admin
September 12, 2019
ಜಿಲ್ಲೆ, ತುಮಕೂರು
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸೂಡಾನ್ ದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ 1280ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.ಹಗ್ಗೆರೆ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಹಮದ್ ಮಹಮದ್ ಮೂಸ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಆತನ ಬಳಿ ಇದ್ದ ಬ್ಯಾಗ್ ನಲ್ಲಿ ಗಾಂಜಾ ಇದ್ದದ್ದು ಪತ್ತೆಯಾಗಿದೆ. ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ವ್ಯಕ್ತಿಯು ಮೆಡಿಕಲ್ ಕಾಲೇಜು ಫ್ರೆಂಡ್ಸ್ ಗಳಿಗೆ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಕಳೆದ ಹಲವು ವರ್ಷಗಳಿಂದಲ್ಲೂ ಮಳೆಯಿಲ್ಲದೆ ಕಂಗಲಾಗಿದ್ದ ರೈತನ ಬಾಳಿಗೆ ವರುಣ ತಂಪೇರೆಯುವ ಮೂಲಕ ಬೆಳಕು ಚೆಲ್ಲಿದ್ದಾನೆ. ಕಳೆದ ತಡರಾತ್ರಿ ಸುರಿದ ಭಾರಿ ಮಳೆಯೀಂದಾಗಿ ಚಿತ್ರದುರ್ಗದ ಹಲವು ಭಾಗಗಳಲ್ಲಿ ಭೂಮಿ ತಂಪಾಗಿದ್ದು, ರೈತರು ಬೆಳೆ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಹಾಗೂ ಅಲ್ಲಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಭಾವಿಯಲ್ಲಿನೀರು ಸಹ ಹರಿದು ಬರುತ್ತಿದೆ. ಕಡವಿಗೆರೆ ಗ್ರಾಮದ ಭಾವಿಯಲ್ಲಿ ಅಂತರ್ಜಲ ಬರುವುದನ್ನು ನೋಡುವುದಕ್ಕೆ ಗ್ರಾಮಸ್ಥರು ಮುಗಿ ಬಿದಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ.
Read More »
admin
September 12, 2019
ಕೋಲಾರ, ಜಿಲ್ಲೆ
ರಂಜಾನ್ ಹಬ್ಬಕ್ಕೆ ರಜೆ ನೀಡದಿರುವ ಷಾಹಿ ಗಾರ್ಮೆಂಟ್ಸ್ ಕಾರ್ಖಾನೆ ವ್ಯವಸ್ಥಾಪಕನ ವಿರುದ್ದ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕೋಲಾರದ ತಾಲೂಕಿನ ಚೌಡದೇನಹಳ್ಳಿಯಲ್ಲಿರುವ ಷಾಯಿ ಗಾರ್ಮೆಂಟ್ಸ್ ನಲ್ಲಿ ಇಂದು ರಂಜಾನ್ ಹಬ್ಬದ ಪ್ರಯುಕ್ತ ರಜೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಮಹಿಳಾ ಕಾರ್ಮಿಕರು ಕಾರ್ಖಾನೆಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಮುಸ್ಲಿಂ ಬಾಂಧವರ ಪ್ರಮುಖ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಂದು ಕಾರ್ಖಾನೆ, ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿರುತ್ತೇ. ಆದ್ರೇ ಷಾಹಿ ಗಾರ್ಮೇಂಟ್ ಮಾತ್ರ ಯಾವುದೇ …
Read More »
admin
September 12, 2019
ಚಿಕ್ಕಬಳ್ಳಾಪುರ, ಜಿಲ್ಲೆ
ಶಿಕ್ಷಕನಾಗಿ ಮಕ್ಕಳಿಗೆ ಪುಸ್ತಕದಲ್ಲಿದ್ದ ಪಾಠ ಮಾಡುವುದನ್ನು ಬಿಟ್ಟುಇಲ್ಲೊಬ್ಬಪ್ರೇಮ ಪಾಠ ಮಾಡುತ್ತಿದ್ದ. ಈ ಪ್ರೇಮ ಪಾಠವೇ ಇಂದು ಆತನ ಬಾಳಿಗೆ ಮುಲವುವಾಗಿದ್ದ ಗ್ರಾಮಸ್ಥರ ಕೈಯಿಂದ ಚಪ್ಪಲಿ ಸೇವೆ ಮಾಡಿಸಿಕೊಂಡಿದ್ದಾನೆ. ಅಷ್ಟಕ್ಕೂ ಆತ ಯಾರಪ್ಪ ಎಂದು ನೋಡುವುದಾದ್ರೇ ಇಲ್ಲಿದೆ ಆತನ ಫುಲ್ ಡಿಟೈಲ್ಸ್. ವಿದ್ಯಾರ್ಥಿನಿಗೆ ಪ್ರೇಮ ಪಾಠ ಮಾಡಿದ ಕಾಮುಕ ಶಿಕ್ಷಕನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗೇಪಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ನಡೆದಿದೆ. ಪರಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಾಬು …
Read More »
admin
September 12, 2019
ಜಿಲ್ಲೆ, ಧಾರವಾಡ
ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ರಂಜಾನ್ ಹಬ್ಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇಂದು ರಂಜಾನ್ ಹಬ್ಬದ ಪ್ರಾರ್ಥನೆ ನಂತರ ಮುಸ್ಲಿಂ ಬಾಂಧವರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿದ್ದರು. ಕಳೆದ ಹಲವು ದಶಕಗಳಿಂದಲೂ ಈ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಈ ವರ್ಷವೂ ಕೂಡ ಶ್ರೀ ರಾಜಯೋಗೀಂದ್ರ ಶ್ರೀಗಳು ಮುಸ್ಲಿಂ ಬಾಂಧವರಿಗೆ ಶುಭಕೋರಿದರು. ಎಂದೆಂದಿಗೂ ಹಿಂದು ಮುಸ್ಲಿಂರಲ್ಲಿ ಸಾಮರಸ್ಯ ನೆಲೆಸಲಿ. …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೃಷ್ಣಾ ನದಿ ನೀರು ಹೋರಾಟ ಸಮಿತಿಯ ಸದಸ್ಯರು ಸಿಎಮ್ ರವರನ್ನು ಭೇಟಿ ಮಾಡಿ ನದಿ ತೀರದ ನೀರನ್ನು ಬಳಕೆ ಮಾಡಿಕೊಳ್ಳುವುದರ ಬಗ್ಗೆ ತಿಳಿಸಿದರು. ಅಥಣಿ ಶಾಸಕ ಮಹೇಶ್ ಕುಮಠಳ್ಳಿ ನೇತೃತ್ವದಲ್ಲಿ ಪತ್ರಕರ್ತರು,ರೈತರು,ಮತ್ತು ಹೊರಾಟಗಾರರ ಭೇಟಿ ಮಾಡಿದರು. ಶಾಸ್ವತ ಪರಿಹಾರಕ್ಕೆ ಆಗ್ರಹಿಸಿ ಹೋರಾಟಗಾರರು ಮನವಿ ಸಲ್ಲಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಮ್ ಕುಮಾರಸ್ವಾಮಿಯವರು ಕೂಡಲ್ಲೇ ಆದಷ್ಟು ಬೇಗ ಮಾತುಕತೆ ನಡೆಸಿ ಕೋಯ್ನಾ ಡ್ಯಾಮ್ …
Read More »
admin
September 12, 2019
ಜಿಲ್ಲೆ, ರಾಮನಗರ
ಸಿಂಹಸ್ವಪ್ನವಾಗಿದ್ದ ಶಾರ್ಕ್ ಅಂಡ್ ಶಾರ್ಪ್ ಫಿಶ್ !ನಾವು ನಿಮಗೆ ಈಗ ತೋರಿಸ್ತಿರೋ ಇಂತಹ ಮೀನುಗಳನ್ನ, ಆಂಗ್ಲ ಸಿನೆಮಾಗಳಲ್ಲಿ ನೋಡಿರ್ತಿರಾ, ಸಿನೆಮಾದಲ್ಲಿ ನೋಡಿದ್ರು, ಕೆಲ ಗಂಟೆಗಳ ಕಾಲ ಆ ದೃಶ್ಯವನ್ನ ಮನಸ್ಸು ಮೆಲುಕು ಆಕ್ತನೇ ಇರುತ್ತೆ. ನೆನೆಸ್ಕೊಂಡ್ರೆ ಭಯ ಕೂಡ ಆಗುತ್ತೆ. ಆದ್ರೆ ನಿಜ ಜೀವನದಲ್ಲಿ ನಿಮ್ಮೆದುರೆ ಬಂದ್ರೆ ಒಂದು ಕ್ಷಣ ಎದೆ ಜಲ್ ಎನ್ನದೆ ಇರೋಕೆ ಸಾದ್ಯನೇ ಇಲ್ಲ ಯಾಕೆ ಅಂತಿರಾ ಅಂತಹದೊಂದು ಫಿಶ್ ಇಲ್ಲಿದೆ ನೋಡಿ.ಸಮುದ್ರದ ಆಳದಲ್ಲಿ ಇಳಿದವರಿಗೆ …
Read More »
admin
September 12, 2019
ಜಿಲ್ಲೆ, ರಾಮನಗರ
ರೇಷ್ಮೆ ಗೂಡಿನ ಬೆಲೆ ಕುಸಿತ ಹಿನ್ನಲೆಯಲ್ಲಿ ರೈತರು ಹೆದ್ದಾರಿ ತಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ರಾಮನಗರದ ರೇಷ್ಮೆ ಮಾರುಕಟ್ಟೆ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕೆಜೆ ರೇಷ್ಮೆ ಗೂಡಿಗೆ 220 ರಿಂದ 240 ಹಿನ್ನಲೆಯಲ್ಲಿ, ಕುಪಿತಗೊಂಡ ರೈತರು ಹರಾಜು ಬಹಿಷ್ಕರಿಸಿದರು.ಇದರಿಂದ ಒಂದು ತಾಸಿನಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸವಾರರ ಪರದಾಡುವ ಸಂದರ್ಭ ಉದ್ಭವಿಸಿತ್ತು. ನಂತರ ಸ್ಥಳಕ್ಕೆ ಬಂದ ಪೋಲಿಸರು ರೈತರನ್ನು ಮನವಲಿಸುವ ಪ್ರಯತ್ನ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಬೆಳಗಾವಿಯ ವೀರಭದ್ರ ನಗರದಲ್ಲಿದ್ದ ಪ್ಲಂಬಿಂಗ್ ಮತ್ತು ಹಾರ್ಡವೇರ್ ಗೋಡಾವನ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಹೊತ್ತಿದ್ದು ಸುಮಾರು 20ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹಾರ್ಡವೇರ್ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಬೆಳಾವಿಯ ವೀರಭದ್ರ ನಗರದ ನಾಗರಾಜ ದೇಸಾಯಿ ಎನ್ನುವವರಿಗೆ ಸೇರಿದ ಗೋಡಾವಣ ಇದಾಗಿದ್ದು, ಸುಮಾರು 20 ಲಕ್ಷಕ್ಕೂ ಅಧಿಕ ವೆಚ್ಚದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬೆಳಿಗ್ಗೆ ಸುಮಾರು 9.20ಕ್ಕೆ ಶಾಕ್ ಸರ್ಕ್ಯೂಟನಿಂದ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ಪ್ರಮಾಣದ ಹಾರ್ಡವೇರ್ ವಸ್ತುಗಳು …
Read More »
admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣಪ್ರಸಾದ್ ರಾವ್ ಮಾನವನ ಸ್ವಾರ್ಥದಿಂದಾಗಿ ಕಾಡನ್ನು ಕಡಿದು ಅರಣ್ಯನಾಶ ಮಾಡಲಾಗುತ್ತಿದೆ. ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಯವಾಗುತ್ತಿದ್ದು …
Read More »