Breaking News

ಹುಬ್ಬಳ್ಳಿ

ಹುಬ್ಬಳ್ಳಿ:ಡಾ.ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಸಂಭ್ರಮಾಚರಣೆ.

ಹುಬ್ಬಳ್ಳಿ ನಗರದ ಚೆನ್ನಮ್ಮ ವೃತ್ತದ ಹಳೆ ಬಸ್ಟ್ಯಾಂಡ್ ನಲ್ಲಿ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಆಚರಣೆಯನ್ನು ಅಭಿಮಾನಿಗಳು ವಿಜೃಂಭಣೆಯಿಂದ ಸಂಭ್ರಮಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಕಟೌಟ್ ಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟಿದ್ದಾರೆ. ಕರುನಾಡ ರತ್ನ,ನಟಸಾರ್ವಭೌಮ ಪುನೀತ್ ರಾಜಕುಮಾರ್ ಎಂದೆಂದಿಗೂ ಅಮರ.

Read More »

ಹುಬ್ಬಳ್ಳಿ : ಕುಸುಗಲ್ ಗ್ರಾಮದಲ್ಲಿ ಹೋಳಿ ಸಂಭ್ರಮ

ಹುಬ್ಬಳ್ಳಿ ತಾಲೂಕ ಕುಸುಗಲ್ ಗ್ರಾಮದಲ್ಲಿ ಇಂದು ಹೋಳಿ ಹುಣ್ಣಿಮೆಯ ಸಂಭ್ರಮ ಎಲ್ಲರ ಮನೆ ಮಾಡಿತ್ತು. ಹಿರಿಯರು ಕಿರಿಯರು ಯುವಕರು ಎಲ್ಲರೂ ಸೇರಿಕೊಂಡು ಕಾಮನನ್ನ ದಹನ ಮಾಡಿದರು. ದಹನದ ಬಳಿಕ ಎಲ್ಲರೂ ಸೇರಿ ಬಾಣವನ್ನು ಆಡಿದರು. ಕೊಣಿದು ಕೊಪ್ಪಳಿಸಿದರು. ಹಾಗೂ ಯುವಕರು ತಮಟೆ ಬಾರಿಸಿ ಎಲ್ಲರ ಗಮನ ಸೆಳೆದರು. ಎಲ್ಲರೂ ಬಣ್ಣವನ್ನು ಆಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಸೇರಿ ಬಣ್ಣಗಳ ರಂಗಿನಲ್ಲಿ ಮುನಿಗೆಯದ್ದರೂ.

Read More »

ಹುಬ್ಬಳ್ಳಿಯಲ್ಲಿ ರೋಲ್ ಕಾಲ್ ಮಾಡುತ್ತಿದ್ದ ಇಬ್ಬರ ಬಂಧನ.

ಹುಬ್ಬಳ್ಳಿಯ ದುರ್ಗದಬೈಲ್ನಲ್ಲಿ ಅಧಿಕಾರಿ ಸೋಗಿನಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ ವ್ಯಾಪಾರಸ್ಥರನ್ನು ಹೆದರಿಸಿ ಹಣ ಕೇಳುತ್ತಿದ್ದ ಇಬ್ಬರು ವ್ಯಾಪಾರಿಗಳನ್ನು ಗಂಟಿಕೇರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಲಕ್ಷ್ಮಣ ರೋಗ ಮಂಜುನಾಥ ಚೌಹಾನ್ ವಿವಿಧ ಅಂಗಡಿಗಳಲ್ಲಿ ಅಧಿಕಾರಿ ಸೋಗಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಈ ಕುರಿತು ಅಂಗಡಿಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Read More »

ಪಿಚ್ಚರ್ ಡೈಲಾಗ ಹೊಡೆದು ಬೈಕ್ ಸವಾರ ಮಾಡುತ್ತಿದ್ದ ವಿಚಕ್ರ ವಾಹನ ಸವಾರನ ಬಂಧನ.

ಕಾಲಿನಿಂದ ಬೈಕ್ ಚಾಲನೆ ಮಾಡುವ ಮೂಲಕ ಪುಷ್ಪಾ ಸಿನಿಮಾ ಡೈಲಾಗ್ ಹೊಡೆದು ರಿಯಲ್ ಮಾಡಿದ್ದ ಯುವಕನನ್ನು ಪೂರ್ವ ಸಂಚಾರ ಪಾನಿ ಪೊಲೀಸರು ಯುವಕನನ್ನು ಬಂಧಿಸಿ ಬೈಕ್ ಜಪ್ತಿ ಮಾಡಿದ್ದಾರೆ. ಗಾಂಧಿವಾಡದ ನಿವಾಸಿ ಈಶ್ವರ್ ತಾಳ್ಬಂದ್ ಬಂದಿತ ಆರೋಪಿ. ಪಿಚ್ಚರ್ ಡೈಲಾಗದು ಕಾಲಿನಿಂದ ಬೈಕ್ ಸವಾರ ಮಾಡಿರುವ ರಿಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ಪೊಲೀಸಾಗಿ ಬರುತ್ತಿದ್ದಂತೆ ಅವನನ್ನು ಬಂಧಿಸಿದ್ದಾರೆ.

Read More »

ರಸ್ತೆ ಸಾರಿಗೆ ಸಂಸ್ಥೆ ಇಬ್ಬರೂ ಮಹಿಳಾ ನಿರ್ವಾಹಕರಿಗೆ ರಾಷ್ಟ್ರಪ್ರಶಸ್ತಿ ಪ್ರಧಾನ.ASRTU ವತಿಯಿಂದ ಸನ್ಮಾನ.

ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪರವಾಗಿ ರಾಷ್ಟ್ರಪತಿ ಪ್ರಧಾನ ಮಾಡುವ ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ವರ್ಷಗಳ ಹಾಜರಾತಿ ಪ್ರಕರಣ ಗೈರು ಪ್ರಕರಣ ಗಳಿಲ್ಲದ ಹಾಗೂ ಶಿಸ್ತು ಉತ್ತಮ್ ಮತ್ತು ವಿಶೇಷ ಸಾಧನೆಗಳ ಮಾನದಂಡ ಮೇಲೆ ಚಿಕ್ಕೋಡಿ ವಿಭಾಗ ಗೋಕಾಕ್ ಘಟಕದ ನಿರ್ವಾಹಕಿ ಅನ್ನಪೂರ್ಣ ಗುರುಪಾಧ್ಯಾಯ ಹೂಗಾರ್ ಮತ್ತು ಬಾಗಲಕೋಟ ವಿಭಾಗ ಮುಧೋಳ್ ಘಟಕದ ನಿರ್ವಾಹಕಿ ದ್ರಾಕ್ಷಾಯಿಣಿ ಗಿರಿಮಲ್ಲ ಇಂಗಳಗಿ ಇವರು ಆಯ್ಕೆಯಾಗಿದ್ದರು. ಮಂಗಳ ದಿನಾಚರಣೆಯಂದು …

Read More »

ಹುಬ್ಬಳ್ಳಿ: ವಿದ್ಯುತ್ ಕಂಬಕ್ಕೆ ಏಕಾಏಕಿ ಹೊಂತಿಕೊಂಡ ಬೆಂಕಿ.

ಹುಬ್ಬಳ್ಳಿಯ ಲಿಂಗರಾಜನಗರದಲ್ಲಿ ವಿದ್ಯುತ್ ಕಂಬಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ ‌. ಘಟನೆ ನಿನ್ನೆ ನಡೆದಿದ್ದು ಲಿಂಗರಾಜ್ ನಗರದಲ್ಲಿ ಜೋಡು ವಿದ್ಯುತ್ ಕಂಬದಲ್ಲಿ ಸಣ್ಣದಾಗಿ ಬೆಂಕಿ ಹತ್ತಿಕೊಂಡಿದೆ ಆಮೇಲೆ ಏಕಾಏಕಿ ಬೆಂಕಿಯ ಅವತಾರ ಹೆಚ್ಚಾಗುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಈ ಬಳಿಕ ವಿಷಯವನ್ನು ಹೆಸ್ಕಾಂ ಕರೆ ಮಾಡಿ ತಿಳಿಸಿದ್ದಾರೆ.

Read More »

ಹುಬ್ಬಳ್ಳಿಯಲ್ಲಿ ಬಣವೆಗೆ ಬೆಂಕಿ : ಸುಟ್ಟು ಭಸ್ಮವಾದ ಮೇವು.

ನಿನ್ನೆ ಮದ್ಯಾಹ್ನ ಹುಬ್ಬಳ್ಳಿಯ ಸಾಯಿನಗರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅನಿರೀಕ್ಷಿತವಾಗಿ ಜೋಡಿಸಿಟ್ಟ ಬಣವೆಗೆ ಬೆಂಕಿತ್ತಾಗಿದ್ದು, ಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ. ಗ್ರಾಮಸ್ತರು ಘಟನೆ ಇಂದ ನೊಂದಿದ್ದಾರೆ.

Read More »

ಸಾರಿಗೆ ಸಿಬ್ಬಂದಿಯಿಂದ ರಕ್ತದಾನ: ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಶಿಬಿರ ಆಯೋಜನೆ.

ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಸಂಸ್ಥೆ ಹೊಸೂರ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ವಾಯು ಸಾರಿಗೆ ಸಂಸ್ಥೆಯ ಸಿಬ್ಬಂದಿ ವರ್ಗದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಗುರುವಾರ ಆಯೋಜಿಸಲಾಗಿತ್ತು. ಡಾಕ್ಟರ್ ಎಸ್. ಎಫ್ ಕಮ್ಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಶಿಬಿರವನ್ನು ಪ್ರಾರಂಭಿಸಲಾಯಿತು “ರಕ್ತದಾನ ಮಹಾದಾನ” ರಕ್ತದಾನ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ,ಬದಲಿಗೆ ಒಂದು ಜೀವ ಉಳಿಸಿದಂತಾಗುತ್ತದೆ. ರಕ್ತದಾನ ಮಾಡುವುದರಿಂದ ಅಶಕ್ತ ವಾಗುವುದಿಲ್ಲ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ …

Read More »

ತಿಮ್ಮಸಾಗರ ಕಾಲೇಜ್ ಹತ್ತಿರ ಹೊಡೆದಾಟ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿಗೆ ತಣ್ಣಗಾದ ಹಳೆ ಹುಬ್ಬಳ್ಳಿ ಪ್ರಕರಣಗಳ ಮಧ್ಯೆ ಇದೀಗ ಒಂದಿಷ್ಟು ಸ್ಥಳೀಯ ಯುವಕರಿಂದ ಹೊಡೆದಾಟ ಪ್ರಕರಣವು ಬೆಳಕಿಗೆ ಬಂದಿದೆ. ಮಾರ್ಚ್ 5ರಂದು ಸುಮಾರು ರಾತ್ರಿ 11:30ಕ್ಕೆ ತಿಮ್ಮಸಾಗರ ರೋಡ್ ಐ.ಟಿ.ಐ ಕಾಲೇಜ್ ಹತ್ತಿರ ಕಾಲೇಜು ಯುವಕರು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೊಡೆದಾಡಿಕೊಂಡಿದ್ದಾರೆ. ಈ ಪ್ರಕರಣವು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಂಟು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿತರಾದ : ದೀಪಕ್ ಪೂಜಾರ್,ರಾಘವೇಂದ್ರ ಪೂಜಾರ್, ಅಮರ್ …

Read More »

“ಮಹಿಳಾ ದಿನಾಚರಣೆ “ವಿಶೇಷ :ಹುಬ್ಬಳ್ಳಿ ಮಹಿಳಾ ಉತ್ಸವ.

ಇದೇ ಮಾರ್ಚ್ 8ರಂದು ಮಹಿಳಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಲವು ಸಂಬಂಧ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಹುಬ್ಬಳ್ಳಿ ನಗರದ ತೋಳನ್ಕೆರೆ ಮುಂಭಾಗದಲ್ಲಿ ಬೈಕ್ ರ್ಯಾಲಿ ಇಂದ ಈ ಕಾರ್ಯಕ್ರಮವು ಶುರುವಾಗಲಿದೆ ದಿನಾಂಕ 8 ರಂದು ಬೈಕ್ ರ್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ಗೇಮ್ಸ್ ಚಟುವಟಿಕೆಗಳನ್ನು ಹಾಗೂ ಲಕ್ಕಿ ಡಿಪ್ ವ್ಯವಸ್ಥೆ ಮಾಡಲಾಗಿದೆ. ದಿನಾಂಕ 9 ರಂದು ಯೋಗಾಸನದ ಮೂಲಕ …

Read More »