ಪ್ರೀತಿಸಿ ಮದುವೆಯಾಗಿದ್ದ ಮಗಳ ಕಿಡ್ನಾಪ್ ಮಾಡಿಸಲು ಅಮ್ಮನೇ ಯತ್ನಿಸಿರುವ ವಿಫಲ ಘಟನೆಯೊಂದು ವರದಿಯಾಗಿದೆ.ಶೋಭಾ ಬೊಮ್ಮಸಂದ್ರ ನಿವಾಸಿ. ಮಗಳು ದಿವ್ಯಾ ಕಳೆದ 8 ವರ್ಷಗಳಿಂದ ಸಂಜಯ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಮಗಳ ಪ್ರೀತಿಗೆ ತಾಯಿ ದಿವ್ಯಾ ವಿರೋಧ ವ್ಯಕ್ತಪಡಿಸಿದ್ದಳು. ಪೋಷಕರನ್ನು ಬಿಟ್ಟು ಪ್ರಿಯಕರನ ಜೊತೆ ವಾರದ ಹಿಂದೆ ದಿವ್ಯಾ ಮದುವೆಯಾಗಿದ್ದಾಳೆ.ಚಂದಾಪುರ ಬಳಿ ಬೈಕ್ ಗೆ ಡಿಕ್ಕಿ ಹೊಡೆಸಿ ದಿವ್ಯಾಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪತಿ ಸಂಜಯ್ ಕಾಲಿಗೆ ಗಾಯಗಳಾಗಿವೆ. ಇಲ್ಲಿಂದ ತಪ್ಪಿಸಿಕೊಂಡ ಜೋಡಿ ಜಿಗಣಿ ಠಾಣೆಗೆ ಬಂದಿದೆ. ಸದ್ಯ ಪೊಲೀಸರು ನವ ಜೋಡಿಗೆ ಆಶ್ರಯ ನೀಡಿದ್ದಾರೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

