ಹುಬ್ಬಳ್ಳಿ: ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಷಯ ಚರ್ಚೆಗೆ ತರುವ ಮುನ್ನವೇ ಎಲ್ಲರ ಗಮನಕ್ಕೆ ತಂದ ನಂತರವೇ ಚರ್ಚೆ ಮಾಡುತ್ತವೇ. ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೇಯರ್ ವೀಣಾ ಭರದ್ವಾಡ ಹೇಳಿದರು.
ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಭಿವೃದ್ಧಿ ವಿಷಯಗಳ ಚರ್ಚೆ ಬಗ್ಗೆಯೇ ಹೆಚ್ಚಿನ ವಿಷಯ ತರಲಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರ ಹಾಗೂ ಸಭಾ ನಾಯಕರ ಗಮನಕ್ಕೆ ತಂದು ಹೆಚ್ಚಿನ ವಿಷಯಗಳನ್ನು ಚರ್ಚೆಗೆ ತರಲಾಗಿದೆ ಎಂದರು.
ಜನರ ಸಮಸ್ಯೆಗಳ ಬಗ್ಗೆ ಹಾಗೂ ಪೌರಕಾರ್ಮಿಕರ ಬಗ್ಗೆ ನಮಗೂ ಕಾಳಜಿಯಿದೆ. ಈ ಬಗ್ಗೆ ನಾವು ಕೂಡ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಗಲಾಟೆ ಮಾಡಿ ಗೊಂದಲ ಸೃಷ್ಟಿ ಮಾಡಿದ್ದು, ಕಾಂಗ್ರೆಸ್ ಸದಸ್ಯರೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





