Breaking News

ಸಿಎಂಗೆ ಪ್ರಿಯಾಂಕ ಖರ್ಗೆ ಉದ್ರಿ ಬಾಷಣ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಚಿವ

ಧಾರವಾಡ : ಸಿಎಂ ಅವರು ಕೇರಳ ಮುಖ್ಯಮಂತ್ರಿ ಬರುತ್ತಿರುವುದರಿಂದ ಕೃಷಿ ಮೇಳಕ್ಕೆ ಬರಲು ಆಗಲಿಲ್ಲ. ನೀನೆ ಹೋಗಿ ಬಾ ಎಂದು ನನಗೆ ಹೇಳಿದರು ಎಂದು ಧಾರವಾಡ ಕೃಷಿ ಮೇಳದಲ್ಲಿ ‌ಭಾಗಿಯಾಗಿ‌ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ‌

ಪ್ರಿಯಾಂಕ ಖರ್ಗೆ ಬಿಜೆಪಿಗೆ ಜೊಲ್ಲು ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಅವರಿಗೆ ಜೊಲ್ಲು ಸುರಿಸುವುದು ಗೊತ್ತಿದೆ. ಜೊಲ್ಲು ಸುರಿಸುವುದರಲ್ಲಿ ಅವರು ನಿಸ್ಸೀಮರು. ವಾಸ್ತವಾಂಶದ ಅರಿವು ಅವರಿಗೆ ಇಲ್ಲ. ‌ಅವರೆಲ್ಲ ಹೈ ಫೈ ಲೈಫ್ ನಲ್ಲಿ ಬೆಳೆದವರು.‌ ರೈತರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಹೆಣ್ಣು ಮಗಳ ಬಗ್ಗೆ ಅಸಹ್ಯವಾಗಿ ಈ ಹಿಂದೆ ಅವರು ಮಾತನಾಡಿದ್ದಾರೆ. ಇದು ಅವರ ಸಂಸ್ಕಾರವನ್ನು ತೋರಿಸುತ್ತದೆ.‌ ಸಿಎಂಗೆ ಪ್ರಿಯಾಂಕ ಖರ್ಗೆ ಉದ್ರಿ ಬಾಷಣ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಚಿವರು, ಬೊಮ್ಮಾಯಿ ದಡ್ಡರಿಲ್ಲ. ಅತ್ಯಂತ ಚಾಣಾಕ್ಷರಿದ್ದಾರೆ. ಭಾಷಣ ಮಾಡುವುದು ಅವರಿಗೆ ಗೊತ್ತಿದೆ. ಯಾವುದೇ ಕಾರ್ಯಕ್ರಮ ನಿಭಾಯಿಸುವ ಶಕ್ತಿ ಬೊಮ್ಮಾಯಿ ಅವರಿಗೆ ಗೊತ್ತಿದೆ. ಬೊಮ್ಮಾಯಿ ಅವರಿಗೆ ಆಡಳಿತ ನಡೆಸುವುದು ಗೊತ್ತು. ಯಾವುದೇ ವಿಷಯ ತೆಗೆದುಕೊಂಡರು ಅದನ್ನು ನಿಭಾಯಿಸುವ ಶಕ್ತಿ ಅವರಿಗಿದೆ. ಅದನ್ನು ಪ್ರಿಯಾಂಕ ಖರ್ಗೆ ಅವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *