Breaking News

ಭಾರತ್ ಜೋಡೋ ಪಾದಯಾತ್ರೆಯ ಬಂದೋಬಸ್ತ್ ಗೆಂದು ನೇಮಿಸಿದ ಪೋಲಿಸ್ ಪೆದೆ ಸಾವು

ಚಿತ್ರದುರ್ಗ : ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆಯ ಬಂದೋಬಸ್ತ್ ಗೆಂದು ನಿಯೋಜಿಸಲ್ಪಟ್ಟಿದ್ದ ಜಿ. ಧನಲಕ್ಷ್ಮೀ (29) ಮಹಿಳಾ ಪೊಲೀಸ್ ಪೇದೆಯೋರ್ವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಪೇದೆ ನಿನ್ನೆ (ಅ.10) ಕೆಂಕೆರೆ ಗೊಲ್ಲರಹಟ್ಟಿ ಬಳಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಾವನ್ನಪ್ಪಿದರು. ಅವರ ರಕ್ತದಲ್ಲಿ ಬಿಳಿ ರಕ್ತ ಕಣಗಳ ಕೊರತೆಯಿತ್ತು ಆ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Share News

About BigTv News

Check Also

ರಾತ್ರೋರಾತ್ರಿ ಪುಂಡರಿಂದ ದಾಳಿ ಬೈಕ್ ಕಾರುಗಳು ಜಕಮ್.

ಕಳೆದ ರಾತ್ರಿ ಚಿತ್ರದುರ್ಗದ ಗ್ರಾಮ ಒಂದರಲ್ಲಿ ಏಕಾಏಕಿ ಕೆಲವು ಪುಂಡರು ಕೇರಿಯ ಮೇಲೆ ದಾಳಿ ಮಾಡಿದ್ದಾರೆ. ಒಟ್ಟು ಒಂಬತ್ತು ಮನೆಗಳ …

Leave a Reply

Your email address will not be published. Required fields are marked *