BigTv News
August 14, 2023
ಕರ್ನಾಟಕ, ಸುದ್ದಿ, ಹುಬ್ಬಳ್ಳಿ, ಹುಬ್ಬಳ್ಳಿ ಸುದ್ದಿ
ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಜೋಗ ಫಾಲ್ಸ್ ಪ್ಯಾಕೇಜ್ ಟೂರಿಗೆ ಜನರು ಫಿದಾ ಆಗಿದ್ದಾರೆ. ಹುಬ್ಬಳ್ಳಿಯಿಂದ ಜೋಗಕ್ಕೆ ಬಿಡಲಾದ ವಿಶೇಷ ಬಸ್ ಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ವೋಲ್ವೋ ಮತ್ತು ರಾಜಹಾಂಸ ಬಸ್ ಗಳನ್ನು ಬಿಟ್ಟ ನಿಗಮ.. ಎರಡನೆಯ ಶನಿವಾರ ಮತ್ತು ಪ್ರತಿ ರವಿವಾರ, ರಜಾ ದಿನಗಳಲ್ಲಿ ವಿಶೇಷ ಬಸ್ ವೆವಸ್ಥೆ ಮಾಡಲಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಧುಮ್ಮಿಕ್ಕಿ ಹರಿಯುತ್ತಿರೋ ಜೋಗ ಜಲಪಾತ. …
Read More »
BigTv News
August 14, 2023
News, ಕರ್ನಾಟಕ, ಜಿಲ್ಲೆ, ರಾಜಕೀಯ, ರಾಜಕೀಯ ಸುದ್ದಿ, ವಿಜಯಪುರ, ಸುದ್ದಿ
ವಿಜಯಪುರ : 6 ತಿಂಗಳಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಅಲ್ಲಿಯವರೆಗೆ ಸಮಾಧಾನದಿಂದ ಇರಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣೆಗೆ ಶ್ರಮಿಸಿದ ಕಾರ್ಯಕರ್ತರಿಗೆ ಔತಣಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಕಾಂಗ್ರೆಸ್ ಸರ್ಕಾರದಲ್ಲಿ ಅವರ ಶಾಸಕರಿಗೆಯೇ ನೀಡಲು ಅನುದಾನ ಇಲ್ಲ, ಈಗ ಆ ಶಾಸಕರೆ ಅಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅದಕ್ಕಾಗಿ ನೀವು ಸ್ವಲ್ಪ ದಿನಗಳ ಕಾಲ ರೆಸ್ಟ್ ಮಾಡಿ, ಈಗ …
Read More »
BigTv News
August 11, 2023
ಕರ್ನಾಟಕ, ರಾಯಚೂರು, ಸುದ್ದಿ
ರಾಯಚೂರು:ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಇಂದು ನಡೆದಿದೆ. ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಗುರುವಾರ ರಾತ್ರಿ ಘಟನೆ ಜರುಗಿದೆ. ಬಸವನಗೌಡ ಆಗೋಲಿ (34) ಮೃತರು. ಇವರು ಮಸ್ಕಿ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿಕೊಂಡು ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ರವಾನಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
Read More »
BigTv News
August 11, 2023
ದೆಹಲಿ, ಸುದ್ದಿ
ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಎಚ್ ಎಂ ಪ್ರಚ್ಚಕ್ ಅವರನ್ನು ‘ಉತ್ತಮ ನ್ಯಾಯ ನಿರ್ವಹಣೆ’ಗಾಗಿ ಪಾಟ್ನಾ ಹೈಕೋರ್ಟ್ಗೆ ವರ್ಗಾವಣೆ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. 2019 ರಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಕುರಿತು …
Read More »
BigTv News
August 11, 2023
ದೆಹಲಿ, ಸುದ್ದಿ
ನವದೆಹಲಿ: ಗೂಢಚಾರಿಕೆ ಉದ್ದೇಶಗಳಿಗಾಗಿ ಸಜ್ಜುಗೊಂಡ ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು, ಭಾರತಕ್ಕೆ ಕಳವಳ ಮೂಡಿಸಿದೆ. ಸರಿಯಾಗಿ ಒಂದು ವರ್ಷದ ಹಿಂದೆ ಚೀನಾದ ಇಂಥದೇ ಹಡಗೊಂದು ಶ್ರೀಲಂಕಾ ಬಂದರಿನಲ್ಲಿ ಲಂಗರು ಹಾಕಿ ನಿಂತಿತ್ತು. ಈಗ ಅಂಥದೇ ಘಟನೆ ಮರುಕಳಿಸಿದೆ. ಶ್ರೀಲಂಕಾ ನೌಕಾಪಡೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ನೌಕಾಪಡೆಯ ಹೈ ಯಾಂಗ್ 24 ಎಚ್ಎಒ (HAI YANG 24 HAO) ಹೆಸರಿನ ಯುದ್ಧನೌಕೆಯು ಗುರುವಾರ ಕೊಲಂಬೊ ಬಂದರಿಗೆ …
Read More »
BigTv News
August 11, 2023
ಕರ್ನಾಟಕ, ತುಮಕೂರು, ಸುದ್ದಿ
ತುಮಕೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಾರೆಂದು ಇನ್ನೂ ಅಂತಿಮವಾಗಿಲ್ಲ. ಇದರ ನಡುವೆಯೇ ನೊಣವಿನಕೆರೆಯ ಕಾಲಜ್ಞಾನಿ ಡಾ.ಯಶವಂತ ಗುರೂಜಿ ಅವರು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ ಎಂದು ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಮಾತನಾಡಿರುವ ಗುರೂಜಿ, ಗ್ರಹ-ಗತಿಗಳ ಬಲಾಬಲಗಳನ್ನ ತಾಳೆ ಹಾಕಿ ನೋಡಿದ್ರೆ ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ. ಯತ್ನಾಳ್ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂಬರುವ …
Read More »
BigTv News
August 11, 2023
ದೆಹಲಿ, ಸುದ್ದಿ
ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಮತ್ತು ಅದನ್ನು ಆಡುವ ಆಟಗಾರರ ಬಗ್ಗೆ ಜನರಿಗೆ ಎಲ್ಲಿಲ್ಲದ ಕ್ರೇಜ್. ಇದರಿಂದಾಗಿ ಕ್ರಿಕೆಟ್ ಆಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಹಿಂಬಾಲಕರಿದ್ದಾರೆ. ಭಾರತ ತಂಡದ ಸ್ಟಾರ್ ಕ್ರಿಕೆಟಿಗರು ಕೋಟಿಗಟ್ಟಲೆ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇದರಿಂದ ಅವರು ಅಷ್ಟೇ ಸಂಪಾದನೆಯನ್ನೂ ಮಾಡುತ್ತಿದ್ದಾರೆ ಭಾರತ ತಂಡದ ಮಾಜಿ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆಟಗಾರ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ದಂಡೇ ಇದೆ. ಭಾರತದಲ್ಲಿ ಅಷ್ಟೇ ಅಲ್ಲದೇ ಹೊರ ರಾಷ್ಟ್ರಗಳಲ್ಲೂ …
Read More »
BigTv News
August 11, 2023
ತಮಿಳುನಾಡು, ಸುದ್ದಿ
ತಮಿಳುನಾಡು: ಚೆನ್ನೈ ಎಗ್ಮೋರ್ ನ್ಯಾಯಾಲಯ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಇಎಸ್‌ಐ ಹಣ ಪಾವತಿಸಿಲ್ಲ ಎಂದು ಕಾರ್ಮಿಕರು ರಾಜ್ಯ ವಿಮಾ ನಿಗಮಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಯಪ್ರದಾ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಈಗ ತೀರ್ಪು ಪ್ರಕಟವಾಗಿದ್ದು, ಚೆನ್ನೈ ಎಗ್ಮೋರ್ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜಯಪ್ರದಾ ಅವರು …
Read More »
BigTv News
August 11, 2023
News, ಕರ್ನಾಟಕ, ಜಿಲ್ಲೆ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ:– ಮರಾಠಾ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮರಾಠಾ ವಿದ್ಯಾಪ್ರಸಾರಕ ಮಂಡಳ ಮಂಡಳದ ಚುನಾವಣೆಯಲ್ಲಿ ನನ್ನನ್ನು ಹಾಗೂ ಎಮ್.ಎನ್.ಮೋರೆ ತಂಡವನ್ನು ಬೆಂಬಲಿಸಿ ಅಮುಲ್ಯವಾದ ಮತವನ್ನು ಉದಯಿಸುತ್ತಿರುವ ಸೂರ್ಯನ ಗುರುತಿಗೆ ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಸಿ, ಆಶೀರ್ವದಿಸಬೇಕೆಂದು ಮರಾಠಾ ಸಮಾಜದ ಮುಖಂಡರಾದ ಸುಭಾಸ ಶಿಂದೆ ಕೋರಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮರಾಠಾ ಸಮಾಜ ಬಾಂಧವರು ಅಭಿವೃದ್ಧಿಗೆ ಒತ್ತು ಕೊಟ್ಟು ನಮ್ಮನ್ನು ಜಯಶಾಲಗೊಳಿಸಿದ್ದೀರಿ, ಅದರಂತೆ ಮರಾಠಾ ಮಂಡಳದ ಅನೇಕ ಅಭಿವೃದ್ಧಿ ಹಗಲರುಳು ನಮ್ಮ ತಂಡದೊಂದಿಗೆ …
Read More »
BigTv News
August 11, 2023
News, ಕರ್ನಾಟಕ, ಜಿಲ್ಲೆ, ಸುದ್ದಿ, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಕುಂದಗೋಳ : ಮತಕ್ಷೇತ್ರದ ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದೇವನೂರ ಹಾಗೂ ಬಿಳೇಬಾಳ ಗ್ರಾಮಗಳಲ್ಲಿ ಅಮೃತ ಗ್ರಾಮ ಪಂಚಾಯತ್ ಯೋಜನೆ ಅಡಿ ನಿರ್ಮಾಣಗೊಂಡಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಎಂ.ಆರ್.ಪಾಟೀಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜನರ ಪ್ರೀತಿ ಅಭಿಮಾನಕ್ಕೆ ನನ್ನಿಂದ ಅಭಿವೃದ್ಧಿ ಕೊಡುಗೆ ನೀಡುವೆ ಎಂದರು, ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿರುವದು ಖುಷಿ ತಂದಿದೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಕಾರಣಿಭೂತರಾದ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಅಭಿನಂದಿಸಿದರು
Read More »