ಮಧುಗಿರಿ: ತುಮಕೂರು -ರಾಯದುರ್ಗ ರೈಲ್ವೆ ಕಾಮಗಾರಿಯನ್ನು 2027ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳಿಸುವ ಜೊತೆಗೆ ಕ್ಷೇತ್ರದ ಶ್ರೀಸಾಮಾನ್ಯರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ತಾಲೂಕಿನ ದೊಡ್ಡೇರಿ ಮತ್ತು ಮಿಡಿಗೇಶಿ ಹೋಬಳಿಗಳಲ್ಲಿ ಗುರುವಾರ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ಉಚಿತ ಸಲಕರಣಾ ವಿತರಣೆ ಮತ್ತು ಸಾರ್ವಜನಿಕ ಕುಂದು ಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಬಾಕಿ ಇರುವ ಹತ್ತಾರು ಕಾಮಗಾರಿಗಳನ್ನು ನನ್ನ ಅವಧಿಯೊಳಗೆ ಮಾಡಿ ಮುಗಿಸುವ ಜೊತೆಗೆ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುತ್ತೇನೆ. ವಿಶೇಷ ಚೇತನರನ್ನು ಬದಲಾಯಿಸಿ ಅವರನ್ನು ದಿವ್ಯಾಂಗರನ್ನಾಗಿ ಮಾಡುವ ಕಾರ್ಯಕ್ರಮ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ದಿವ್ಯಾಂಗರು ಎಂಬ ಸಂದೇಶವನ್ನು ದೇಶಕ್ಕೆ ನೀಡಿದ್ದು, ಅವರು ಯಾವುದೇ ನೋವು ಅನುಭವಿಸುವ ಅಗತ್ಯವಿಲ್ಲ, ಅವರಿಗೆ ಅನುಕಂಪದ ಬದಲು ಅವಕಾಶ ನೀಡಿ, ವಿಕಲಾಂಗರಿಗೆ 2016ರಿಂದ ಸರ್ಕಾರಿ ಉದ್ಯೋಗದಲ್ಲಿ ಶೇ.6 ಮೀಸಲಾತಿ ಕಲ್ಪಿಸಿದೆ.563 .85 ಕೋಟಿ ರು.ನಿಗದಿಪಡಿಸಿ 1341 ಕಟ್ಟಡಗಳನ್ನು ಕಟ್ಟಿದ್ದು, ದೇಶದಾದ್ಯಂತ 8 ಲಕ್ಷ ಶಾಲೆಗಳಲ್ಲಿ ದಿವ್ಯಾಂಗರಿಗೆ ಅನುಕೂಲ ಮಾಡಿ ಕೊಡಲಾಗಿದೆ. ಶೈಕ್ಷಣಿಕ ಸಬಲೀಕರಣದಲ್ಲಿ 879 ಕೋಟಿ ಮೀಸಲು, ಕೌಶಲ್ಯಾಭಿವೃದ್ಧಿ ಯೋಜನೆಯಡಿ 1.40 ಲಕ್ಷ ವಿಕಾಲಂಗರಿಗೆ ತರಬೇತಿ ನೀಡಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

