admin
September 12, 2019
ಜಿಲ್ಲೆ, ಮಂಡ್ಯ
ಸಾಲದ ಬಾಧೆ ತಾಳಲಾರದೆ ಸೆಲ್ಪಿ ವಿಡಿಯೋ ರೆಕಾರ್ಡ್ ಮಾಡಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಘಲಯ ಗ್ರಾಮದ ಕೃಷಿಕೂಲಿ ಕಾರ್ಮಿಕ ರೈತ ಎ.ಎನ್. ಸುರೇಶ್ ಅವರ ಮನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ಕುಟುಂಬದವರಿಗೆ ಸಾಂತ್ವನ ಹೇಳಿ ಪತ್ನಿ ಜಯಶೀಲ ಅವರಿಗೆ ಐದು ಲಕ್ಷ ರೂ ಪರಿಹಾರ ಧನದ ಚೆಕ್ ವಿತರಣೆ ಮಾಡಿದರು. ರೈತ ಸುರೇಶ್ ಅವರ ಪುತ್ರ ಚಂದ್ರು ಅವರಿಗೆ ಕೂಡಲೇ ಸೂಕ್ತ ಸರಕಾರಿ ಉದ್ಯೋಗ ನೀಡುವಂತೆ ಜಿಲ್ಲಾ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ದೇವರಿಗೆ ದಿಗ್ಭಂಧನ ಹಾಕಿದ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದಿದೆ. ಎಂ ಕೆ ಹುಬ್ಬಳ್ಳಿಪಟ್ಟಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನದಲ್ಲಿಗ್ರಾಮಸ್ಥರು ದೇವರ ಗರ್ಭ ಗುಡಿಯೊಳಗೆ ನೀರು ಹಾಕಿ ದ್ವಾರ ಮುಚ್ಚಿದ್ದಾರೆ. ಅಷ್ಟಕ್ಕೂ ಈ ರೀತಿ ಮಾಡಿರುವುದಕ್ಕೆ ಕಾರಣವಾಗಿರುವುದು ಬರಗಾಲ. ತೀವ ಬರಗಾಲ ಹಿನ್ನೆಲೆಯಲ್ಲಿ ಮಳೆಯಾಗದೇ ಇದ್ದುದರಿಂದ ಈ ರೀತಿ ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತೆ ಎಂಬ ನಂಬಿಕೆ ಹಾಗೂ ಸಂಪ್ರದಾಯ ಈ ಹಿಂದೆ ವಾಡಿಯಲ್ಲಿತ್ತು. …
Read More »
admin
September 12, 2019
ಜಿಲ್ಲೆ, ದಾವಣಗೆರೆ
ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ನೀಡಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿ ಇದು ಹಿಂದೆ ಬಿಜೆಪಿಯವರ ಕಾಲದಲ್ಲಿ ಆಗಿರೋದು. ಜೆಡಿಎಸ್ , ಕಾಂಗ್ರೆಸ್ ನವರು ಮಾಡಿರೋದಲ್ಲ. ಈ ಬಗ್ಗೆ ಪರಾಮರ್ಶೆಗೆ ಸಂಪುಟ ಉಪಸಮಿತಿ ರಚಿಸಲಾಗಿದೆ. ಉಪಸಮಿತಿಯಲ್ಲಿ ಎಲ್ಲರು ಹಿರಿಯರು ಇದ್ದಾರೆ. ಅವರೇ ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನೂ ಜಿಂದಾಲ್ ವಿರುದ್ಧ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಅವರು ಪಾದಯಾತ್ರೆ ಮಾಡಲಿ. ಇದರಿಂದ ರೋಗವಾದ್ರು ದೂರವಾಗುತ್ತವೆ ಎಂದು ಕಾಂಗ್ರೆಸ್ ಶಾಸಕ …
Read More »
admin
September 12, 2019
ಜಿಲ್ಲೆ, ಬೆಂಗಳೂರು ಗ್ರಾಮಾಂತರ
ವೈದ್ಯರ ನಿರ್ಲಕ್ಷ್ಯ ದಿಂದ ನವಜಾತ ಶಿಶು ಸಾವಾನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದಾವಣಗೆರೆಯಿಂದ ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿಗಳಾದ ಶಶಿಧರ್ ಮತ್ತು ರಂಜಿತಾ ಎಂಬುವರಿಗೆ ಸೇರಿದ ಮಗುವಾಗಿದೆ. ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.ಆದ್ರೇ ವೈದ್ಯರಿಲ್ಲದೆನೆ ನರ್ಸ್ ಕಡೆಯಿಂದ ಹೆರಿಗೆ ಮಾಡಿಸಿದ್ದರು. ಮಗು ಉಸಿರಾಟದ ತೊಂದರೆ ಇದೇ ಎಂದು ನರ್ಸ್ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಆದ್ರೇ ಖಾಸಗಿ …
Read More »
admin
September 12, 2019
ಜಿಲ್ಲೆ, ರಾಯಚೂರು
ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ತಗುಲಿ ಮಹಿಳೆ ಸಾವಾನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿಂಗಪೂರ್ ಗ್ರಾಮದಲ್ಲಿ ನಡೆದಿದೆ. ಹೊಲದಲ್ಲಿ ಕೆಲಸ ಮಾಡುವಾಗ ಹರಿದು ಬಿದ್ದ ವಾಯರ್ ತುಳಿದು ಮಹಿಳೆ ಸಾವನಾಪ್ಪಿದ್ದಾಳೆ. ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
admin
September 12, 2019
ಜಿಲ್ಲೆ, ದಕ್ಷಿಣ ಕನ್ನಡ
ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶಾದ್ಯಂತ ಮುಷ್ಕರಕ್ಕೆ ಮಂಗಳೂರಿನಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಲವೆಡೆ ಇಂದು ಬೆಳಿಗ್ಗೆಯಿಂದಲ್ಲೆ ಓಪಿಡಿಗಳು ಸಂಪೂರ್ಣ ಬಂದ್ ಮಾಡಲಾಗಿದ್ದು ವೈದ್ಯರು ಪ್ರತಿಭಟನೆ ಮಾಡುತ್ತಿದ್ದರೇ ಇತ್ತ ವೈದ್ಯರನ್ನೇ ನಂಬಿದ ರೋಗಿಗಳು ಬಂದ್ ನಿಂದಾಗಿ ಪರದಾಡುತ್ತಿದ್ದಾರೆ. ಆದ್ರೇ ತುರ್ತು ಚಿಕಿತ್ಸೆ, ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಸಾವಿರಾರು ಭೂ ಪ್ರದೇಶಕ್ಕೆ ನೀರೋದಿಗಿಸುವ ಭದ್ರ ನಾಲೆಗಾಗಿ ಚಿತ್ರದುರ್ಗದ ಕಾತ್ರಾಳ್ ಕೆರೆ ಅಚ್ಚುಕಟ್ಟುದಾರ ರೈತರಿಂದ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಆಕ್ರೋಶ ವ್ಯಕ್ತಪಡಿಸಿದರು. ಕಾತ್ರಾಳ್ ಕೆರೆ ಮಾರ್ಗವಾಗಿ ಜಗಳೂರಿಗೆ ಹೋಗುವ ಭದ್ರ ನಾಲೆಯನ್ನು ಮಾರ್ಗ ಬದಲಾವಣೆಗೆ ಜಗಳೂರು ರೈತರ ಪಟ್ಟು ಹಿಡಿದ ಹಿನ್ನೆಲೆಯಲ್ಲಿ, ಇಂದು ಭದ್ರ ಕಾಲುವೆ …
Read More »
admin
September 12, 2019
ಜಿಲ್ಲೆ, ಬೆಂಗಳೂರು ಗ್ರಾಮಾಂತರ
ಅಕ್ರಮ ಆಸ್ತಿ ಗಳಿಕೆ ಆರೋಪದಡಿಯಲ್ಲಿರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಶಶಿಕಲಾ ಭೇಟಿಗೆ ಇಂದು ಟಿಟಿವಿ ದಿನಕರನ್ ಆಗಮಿಸಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಾತನಾಡಲು ವಿಷೇಶ ಅನುಮತಿ ಪಡೆದಿರುವ ಟಿಟಿವಿ ದಿನಕರನ್ ತಮ್ಮ ಪಕ್ಷದ ಮುಖಂಡರುಗಳು ಜೊತೆ ಶಶಿಕಲಾರ ಭೇಟಿ ಮಾಡಿ ಶಶಿಕಲಾ ಆರೋಗ್ಯದ ಬಗ್ಗೆ ಮುಂದಿನ ತಮಿಳುನಾಡಿನ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
Read More »
admin
September 12, 2019
ಜಿಲ್ಲೆ, ರಾಮನಗರ
ಬಹು ನಿರೀಕ್ಷಿತ ನದಿ ಜೋಡಣೆ ಕಾಮಗಾರಿಗೆ ಸಿಎಮ್ ಕುಮಾರಸ್ವಾಮಿ ಚಾಲನೆ ನೀಡಿದರು. ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಸಿಎಂ ಆಗಮಿಸಿ ಇಗ್ಗಲೂರು ಗ್ರಾಮದಲ್ಲಿನ ಇಗ್ಗಲೂರು ಬ್ಯಾರೇಜ್ ಗೆ ಭೇಟಿ ನೀಡಿದರು. ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ೧ ಸಾವಿರ ಕೋಟಿಗೂ ಹೆಚ್ಚು ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಹಾಗೂ 540 ಕೋಟಿ ವೆಚ್ಚದಲ್ಲಿ ಗುರುತ್ವಾಕರ್ಷಣೆಯ ಬಲದಿಂದಸತ್ತೆಗಾಲದಿಂದ ಇಗ್ಗಲೂರು ಬ್ಯಾರೇಜ್ ಗೆ ಕಾವೇರಿ ನೀರು ಹರಿಸುವ ಕಾಮಗಾರಿಗೆ ಸಿಎಂ ಚಾಲನೆ ನೀಡಿದರು.
Read More »
admin
September 12, 2019
ಜಿಲ್ಲೆ, ಬೆಳಗಾವಿ
ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಖಂಡಿಸಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ ಖಂಡಿಸಿ ಹುಕ್ಕೇರಿ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಡಾ. ಅಂಬೇಡ್ಕರ ಜನ ಜಾಗೃತಿ ಸಂಘಟನೆಯಿಂದ ಪ್ರತಿಭಟನೆ ಮಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿಯಿಂದಾಗಿನಗರದಲ್ಲಿ ಒಂದು ಘಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
Read More »