನಲ್ಲಿ ಹೊಸ ಯೋಜನೆ ಘೋಷಿಸಿರುವ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರ ಖಾತೆಗಳಿಗೆ ವಾರ್ಷಿಕ 6 ಸಾವಿರ ರೂಪಾಯಿ ಜಮಾ ಮಾಡಲಿದೆ. 2018-19ರ ಬಜೆಟ್​ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದ ಕೇಂದ್ರ ಪಿಯೂಷ್​ ಗೊಯಲ್ ಈ ಯೋಜನೆ ಮೂಲಕ ಸಣ್ಣ ಹಿಡುವಳಿದಾರರು ಅಂದ್ರೆ 2 ಹೆಕ್ಟೆರ್(5ಎಕರೆ)​ ಒಳಗಡೆ ಭೂಮಿ ಇರೋ ರೈತರ ಖಾತೆಗೆ …

Read More »

ಲಘು ಯುದ್ಧ ವಿಮಾನ ಪತನ, ಪೈಲಟ್​​ ಸಾವು..

ಬೆಂಗಳೂರು: ನಗರದ ಹೆಚ್​ಎಎಲ್​ ಬಳಿ ಯುದ್ಧ ವಿಮಾನ ಪತನವಾಗಿದೆ. ವಾಯುಪಡೆಯ ಮಿರಾಜ್ ಯುದ್ಧ ವಿಮಾನ ಟ್ರೈಯಲ್ ರನ್ ಮಾಡುವಾಗ ತಾಂತ್ರಿಕ ದೋಷದಿಂದ ಪತನವಾಗಿದೆ. ಪರಿಣಾಮ ಸಿದ್ದಾರ್ಥ್ ಎಂಬ​ ಪೈಲಟ್​ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತಾಂತ್ರಿಕ ದೋಷದಿಂದ ನೆಲಕ್ಕಪ್ಪಳಿಸಿದ್ದು ಭಾರೀ ಹೊಗೆ ಆವರಿಸಿದೆ. ತಕ್ಷಣ ಸ್ಥಳಕ್ಕೆ ತೆರಳಿದ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಿವೆ.

Read More »

ಕಾರ್ತಿ ಚಿದಂಬರಂಗೆ ಸುಪ್ರೀಂ ಕೋರ್ಟ್‌ ಖಡಕ್‌ ವಾರ್ನಿಂಗ್‌..!

ನವದೆಹಲಿ: ಕಾನೂನಿನೊಂದಿಗೆ ಆಟವಾಡಬೇಡಿ ಅಂತಾ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಎಚ್ಚರಿಸಿರುವ ಸುಪ್ರೀಂ ಕೋರ್ಟ್, ವಿದೇಶ ಪ್ರವಾಸಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.ಐಎನ್​ಎಕ್ಸ್​ ಮಿಡಿಯಾ ಮತ್ತು ಏರ್​ಸೆಲ್​ ಮ್ಯಾಕ್ಸಿಸ್ ಹಗರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಗಳೊಂದಿಗೆ ಸಹಕಾರ ನೀಡದಿದ್ದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದೀತು ಅಂತಾ ತಾಕೀತು ಕೂಡ ಮಾಡಿದೆ. ಈ ಹಗರಣದ ಒಂದನೇ ಆರೋಪಿ ಕಾರ್ತಿ ಚಿದಂಬರಂ, ಕಾರ್ತಿ ತಂದೆ ಪಿ.ಚಿದಂಬರಂ ಪ್ರಕರಣದ ಎರಡನೇ ಆರೋಪಿಯಾಗಿದ್ದಾರೆ. …

Read More »

ಅಸ್ಸಾಂ ಸರಣಿ ಸ್ಫೋಟ ಕೇಸ್‌; 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ..

ನವದೆಹಲಿ: 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣ ಸಂಬಂಧ ನ್ಯಾಷನಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಬೊಡೋಲ್ಯಾಂಡ್​ (ಎನ್​ಡಿಎಫ್​ಬಿ) ಸಂಸ್ಥಾಪಕ ರಂಜನ್ ದೈಮರಿ ಸೇರಿದಂತೆ 10 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಕೇಸ್​ನ ಇತರೆ ಮೂವರು ಆರೋಪಿಗಳಾದ ಪ್ರಭಾತ್ ಬೊಡೊ, ಜಯಂತಿ ಬಸುಮತರಿ ಮತ್ತು ಮಥುರಾ ಬ್ರಹ್ಮ ಅವರಿಗೆ ದಂಡ ವಿಧಿಸಿ ಕೇಸ್​​ನಿಂದ ಖುಲಾಸೆಗೊಳಿಸಿದೆ.ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ, …

Read More »

ಲವ್​ ಫೇಲ್ಯೂರ್​ನಿಂದ​ ಆಗಿರೋ ಕೋಪವನ್ನು ಇದು ಕಡಿಮೆ ಮಾಡುತ್ತೆ!

ಲಂಡನ್​​: ವ್ಯಾಲೆಂಟೈನ್ಸ್ ಡೇ ಬಂತೆಂದ್ರೆ ಪ್ರೇಮಿಗಳಿಗೆ ದೊಡ್ಡ ಹಬ್ಬದಷ್ಟೇ ಸಂಭ್ರಮ. ಅಂದು ತಮ್ಮ ಪ್ರೀತಿಯನ್ನು ಮೊದಲ ಬಾರಿಗೆ ನಿವೇದನೆ ಮಾಡಿಕೊಳ್ಳುವ ಹುಡುಗ-ಹುಡುಗಿಯರು ಪ್ರೊಪೋಸಲ್​​ ಸಕ್ಸಸ್​​ ಆದ್ರೆ ಅಂತೂ ಸ್ವರ್ಗವೇ ಕೈಗೆ ಸಿಕ್ಕಿದಷ್ಟು ಖುಷಿಯಲ್ಲಿರುತ್ತಾರೆ. ಆದ್ರೆ ಈ ಸಂತೋಷಗಳೆಲ್ಲದರ ಮಧ್ಯೆ ಕೆಲ ದೇವದಾಸ್​​ ಪ್ರೇಮಿಗಳು ಸಹ ಇರ್ತಾರೆ. ತಮ್ಮನ್ನು ಬಿಟ್ಟು ಹೋದ ಅಥವಾ ಮೋಸ ಮಾಡಿ ಕೈಕೊಟ್ಟು ಹೋದ ಗೆಳೆಯ-ಗೆಳತಿಯರ ನೆನಪಿನಲ್ಲಿ ಎಣ್ಣೆ ಹೊಡೆಯುತ್ತಾ ಫ್ಯಾಥೋ ಸಾಂಗ್​ವೊಂದನ್ನ​ ಕೇಳುತ್ತಾ ವ್ಯಾಲೆಂಟೈನ್ಸ್ ಡೇ …

Read More »

ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು…

ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು ಸಂಗ್ರಹ ಚಿತ್ರನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ ಹಿಂದೂ ಸಭಾ ನಾಯಕರು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಗಾಂಧೀಜಿ ವಿರುದ್ಧ ಪ್ರತಿಭಟಿಸಿದ್ದರುಲಕ್ನೋ: ಹುತಾತ್ಮರ ದಿನದಂದು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಪ್ರತಿಭಟಿಸಿದ ಹಿಂದೂ ಮಹಾಸಭಾ ನಾಯಕಿ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯ ಸ್ಮರಣೆ ದಿನವಾದ ಜನವರಿ 30ರಂದು ನಗರದ ನೌರಂಗಬಾದ್ ಪ್ರದೇಶದ ಮನೆಯೊಂದರಲ್ಲಿ …

Read More »