Breaking News

ಧಾರವಾಡ

ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ಭಾಷಣ ಸ್ಪರ್ಧೆ: ಶಾಹೀನ ಕಿತ್ತೂರ ಪ್ರಥಮ, ಅಲೀಶಾ ನದಾಫ ದ್ವೀತಿಯ ಸ್ಥಾನ ವಿಜೇತರು

ಧಾರವಾಡ, : ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ಸಂಸ್ಥೆಯು ನಾರಾಯಣಪುರದಲ್ಲಿನ ರೋಟರೀ ಶಾಖೆಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಶಾಲಾ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ನಗರದ ಕೆಲಗೇರಿ ಜೆಎಸ್.ಎಸ್. ಪಬ್ಲಿಕ್ ಸ್ಜೂಲ್, ಕೆ.ಇ ಬೋರ್ಡ್ ಲೆಕ್ ಸಿಟಿ, ಬಾಶಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲೆ, ಬಿಜಿಎಸ್ ಹೈಸ್ಕೂಲ್, ಜೆ.ಎಸ್.ಎಸ್.ಮಂಜುನಾಥೇಶ್ವರ ಪಬ್ಲಿಕ್ ಶಾಲೆ, ಹುಬ್ಬಳ್ಳಿಯ ಸೇಂಟ್ ಮೇರಿ ಸ್ಕೂಲ್, ಎಸ್.ಆರ್.ಬೊಮ್ಮಾಯಿ ರೀಟರೀ ಸ್ಕೂಲ್,ಪರಿವರ್ತನ ಹೇರಿಟೇಜ್ ಗುರುಕುಲ ಮತ್ತು ನವಲಗುಂದ …

Read More »

ರಾಜ್ಯ ರಾಜಕಾರಣಕ್ಕೆ ಮುತಾಲಿಕ್ ಎಂಟ್ರಿ ಫಿಕ್ಸ್

ಧಾರವಾಡ: ಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಜ್ಜಾಗಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದ ಏಳೆಂಟು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಕ್ಕಾಗಿ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದು, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಪ್ರಮೋದ ಮುತಾಲಿಕ್ ಹೇಳಿದರು. ಬೆಳಗಾವಿ ನಗರದ ಎರಡೂ ಕ್ಷೇತ್ರ, ತೇರದಾಳ, ಜಮಖಂಡಿ, ಕಾರ್ಕಳ, ಉಡುಪಿ, ಶೃಂಗೇರಿ, ಪುತ್ತೂರಿನಿಂದ ಸ್ಪರ್ಧೆ ಮಾಡುವುದಕ್ಕಾಗಿ ಕಾರ್ಯಕರ್ತರು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು …

Read More »

ಪುನೀತ್ ರಾಜ್‌ ಕುಮಾರ್ ಪುಣ್ಯಸ್ಮರಣೆ ಗಂಧದ ಗುಡಿ ಚಿತ್ರ ಬಿಡುಗಡೆ: ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ

ಧಾರವಾಡ : ಕರುನಾಡ ರಾಜರತ್ನ ಫ್ಯಾನ್ಸ್ ಅಸೋಶಿಯೇಶನ್ ಮತ್ತು ಡಾ. ಮಯೂರ ಮೋರೆ ಅಭಿಮಾನಿಗಳ ವತಿಯಿಂದ ಕರ್ನಾಟಕ ರತ್ನ ಪವರ್‌ ಸ್ಟಾರ್ ದಿ. ಡಾ. ಪುನೀತ್ ರಾಜ್‌ ಕುಮಾರ್‌ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಹಾಗೂ ಅಪ್ಪು ಅಭಿನಯದ ಕೊನೆಯ “ಗಂಧದ ಗುಡಿ” ಚಿತ್ರದ ಬಿಡುಗಡೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ಶಿಬಿರ ಹಾಗೂ ಅಪ್ಪು ಭಾವಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಕರುನಾಡ ರಾಜರತ್ನ ಫ್ಯಾನ್ಸ್ ಅಸೋಶಿಯೇಶನ್ ಮತ್ತು ಡಾ. …

Read More »

ಮೇಕ್ಕಾ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿ ನಿಧನ : ಮೆಕ್ಕಾದಲ್ಲೇ ಅಂತ್ಯಕ್ರಿಯೆ

ಧಾರವಾಡ : ಮೇಕ್ಕಾಗೆ ಉಮ್ರಾಗೆ ಹೋಗಿದ್ದ ಯಾತ್ರಾರ್ಥಿ ಬೆಳಿಗ್ಗೆ ಹೃದಯಾಘಾತದಿಂದ ಸೌದಿಯ ಮೇಕ್ಕಾದಲ್ಲಿ ನಿಧನ ಹೊಂದಿದ್ದಾರೆ. ಧಾರವಾಡ ಜಿಲ್ಲೆಯ ವರವ ನಾಗಲಾವಿಯ ಸೈಯ್ಯದ ದಾದಾಪೀರ ಪೀರಜಾದೆ (70) ಎಂದು ತಿಳಿದು ಬಂದಿದೆ. ಕಳೆದ ಅಕ್ಟೋಬರ್ 9 ರಂದು ಧಾರವಾಡದಿಂದ ಉಮ್ರಾಗಾಗಿ ಸೌದಿಗೆ ಪೀರಜಾದೆ ಹೋಗಿದ್ದರು. ನಾಗಲಾವಿ ಗ್ರಾಮದಲ್ಲಿ ಇರುವ ಶರೀಫ್ ಸಜ್ಜಾದ ದರ್ಗಾದ ದಾದಾಪೀರ ಪೀರಜಾದೆ ಗುರುಗಳು ಆಗಿದ್ದರು. ಇವರ ಜೊತೆಯಲ್ಲಿ ಕುಟುಂಬದ ಕೆಲ‌ ಸದಸ್ಯರು ಕೂಡಾ ಹೋಗಿದ್ದರು. ಪೀರಜಾದೆ …

Read More »

ಮೇಲ್ದರ್ಜೆಗೇರಿದ ಧಾರವಾಡ ರೈಲು ನಿಲ್ದಾಣ ಲೋಕಾರ್ಪಣೆಗೊಳಿಸಿದ ರೈಲ್ವೆ ಸಚಿವ ಅಶ್ವಿನ್

ಧಾರವಾಡ: ಧಾರವಾಡದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಮೇಲ್ದರ್ಜೆಗೇರಿದ ರೈಲು ನಿಲ್ದಾಣವನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಲೋಕಾರ್ಪಣೆಗೊಳಿಸಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಧಾರವಾಡದ ರೈಲು ನಿಲ್ದಾಣಕ್ಕೆ ಬಂದ ರೈಲ್ವೆ ಸಚಿವ ಅಶ್ವಿನ್ ಅವರಿಗೆ ಕೇಂದ್ರ ಸಂಸದೀಯ ಖಾತೆ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ, ಮೇಯರ್ ಈರೇಶ ಅಂಚಟಗೇರಿ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ …

Read More »

ಅದ್ದೂರಿಯಿಂದ ನಡೆದ ಜಂಬೂ ಸವಾರಿ : ಅಂಬಾರಿ ಹೊತ್ತು ನಡೆದ ಆನೆಗಳು

ಧಾರವಾಡ: ದಸರಾ ಹಬ್ಬದ ಅಂಗವಾಗಿ ಧಾರವಾಡದಲ್ಲಿ ಅದ್ದೂರಿಯಿಂದ ಜಂಬೂ ಸವಾರಿ ಉತ್ಸವ ನೆರವೇರಿತು. ಪ್ರತಿವರ್ಷ ಮೂಲ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯಿಂದ ಈ ಜಂಬೂ ಸವಾರಿಯನ್ನು ಹಮ್ಮಿಕೊಳ್ಳಲಾಗುತ್ತದೆ. ಕಳೆದ ಕೊರೊನಾ ಹಿನ್ನೆಲೆಯಲ್ಲಿ ಕೃತಕ ಆನೆ ಮೇಲೆ ಅಂಬಾರಿಯನ್ನಿಟ್ಟು ಮೆರವಣಿಗೆ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷ ಎರಡು ಜೀವಂತ ಆನೆಗಳ ಮೂಲಕ ಜಂಬೂ ಸವಾರಿ ಉತ್ಸವ ಅದ್ದೂರಿಯಿಂದ ನೆರವೇರಿದೆ. ಧಾರವಾಡದ ಗಾಂಧಿನಗರ ಈಶ್ವರ ದೇವಸ್ಥಾನದಲ್ಲಿ ಜಂಬೂ ಸವಾರಿ ಉತ್ಸವಕ್ಕೆ ಚಾಲನೆ …

Read More »

ಬಲವಂತವಾದ ಮತಾಂತರವೇ ಇಸ್ಲಾಂ, ಕ್ರೈಸ್ತ ಸಮೂದಯದ ಉದ್ದೇಶ : ಪ್ರಮೋದ್ ಮುತಾಲಿಕ್

ಧಾರವಾಡ: ಬಲವಂತವಾದ ಮತಾಂತರವೇ ಇಸ್ಲಾಂ, ಕ್ರೈಸ್ತ ಸಮೂದಯದ ಉದ್ದೇಶ. ಮತಾಂತರದ ಹಿಂದೆ ದೊಡ್ಡ ಶಕ್ತಿಗಳೇ ಇವೆ. ಸರ್ಕಾರ ಮತಾಂತರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಹುಬ್ಬಳ್ಳಿಯ ನವನಗರ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಕಾಯ್ದೆ ಬೇರು ಬಿಟ್ಟಿದೆ. ಇತ್ತಿಚೆಗೆ ಓರ್ವ ಅರ್ಚಕನನ್ನು ಸಹ ಮತಾಂತರ ಮಾಡಲಾಗಿತ್ತು. ಖತ್ನಾ ಮಾಡಬೇಕು ಅನ್ನುವ ಸಮಯದಲ್ಲಿ ಭಯಪಟ್ಟು …

Read More »

ಸಿಎಂಗೆ ಪ್ರಿಯಾಂಕ ಖರ್ಗೆ ಉದ್ರಿ ಬಾಷಣ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಚಿವ

ಧಾರವಾಡ : ಸಿಎಂ ಅವರು ಕೇರಳ ಮುಖ್ಯಮಂತ್ರಿ ಬರುತ್ತಿರುವುದರಿಂದ ಕೃಷಿ ಮೇಳಕ್ಕೆ ಬರಲು ಆಗಲಿಲ್ಲ. ನೀನೆ ಹೋಗಿ ಬಾ ಎಂದು ನನಗೆ ಹೇಳಿದರು ಎಂದು ಧಾರವಾಡ ಕೃಷಿ ಮೇಳದಲ್ಲಿ ‌ಭಾಗಿಯಾಗಿ‌ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ‌ ಪ್ರಿಯಾಂಕ ಖರ್ಗೆ ಬಿಜೆಪಿಗೆ ಜೊಲ್ಲು ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಅವರಿಗೆ ಜೊಲ್ಲು ಸುರಿಸುವುದು ಗೊತ್ತಿದೆ. ಜೊಲ್ಲು ಸುರಿಸುವುದರಲ್ಲಿ ಅವರು ನಿಸ್ಸೀಮರು. ವಾಸ್ತವಾಂಶದ ಅರಿವು ಅವರಿಗೆ ಇಲ್ಲ. ‌ಅವರೆಲ್ಲ ಹೈ …

Read More »

ಚಿಗರಿ ಬಸ್ಸಿನಲ್ಲಿ ಬೆಂಕಿ ಅವಘಡ ; ಪ್ರಯಾಣಿಕರು ಸುರಕ್ಷಿತ

ಧಾರವಾಡ : ಹುಬ್ಬಳ್ಳಿ , ಧಾರವಾಡ ಅವಳಿನಗರದ ಮಧ್ಯೆ ಸಂಚರಿಸುವ ಬಿಆರ್‌ಟಿಎಸ್ ಸಂಸ್ಥೆಯ ಚಿಗರಿ ಬಸ್ಸಿನ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಠಿಸಿದ ಘಟನೆ ಧಾರವಾಡದ ಕೋರ್ಟ್ ಸರ್ಕಲ್ ಬಳಿ ನಡೆದಿದೆ . ಪ್ರಯಾಣಿಕರನ್ನು ಕರೆದುಕೊಂಡು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಚಿಗರಿ ಬಸ್ಸಿನ ಹಿಂಬದಿಯ ಚಕ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ . ಇದನ್ನು ಕಂಡ ಚಾಲಕ , ಪ್ರಯಾಣಿಕರನ್ನು ಕೆಳಗಿಳಿಸಿದ್ದಾನೆ . ಕೂಡಲೇ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿದ್ದರಿಂದ ಸ್ಥಳಕ್ಕೆ ಬಂದ …

Read More »

ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಸಹೋದರ ನಿಧನ, ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ ಎಂ ಬಿ ಮುನೇನಕೊಪ್ಪ.!

ಹುಬ್ಬಳ್ಳಿ: ಸಹೃದಯಿಯಾಗಿದ್ದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಹೋದರ ಡಾ.ಮಲ್ಲನಗೌಡ ಪಾಟೀಲ ಮುನೇನಕೊಪ್ಪ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ನವಲಗುಂದ ಕ್ಷೇತ್ರದ ಶಾಸಕರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಹಿರಿಯ ಸಹೋದರರಾಗಿದ್ದ ಡಾ.ಮಲ್ಲನಗೌಡರು, ಕ್ಷೇತ್ರದಲ್ಲಿ ‘ಡಾಕ್ಟರ್ ಅಣ್ಣಾರ’ ಎಂದೇ ಗುರುತಿಸಿಕೊಂಡಿದ್ದರು. ಬಡವರ ಪರವಾದ ಮನಸ್ಥಿತಿ ಹೊಂದಿದ್ದ ಅವರು, ಅದೇ ಕಾರಣಕ್ಕೆ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ, ಜನಪರ ಸೇವೆಯಲ್ಲಿ ತೊಡಗಿದ್ದರು. ಹುಬ್ಬಳ್ಳಿಯ ಕಿಮ್ಸನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಅವರು, ಅಲ್ಲಿಯೇ …

Read More »