Breaking News

ಹುಬ್ಬಳ್ಳಿ-ಧಾರವಾಡ

ಸರಳ ರಾಜಕಾರಣಿಗೆ ಒಲಿದ ನಿಗಮ ಮಂಡಳಿ ಹುದ್ದೆ!ಅಧಿಕೃತ ಆದೇಶ ಒಂದೇ ಬಾಕಿ..!

ಹುಬ್ಬಳ್ಳಿ ಧಾರವಾಡ ಕಾಂಗ್ರೆಸ್ ಪಕ್ಷದಲ್ಲಿ ಮಿಂಚಿನ ಸಂಚಲನ‌ ವಾಗುತ್ತಿದ್ದು ಕರ್ನಾಟಕದ ಜನರ ಚಿತ್ತ ಹುಬ್ಬಳ್ಳಿಯತ್ತ ನೆಟ್ಟಿದೆ.ಒಂದು ಕಡೆ ಪಕ್ಷಾಂತರ ಪರ್ವ ವಾದರೆ ಇನ್ನೊಂದೆಡೆ ನಿಗಮ ಮಂಡಳಿ ಖಾತೆ ಹಂಚಿಕೆ ವಿಚಾರ ..ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ನಾಯಕರ ಗುರ್ತಿಸಿ ಖಾತೆ ಹಂಚಿಕೆ ಮಾಡಿದ್ದು ಅಧಿಕೃತ ಮಾಹಿತಿ ಒಂದೆ ಬಾಕಿ ಇದೆ ..ಹುಬ್ಬಳ್ಳಿಯ ಯುವ ನಾಯಕ ಹಾಗು ಮಾಜಿ ಸಂಸದರ ಮಗ ಶಾಕಿರ್ ಸನದಿ ಅವರಿಗೆ ನಿಗಮ ಮಂಡಳಿ ಹುದ್ದೆ ಒಲಿದು ಬಂದದ್ದು …

Read More »

ಬಿಜೆಪಿಗೆ ಜಗದೀಶ ಶೆಟ್ಟರ ಸೇರಿದ್ದು ಖುಷಿ: ಲಾಡ್‌..

ಜಗದೀಶ ಶೆಟ್ಟರ ಅವರು ಬಿಜೆಪಿ ಸೇರಿದ್ದು ವೈಯಕ್ತಿಕವಾಗಿ ಬಹಳ ಖುಷಿಯಾಗಿದೆ. ಯಾಕೆ ಕಾಂಗ್ರೆಸ್‌ಗೆ ಬಂದರು, ಬಿಜೆಪಿಗೆ ಯಾಕೆ ವಾಪಸ್‌ ಹೋದರು ಎಂದು ಅವರನ್ನೇ ಕೇಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಪ್ರತಿಕ್ರಿಯಿಸಿದರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತೊರೆದಾಗ ಏನೋ ಹೇಳಿದ್ದರು, ಈಗ ವಾಪಸ್‌ ಹೋಗುವಾಗ ಏನು ಹೇಳುತ್ತಾರೆ. ರಾಜಕಾರಣದಲಿ ಇದೆಲ್ಲ ಸಾಮಾನ್ಯ’ ಎಂದು ಹೇಳಿದರು. ‘ಕಾಂಗ್ರೆಸ್‌ ಅವರಿಗೆ ಗೌರವ ನೀಡಿ, ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿತ್ತು. …

Read More »

ನ್ಯಾಯಾಲಯದಲ್ಲಿರುವ‌ ಪ್ರಕರಣ ವಾಪಸ್ ಪಡೆಯಲು ನಿರಾಕರಣೆ: ಗೃಹಿಣಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ….

ಹುಬ್ಬಳ್ಳಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೀದಿಯಲ್ಲಿ ಎರಡು ಗುಂಪುಗಳು ಕಟ್ಟಿಗೆ , ಕಲ್ಲುಗಳಿಂದ ಹೊಡೆದಾಡಿಕೊಂಡ ಘಟನೆ ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲನಿಯಲ್ಲಿ ನಡೆದಿದೆ. ಜ್ಯೋತಿ ಹನೀಫ ಅಂಚಿಟಗೇರಿ ಎಂಬುವವರು ಈ ಹಿಂದೆ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಗಂಡನಾದ ಹನೀಫ ಈತನ ವಿರುದ್ಧ ದೂರು ಸಲ್ಲಿಸಿದ್ದರು. ಇದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದ್ದು. ಈ ಕೇಸನ್ನು ನೀನು ಹಿಂದೆ ತೆಗೆದುಕೊ ಅಂತ ಹೇಳಿದ್ದರು‌. ಅದಕ್ಕೆ ಜ್ಯೋತಿ ಒಪ್ಪದಿದ್ದಕ್ಕೆ ಆರೋಪಿತರಾದ ಮೊಹಮ್ಮದ …

Read More »

ಸುರ್ಜೇವಾಲಾ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಚಿಂತನೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ

ಹುಬ್ಬಳ್ಳಿಯಲ್ಲಿ ಇಲ್ಲಿನ ಎಂ.ಟಿ.ಎಸ್ ಕಾಲೊನಿಯಲ್ಲಿರುವ ರೈಲ್ವೆ ಇಲಾಖೆಯ ಜಾಗವನ್ನು ಹರಾಜು ಹಾಕುವುದರಲ್ಲಿ ನನ್ನ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿರುವುದು ಅಪ್ಪಟ ಬಾಲಿಶತನದ ಹೇಳಿಕೆ. ತಮ್ಮ ಹೇಳಿಕೆಗೆ ಸೂಕ್ತ ಪುರಾವೆ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ರೈಲ್ವೆ ಇಲಾಖೆಯ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ …

Read More »

ಅಯೋಧ್ಯೆ ಶ್ರೀ ರಾಮಚಂದ್ರನಿಗೆ ವಿಶೇಷ ಅಭಿಮಾನ ತೋರಿದ ಹುಬ್ಬಳ್ಳಿ ಯುವಕ..

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೇ ಆರಂಭ ಆಗುತ್ತಿದ್ದಂತೆ, ದೇಶದಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ ಮನೆಮಾಡಿದೆ. ಅದರಂತೆ ಹುಬ್ಬಳ್ಳಿಯಲ್ಲಿ ಯುವಕನೊಬ್ಬ ತನ್ನ ಕಾರಿಗೆ ಸಂಪೂರ್ಣವಾಗಿ ರಾಮ, ಹನುಮಂತನ ಸ್ಟೀಕರ್ ಮಾಡಿಸಿ, ತನ್ನ ಭಕ್ತಿಯನ್ನು ವ್ಯಕ್ತಪಡಿಸಿದ್ದಾನೆ. ಹೌದು, ನಗರದ ಹೊಸೂರಿನ ನಿವಾಸಿಯಾಗಿರುವ ಸಚಿನ್ ಮಿಸ್ಕಿನ್ ರಾಮಭಕ್ತನಾಗಿದ್ದು, ಈ ಹಿಂದಿನಿಂದಲೂ ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ. ಈತ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ತನ್ನ …

Read More »
Featured Video Play Icon

ನೈತಿಕ ಪೋಲಿಸ್ ಗಿರಿ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಏನಂದ್ರು ನೋಡಿ..!!

ಹುಬ್ಬಳ್ಳಿ: ರಾಜ್ಯದಲ್ಲಿ ಪದೇ ಪದೇ ನೈತಿಕ ಪೋಲಿಸ್ ಗಿರಿ ನಡೆಯುತ್ತಿರುವುದು ಖೇಧಕರ ಸಂಗತಿಯಾಗಿದೆ. ಹಾನಗಲ್’ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೋಲಿಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ಕೂಡಾ ನೈತಿಕ ಪೋಲಿಸ್ ಗಿರಿ ಮಾಡಬಾರದು. ಈಗಾಗಲೇ ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಸರ್ಕಾರ ಇದರ ಬಗ್ಗೆ ಕಠಿಣ …

Read More »
Featured Video Play Icon

ನಕಲಿ ವೈದ್ಯನ ಪರ ವಕಾಲತ್ತು ವಹಿಸಿದ ಕೈ ನಾಯಕನ ಚಳಿ ಬಿಡಿಸಿ ಸಚಿವ ಸ್ಥಾನದ ಘನತೆ ಹೆಚ್ಚಿಸಿದ ಸಂತೋಷ್ ಲಾಡ್…

ಧಾರವಾಡ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವ ವೇಳೆ ಕೈ ನಾಯಕ ಕಕ್ಕಾಬಿಕ್ಕಿ ಯಾದ ಘಟನೆ ನಡೆದಿದೆ.ಧಾರವಾಡದ ನಕಲಿ ವೈದ್ಯ ತರುಣಕುಮಾರ ರಾಯ್ ಸೀಜ್ ಆಗಿರುವ ಕ್ಲಿನಿಕ್ ಓಪನ್ ಮಾಡಿಸಿಕೊಂಡುವಂತೆಮನವಿ ಸಲ್ಲಿಸಲು ಹಾಗು ಲಾಭಿ ಮಾಡಲು ಕೈ ನಾಯಕನ ಜೊತೆ ಬಂದು ದವಾಖಾನೆಯನ್ನ ಓಪನ್ ಮಾಡಿಸಿಕೊಡುವಂತೆ ಸಚಿವರ ಬಳಿ ತರುಣಕುಮಾರರನ್ನನ್ನು ಕರೆದುಕೊಂಡು ಬಂದಿದ್ದ ಮುತ್ತುರಾಜ್ ಮಾಖಡವಾಲೆ ಮೇಲೂ ಸಂತೋಷ್ ಲಾಡ್ ಗರಂ ಆಗಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ತರುಣಕುಮಾರ್ ರಾಯ್ ಕ್ಲಿನಿಕ್ …

Read More »

ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಜೆಸಿಬಿ, ಸ್ಥಳದಲ್ಲೇ ಹಾರಿಹೋಯ್ತು ಪ್ರಾಣಪಕ್ಷಿ..

ಮನೆ ಮುಂದೆ ಆಟವಾಡುತ್ತಿದ್ದವನ ಮೇಲೆ ಏಕಾಏಕಿ ಜೆಸಿಬಿ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಲ್ಲಿ ನಡೆದಿದೆ. ಮನ್ವಿತ್ ಮಂಜುನಾಥ್ ಏರಿಮನಿ (5) ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ.ಮೃತ ಮನ್ವಿತ್ ಮಂಜುನಾಥ್ ಏರಿಮನಿ ಶಬ್ಬೀರ್ ನಗರದ ತಮ್ಮ ನಿವಾಸದ ಮುಂದೆ ಆಟವಾಡುತ್ತಿದ್ದನು. ಈ ವೇಳೆ ಜೆಸಿಬಿ ಪಟ್ಟಣದ ಶಬ್ಬೀರ್ ನಗರದಿಂದ ಶಿರಹಟ್ಟಿ ಮಾಗಡಿ ಕಡೆಗೆ ತೆರಳುತ್ತಿದ್ದ ಜೆಸಿಬಿ ಚಾಲಕನ ನಿಯಂತ್ರಣ ತಪ್ಪಿ …

Read More »

ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಲಂಚ ಕೊಡುವಂತೆ ಕೇಳುತ್ತಿದ್ದಾರೆ….

ಧಾರವಾಡ: ಕರ್ನಾಟಕ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇಳಿ ಬಂದಿದ್ದ ಗುತ್ತಿಗೆದಾರರ ಆರೋಪಗಳು ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿವೆ. ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ಅವರು ಧಾರವಾಡ ಪಾಲಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಸಂಬಂಧ ಬಿಲ್ ಕೇಳಲು ಹೋದರೆ ಮೊದಲು ಲಂಚ ಕೊಡುವಂತೆ ಮಹಾನಗರ ಪಾಲಿಕೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅವರು ಬುಧವಾರ …

Read More »

ವಿದ್ಯಾಕಾಶಿ ಧಾರವಾಡದ ನಗರ ಬಸ್ ನಿಲ್ದಾಣ (CBT) ವ್ಯಾಪ್ತಿಯಲ್ಲಿ ಚಿಕ್ಕದಿರುವ ನಿಲ್ದಾಣವನ್ನು ನವೀಕರಣ ಕಾರ್ಯ…..

ಹುಬ್ಬಳ್ಳಿ: ಕರ್ನಾಟಕದ ವಿದ್ಯಾಕಾಶಿ ಧಾರವಾಡವು ಬೆಳೆಯುತ್ತಿರುವ ನಗರ-ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿ ಸಹ ಜನದಟ್ಟಣೆ ಹೆಚ್ಚಾಗಿದ್ದು, ಅಸ್ತಿತ್ವದಲ್ಲಿದ್ದ ನಗರ ಬಸ್ ನಿಲ್ದಾಣ (CBT) ವ್ಯಾಪ್ತಿಯಲ್ಲಿ ಚಿಕ್ಕದಿರುವ ನಿಲ್ದಾಣವನ್ನು ನವೀಕರಣ ಕಾರ್ಯ ಇಂದು ಸೋಮವಾರದಿಂದ ಆರಂಭವಾಗಿದೆ. ಧಾರವಾಡದ ನಗರ ಸಾರಿಗೆ ಬಸ್ ನಿಲ್ದಾಣವು ನೂತನ ಸಾರಿಗೆ ಬಸ್ ನಿಲ್ದಾಣವಾಗಿ ಕಂಗೊಳಿಸಲಿದೆ. ಈ ಸಂಬಂಧ ಯೋಜನೆ ಆರಂಭಕ್ಕೆ ಇಂದು ಸೋಮವಾರ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅವರಿಗೆ ಜಿಲ್ಲಾ ಉಸ್ತುವಾರಿ …

Read More »