Breaking News

ಜಿಲ್ಲೆ

ಗರಗಕ್ಕೆ ಪ್ರಶಾಂತ ದೇವರು ಸ್ವಾಮೀಜಿಗೆ ಅದ್ದೂರಿ ಸ್ವಾಗತ

ಧಾರವಾಡ : ಪೀಠಾಧಿಪತಿ ನೇಮಕ ವಿಚಾರದಲ್ಲಿ ಧಾರವಾಡ ತಾಲೂಕಿನ ಗರಗ ಕಲ್ಮಠ ಸದ್ದು ಮಾಡುತ್ತಿದೆ. ಗರಗ ಮಡಿವಾಳೇಶ್ವರ ಮಠಕ್ಕೆ ಆಗಮಿಸಿದ ಪ್ರಶಾಂತ ದೇವರು ಸ್ವಾಮೀಜಿಗೆ ಗ್ರಾಮದ ಸರ್ವ ಧರ್ಮಗಳ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಪುಷ್ಪ ಮಳೆ ಗೈದರು. ಹಿಂದೂ, ಮುಸ್ಲಿಂ, ಜೈನ ಸೇರಿದಂತೆ ಗರಗ ಗ್ರಾಮದ ಸರ್ವ ಜನರು ಧಾರವಾಡ ಗರಗ ಮಡಿವಾಳೇಶ್ವರ ಮಠದ ಆವರಣದಲ್ಲಿ ಪ್ರಶಾಂತ ದೇವರು ಸ್ವಾಮೀಜಿಗೆ ಜಯಕಾರ ಹಾಕಿ ಸ್ವಾಗತಿಸಿದರು. ಗರಗ ಗ್ರಾಮಸ್ಥರು ಕುಂಭಮೇಳ, ಹೆಜ್ಜೆ …

Read More »

ಮುಳಗುಂದದಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ…

ಮುಳಗುಂದ : ಹಿಂದು ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೋಲಾಟ, ಯುವಕರ ಹೆಜ್ಜೆ ಮೇಳ ಮೆರವಣಿಗೆಯೊಂದಿಗೆ ಶನಿವಾರ ಆಚರಿಸಲಾಯಿತು.ಸಂಪ್ರದಾಯದಂತೆ ಪಟ್ಟಣದ ದಾವಲ್ ಮಲ್ಲಿಕ ಪಹಾಡ, ನದಾಫ್ ಗಲ್ಲಿ ಕೌಲಪೇಟಿ, ಮಕಾನದಾರ ಮಸೀದಿ, ಚಿಂದಿಪೇಟಿ, ಸವಳಭಾವಿ, ತಿಗಡಿಕೇರಿ, ಬಂಡಿ ಓಣಿ, ಸಂಗನಪೇಟಿನಲ್ಲಿ ಪ್ರತಿಷ್ಠಾಪಿಸಲಾದ (ಪಂಜಾ) ಅಲೈದೇವರು, ಡೋಲಿ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಹಾಂತ ಶಿವಯೋಗಿಶ್ವರ ಮಠದ ಹತ್ತಿರ ಪರಸ್ಪರ ಎದರುಗೊಂಡ (ಅಲೈಬಲೈ) …

Read More »

ವಿದ್ಯುತ್ ಶಾರ್ಟಸರ್ಕ್ಯೂಟ ಮನೆಗೆ ಬೆಂಕಿ…

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಬಸ್ತಿಕೇರಿಯಲ್ಲಿ ವಿದ್ಯುತ್ ಶಾರ್ಟಸರ್ಕ್ಯೂಟದಿಂದ ಮನೆಗೆ ಬೆಂಕಿ ಬಿದ್ದು ಟಿವಿ,ಮೊಬೈಲ್ ಸೇರಿದಂತೆ ಅನೇಕ ಮನೆಯ ಸಾಮಗ್ರಿಗಳು ಹಾನಿಗೊಳಗಾದ ಘಟನೆ ಜರುಗಿದೆ.ಬಸ್ತಿಕೇರಿಯ ನಿವಾಸಿಯಾದ ಪರಮೇಶ್ವರಪ್ಪ ಮಹಾರುದ್ರಪ್ಪ ಯರ್ಲಗಟ್ಟಿಯವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಮನೆಗೆ ಬೆಂಕಿ ಬಿದ್ದಿದ್ದು ನಂತರ ಅಕ್ಕಪಕ್ಕದ ಮನೆಯವರು ಬಂದು ಬೆಂಕಿ ನಿಂದಿಸಿದ್ದಾರೆ‌.ಯಾವುದೇ ಪ್ರಾಣಹಾನಿಯಾಗಿಲ್ಲ.

Read More »

ಗೋವನಾಳ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ…

ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜನಗೌಡ ನಿಂಗನಗೌಡ ಕೆಂಚನಗೌಡ್ರ ಮತ್ತು ಉಪಾಧ್ಯಕ್ಷೆಯಾಗಿ ನಿರ್ಮಲಾ ಚಂದ್ರಶೇಖರ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮೂರು ಗ್ರಾಮಗಳಾದ ಗೋವನಾಳ ಗುಲಗೊಂಜಿಕೊಪ್ಪ, ವಡೆಯರ ಮಲ್ಲಾಪುರ ಇರುವ ಪಂಚಾಯತಿಗೆ 8 ಸದಸ್ಯ ಸ್ಥಾನಗಳನ್ನು ಹೊಂದಿರುವ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಅ ವರ್ಗದ ಮಹಿಳೆಗೆ ಮೀಸಲಾಗಿತ್ತು. ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಇಬ್ಬರು ಸದಸ್ಯರು ಗೈರಾಗಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ …

Read More »

30 ರಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಧಾರವಾಡ 28 : ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಘಟಕದವತಿಯಿಂದ ಜು. 30 ರಂದು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ಸಾಧಕರ‌ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅರುಣ ಶೀಲವಂತ ಹೇಳಿದರು. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಈ ಬಾರಿ‌ 25 ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸಮಾಜದ‌ಸಾಧಕರನ್ನು‌ ಸನ್ಮಾನ ಮಾಡಲಾಗುವುದು.ಪುರಸ್ಕಾರಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ …

Read More »

ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಧಾರವಾಡ:ಉಡುಪಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಮಾಡಿದ ಪ್ರಕರಣ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು ಇದೊಂದು ಸಣ್ಣ ವಿಷಯ ಎಂದು ಉಡಾಫೆ ಹೇಳಿಕೆ ನೀಡಿದ್ದಾರೆ. ಸರ್ಕಾರ ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವೇ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು …

Read More »

ಶೇರೆವಾಡ ಗ್ರಾಮದಲ್ಲಿ ಶಾಲಾ‌ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ‌ ಸಚಿವ ಲಾಡ್

ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದಲ್ಲಿ ಸರಿಯಾಗಿ ಬಸ್ ಬರದೇ ಇರುವುದು ಸೇರಿದಂತೆ ಶಾಲಾ ಮಕ್ಕಳ ಸಮಸ್ಯೆಗಳನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಶುಕ್ರವಾರ ಆಲಿಸಿದರು. ನಮಗೆ ಸಮಯಕ್ಕೆ ಸರಿಯಾಗಿ ಬಸ್ ಬರಲ್ಲ ಬಂದರೂ ಬಸ್ ತುಂಬಾ ತುಂಬಿರುತ್ತೇವೆ ಆದ್ದರಿಂದ ಶಾಲೆಗೆ ‌ಹೋಗಲು ತೊಂದರೆ ಆಗುತ್ತದೆ‌ ಇದರ ಜೊತೆಗೆ ಸರಿಯಾಗಿ ರಸ್ತೆ ಇಲ್ಲಾ ದುರಸ್ತಿ ಮಾಡಿಸಲು ಸಚಿವ ಸಂತೋಷ ಲಾಡ್ ಬಳಿ ಮನವಿ ಮಾಡಿದರು. ಮನವಿ …

Read More »

ಪುಣೆಯ ಪ್ರತಿಷ್ಠಿತ ’ಫ್ಯೂಯಲ್’ನಿಂದ ಮ್ಯಾನೇಜ್‌ಮೆಂಟ್ ಕೋರ್ಸ್

ಹುಬ್ಬಳ್ಳಿ: ಮಹಾರಾಷ್ಟ್ರದ ಪುಣೆಯಲ್ಲಿ ಕೇಂದ್ರ ಸ್ಥಾನ ಹೊಂದಿರುವ ಫ್ಯೂಯಲ್ ಬಿಸಿನೆಸ್ ಸ್ಕೂಲ್ ( ಫ್ರೆಂಡ್ಸ್ ಯೂನಿಯನ್ ಫಾರ್ ಎನರ್ಜೆಸಿಂಗ್ ಲೈವ್ಸ್ ) ವತಿಯಿಂದ ಪೋಸ್ಟ್ ಗ್ಯಾಜ್ಯುಯೇಟ್ ಡಿಪ್ಲೋಮಾ ಇನ್ ಮ್ಯಾನೇಜಮೆಂಟ್ ಕೋರ್ಸ್‍ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಮಾರ್ಗದರ್ಶಕ ಸಂತೋಷ ಹುರಳಿಕೊಪ್ಪಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ 60 ಅರ್ಹ ವಿದ್ಯಾರ್ಥಿನಿಯರಿಗೆ 100% ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ , ಪಿಜಿಡಿಎಂ ಕೋರ್ಸ್‍ನಲ್ಲಿ 120 …

Read More »

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಪಾಲಕರಾಗಿ ಮುಂಬಡ್ತಿ ಹೊಂದಿದವರಿಗೆ ಸನ್ಮಾನ

ಹುಬ್ಬಳ್ಳಿ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರಿಂದ ನಿಲಯ ಪಾಲಕರಾಗಿ ಮುಂಬಡ್ತಿ ಹೊಂದಿದ ರಾಮಯ್ಯ ಪೂಜಾರ, ಪ್ರಭಾಕರ ಮೋಟಗಿ, ಮಹೇಶ ಹಣಗಿ ಮತ್ತು ಶ್ರೀಪಾದ ಹುಲಕೋಟಿ ಅವರನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ಸಿ.ವಿ.ಕರವೀರಮಠ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ವಿನೋದಕುಮಾರ ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿ ಸುರೇಶ ಗುರಣ್ಣನವರ, ಲಕ್ಷ್ಮಿ ಮೊರಬ, ಶೋಭಾ ಚಾಕಲಬ್ಬಿ, ಹಿರಿಯ ನಿಲಯ …

Read More »

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಉಪನ್ಯಾಸಕ….

ಮಂಗಳೂರು:ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಅಪರಾಧಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಳಾಯಿಯ ಪೃಥ್ವಿರಾಜ್ (33) ಶಿಕ್ಷೆಗೊಳಗಾದ ವ್ಯಕ್ತಿ. 2014ರ ಆ.1ರಿಂದ 2016ರ ಸೆ.2ರವರೆಗೆ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಅಸ್ವಾಭಾವಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ …

Read More »