Breaking News

ಹುಬ್ಬಳ್ಳಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಹ್ಯಾಟ್ಸಫ್..!

ಹುಬ್ಬಳ್ಳಿ: ಪೊಲೀಸ್ ಅಂದ್ರೆ ನೂರೆಂಟು ಕೆಲಸದ ಒತ್ತಡ.. ಇಂತಹ ಒತ್ತಡ ಸಂದರ್ಭದಲ್ಲಿ ಈಗ ಮಾನವೀಯತೆ ಮೆರೆಯೋದಿದೇ ಅಲ್ಲ,,, ಅದು ಬಹಳ ವಿರಳ.. ಆದ್ರೆ ನಮ್ಮ ಹುಬ್ಬಳ್ಳಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಾಡಿರುವ ಕೆಲಸ ನೋಡಿದ್ರೆ ನೀವು ಸೆಲ್ಯೂಟ್ ಹೊಡೆಯೊದು ಗ್ಯಾರಂಟಿ….

ಎಸ್… ಹೀಗೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಂತೋಷ ಪವಾರ ಅವರಿಗೆ ಧನ್ಯವಾದ ತಿಳಿಸುತ್ತಿರುವ ವ್ಯಕ್ತಿ… ಇರಲಿ ಬೀಡಿ ಸಾರ್ ಅದು ನಮ್ಮ ಕರ್ತವ್ಯ ಎನ್ನುತ್ತಿರುವ ಪೊಲೀಸ್… ಇಂತಹ ದೃಶ್ಯ ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಹೌದು,,, ದೀಪಾವಳಿ ದಿನದಂದು ಕೇಶ್ವಾಪೂರ ನಿವಾಸಿ ಲಕ್ಷ್ಮೀ ಅಮರಾವತಿ ಎಂಬ ಮಹಿಳಯೊರ್ವಳು‌ ಆಟೋದ ಮೂಲಕ ಮಾರ್ಕೆಟ್ ಗೆ ಹೋಗುತ್ತಿರುವ ಮುನ್ನ, ಚಿಟಗುಪ್ಪಿ ಆಸ್ಪತ್ರೆ ಬಳಿ ಮಹಿಳೆ ಹತ್ತಿರ ಇದ್ದ ಬ್ಯಾಗ್ ಕೆಳಗೆ ಬಿದ್ದಿದೆ. ಆದ್ರೆ ಆ ಬ್ಯಾಗ್ ಬಿದ್ದಿರುವುದು ಆಕೆಯ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ, ಹಾಗೇ ಮಾರ್ಕೆಟ್‌ಗೆ ಹೋಗಿದ್ದಾಳೆ. ಮಾರ್ಕೆಟ್ ಗೆ ಹೋಗಿ ನೋಡಿದ್ರೆ ಹಣವಿದ್ದ ಬ್ಯಾಗ್ ಮಿಸ್ ಆಗಿತ್ತು. ಅದೇ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಂತೋಷ ಪವಾರ್, ಅವರಿಗೆ ಆ ಬ್ಯಾಗ್ ಸಿಕ್ಕಿತ್ತು. ಕೂಡಲೆ ಉಪನಗರ ಪೊಲೀಸ್ ಠಾಣೆಗೆ ತಿಳಿಸಿ ಆ ಬ್ಯಾಗನಲ್ಲಿದ್ದ ಮೊಬೈಲ್ ಗೆ ಕರೆ ಮಾಡಿ, ಬ್ಯಾಗ್ ಹಾಗೂ ಬ್ಯಾಗನಲ್ಲಿದ್ದ 48 ಸಾವಿರ ಹಣ ಮರಳಿಸಿ ಮಾನವೀಯತೆ ಮೇರೆದಿದ್ದಾರೆ. ಇನ್ನು ಇವರ ಕಾರ್ಯಕ್ಕೇ ಮಹಿಳೆ ಪತಿ ಧನ್ಯವಾದಗಳನ್ನು ತಿಳಿಸಿದ್ದಾರೆ..

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *