BigTv News
October 3, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸ್ವತಃ ಶಾಸಕರೇ ದಿನಕ್ಕೊಬ್ಬರಂತೆ ಬೀದಿಗಿಳಿದು ಅಸಮಾಧಾನ ಹೊರ ಹಾಕುವ ಮಟ್ಟಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹದಗೆಟ್ಟಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್‌ನ ಕಾಗವಾಡ ಶಾಸಕ ರಾಜು ಕಾಗೆ ಅವರು, ಮೊನ್ನೆಯಷ್ಟೇ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಈ ಸಂಬಂಧ ಟ್ವೀಟ್ ಮೂಲಕ ಕರ್ನಾಟಕ ಬಿಜೆಪಿಯು ರಾಜ್ಯ ಸರ್ಕಾರದ ಆಡಳಿತ ಕಾರ್ಯ ನಿರ್ವಹಣೆ …
Read More »
BigTv News
October 2, 2023
ಕರ್ನಾಟಕ, ಮನರಂಜನೆ, ಸುದ್ದಿ
ಈ ವರ್ಷದ ಬಿಗ್ ಬಾಸ್ (Bigg Boss Kannada) ಮನೆಗೆ ಖ್ಯಾತ ಯುಟ್ಯೂಬರ್ ಹಾಗೂ ಇನ್ಸ್ಟಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ವರ್ಷಾ-ವರುಣ್ (Varun Aradhya) ಜೋಡಿಯಾಗಿ ಬರುತ್ತಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸುವುದಕ್ಕಾಗಿಯೇ ಈ ಜೋಡಿ ಬ್ರೇಕ್ ಅಪ್ (Break Up) ನಾಟಕವಾಡಿದೆ ಎಂದು ಆರೋಪವಿತ್ತು. ಇದಕ್ಕೆ ವರ್ಷಾ ಕಾವೇರಿ ಸ್ಪಷ್ಟನೆಯನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಲು ನಾಟಕವಾಡುವ ಅವಶ್ಯಕತೆ ಇಲ್ಲವೆಂದು ಅವರು ಹೇಳಿಕೊಂಡಿದ್ದಾರೆ ಖ್ಯಾತ …
Read More »
BigTv News
October 2, 2023
ಕರ್ನಾಟಕ, ಬೆಂಗಳೂರು, ಮನರಂಜನೆ, ಸುದ್ದಿ
ಕಾವೇರಿ ಗಲಾಟೆಯ ಸಂದರ್ಭದಲ್ಲಿ ತಮಿಳು ನಟ ಸಿದ್ಧಾರ್ಥ (Siddharth), ತಮ್ಮ ಚಿಕ್ಕು ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಕೆಲ ಕಾರ್ಯಕರ್ತರು ಸಿದ್ದಾರ್ಥ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಆಗಮಿಸಿ, ತಡೆದಿದ್ದರು. ಈ ಕುರಿತು ಕರ್ನಾಟಕದಲ್ಲೇ ಪರ ವಿರೋಧದ ಮಾತುಗಳೂ ಕೇಳಿ ಬಂದಿದ್ದವು.ಈ ಘಟನೆಗೆ ಸಂಬಂಧಿಸಿದಂತೆ ನಟ ಸಿದ್ಧಾರ್ಥ ಇದೀಗ ಪ್ರತಿಕ್ರಿಯೆಯನ್ನು (Response) ಕೊಟ್ಟಿದ್ದಾರೆ. ‘ನಾನು ನಟ. ಒಳ್ಳೆಯ ಸಿನಿಮಾ ಮಾಡಿದ್ದೇನೆ. ಸಾವಿರಾರು ಮಕ್ಕಳಿಗೆ ಈ ಸಿನಿಮಾವನ್ನು ಉಚಿತವಾಗಿ …
Read More »
BigTv News
October 2, 2023
ಕರ್ನಾಟಕ, ಬೆಂಗಳೂರು, ಸುದ್ದಿ
ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪ್ರತಿಭಟನೆ ಮಾಡುವಂತಿಲ್ಲ, ಸರ್ಕಾರದ ವಿರುದ್ಧ ಗುಂಪು ಗೂಡಿ ಆಕ್ರೋಶ ಹೊರ ಹಾಕಲು ಅನುಮತಿ ಇಲ್ಲ. ಪ್ರತಿಭಟನೆ ಮಾಡಲೇ ಬೇಕು ಅಂತಿದ್ರೆ ಫ್ರೀಡಂ ಪಾರ್ಕ್‌ಗೆ ಬಂದು ಪ್ರತಿಭಟನೆ ಮಾಡಬೇಕು ಎನ್ನುವ ಆದೇಶ ಹೊರಬಿದ್ದಿತ್ತು. ಸದ್ಯ ಈ ವಿಚಾರ ಸಾಕಷ್ಟು ಸಂಘಟನೆಗಳ ಆಕ್ರೋಶಕ್ಕೆ ಕಾರಣ ಆಗಿದೆ. ಯಾವ ಜಾಗದಲ್ಲಿ ನಮಗೆ ಅನ್ಯಾಯ ಆಗಿದ್ಯೋ ಅಲ್ಲಿ ಧ್ವನಿ ಎತ್ತಬೇಕು. ಆದ್ರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬೇಕು ಅಂದ್ರೆ ಎಷ್ಟು ಸರಿ? …
Read More »
BigTv News
October 2, 2023
ಕರ್ನಾಟಕ, ಚಾಮರಾಜನಗರ, ಸುದ್ದಿ
ಚಾಮರಾಜನಗರ: ಗಾಂಧಿ ಜಯಂತಿ ಹಿನ್ನೆಲೆ ಮಹಾತ್ಮ ಸಾರಿದ ಸಂದೇಶವನ್ನು ಸಾರಿ ಕಾವೇರಿಗಾಗಿ ಇಂದು ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಮೌನ ಪ್ರತಿಭಟನೆ ನಡೆಸಿದರು.ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಗಾಂಧಿ ಚಿತ್ರ ಹಿಡಿದು ರಸ್ತೆ ತಡೆ ನಡೆಸಿ ಕಿವಿ, ಕಣ್ಣು, ಬಾಯಿಯನ್ನು ಮುಚ್ಚಿಕೊಂಡು ಮೌನ ಪ್ರತಿಭಟನೆ ನಡೆಸಿದರು. ಅಹಿಂಸೆ ಮೂಲಕ ಮಹಾತ್ಮ ಗಾಂಧಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅದರಂತೆ ಗಾಂಧಿ ಜಯಂತಿ ದಿನದಂದು ಜೀವನದಿ ಕಾವೇರಿಗಾಗಿ ಇಂದು …
Read More »
BigTv News
October 2, 2023
ಕರ್ನಾಟಕ, ಸುದ್ದಿ
ಬೆಂಗಳೂರು: ಅಕ್ಟೋಬರ್ 1 ರಿಂದ ಬೆಂಗಳೂರಿನ ಭೂಮಿ ಹಾಗೂ ಫ್ಲಾಟ್‌ಗಳ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ( Guidance value ) ಹೆಚ್ಚಿಸುವುದಾಗಿ ಘೋಷಿಸಿದ್ದರಿಂದ ಆಸ್ತಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಕರ್ನಾಟಕ ಸರ್ಕಾರವು ಆಸ್ತಿಗಳ ಮಾರ್ಗಸೂಚಿ ದರವನ್ನು ಪ್ರಸ್ತುತ ಮೌಲ್ಯಕ್ಕೆ 25 ರಿಂದ 30 ರಷ್ಟು ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಪ್ರಾಪರ್ಟಿ ಬೆಲೆಗಳು ಭಾನುವಾರದಿಂದ ಏರಿಕೆಯಾಗಲು ಪ್ರಾರಂಭಿಸಿವೆ. …
Read More »
BigTv News
October 2, 2023
ಸುದ್ದಿ, ಹೈದರಾಬಾದ್
ಹೈದರಾಬಾದ್: ದೇಶದಲ್ಲಿ ಮೊದಲ ಹಾಗೂ ಜಗತ್ತಿನಲ್ಲಿ ಎರಡನೇ ಸೋಲಾರ್ ರೂಪ್ ಸೈಕಲಿಂಗ್ ಟ್ರ್ಯಾಕ್ ಅನ್ನು ಹೈದರಾಬಾದ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಸೈಕಲ್ ಪಥದಲ್ಲಿ ಮೇಲ್ಛಾವಣಿ ಉದ್ದಕ್ಕೂ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸುವ ಹೊಸ ಯೋಜನೆಯಾಗಿದೆ. ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಹೈದರಾಬಾದ್‌ನಲ್ಲಿ ಹೆಲ್ತ್‌ವೇ ಹೆಸರಿನ ದೇಶದ ಮೊದಲ ಸೋಲಾರ್ ಸೈಕ್ಲಿಂಗ್ ಟ್ರ್ಯಾಕ್‌ಗೆ ಚಾಲನೆ ನೀಡಿದ್ದಾರೆ. ಈ ಸಂಬಂಧ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
Read More »
BigTv News
October 2, 2023
ದೆಹಲಿ, ಸುದ್ದಿ
ದೆಹಲಿ: ಪ್ರತಿಯೊಬ್ಬರ ಪ್ರೀತಿಯ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಭಾರತದಾದ್ಯಂತ ಅಕ್ಟೋಬರ್ 2 ರಂದು ‘ಗಾಂಧಿ ಜಯಂತಿ’ ಎಂದು ಆಚರಿಸಲಾಗುತ್ತದೆ. ಆದರೆ ಪ್ರಪಂಚದಾದ್ಯಂತ ಇದನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ ಎಂದು ಆಚರಿಸಲಾಗುತ್ತದೆ. ಬಾಪು ಅವರ ಅಹಿಂಸಾತ್ಮಕ ಹೋರಾಟ ದೇಶದ ಸ್ವಾತಂತ್ರ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ. ಇದರ ಬೆನ್ನಲ್ಲೆ ಇಂದು ನವದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹತ್ಮಾ ಗಾಂಧಿ ಸಮಾಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ರಾಜ್‌ಘಾಟ್‌ನಲ್ಲಿ …
Read More »
BigTv News
September 30, 2023
News, ಸಿನಿಮಾ, ಸುದ್ದಿ
ಕನ್ನಡದ ಬ್ಯೂಟಿ ರಶ್ಮಿಕಾ ಮಂದಣ್ಣ ಸೌತ್- ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಸಾಲು ಸಾಲು ಸಿನಿಮಾ ಆಫರ್‌ಗಳನ್ನ ನಟಿ ಬಾಚಿಕೊಳ್ತಿದ್ದಾರೆ. ಈಗ ‘ಅನಿಮಲ್’ (Animal) ಸಿನಿಮಾಗಾಗಿ ರಶ್ಮಿಕಾ ಪಡೆದ ಸಂಭಾವನೆ ಬಗ್ಗೆ ಸಖತ್ ಟಾಕ್ ಆಗ್ತಿದೆ. ರಣ್‌ಬೀರ್ ಜೊತೆ ನಟಿಸಲು ‘ಪುಷ್’ ನಟಿ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಬಾಲಿವುಡ್‌ನ 3ನೇ ಸಿನಿಮಾವಾಗಿದ್ದು, ಮೊದಲ ಬಾರಿಗೆ ರಣ್‌ಬೀರ್ ಕಪೂರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ಈ ಚಿತ್ರಕ್ಕಾಗಿ 4 ಕೋಟಿ ರೂಪಾಯಿ …
Read More »
BigTv News
September 30, 2023
News, ಸಿನಿಮಾ, ಸುದ್ದಿ
ಹೊಸ ಹಾದಿಯತ್ತ ಹೊರಳಿಕೊಂಡಿರುವ ಕನ್ನಡ ಚಿತ್ರರಂಗದ ಪಾಲಿಗೀಗ ಒಂದಷ್ಟು ಭಿನ್ನ ವಿಭಿನ್ನ ಪ್ರಯತ್ನಗಳು, ಗೆಲುವುಗಳು ಜಮೆಯಾಗುತ್ತಿವೆ. ಈ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ಮತ್ತೊಂದಿಷ್ಟು ಸಿನಿಮಾಗಳು ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ತಯಾರಾಗಿ ನಿಂತಿವೆ. ಸದ್ಯದ ಮಟ್ಟಿಗೆ ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳಬಲ್ಲ ಎಲ್ಲ ಅರ್ಹತೆಗಳನ್ನು ಅಡಕವಾಗಿಸಿಕೊಂಡಿರುವ ಚಿತ್ರ ಶುಗರ್ ಫ್ಯಾಕ್ಟರಿ. ದೀಪಕ್ ಅರಸ್ ಸಾರಥ್ಯದ ಶುಗರ್ ಫ್ಯಾಕ್ಟರಿ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಪಾರ್ಟಿ ಪ್ರಿಯರಿಗೆ ಹೇಳಿ ಮಾಡಿಸಿದ ಹಾಡಿನ ಮೂಲಕ …
Read More »