Breaking News

ಭ್ರಷ್ಟಾಚಾರಿಗಳಿಗೆ ನಡುಕ ಶುರುವಾಗಿದೆ..! ಬೆಳ್ಳಂ ಬೆಳಗ್ಗೆ ಲೋಕಾ ಶಾಕ್, ಹುಬ್ಬಳ್ಳಿ ಅಧಿಕಾರಿಗೆ ಬಿಗ್ ಶಾಕ್.

ಭ್ರಷ್ಟರಿಗೆ ನಡುಕ ಶುರು..! ಹುಬ್ಬಳ್ಳಿಯಲ್ಲಿ ಲೋಕಾಯುಕ್ತರ ಖಡಕ್ ದಾಳಿ

ಹುಬ್ಬಳ್ಳಿ: ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್..! KSRTC ಚೀಫ್ ಮೆಕ್ಯಾನಿಕಲ್ ಮನೆ-ಕಚೇರಿ ಮೇಲೆ ಏಕಕಾಲಕ್ಕೆ ದಾಳಿಹುಬ್ಬಳ್ಳಿ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ, ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ…

ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ ವಿಭಾಗದಲ್ಲಿ ಚೀಫ್ ಮೆಕ್ಯಾನಿಕಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದೇಶ್ವರ ಹೆಬ್ಬಾಳ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಾಗೂ ಸಾರ್ವಜನಿಕರ ಹಣ ದುರುಪಯೋಗದ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ರೇಡ್ ನಡೆಸಿದ್ದಾರೆ…

ಹುಬ್ಬಳ್ಳಿಯಲ್ಲಿರುವ ಕಚೇರಿ ಹಾಗೂ ನಿವಾಸ, ಜೊತೆಗೆ ಡಾವಣಗೇರಿಯ ಮನೆಯನ್ನು ಗುರಿಯಾಗಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಡಾವಣಗೇರಿ ಲೋಕಾಯುಕ್ತ ಎಸ್‌ಪಿ ಎಸ್..

ಕೌಲಾಪುರೆ ನೇತೃತ್ವದಲ್ಲಿ ಸುಮಾರು 12 ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಮಹತ್ವದ ದಾಖಲೆಗಳು ಹಾಗೂ ಆಸ್ತಿ ವಿವರಗಳ ಪರಿಶೀಲನೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ..

ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬಿಗಿ ಕ್ರಮ ಮುಂದುವರಿದಿದ್ದು, ಇತ್ತೀಚಿನ ಈ ದಾಳಿ ಅಧಿಕಾರಿಗಳ ವಲಯದಲ್ಲಿ ಆತಂಕ ಮೂಡಿಸಿದೆ. ದಾಳಿ ವೇಳೆ ಹೆಚ್ಚಿನ ದಾಖಲೆಗಳು ಪತ್ತೆಯಾಗುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ.

Share News

About Shaikh BigTv

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *