Breaking News

ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ

ನವದೆಹಲಿ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆತ್ಮನಿರ್ಭರ್ ಮಹತ್ವವನ್ನು ಸಾರಲು ವಿಶೇಷವಾಗಿ ಅಲಂಕರಿಸಿದ ಮೆಟ್ರೋವನ್ನು, ದೆಹಲಿ ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಗುಸಿಂಗ್ ಯಮುನಾ ಬ್ಯಾಂಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಾರಂಭಿಸಿದರು.

ಈ ವಿಶೇಷ ರೈಲು ಆಜಾದಿ ಕಾ ಅಮೃತ ಮಹೋತ್ಸವದ ಸ್ಮರಣಾರ್ಥ ಪ್ರಾರಂಭಿಸಲಾಗಿದ್ದು, ಗಣರಾಜ್ಯೋತ್ಸವದ ನಿಮಿತ್ತ ಸಾಂಕೇತಿಕವಾಗಿ ಈ ರೈಲನ್ನು ಆರಂಭಿಸಲಾಗಿದೆ. ಇದು ಜನರ ಸೇವೆಯಲ್ಲಿ ಮುಂದುವರಿಯುತ್ತದೆ.

ಮೆಟ್ರೋದ ವಿಶೇಷತೆ: ತ್ರಿವರ್ಣ ಧ್ವಜದ ಬಣ್ಣಗಳಿಂದ ಕೂಡಿದ ಮೆಟ್ರೋದ ಹೊರಭಾಗವೂ ನೋಡಲು ಆಕರ್ಷಣೀಯವಾಗಿದೆ. ಈ ಮೇಟ್ರೋ ಒಟ್ಟಾರೆ 8 ಬೋಗಿಗಳನ್ನು ಹೊಂದಿದೆ. ಈ ಮೆಟ್ರೋದ ಹೊರಭಾಗದಲ್ಲಿ ಭಾರತೀಯರು, ಇಲ್ಲಿನ ಜನರ ಸಂಸ್ಕೃತಿ ಮತ್ತು ಕಳೆದ 75 ವರ್ಷಗಳಲ್ಲಿನ ಸಾಧನೆಗಳ ಇತಿಹಾಸವನ್ನು ಚಿತ್ರಿಸುವ ಮೂಲಕ ಆತ್ಮನಿರ್ಭರ್ ಭಾರತದ ಹೊಸ ಚೈತನ್ಯವನ್ನು ಮೂಡಿಸಿದ್ದಾರೆ. ಕೊರೊನಾ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *