ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಎಲೆಕ್ನಿಕ್ ವಾಹನ ಪ್ಲಾಟ್ ಫಾರ್ಮ್‌ನಿಂದ ರೈಲು ಹಳಿಯ ಮೇಲೆ ಬಿದ್ದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಒಂದನೇ ಪ್ಲಾಟ್ ಫಾರ್ಮ್‌ನಿಂದ ಆರನೇ ಪ್ಲಾಟ್ ಫಾರ್ಮ್‌ಗೆ ಇಬ್ಬರು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಎಲೆಕ್ಟ್ರಾನಿಕ್ ವಾಹನ ಏಕಾಏಕಿ ಪ್ಲಾಟ್ ಫಾರ್ಮ್ ಬಿಟ್ಟು ರೈಲು ಹಳಿಗೆ ಬಿದ್ದಿದೆ,ಈ ಸಂದರ್ಭದಲ್ಲಿ ಯಾವುದೇ ರೈಲು ಈ ಹಳಿಯಲ್ಲಿ ಬಾರದ ಹಿನ್ನೆಲೆ ನಡೆಯಬಹುದಾದ ದೊಡ್ಡ ಅನಾಹುತ ತಪ್ಪಿದೆ,ಘಟನೆಯಲ್ಲಿ ಗೋಳಪ್ಪ ಹಾಗೂ ಗೋಪಾಲ್ ಎಂಬುವರಿಗೆ ಗಾಯವಾಗಿದ್ದು ರೈಲ್ವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆ ಟಿಕೆಟ್ ಪರಿವೀಕ್ಷಕ ನಜೀರ್ ಹಾಗೂ ರೈಲ್ವೇ ನಿಲ್ದಾಣದ ಉಪ ವ್ಯವಸ್ಥಾಪಕ ಇಸ್ರೇಲ್ ಹಾಗೂ ಗೇಟ್ ನಲ್ಲಿ ಡ್ಯೂಟಿಯಲ್ಲಿದ್ದ ಪೊಲೀಸ್ ಪೇದೆಯನ್ನು ಅಮಾನತ್ತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಎಲೆಕ್ನಿಕ್ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.