Breaking News

ಆಟೋ ಪಾಲ್ಟಿ ಹತ್ತು ವಿದ್ಯಾರ್ಥಿಗಳಿಗೆ ಗಂಭೀರ ಗಾಯ,ಪ್ರಕರಣ ದಾಖಲು

ತಿ.ನರಸೀಪುರ : ಶಾಲಾ ಮಕ್ಕಳನ್ನ ಕರೆದೊಯ್ಯುತ್ತಿದ್ದ ಆಪೇ ಆಟೋ ಪಲ್ಟಿಯಾಗಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.


ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಗಾಯಗೊಂಡ ಶಾಲಾ ಮಕ್ಕಳಿಗೆ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಈ ಪೈಕಿ ಗಂಭೀರ ಗಾಯಗೊಂಡ ಮೂವರು ಮಕ್ಕಳನ್ನ ಹೆಚ್ಚಿನ ಚಿಕಿತ್ಸೆಗೆ ಕೆ ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನರಸೀಪುರದ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ. ತಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

2ನೇ ಹೆಂಡತಿಯ ಮಗ ತಂದೆ ಎದೆಗೆ ಚೂರಿ ಹಾಕಿ ಕೊಂದು ಪರಾರಿ!!

ಮೈಸೂರಿನ ಶಾಂತಿನಗರದಲ್ಲಿ 2ನೇ ಹೆಂಡತಿ ಪುತ್ರನಾದ ಮತೀನ್ ಮನೆಗೆ ಬರುವಂತೆ ಕರೆ ಮಾಡಿದ್ದಾನೆ. ಆದರೆ ತಂದೆ ಮನೆಗೆ ಬರ್ತಿದಂತೆ ಎದೆಗೆ …

Leave a Reply

Your email address will not be published. Required fields are marked *