Breaking News
Featured Video Play Icon

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕನಿಗೆ ಚಾಕು ಇರಿತ..

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನಲೆ ಯುವಕನೊಬ್ಬನಿಗೆ ಚಾಕು ಇರಿತದ ಘಟನೆ ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.ಮಾರುತಿ ನಾರಾಯಣಪುರ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ.

ರೋಹಿತ್ ಅಂಚಿನಮನಿ, ವಿಶಾಲ್ ಬಿಲಾನಾ, ಕುಶಾಲ್ ವಜ್ಜನ್ನವರ್, ಶ್ರೀನಾಥ್ ದುಂಡಿ, ವಿಶಾಲ ದೋಣಿ, ಅಜಯ್ ಹೊಸಮನಿ ಮತ್ತು ಪೃಥ್ವಿರಾಜ್ ಕವದಿ ಬಂಧಿತ ಆರೋಪಿಗಳು ಹಲ್ಲೆ ಮಾಡಿ ಚಾಕುವಿನಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಮಾರುತಿ ನಾರಾಯಣಪುರನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.ಒಂದು ವರ್ಷದ ಹಿಂದೆ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ದುರುಗುಟ್ಟಿ ನೋಡಿದ್ದಾನೆಂದು ವೈಷಮ್ಯ ಸಾಧಿಸುತ್ತಿದ್ದ ದುಷ್ಕರ್ಮಿಗಳು ಮಾರುತಿಗೆ ಚಾಕು ಇರಿದಿದ್ದಾರೆ. ಕೃತ್ಯದ ವೇಳೆ ಹರಿತವಾದ ಆಯುಧಗಳನ್ನು ಬಳಸಿದ್ದು, ಹೀಗಾಗಿ ಆರ್ಮ್ಸ್ ಆಕ್ಟ್ ಅಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 7 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಕೊಟ್ಟಿದ್ದೇವೆ, ಜೊತೆಗೆ ಓರ್ವ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಬಂಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾಂತಪ್ಪ ನಂದಗಾವಿ ತಿಳಿಸಿದ್ದಾರೆ.

Share News

About Shaikh BigTv

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *