Breaking News

ಬೆಂಗಳೂರು

ಖಾಸಗಿ ಬಸ್‌ಗೆ ವೇಗವಾಗಿ ಬಂದ ಕ್ಯಾಬ್‌ ಡಿಕ್ಕಿ, ಪರಿಣಾಮ ಏರ್‌ಲೈನ್ಸ್‌ ಸಂಸ್ಥೆಯ ಮಹಿಳಾ ಉದ್ಯೋಗಿ ಸಾವು.!

ಸ್ನೇಹಾ ಕುಮಾರಿ ಇಂಡಿಗೋ ಏರ್‌ಲೈನ್ಸ್‌ ಕಸ್ಟಮರ್‌ ಕೇರ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 4.30ರ ಸುಮಾರಿಗೆ ಸಹೋದ್ಯೋಗಿ ಕೌಸರ್‌ ಖಾನಂ ಜತೆ ಬಾಗಲೂರು ಕ್ರಾಸ್‌ ಕಡೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಕ್ಯಾಬ್‌ನಲ್ಲಿ ಹೋಗುತ್ತಿದ್ದರು.ಸರ್ವಿಸ್‌ ರಸ್ತೆಯಲ್ಲಿ ತೆರಳುವಾಗ ರಸ್ತೆ ಬದಿ ನಿಲುಗಡೆ ಮಾಡಿದ್ದ ಖಾಸಗಿ ಬಸ್‌ಗೆ ಹಿಂದಿನಿಂದ ಕ್ಯಾಬ್‌ ಚಾಲಕ ಡಿಕ್ಕಿ ಹೊಡೆದಿದ್ದಾನೆ.ಅಪಘಾತಕ್ಕೆ ಕ್ಯಾಬ್‌ ಚಾಲಕನ ಅತೀವೇಗ ಹಾಗೂ ನಿರ್ಲಕ್ಷ್ಯ ಚಾಲನೆಯೇ ಕಾರಣ ಎಂಬುದು ಪ್ರಾಥಮಿಕ …

Read More »

ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಏ.15ಕ್ಕೆ ಮುಂದೂಡಿಕೆ…

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಜಾಮೀನು ಅರ್ಜಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.ವಿಚಾರಣೆ ಆರಂಭವಾದಾಗ ಹೈಕೋರ್ಟ್ ನ್ಯಾಯಾಧೀಶರು ಎಸ್ ಪಿ ಪಿ ಅವರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದರು. ಬಳಿಕ ಜಾಮೀನು ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿ ಆದೇಶಿಸಿದರು. ಈ ಹಿಂದೆ ಕೆ.ಆರ್‌ ನಗರ ಸಂತ್ರಸ್ತ ಮಹಿಳೆ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ, ಆದ್ದರಿಂದ ಪ್ರಕರಣದಿಂದ ತನ್ನನ್ನು ಕೈಬಿಡುವಂತೆ ಪ್ರಜ್ವಲ್‌ …

Read More »

ಸಾಲ ವಸೂಲಿಗೆ ಬಂದವರಿಗೆ ಕಲ್ಲಿನಿಂದ ಹೊಡೆದ ಜನ.!

ರಮೇಶ್ ಎಂಬಾತ ಕಳೆದ ಎರಡು ತಿಂಗಳ ಹಿಂದೆ ಸಾಲ ಪಡೆದಿದ್ದ, ಆದರೆ ಪಡೆದ ಲೋನ್ ಗೆ ಸರಿಯಾಗಿ ಇಎಂಐ ಕಟ್ಟದ ಹಿನ್ನಲೆ ಬ್ಯಾಂಕ್ ಸಿಬ್ಬಂದಿ ಚಂದನ್ ಎಂಬುವವರು ಕರೆ ಮಾಡುತ್ತಲೇ ಇದ್ದರೂ, ಆದರೆ ಇದಕ್ಕೆ ರಮೇಶ್ ಚೂರು ಕೂಡ ಕ್ಯಾರೇ ಎನ್ನದೆ ಕರೆ ರಿಸೀವ್ ಮಾಡುತ್ತಿರಲಿಲ್ಲ. ಹಣ ನೀಡಿ ಎಂದು ಚಂದನ್ ಕೇಳಿದಾಗ ರಮೇಶ್ ಅವ್ಯಾಚ್ಯ ಪದದಲ್ಲಿ ನಿಂದಿಸಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿಗೆ ನಡೆದಿದ್ದು, ಈ ವೇಳೆ …

Read More »

ಬೆಂಗಳೂರಿನಲ್ಲಿ ಬಾರಿ ಮಳೆ .

ಬೆಂಗಳೂರು ನಗರ ಸೇರಿದಂತೆ ಚಿಕ್ಕಮಂಗಳೂರು ನಗರದಲ್ಲಿ ಇಂದು ಗುಡುಗು ಸಹಿತ ಬಾರಿ ಮಳೆ ಯಾಗಿದ್ದು ಪರಿಣಾಮವಾಗಿದ್ದು ವಾಹನ ಸವಾರರು ಪರದಾಟ ನಡೆಸಿದ್ದಾರೆ. ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ ಕೆಲವು ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರು ನಗರದಲ್ಲಿ ಜಲಾವೃತ್ತ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸವಾರರಿಗೆ ಸಂಕಷ್ಟ ಉಂಟಾಗಿದೆ. ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ .

Read More »

ಬೆಂಗಳೂರು ವಿಮಾನ ನಿಲ್ದಾಣದ ಮಾಹಿತಿ. ವಿಮಾನ ವೇಳಾಪಟ್ಟಿ ಕನ್ನಡದಲ್ಲಿ ಪ್ರಕಟ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದೆ. ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆ ಆಯ್ಕೆಯನ್ನು ಹೊಸದಾಗಿ ಪರಿಚಯಿಸಲಾಗಿದೆ. ಈ ಆಯ್ಕೆಯನ್ನು ಬಳಸುವ ಮೂಲಕ ಸ್ಥಳೀಯ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ಪಡೆದುಕೊಳ್ಳಬೇಕಾಗಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗೆ ಒಟ್ಟಾರೆ ಅನುಭವ ಹೊಂದಿದ್ದಾರೆ.

Read More »

ಮರ್ಡರ್ : ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

ಬೈಕ್ ನಲ್ಲಿ ಬಂದಿದ್ದ ಐದಾರು ದುಷ್ಕರ್ಮಿಗಳಿಂದ ನಿಖಿಲ್ ನನ್ನು ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಈ ಒಂದು ಘಟನೆ ನಡೆದಿದೆ.ಕೊಲೆಯಾದ ನಿಖಿಲ್ ಮೃತದೇಹವನ್ನು ಸದ್ಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಪಘಾತ : ಬಟ್ಟೆ ಖರೀದಿಸಿ ಮನೆಗೆ ಮರಳುವಾಗ ಬೈಕ್‌ ಅಪಘಾತಕ್ಕೀಡಾಗಿ ಇಬ್ಬರ ಸಾವು.!

ಇಬ್ಬರೂ ಬಿಇಎಲ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಭಾನುವಾರ ರಾತ್ರಿ ಶಾಪಿಂಗ್‌ಗೆ ಹೋದವರು ನಸುಕಿನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಅಪಘಾತ ಸಂಭವಿಸಿದೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಹೇಲ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read More »

ಬೆಂಗಳೂರಿನ ರೌಡಿಶೀಟರ್​ ಇದೀಗ ಹಾದಿಬೀದಿಯಲ್ಲಿ ಹೆಣ.!

ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಗೊಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ಕುಖ್ಯಾತ ರೌಡಿಶೀಟರ್ ಮಂಜ ಅಲಿಯಾಸ್ ನೇಪಾಳಿ ಮಂಜನ ಕೊಲೆ ನಡೆದಿರುವಂತಹ ಘಟನೆ ನಡೆದಿದೆ.ನಿನ್ನೆ ಯುಗಾದಿ ಹಬ್ಬ ಇದ್ದಿದ್ರಿಂದ ಸ್ನೇಹಿತರು ಕರೆದರೂ ಅಂತಾ ಕುಣಿಗಲ್​ನಿಂದ ಬೆಂಗಳೂರಿಗೆ ರೌಡಿಶೀಟರ್ ಮಂಜ ಬಂದಿದ್ದಾನೆ. ಇಬ್ಬರು ಸ್ನೇಹಿತರ ಜೊತೆ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ರಾತ್ರಿ ಎಣ್ಣೆ ಪಾರ್ಟಿ ಮಾಡ್ತಿದ್ರಂತೆ. ಈ ವೇಳೆ 2 ಬೈಕ್​ನಲ್ಲಿ ಎಂಟ್ರಿಕೊಟ್ಟಿದ್ದ ಐವರ ಗ್ಯಾಂಗ್ ಲಾಂಗು, …

Read More »

1 ನೇ ತರಗತಿಗೆ 6 ವರ್ಷ ಕಡ್ಡಾಯ ಮಾಡಬೇಡಿ ಎಂದು ಕೇಳಿದ ಪೋಷಕರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ.!

ಪೋಷಕರ ಜೊತೆ ಅಲ್ಲಿ ಮಾಧ್ಯಮಗಳೂ ಇದ್ದಿದ್ದರಿಂದ ಮಧು ಬಂಗಾರಪ್ಪ ಸಿಟ್ಟಾದರು. ಮೀಡಿಯಾ ಮುಂದೆ ಮಾತನಾಡಬೇಕಾದರೆ ಅವರನ್ನೇ ಪರಿಹಾರ ಕೇಳಿ ಎಂದು ಗರಂ ಆಗಿ ಹೇಳಿ ತಮ್ಮ ಮನೆಯೊಳಗೆ ತೆರಳಿದ್ದಾರೆ. ಕೆಲವು ಪೋಷಕರ ಗುಂಪು ಸಚಿವರನ್ನು ನೋಡಲು ಬಂದಿದ್ದರು. ಈ ವೇಳೆ ಅಲ್ಲಿ ಮಾಧ್ಯಮಗಳೂ ಇದ್ದಿದ್ದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ.ಮಾಧ್ಯಮಗಳ ಜೊತೆ ಮಾತನಾಡಿರುವ ಪೋಷಕರು, ನಾವು ಮಾಧ್ಯಮದವರನ್ನು ಕರೆದುಕೊಂಡು ಬಂದಿರಲಿಲ್ಲ. ನಾವು ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಹೇಳಲಷ್ಟೇ ಬಂದಿದ್ದೆವು ಎಂದಿದ್ದಾರೆ.

Read More »

ಅಪರಾಧ : ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ ಕೇಸ್ ನಲ್ಲಿ ತುಂಬಿಟ್ಟಿದ್ದ ಅಮಾನುಷ ಘಟನೆ.

ಒಂದು ವರ್ಷದಿಂದ ಬೆಂಗಳೂರಿನ ದೊಡ್ಡ ಕನ್ನಹಳ್ಳಿಯ ಮನೆಯಲ್ಲಿ ವಾಸವಿದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ಅನಿಲ್ ಸಾಂಬೆಕರ್ ದಂಪತಿಗಳಿಬ್ಬರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಂಡಿದ್ದ ಇಬ್ಬರೂ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹುಳಿಮಾವು ಪೊಲೀಸರು ಇವರ ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ …

Read More »