Breaking News

ಸ್ಥಳೀಯರ ಸಹಾಯದಿಂದ ಒಬ್ಬ ಆರೋಪಿಯನ್ನು ಬಂಧನ….

ನವಲಗುಂದ: ನವಲಗುಂದ ಪಟ್ಟಣದಲ್ಲಿ ನವೆಂಬರ್ 1ರಂದು ಸಂಕವ್ವನ ಬಾವಿ ಹತ್ತಿರ ಇರುವ ವಿಕಾಸ ತದ್ದೆವಾಡಿ ಅವರ ಮನೆ ಕಳುವಾಗಿತ್ತು. ಸ್ಥಳೀಯರ ಸಹಾಯದಿಂದ ಒಬ್ಬ ಆರೋಪಿಯನ್ನು ಬಂಧಿಸಲಾಗಿತ್ತು.ಪ್ರಕರಣವನ್ನು ಎಸ್.ಪಿ ಡಾ.ಗೋಪಾಲ್ ಬ್ಯಾಕೋಡ, ಡಿ.ಎಸ್.ಪಿ. ಎಸ್.ಎಂ.ನಾಗರಾಜ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆಗೆ ಸಿಪಿಐ ರವಿಕುಮಾರ ಕಪ್ಪತನವರ ಹಾಗೂ ಪಿ.ಎಸ್.ಐ ಜನಾರ್ಧನ ಭಟ್ನಳ್ಳಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಶೋಧ ಕಾರ್ಯಾಚರಣೆ ತೀವ್ರವಾಗಿ ಹಮ್ಮಿಕೊಂಡಾಗ ಮಧ್ಯಪ್ರದೇಶ ರಾಜ್ಯದ ಜಿಲ್ಲೆಯಾದ ಧಾರಾ, ಕುಕ್ಷ್ಮೀ ತಾಲೂಕಿನ ಗೇಟಾ ಗ್ರಾಮದ ರವಿ ನವಲಸಿಂಗ ಎಂಬ ಆರೋಪಿ ಸೆರೆ ಸಿಕ್ಕರೆ ಇನ್ನು ಇಬ್ಬರು ಖದೀಮರು ಪರಾರಿಯಾಗಿದ್ದರು. ಆದರೂ ಸಿಕ್ಕ ಆರೋಪಿಯನ್ನು ವಿಚಾರಿಸಿದಾಗ ಆತನು ಬಚ್ಚಿಟ್ಟ 1 ಕೆ.ಜಿ.ಯ ಬೆಳ್ಳಿ ತಂಬಿಗೆ, ರಾಡೋ ಮತ್ತು ರೋಲೆಕ್ಸ್ ವಾಚ್ ಸೇರಿದಂತೆ ಸುಮಾರು 2 ಲಕ್ಷ ರೂಪಾಯಿಗಳ ಕಿಮ್ಮತ್ತಿನ ಲಾರಿ ಸಹಿತ ಮೌಲ್ಯಗಳೊಂದಿಗೆ ಕಳ್ಳತನಕ್ಕೆ ಬಳಸಿದ ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯವೈಖರಿಗೆ ಎಸ್.ಪಿ ಡಾ. ಗೋಪಾಲ್ ಬ್ಯಾಕೋಡ ಅವರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ. ಹಾಗೂ ಇನ್ನು ತನಿಖೆ ಮುಂದುವರೆದಿದೆ. ಈ ವೇಳೆ ರಾಜು ಮಲ್ಲನಗೌಡರ, ವಿಜಯ ಸಳಕಿ, ರಮೇಶ ಭಗವತಿ, ಎಸ್.ಎಚ್.ಹುಚ್ಚಣ್ಣವರ, ಎಸ್.ಬಿ.ಹುರಳಿ, ಮುತ್ತು ಭಜಂತ್ರಿ, ಜಿ.ಬಿ.ಮೇಟಿ, ಪರವಯ್ಯ ಸುತಗಟ್ಟಿ, ಸಲೀಮ್ ಮುತ್ತೇಖಾನ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share News

About BigTv News

Check Also

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …

Leave a Reply

Your email address will not be published. Required fields are marked *