Breaking News

ರಾಜಕೀಯ

ಮಾಜಿ ಮುಖ್ಯಮಂತ್ರಿ ಆರ್.ವಿ.ಜನಕೀರಾಮನ್ ಸೋಮವಾರ ಪುದುಚೇರಿಯಲ್ಲಿ ನಿಧನ

ಡಿಎಂಕೆ ನಾಯಕ ಮತ್ತು ಪುದುಚೇರಿ ಮಾಜಿ ಮುಖ್ಯಮಂತ್ರಿ ಆರ್.ವಿ.ಜನಕೀರಾಮನ್(೭೯) ಸೋಮವಾರ ಪುದುಚೇರಿಯಲ್ಲಿ ನಿಧನರಾದರು. ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ ಬಳಿಕ ಜನಕಿರಾಮನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸಂಸತ್ ಸದಸ್ಯರು ಸೇರಿದಂತೆ ಹಿರಿಯ ಪಕ್ಷದ ಮುಖಂಡರು ಅವರನ್ನು ನೋಡಲು ಆಸ್ಪತ್ರೆಯಲ್ಲಿ ಭೇಟಿ ನೀಡಿದ್ದರು.ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಗೆ ಚಾಲಕನಾಗಿದ್ದ ಜನಕೀರಾಮನ್ ನೆಲ್ಲಿಥೋಪ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದರು. ಅವರು ಮೇ 26, 1996 ರಿಂದ ಪಾಂಡಿಚೆರಿಯ ಮುಖ್ಯಮಂತ್ರಿಯಾಗಿ ಮಾರ್ಚ್ 18, 2000 ರವರೆಗೆ ಸೇವೆ ಸಲ್ಲಿಸಿದರು.

Read More »

ರಾಮಲಿಂಗರೆಡ್ಡಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ ಮಾಜಿ ಸಿಎಮ್ ಸಿದ್ದರಾಮಯ್ಯ

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿಯಲ್ಲಿ ಕೈ ನಾಯಕರು ದಿನಕ್ಕೊಂದು ತಂತ್ರ ಹೂಡುತ್ತಿದ್ದರೇ ಇತ್ತ ಸಚಿವ ಸ್ಥಾನಕ್ಕಾಗಿ ಕೈ ಪಾಳಾಯದಲ್ಲೆ ಕೆಲವರು ಅಸಮಾಧಾನದ ಅಸ್ತ್ರ ಬಳಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ರಮೇಶ್ ಜಾರಕಿಹೊಳಿ ನಂತರವಾಗಿ ಹಾದಿಯಲ್ಲಿ ರಾಮಲೀಂಗರೆಡ್ಡಿಯವರು. ಈಗ ರಾಮಲಿಂಗರೆಡ್ಡಿಗೆ ಸಚಿವ ಸ್ಥಾನ ನಿಡುವುದಾಗಿ ಕಾಂಗ್ರೇಸ್ ಪಕ್ಷದ ಸಮನ್ವಯ ಸಮಿತಿ ಅದ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಹಿರಿಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ತೆರವಾಗಿದ್ದ ಶಿವಳ್ಳಿ ಸ್ಥಾನವನ್ನು …

Read More »

ಸಿದ್ದು ಹೊಸ ಅಸ್ತ್ರ, ಆ ಮಾಸ್ಟರ್ ಪ್ಲಾನ್ ಎನು?

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ತಮ್ಮ ವರ್ಚಸ್ಸು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹೊಸ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಇಡೀ ದೇಶವನ್ನೇ ತಮ್ಮತ್ತ ನೋಡುವಂತೆ ಮಾಡಿದ ಮಂಡ್ಯ ಕ್ಷೇತ್ರದ ಸಂಸದೆ ಸುಮಾಲತರವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಸುಮಾಲತಾ ರವರಿಗೆ ಕಾಂಗ್ರೆಸ್ ಪಕ್ಷ ಆಹ್ವಾನ ನೀಡಿದೆ. ಆದ್ರೇ ಚುನಾವಣೆ ಮುಂಚೆ ಟಿಕೇಟ್ ನೀಡುವ ವಿಚಾರದಲ್ಲಿ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ …

Read More »

ರಾಜ್ಯದಲ್ಲಿ ತಮ್ಮ ಬೇರು ಗಟ್ಟಿ ಪಡಿಸಲು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದ ಜೆಡಿಎಸ್ ಪಕ್ಷ ಮತ್ತೆ ರಾಜ್ಯದಲ್ಲಿ ತಮ್ಮ ಬೇರು ಗಟ್ಟಿ ಪಡಿಸಲು ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಇದೇ ತಿಂಗಳು ಉತ್ತರ ಕರ್ನಾಟಕ ಭಾಗದಿಂದ ಚಾಲನೆ ಸಿಗಲಿದೆ. ಆದರೆ ಈ ಬಾರಿಯ ಗ್ರಾಮ ವಾಸ್ತವ್ಯ ಹಿಂದಿನ ಗ್ರಾಮ ವಾಸ್ತವ್ಯಕ್ಕಿಂತ ಸಾಕಷ್ಟು ವಿಶೇಷವಾಗಿರುತ್ತದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆ ಹೋಬಳಿ ಅಥವಾ ಪಂಚಾಯ್ತಿ …

Read More »

ರಾಮಲಿಂಗರೆಡ್ಡಿ ಪಕ್ಷ ತೊರೆದು ಬೇರೆ ಪಕ್ಷ ಸೇರುತ್ತರಾ..!

ಅತಿ ಶೀಘ್ರದಲ್ಲಿ ರಾಜ್ಯ ರಾಜಕಾರಣದಲ್ಲಿ ಬೃಹತ್ ಬೆಳವಣಿಗೆಯಾಗುವ ಲಕ್ಷಣಗಳು ಪ್ರತಿನಿತ್ಯ ಗೋಚರಿಸುತ್ತಿವೆ. ಇದಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗರೆಡ್ಡಿ ಪಕ್ಷ ತೊರೆದು ಬೇರೆ ಪಕ್ಷ ಸೇರುತ್ತಾರೆ ಎಂಬುವ ವದಂತಿ ಹರಿದಾಡುತ್ತಿದೆ. ರಾಮಲಿಂಗರೆಡ್ಡಿಯವರ ಹುಟ್ಟೂರು ಆನೇಕಲ್ ತಾಲ್ಲೂಕಿನ ಅಭಿಮಾನಿಗಳು ಹಾಗು ಕಾರ್ಯಕರ್ತರಿಂದ ಪೇಸ್ ಬುಕ್ ಪೋಸ್ಟ್ ನಲ್ಲಿ ಈ ವದಂತಿಗಳು ಶೇರ್ ಆಗುತ್ತಿದೆ. ಅತಿ ಶೀಘ್ರದಲ್ಲಿ ರಾಮಲಿಂಗರೆಡ್ಡಿಯವರು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಮಲಿಂಗರೆಡ್ಡಿ …

Read More »

ಪ್ರಹ್ಲಾದ ಜೋಶಿ ಅವರು ಕೇಂದ್ರ ಸಚಿವರಾಗಿ ಇಂದು ಪ್ರಮಾಣ ವಚನ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವೈಯಕ್ತಿಕ ಪರಿಚಯಸತತ ನಾಲ್ಕನೇ ಬಾರಿ ಲೋಕಸಭೆಯ ಪ್ರವೇಶ ಪಡೆದಿರೊ ಪ್ರಹ್ಲಾದ ಜೋಶಿ ಅವರು ಕೇದ್ರ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಹಜವಾಗಿಯೇ ಧಾರವಾಡ ಲೋಕಸಭಾ ಕ್ಷೇತ್ರದ ಜನತಯ ಸಂತಸವನ್ನ ಇಮ್ಮಡಿಗೊಳಿಸಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರೊ ಜೋಶಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಯಾವ ಖಾತೆ ಕೊಡ್ತಾರೆ ಅನ್ನೋದು ತೀವೃ ಕುತೂಹಲ ಮೂಡಿಸಿದೆ.ಹೆಸರು: ಪ್ರಹ್ಲಾದ ಜೋಶಿ.ಕ್ಷೇತ್ರ: ಧಾರವಾಡ ಲೋಕಸಭಾ ಕ್ಷೇತ್ರಪತ್ನಿಯ ಹೆಸರು: …

Read More »

ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು

ಬೆಂಗಳೂರು: ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯ್ತಿಗಳ 1,296 ವಾರ್ಡ್ ಗಳಲ್ಲಿ 4,360 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಮೈತ್ರಿ ಮಾಡಿಕೊಂಡು ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಈ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿವೆ.ಮತದಾನ ನಡೆದ ಸ್ಥಳೀಯ ಸಂಸ್ಥೆಗಳು: 8 ನಗರಸಭೆ, 33 ಪುರಸಭೆ, 22 ಪಟ್ಟಣ ಪಂಚಾಯ್ತಿ ಹೀಗೆ ಒಟ್ಟು 63 ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. …

Read More »

ರಾಜ್ಯ ಮೈತ್ರಿ ಸರ್ಕಾರ ಮುಳಗುವ ದೋಣಿ: ಪುಟ್ಟಸ್ವಾಮಿ.

ಹುಬ್ಬಳ್ಳಿ: ರಾಜ್ಯದ ಪ್ರಸ್ತುತ ಮೈತ್ರಿ ಸರ್ಕಾರ ಮುಳಗುವ ದೋಣಿಯಾಗಿದ್ದು, 23ರ ನಂತರದಲ್ಲಿ ಪತನವಾಗುವುದು ನಿಶ್ಚಿತವಾಗಿದೆ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ರಾಜ್ಯ ಮೋರ್ಚಾ ಅಧ್ಯಕ್ಷರಾದ ಬಿ.ಜೆ.ಪುಟ್ಟಸ್ವಾಮಿ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮೈತ್ರಿ ಪಕ್ಷದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ನಿಂಧನೆ ಮೂಲಕ ಮೈತ್ರಿ ಸರ್ಕಾರದ ಪತನದ ರೂವಾರಿಗಳಾಗಿದ್ದಾರೆ ಎಂದರು. ಮಾಜಿ ಸಿಎಂ‌ ಸಿದ್ಧರಾಮಯ್ಯನವರು ಹಾಗೂ ಎಚ್‌.ವಿಶ್ವನಾಥ ಅವರ ಹೇಳಿಕೆಗಳು ತಾರಕಕ್ಕೇ …

Read More »

ಸಿ ಎಲ್ ಪಿ ಸಭೆಯಿಂದ ಹೊರಹೋದ ಬಿಸಿ ಪಾಟೀಲ್

ಬೆಂಗಳೂರು- ನಗರದ ಕಾಂಗ್ರೆಸ್ ಪಕ್ಷದ ಸಿ ಎಲ್ ಪಿ ಸಭೆಯಲ್ಲಿ ಕೆಲ ಶಾಸಕರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರ ಜೊತೆ ಇಂದು ಪಕ್ಷದ ಮುಖಂಡರು ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಭೆ ಕರೆಯಲಾಗಿತ್ತು. ಆದ್ರೆ ಸಭೆಯ ಮದ್ಯೆದಲ್ಲಿ ಶಾಸಕ ಬಿಸಿ ಪಾಟೀಲ್ ಹೊರ ನಡೆದಿದ್ದಾರೆ. ನಂತರ ಬಿಸಿ ಪಾಟೀಲ್ ಹೊರ ಹೋದ ಬಗ್ಗೆ ಪ್ರಶ್ನೆ ಮಾಡಿದ ಮಾಧ್ಯಮದ ಮೇಲೆ ಮಾಜಿ ಸಿಎಮ್ ಸಿದ್ದರಾಮಯ್ಯ ಕೆಂಡ ಮಂಡಲರಾದರು. ನಿತ್ಯ …

Read More »

ಚುನಾವಣೆಯ ಗೆಲುವು ಮಂಡ್ಯದ ಜನರು ಅಂಬರೀಶ್ ಮೇಲೆ ಇಟ್ಟಿರುವ ಅಭಿಮಾನದ ಗೆಲುವು

ಮಂಡ್ಯ: ಇತಿಹಾಸ ಸೃಷ್ಟಿ ಮಾಡಿದ ಮಂಡ್ಯ ಜನತೆಗೆ ಇಂದು ಸಂಸದೆ ಸುಮಲತಾ ದನ್ಯವಾದ ತಿಳಿಸಿದರು. ಮಂಡ್ಯಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಅವರು ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಿದನಂತರಚುನಾವಣೆಯ ಗೆಲುವು ಮಂಡ್ಯದ ಜನರು ಅಂಬರೀಶ್ ಮೇಲೆ ಇಟ್ಟಿರುವ ಅಭಿಮಾನದ ಗೆಲುವು ಎಂದಿದ್ದಾರೆ. ಪತಿ ಅಂಬಿ ನೆನೆದು ಭಾವೋದ್ವೇಗದಿಂದ ಮಾತನಾಡಿದ ಅವರು, ಮೊದಲ ಬಾರಿಗೆ ನಿಮ್ಮ ಮುಂದೆ ಬಂದ ವೇಳೆ ನಾನು ಯಾರು ಪ್ರಶ್ನೆ ಇತ್ತು. ಆದರೆ …

Read More »