ರಾಮನಗರ: ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾಜಿ ಸಿಎಂ ಸಿದ್ದರಾಮಯ್ಯಗೆ ನೇರವಾಗಿ ಸವಾಲ್ ಹಾಕಿದ್ದಾರೆ. ನಗರದ ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ವೀಕ್ಷಣೆ ಮಾಡಿದ ಅಶ್ವಥ್ ನಾರಾಯಣಸಿದ್ದರಾಮೋತ್ಸವದಿಂದ ನಮಗೆ ಆತಂಕ ಇಲ್ಲ, ಅದು ಅವರ ಪಕ್ಷದ ನಾಯಕರಲ್ಲಿ ಇದೇ.
ಡಿಕೆಶಿ, ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ ನಡುವೆ ಆತಂಕ ಇದೇ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆ 100/100 ನೆಲೆಯಿಲ್ಲ. ಅದು ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರು ಹೋಗ್ತಾರೆ. ಶಿವಕುಮಾರೊತ್ಸವ ಮಾಡುವ ವಿಚಾರವಾಗಿ ಮಾತನಾಡಿ ಅದು ಅವರ ಪಕ್ಷ, ಏನೇನು ಉತ್ಸವ ಮಾಡ್ತಾರೋ ಮಾಡಿಕೊಳ್ಳಲಿ, ನಮಗೆ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.
RSS ವಿಚಾರವಾಗಿ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಮಾತನಾಡಿ ಸಿದ್ದರಾಮಯ್ಯ ಮೊದಲು ಅವರ ಆಳ, ಅಗಲ ನೋಡಿಕೊಳ್ಳಬೇಕು. ಪಿಎಸ್‌ಐ ಹಗರಣದ ಪಿತಾಮಹಾ ಸಿದ್ದರಾಮಯ್ಯ, ಅವರ ಕಾಲದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಮಾತನಾಡಲು ಶುರು ಮಾಡಲಿ. ಇವರ ಕಾಲದಲ್ಲಿ ಶಾಂತಕುಮಾರ್ ತನಿಖೆ ಮಾಡುತ್ತಿದ್ದರು/ ಅರ್ಧಕ್ಕೆ ನಿಂತು ಹೋಯ್ತು. ಯಾಕೆ ಸಿದ್ದರಾಮಯ್ಯ ನವರೇ ಇದರ ಬಗ್ಗೆ ಮಾತನಾಡಿ, ಪಿಎಸ್‌ಐ ಹಗರಣದ ಮೂಲ ಸಿದ್ದರಾಮಯ್ಯ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





