Breaking News

ಧಾರವಾಡ

ಹೆಸರು ಖರೀದಿ ಕೇಂದ್ರ ಪ್ರಾರಂಭಿಸುವಂತೆ ಮನವಿ ಸಲ್ಲಿಕೆ

ನವಲಗುಂದ: ಹೆಸರು ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ರೈತ ಮುಖಂಡ ದೇವರಾಜ ದಾಡಿಬಾವಿ ನೇತೃತ್ವದಲ್ಲಿ ನವಲಗುಂದ ರೈತರು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ದೇವರಾಜ ದಾಡಿಬಾವಿ, ಸರ್ಕಾರ ತಕ್ಷಣ ಹೆಸರು ಖರೀದಿ ಕೇಂದ್ರವನ್ನ ಪ್ರಾರಂಭಿಸಿ ನಿಗದಿ ಪಡಿಸಿದ ದರಕ್ಕೆ ಹೆಸರುಬೆಳೆಯನ್ನ ಖರೀದಿಸಬೇಕು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳಿಂದ ಕೂಡಿದ ಖರೀದಿ ಕೇಂದ್ರದ ನಿಯಮಗಳನ್ನು ಸಡಿಲಗೊಳಿಸಿ ಖರೀದಿ ಕೇಂದ್ರದ ನಿಯಮ ಸರಳಿಕರಿಸಿ ಬೇಗ ಬೇಗ ತಾಲೂಕಿನ …

Read More »

ರಾಜ್ಯಮಟ್ಟಕ್ಕೆ ಜಿಲ್ಲಾಮಟ್ಟದ ಕುಸ್ತಿಯಲ್ಲಿ ಆಯ್ಕೆ

ಕಲಘಟಗಿ : ತಾಲೂಕಿನ ಉಗ್ಗಿನಕೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಧಾರವಾಡದಲ್ಲಿ ನಡೆದ ೨೦೨೪ ೨೫ ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜಿಲ್ಲಾಮಟ್ಟದ ಕುಸ್ತಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 80 ಕೆ.ಜಿಯ ಕುಸ್ತಿಯಲ್ಲಿ ಸುನೀಲ ರಾಮಣ್ಣ ಬಂಡಿವಡ್ಡರ ಪ್ರಥಮ ಸ್ಥಾನ ಪಡೆದಿದ್ದು ಕಾವ್ಯಾ ತುಕಾರಾಮ ದಾನ್ವೆನವರ ೫೩ ಕೆಜಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಬ್ಬರು ವಿದ್ಯಾರ್ಥಿಗಳಿಗೆ ಶಾಲೆಯ ಎಸ್ ಡಿ ಎಮ್ ಸಿ …

Read More »

ಜೀವಕೊಟ್ಟವನ ಜೀವ ತೆಗೆದ ಪಾಪಿ ಮಗ: ಕೆಲಸದ ವಿಚಾರಕ್ಕೆ ಕೊಲೆ….

ಹುಬ್ಬಳ್ಳಿ: ತಂದೆ ಮಗನಿಗೆ ಬೈದ ಅಂತ ಒಂದೇ ಕಾರಣಕ್ಕೆ ಮಗ ಸೆಲಕಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಗಿರಿಯಾಳದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳ್ಳಂ ಬೆಳೆಗ್ಗೆ ಕೆಲಸ ಮಾಡುವ ವಿಚಾರಕ್ಕೆ ತಂದೆ ಮಗನ ನಡುವೆ ವಾದ ವಿವಾದ ನಡೆದು ಮಗನಿಗೆ ತಂದೆ ಅವಾಚ್ಯ ಶಬ್ದದಿಂದಿ ಬೈದಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಕೊಲೆಯಾದ ವ್ಯಕ್ತಿ ಉಮೇಶ ಮಹದೆರವಪ್ಪ ಸುಡಕೇನವರ (58) ಎಂದು ಗುರುತಿಸಲಾಗಿದೆ. ಆರೋಪಿ ಹನಮಂತಪ್ಪ ಉಮೇಶ ಸುಡಕೇನವರ …

Read More »

ಗೋಕುಲ ರೋಡ್ ಪೊಲೀಸ್ ಕಾರ್ಯಾಚರಣೆ: ಬೈಕ್, ಮೊಬೈಲ್ ಕಳ್ಳನ ಬಂಧನ..!

ಹುಬ್ಬಳ್ಳಿ: ವಿಕಲಚೇತನರು ಬಳಸುವ ಬೈಕ್ ಹಾಗೂ ಮೊಬೈಲ್ ಕಳ್ಳತನ ಮಾಡಿದ ಖದೀಮನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗೋಕುಲ್ ರೋಡ್ ಪೊಲೀಸ್ ಠಾಣೆ ಪೋಲೀಸರು ಯಶಸ್ವಿಯಾಗಿದ್ದಾರೆ.ಪೊಲೀಸ್ ಕಾರ್ಯಾಚರಣೆ ವೇಳೆ ಮೊಬೈಲ್ ಮತ್ತು ಬೈಕ್ ಕಳ್ಳನ ಬಂಧಿಸಲಾಗಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ನಡೆದ ಘಟನೆಯಲ್ಲಿ ಸುನೀಲ ಕುಮಾರ ಕರ್ಜಗಿ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಬೈಕ್‌ ಹಾಗೂ ನಾಲ್ಕು ಮೊಬೈಲ್ ವಶಕ್ಕೆ ಪಡೆಯಲಾಗಿದೆ.ವಿಕಲಚೇತನರು ಬಳಸುವ ಬೈಕ್ ಹಾಗೂ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ಪೊಲೀಸರು ಸೂಕ್ತ …

Read More »
Featured Video Play Icon

ಅಮರಗೋಳದಲ್ಲಿ ತೆರವು ಕಾರ್ಯಾಚರಣೆ: ಆತಂಕಗೊಂಡ ಸ್ಥಳೀಯರು..

ಹುಬ್ಬಳ್ಳಿ: ಸುಮಾರು ಇಪ್ಪತ್ತು ವರ್ಷಗಳಿಂದ ಹತ್ತಾರು ಕುಟುಂಬಕ್ಕೆ ಆಶ್ರಯ ತಾಣವಾಗಿದ್ದ ಅಮರಗೋಳ ಆಶ್ರಯ ಕಾಲೋನಿಯಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿಗಳು ಸದ್ದು, ಮಾಡಿವೆ. ಜೆಸಿಬಿ ಆಗಮಿಸುತ್ತಿದ್ದಂತೆಯೆ ಇಲ್ಲಿನ ನಿವಾಸಿಗಳು ಆತಂಕಗೊಂಡಿದ್ದಾರೆ… ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಬೆಳ್ಳಂಬೆಳಿಗ್ಗೆ ಅಮರಗೋಳದಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಯಾವುದೇ ರೀತಿಯ ಸೂಚನೆ ನೀಡದೇ, ನೋಟಿಸ್ ಕೂಡ ಕೊಡದೇ ಏಕಾಏಕಿ ತೆರವು ಮಾಡಿದರೇ ಎಲ್ಲಿ ಹೋಗುವುದು ಎಂಬುವಂತ ಅಳಲನ್ನು ಇಲ್ಲಿನ ಜನರು ತೋಡಿಕೊಂಡಿದ್ದಾರೆ. ಸುಮಾರು ಒಂಬತ್ತು ಮನೆಗಳಿದ್ದು, ಈಗಾಗಲೇ …

Read More »

ಪಾಲಿಕೆಯ ನಿರ್ಧಾರಕ್ಕೆ ಜನರು ತತ್ತರ: 10 ರಿಂದ 25% ಕಟ್ಟಡ ಪರವಾನಗಿ ಟ್ಯಾಕ್ಸ್ ಹಚ್ಚಳ..!

ಹುಬ್ಬಳ್ಳಿ: ರಾಜ್ಯದ ಎರಡನೇ ಅತೀದೊಡ್ಡ ಮಹಾನಗರ ಪಾಲಿಕೆಯಿಂದ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ಬಿಜೆಪಿ ಆಡಳಿತದಲ್ಲಿರುವ ಮಹಾನಗರ ಪಾಲಿಕೆಯ ಜನರಿಗೆ ಟ್ಯಾಕ್ಸ್ ಬಿಸಿ ತಟ್ಟುತ್ತಿದೆ. ಕಳೆದ 20 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ಮಹಾನಗರ ಪಾಲಿಕೆಯಿಂದ ನಿರಂತರವಾಗಿ ಟ್ಯಾಕ್ಸ್ ಏರಿಕೆಯಾಗುತ್ತಿದೆ.ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಗೆ ಮಹಾನಗರ‌ ಪಾಲಿಕೆಯಿಂದ ಬಿಗ್ ಶಾಕ್ ಎದುರಾಗಿದೆ. ಕಟ್ಟಡ ಪರವಾನಗಿ ಟ್ಯಾಕ್ಸ್ ನಲ್ಲಿ‌ ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಮಾಡಿದೆ. ಶೇ 10 % ರಿಂದ …

Read More »
Featured Video Play Icon

ಹಾಲು ಉತ್ಪಾದಕ ರೈತರಿಗೆ ಬಿಗ್ ಶಾಕ್: ಪ್ರೋತ್ಸಾಹ ಧನ‌ ಸ್ಥಗಿತ, ಬೆಲೆ‌ ಇಳಿಕೆ..!

ಹುಬ್ಬಳ್ಳಿ: ಜನರ ಜೀವನ ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದಾದ ಮೇಲೆ ಒಂದರಂತೆ ಜನರಿಗೆ ಗಾಯದ ಮೇಲೆ ಬರೆ ಬೀಳುವಂತಾಗಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಸಿ ಜನರಿಗೆ ಬರೆ ಎಳೆದ ಸರಕಾರದಿಂದ ರೈತರಿಗೆ ಬಿಕ್ ಶಾಕ್ ಎದುರಾಗಿದೆ. ಅಷ್ಟಕ್ಕೂ ಏನಿದು ಬಿಗ್ ಶಾಕ್ ಅಂತೀರಾ ತೋರಸ್ತಿವಿ ನೋಡಿ..ಸರ್ಕಾರಿ ಸ್ವಾಮ್ಯದ ಅಮುಲ್ ಹಾಲು ಉತ್ಪಾದಕರ ಸಂಘದ ಒಕ್ಕೂಟದಿಂದ ರೈತರಿಗೆ ಬಿಗ್ ಶಾಕ್ ನೀಡಿದ್ದು, 2 ರೂಪಾಯಿ ಹಾಲಿನ ದರ ಇಳಿಕೆ ಮಾಡುವ …

Read More »
Featured Video Play Icon

ಶೂನ್ಯ ಟಿಕೆಟ್ ವಿತರಣೆಯಿಂದ ಸಾರಿಗೆ ಸಂಸ್ಥೆಗೆ ಸಂಕಷ್ಟ: 300 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ…

ಹುಬ್ಬಳ್ಳಿ: ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಾರಿಗೆ ಸಂಸ್ಥೆ, ಗ್ಯಾರಂಟಿ ಯೋಜನೆ ಜಾರಿಯಾದಾಗಿನಿಂದಲೂ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗುತ್ತಿದೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಕರ್ನಾಟಕ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮರು ಪಾವತಿಸಬೇಕಾದ ಮೊತ್ತದಲ್ಲಿ ರಾಜ್ಯ ಸರ್ಕಾರ 298,95,81,254 ರೂ. ಬಾಕಿ ಉಳಿಸಿಕೊಂಡಿದೆ… 2023ರ ಜೂನ್ 11ರಂದು ಈ ಯೋಜನೆ ಜಾರಿಗೆ ಬಂದಿತ್ತು. …

Read More »

ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಲಂಚ ಕೊಡುವಂತೆ ಕೇಳುತ್ತಿದ್ದಾರೆ….

ಧಾರವಾಡ: ಕರ್ನಾಟಕ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇಳಿ ಬಂದಿದ್ದ ಗುತ್ತಿಗೆದಾರರ ಆರೋಪಗಳು ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿವೆ. ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ಅವರು ಧಾರವಾಡ ಪಾಲಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಸಂಬಂಧ ಬಿಲ್ ಕೇಳಲು ಹೋದರೆ ಮೊದಲು ಲಂಚ ಕೊಡುವಂತೆ ಮಹಾನಗರ ಪಾಲಿಕೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅವರು ಬುಧವಾರ …

Read More »

ಬಿಜೆಪಿಗೆ ಹೊಟ್ಟೆ ಉರಿ ಆಗುತ್ತಿದೆ: ರಾಮಲಿಂಗ ರೆಡ್ಡಿ.

ಧಾರವಾಡ: ಧಾರವಾಡದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು.ಶಕ್ತಿ ಯೋಜನೆಯಿಂದ ಜನ ದಟ್ಟಣೆ ಹೆಚ್ಚಾಗುತ್ತಿರುವ ವಿಚಾರ ನಾಲ್ಕು ವರ್ಷದಿಂದ ಹೊಸ ಬಸ್ ಖರೀದಿ ಆಗಿರಲಿಲ್ಲ. ಸಿಬ್ಬಂದಿ ನೇಮಕವೂ ಆಗಿರಲಿಲ್ಲ. ಪ್ರತಿದಿನ ರಾಜ್ಯದಲ್ಲಿ 80 ಲಕ್ಷ ಜನ ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಕ್ತಿ ಯೋಜನೆ ಆರಂಬ ಆಯ್ತು ಇದರಿಂದಾಗಿ ಆಗ ನಿತ್ಯ ಓಡಾಡುವವರ ಸಂಖ್ಯೆ 1 ಕೋಟಿ ಮೇಲಾಯ್ತು, ಹೀಗಾಗಿ ಸ್ವಲ್ಪ ಶಾಲಾ ಮಕ್ಕಳಿಗೆ ತೊಂದರೆ ಆಗಿದೆ. ಅವರಿಗೆ ಓಡಾಡಲು ಕಷ್ಟ ಆಗಿದೆ.ಈಗ …

Read More »