Breaking News

ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ಬಿಜೆಪಿ ಠಕ್ಕರ್


ಚಿತ್ರದುರ್ಗ: ಬಿಜೆಪಿಯ 40 % ಕಮಿಷನ್ ದಂಧೆಯ ಕುರಿತು ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ಬಿಜೆಪಿ ಪಿಎಫ್ ಐ ಭಾಗ್ಯದ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಗೆ ಠಕ್ಕರ್ ನೀಡಲು ಮುಂದಾಗಿದೆ.

ಕಾಂಗ್ರೆಸ್ ನವರು ಪೇಸಿಎಂ ಪೋಸ್ಟರ್ ಅಂಟಿಸಿದ ರೀತಿಯಲ್ಲೇ ಬಿಜೆಪಿ ಕೂಡಾ ಚಳ್ಳಕೆರೆ ಪಟ್ಟಣದ ಮೂಲೆ ಮೂಲೆಯಲ್ಲಿ PFI ಭಾಗ್ಯ ಎಂದು ಪೋಸ್ಟರ್ ಅಂಟಿಸಿದೆ. ಕಾಂಗ್ರೆಸ್ ನವರು ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಸ್ಥಳಗಳಲ್ಲಿ ಈ ಪೋಸ್ಟರ್ ಅಂಟಿಸಲಾಗಿದೆ.

ಇದರಲ್ಲಿ ಸಿದ್ರಾಮುಲ್ಲಾನ ಉಗ್ರಭಾಗ್ಯ ಲೀಲೆಗಳನ್ನು ತಿಳಿಯಲು ಸ್ಕ್ಯಾನ್ ಮಾಡಿ ಎಂದು ಪೋಸ್ಟರ್ ಅಂಟಿಸಲಾಗಿದೆ. ಪೋಸ್ಟರ್ ನಲ್ಲಿ ಸಿದ್ಧರಾಮಯ್ಯ ಟಿಪ್ಪು ಪೇಟ ಧರಿಸಿ ತಲವಾರ್ ಹಿಡಿದ ಭಾವಚಿತ್ರ ಮುದ್ರಿಸಲಾಗಿದೆ. ಚಳ್ಳಕೆರೆಗೆ ಭಾರತ್ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಭಾರತ್ ಜೋಡೋ ಯಾತ್ರೆಯ ಫ್ಲೆಕ್ಸ್ ಅಳವಡಿಸಿದ ಸ್ಥಳದಲ್ಲೂ ಪಿಎಫ್ ಐ ಭಾಗ್ಯದ ಪೋಸ್ಟರ್ ಅಂಟಿಸಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *