ಹುಬ್ಬಳ್ಳಿ: ಕೆಲವು ದಿನಗಳಹಿಂದೆ ಡಿಸಿಎಂ ಡಿ ಕೆ ಶಿವಕುಮಾರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಆದರೆ ಆ ಹೇಳಿಕೆ ಈಗ ನಿಜ ಆಗುವ ಕಾಲ ಸನ್ನಿಹಿತ ವಾಗಿದೆ ಅಂತಲೇ ಹೇಳಬಹುದು….ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಮತ್ತು ವಾಕ್ ಚಾತುರ್ಯ ಹಾಗು ಹೊಸಮುಖ ಇರುವ ಪಕ್ಷ ನಿಷ್ಠ ಕಾರ್ಯಕರ್ತರಿಗೆ ಈ ಭಾರಿ ಪಕ್ಷ ಮುನ್ನಣೆ ನೀಡುತ್ತದೆ ಅಂತ ಹೇಳಿದ ಬೆನ್ನಲೆ ಹುಬ್ಬಳ್ಳಿಯ ಕಾಂಗ್ರೆಸ್ ಯುವ ನಾಯಕ ರಜತ್ ಉಳ್ಳಾಗಡ್ಡಿ ಮಠ ನಡೆ ಈಗ ಅದಕ್ಕೆ ಮತ್ತಷ್ಟು ಪುಷ್ಟಿ ತಂದಿದೆ..ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಬಿಟ್ಟು ಕೊಟ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ತ್ಯಾಗ ಮಾಡಿ ಪಕ್ಷಕ್ಕೆ ದುಡಿದಿದ್ದ ರಜತ್ ಇಂದು ಲೋಕ ಸಭಾ ಚುನಾವಣೆಗೆ ತಯಾರಾಗಿದ್ದಾರೆ ಅಂತಲೇ ಹೇಳಬಹುದು

..ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಜತ್ ಮಿಂಚಿನ ಸಂಚಾರ ಒಂದು ಸುತ್ತಿನ ಪಕ್ಷ ಸಂಘಟನೆಯನ್ನ ಕಾರ್ಯಕರ್ತರ ಬಳಿ ನೇರವಾಗಿ ತೆರಳಿ ಮುಗಿಸಿದ ರಜತ್ ಬೊಮ್ಮಯಿ, ಜೋಶಿಗೆ ಮಗ್ಗಲದ ಮುಳ್ಳಾದ ಯುವ ನಾಯಕನ ನಡೆ ಹೌದು…ಶಿಗ್ಗಾಂವ ತಾಲೂಕಿನಲ್ಲಿ ರಜತ್ ಹವಾ ಜೋರಾಗಿ ಸದ್ದು ಮಾಡ್ತಾ ಇದೆ ಯಾಕಂದ್ರೆ ಅದಕ್ಕೆ ಸಾಕ್ಷಿ ನಮ್ಮ ಹತ್ತಿರ ಇದೆ..

ಶಿಗ್ಗಾಂವ ತಾಲೂಕಿನ ಅತ್ತಿಗೇರಿ ಗ್ರಾಮದ ಧಾರ್ಮಿಕ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆಯಲ್ಲಿ ರಜತ್ ಉಳ್ಳಾಗಡ್ಡಿ ಮಠ ಅವರ ಹೆಸರು ನೋಡಿ ಕೆಲ ಕಾಂಗ್ರೆಸ್ ನಾಯಕರೆ ದಂಗಾಗಿದ್ದಾರೆ ..ಇನ್ನು ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿರುವ ರಜತ್ ನೇರವಾಗಿ ಹಳ್ಳಿಗಳಿಗೆ ತೆರಳಿ ಕಾರ್ಯಕರ್ತರಿಗೆ ಹತ್ತಿರವಾಗುತ್ತಿರುವ ತಮ್ಮ ಸರಳನಡತೆಗೆ ಪಕ್ಕದ ಶಿಗ್ಗಾಂವ ಕ್ಷೇತ್ರದ ಕಾರ್ಯಕರ್ತರ ಹುಮ್ಮಸ್ಸಿಗೆ ಮತ್ತಷ್ಟು ಬಲ ತಂದಿದೆ ಅಂತಲೇ ಹೇಳಬಹುದು…. ಇನ್ನು ಅತ್ತಿಗೇರಿಯಲ್ಲಿ ನಾಳೆ ಸಾಯಂಕಾಲ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ರಜತ್ ಭಾಗಿ ಆದರೆ ಲೋಕ ಸಭಾ ಅಖಾಡಕ್ಕೆ ಬಹಿರಂಗ ಎಂಟ್ರಿ ಗೆ ಗ್ರಿನ್ ಸಿಗ್ನಲ್ ಸಿಕ್ಕದೆ ಅಂತಲೇ ಹೇಳಬಹುದು..ರಜತ್ ನಡೆ ಹಳ್ಳಿ ಕಡೆ ನಾಳೆ ಸಿಗುತ್ತೆ ಮತ್ತಷ್ಟು ಸಾಕ್ಷಿ!!!!
bigtvnews | Hubli Dharwad News | Kannada News | Karnataka News Hubli News | News In Hubli | Local news

