ನವಲಗುಂದ: ಪಟ್ಟಣದ ಬಸ್ ನಿಲ್ದಾಣದಲ್ಲಿ ಮಾಂಗಲ್ಯ ಸರ, ಓಲೆ ಸೇರಿದಂತೆ ಇನ್ನಿತರೇ ವಸ್ತುಗಳು ಕಳ್ಳತನ ಆಗುತ್ತಿವೆ. ಈ ಕುರಿತು ಹಲವಾರು ಬಾರಿ ಪತ್ರಿಕೆಯಲ್ಲಿ ಬಂದರೂ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕರಿಗೆ ಕಳ್ಳತನ ಆಗುವುದು ಗಮನಕ್ಕೆ ಬಂದರೂ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನವಲಗುಂದ ತಾಲ್ಲೂಕು ವಿಷ್ಣು ಸೇನಾ ಸಮಿತಿಯಿಂದ ತಹಶೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ತಾಲ್ಲೂಕಾ ಅಧ್ಯಕ್ಷ ನಿಂಗಪ್ಪ ಮನಕವಾಡ ಮಾತನಾಡಿ, ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದರೂ ಕೂಡಾ ರಾಜಕಾರಣಿಗಳಾಗಲಿ ಘಟಕ ವ್ಯವಸ್ಥಾಪಕರಾಗಲಿ ಇತ್ತ ಕಡೆ ಗಮನ ಹರಿಸದೇ ಇರುವುದು ಪ್ರಯಾಣಿಕರ ದುರ್ವಿಧಿ ಎನ್ನುವಂತಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕ್ಯಾಮೆರಾಗಳು ಇದ್ದು ಇಲ್ಲದಂತೆ ಆಗಿದೆ. ಪಟ್ಟಣದಲ್ಲಿ ಏನೇ ಕಳ್ಳತನವಾದರು ಕಳ್ಳರನ್ನು ಗುರುತಿಸಲು ಖಾಸಗಿ ಮಾಲೀಕರ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾದ ವಿಡಿಯೋವನ್ನು ಪುಟೇಜಗಳನ್ನು ಪೊಲೀಸರು ತೆಗೆದುಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಮೊದಲು ಅಳವಡಿಸಬೇಕು ನಂತರ ದಿನಗಳಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿಯೂ ಕ್ಯಾಮರಾ ಅಳವಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಿಜಯಕುಮಾರ ಎಲಿಗಾರ, ಸುಧೀರಕುಮಾರ ಶೆಟ್ಟಿ, ವಿನಾಯಕ ಅಥಣಿ, ಧರ್ಮರಾಜ ಗುಳೇದ, ಆನಂದ್ ಕೊಟಗಿ, ಬಸವರಾಜ್ ಹತ್ತಿಶೆಟ್ಟರ, ಮುತ್ತು ಬಡಿಗೇರ್, ಶಿವು ಬಾಡಗೊಂಡಿ ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





