Breaking News

admin

ಕೋಲಾರದಲ್ಲಿ ಕೆರೆ ಜಾಗ ಒತ್ತುವರಿ ತೆರವು

ಕೋಲಾರ : ಕೋಲಾರದಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದ ಕೆರೆ ಅಂಗಳವನ್ನು ಶನಿವಾರ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಕೋಲಾರ ತಾಲೂಕಿನ ಹೋಳೂರು ಗ್ರಾಮದ ಹೊಸಕೆರೆ ಅಂಗಳವನ್ನು ತೆರವು ಮಾಡಲಾಗಿದೆ. ಪೊಲೀಸ್ ಬೆಂಗಾವಲಿನಲ್ಲಿ ಒತ್ತುವರಿಯನ್ನು ತೆರವು ಮಾಡಲಾಗಿದೆ.ಕೋಲಾರ ತಾಲೂಕಿನ ಹೋಳೂರು ಗ್ರಾಮದಲ್ಲಿ ಹೊಸದಾಗಿ ಕೆರೆ ಮಾಡಬೇಕೆಂದು 40 ವರ್ಷಗಳ ಹಿಂದೆ ಸರ್ಕಾರ ಜಾಗವನ್ನು ಗುರುತಿಸಿತ್ತು. ಕೆರೆ ಅಭಿವೃದ್ದಿಗೊಳಿಸುವ ಜಾಗದಲ್ಲಿನ 28 ಎಕರೆ ಪ್ರದೇಶದಲ್ಲಿ ಅನುಭವದಲ್ಲಿದ್ದ ಇಪ್ಪತ್ತೊಂದು ಮಂದಿ ಕೃಷಿಕರಿಗೆ ಸರ್ಕಾರವು ಪರಿಹಾರವನ್ನು ಕೊಟ್ಟು ಜಾಗವನ್ನು ವಶಕ್ಕೆ …

Read More »

ಸಿದ್ದು ಪರ ರಮೇಶ ಕುಮಾರ ಬ್ಯಾಟಿಂಗ್

ಕೋಲಾರ;ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಒಬ್ಬರೆ ಸೂಕ್ತ. ಸಿದ್ದರಾಮಯ್ಯ ಗಿಂತ ಯೋಗ್ಯ ನಾಯಕ ಪಕ್ಷದಲ್ಲಿ ನಮಗೆ ಸಿಗೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪರ ರಮೇಶ್ ಕುಮಾರ್ ಬ್ಯಾಟಿಂಗ್ ಮಾಡಿದರು. ಕೋಲಾರದ ಸುಗಟೂರು ಗ್ರಾಮದಲ್ಲಿಂದುವ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಒಬ್ಬರೇ ಅತ್ಯಂತ ಯೋಗ್ಯ ವ್ಯಕ್ತಿ ಎಂದರು. ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ವಿಚಾರವಾಗಿ ಮಾತನಾಡಿ,ಇಂತಹ ಯಾವುದೇ ಚರ್ಚೆಯಾಗಿಲ್ಲ ಎಲ್ಲಾ ಊಹಾಪೋಹ.ನಾನು ಮತ್ತೆ ಕಾಂಗ್ರೆಸ್ ಸದಸ್ಯತ್ವ …

Read More »

ಜಗಳೂರು ಪಟ್ಟಣದಲ್ಲಿ ಮಳೆಗಾಗಿ ದೇವರ ಸಂತೆ

ದಾವಣಗೆರೆ : ಕಳೆದ ಹಲವು ವರ್ಷಗಳಿಂದ ಮಳೆಯಿಲ್ಲದೆ ರೈತರು ಕಷ್ಟವನ್ನು ಅನುಭವಿಸುತ್ತಿದ್ದು, ಉತ್ತಮ ಮಳೆಯಾಗಲೆಂದು ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ದೇವರ ಸಂತೆ ಮಾಡಲಾಯಿತು. ಪಟ್ಟಣದ ದೊಡ್ಡ ಮಾರಿಕಾಂಬಾ ದೇವಸ್ಥಾನದ ಮುಂಭಾಗ ಪೂಜೆ‌ ಸಲ್ಲಿಸಿ ಸಂತೆ ನಡೆಸಿದ್ರು… ಮೂರು ವಾರ ಸಂತೆ ದೇವಸ್ಥಾನದ ಮುಂಭಾಗ ಮಾಡಿದ್ರೆ ಮಳೆ ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.. ಅದ್ದರಿಂದ ಕಳೆದ ಹಲವು ವರ್ಷಗಳಿಂದ ಉತ್ತಮ‌ ಮಳೆಯಾಗದೇ ರೈತರು ಕಷ್ಟದಲ್ಲಿದ್ದು, ಈ ಬಾರಿ ಮಳೆಯಾದ್ರೆ …

Read More »

ಅನಂತಕುಮಾರ ಸ್ವಾಮೀಜಿ ಅವರ 83ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮ

ಮಂಡ್ಯ: ನಗರದ ಅಭಿನವ ಭಾರತಿ ಪಿ.ಯು ಕಾಲೇಜಿನ ಶ್ರೀ ವೆಂಕಟೇಶ್ವರ ಸಭಾಂಗಣದಲ್ಲಿ ಜರುಗಿದ, ಭಾರತಿ ವಿದ್ಯಾಸಂಸ್ಥೆ ಹಾಗೂ ಶ್ರೀ ವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್( ರಿ ) ನ ಸಂಸ್ಥಾಪಕರಾದ ಅನಂತಕುಮಾರ ಸ್ವಾಮೀಜಿ ಅವರ 83ನೇ ವರ್ಷದ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಶ್ರೀ ಅನಂತಕುಮಾರ ಸ್ವಾಮೀಜಿ ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಲಯದ ನಿವೃತ್ತ ನ್ಯಾಯಧೀಶರಾದ ಶ್ರೀಯುತ ನಾಗ್ ಮೋಹನದಾಸ್ ರವರು ಹಾಗೂ ಆಧ್ಯಾತ್ಮಿಕ ಚಿಂತಕರಾದ …

Read More »

ಕಾಂಗ್ರೆಸ್ ಜೊತೆ ಇನ್ನು ಮೈತ್ರಿ ಸಾಧ್ಯವೇ ಇಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಮಂಡ್ಯ: ನಿಖಿಲ್ ಕುಮಾರಸ್ವಾಮಿ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಮ್ಮ ಕುಟುಂಬದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎನ್ನುವುದು ಮಾಧ್ಯಮಗಳ ಸೃಷ್ಠಿ..ಸುಳ್ಳಿನ ಕಂತೆ…ಕಾಂಗ್ರೆಸ್ ಜೊತೆ ಇನ್ನು ಮುಂದೆ ಮೈತ್ರಿ ಬಂದ್, ಉಪಚುನಾವಣೆಯಲ್ಲಿ ಎಲ್ಲಾ 17 ಸ್ಥಾನಗಳಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ರಾಜ್ಯದ ಜನರ ಹಿತಕ್ಕಾಗಿ ಮತ್ತು ನೊಂದವರ ಕಣ್ಣೀರನ್ನು ಒರೆಸಲು ನಾನು ರಾಜಕಾರಣ ಮಾಡುತ್ತಿದ್ದೇನೆಯೇ ಹೊರತು ಸ್ವಾರ್ಥ ಸಾಧನೆಗಾಗಿ ಅಲ್ಲ..ಕೋಮುವಾಧಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಇಷ್ಟವಿಲ್ಲದಿದ್ದರೂ …

Read More »

ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

ಮಂಡ್ಯ : ಜಿಲ್ಲೆ ಕೆ. ಆರ್. ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದಲ್ಲಿ ಗುಂಡಣ್ಣ ಲಲಿತಮ್ಮ ದಂಪತಿಗಳನ್ನು ಹತ್ಯೆಮಾಡಿ ತಲೆಮರೆಸಿಕೊಂಡಿದ್ದ ಪಕ್ಕದ ಮನೆಯ ವಾಸಿಯೇ ಆದ ಬೋರೇಗೌಡರ ಮಗ ಯೋಗೇಶನನ್ನು ಕೆ.ಆರ್.ಪೇಟೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತಲೆಗೆ ಮತ್ತು ಮುಖಕ್ಕೆ ಹೊಡೆದು ಹತ್ಯೆಮಾಡಿರುವುದಾಗಿ ಯೋಗೇಶ ಒಪ್ಪಿಕೊಂಡಿದ್ದಾರೆ ಎಂದು ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು‌. ಜೋಡಿಕೊಲೆ ಹತ್ಯೆ ಆರೋಪಿಯನ್ನು ಎಎಸ್ ಪಿ …

Read More »

ಕವಿ-ಕಾವ್ಯ ಸಂಭ್ರಮಕ್ಕಾಗಿ ಹಾಸನದತ್ತ ಸಾಹಿತಿ‌ ಡಾ. ಸಿಪಿಕೆ ಪ್ರಯಾಣ

ಹಾಸನದಲ್ಲಿ ನಡೆಯಲಿರುವ ಕವಿ-ಕಾವ್ಯ ಸಂಭ್ರಮದಲ್ಲಿ ಭಾಗವಹಿಸಲು ಪ್ರಸಿದ್ಧ ಸಾಹಿತಿ ಡಾ. ಸಿಪಿಕೆ ಅವರು ಹಾಸನದತ್ತ ಪ್ರಯಾಣ ಬೆಳೆಸಿದರು.ಈ ಸಂದರ್ಭದಲ್ಲಿ ಯುವ ಕವಿ ಮಿತ್ರರಾದ ಡಾ. ಬಿ. ಬಸವರಾಜು, ಡಾ. ಮಹೇಶ್ ಚಿಕ್ಕಲೂರು, ಟಿ. ಲೋಕೇಶ್ ಹುಣಸೂರು ಇದ್ದರು.

Read More »

ಮಕ್ಕಳಲ್ಲಿ ವಿಜ್ಞಾನದತ್ತ ಆಸಕ್ತಿ ಮೂಡಿಸುವದು ಅಗತ್ಯ: ಡಾ. ದೇವಿಪ್ರಸಾದ ಶೆಟ್ಟಿ

ಆನೇಕಲ್: ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ವಿಜ್ಞಾನದತ್ತ ಆಸಕ್ತಿ ಬೆಳಸುವಲ್ಲಿ ಯಶಸ್ವಿಯಾದರೆ ಮಕ್ಕಳು ವೈದ್ಯಕೀಯ ಅಂಗದತ್ತ ಹೆಚ್ಚು ಮುಖ ಮಾಡುತ್ತಾರೆ ಎಂದು ನಾರಾಯಣ ಹೃದಯಾಲಯದ ಖ್ಯಾತ ತಜ್ಞ ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಅವರು ಇಂದು ನಾರಾಯಣ ಹೃದಯಾಲಯ, ಬಯೋಕಾನ್ ಹಾಗೂ ಅಗಸ್ತ್ಯ ಪೌoಡೇಷನ್ ಸಹಯೋಗದೊಂದಿದೆ ಮಕ್ಕಳಿಗಾಗಿ ಚಾಂಪ್ ಎಂಬ ಹೆಸರಿನಲ್ಲಿ ವಿಜ್ಞಾದ ಸಂಚಾರಿ ಪ್ರಯೋಗಾಲಯದ ಉದ್ಘಾಟನೆ ಮಾಡಿ ಮಾತನಾಡುತ್ತಾ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇತ್ತೀಚೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕೊರತೆಯಾಗುತ್ತಿದ್ದು …

Read More »

ಕೃಷ್ಣಾ ನದಿ ಪ್ರವಾಹ ಭೀತಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯುತ್ತಿರುವ ಎನ್ ಡಿ ಆರ್ ಎಫ್ ಹಾಗೂ ಸೇನಾ ತಂಡಗಳು

ಚಿಕ್ಕೋಡಿ: ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ‌ನದಿಯಲ್ಲಿ ಸಧ್ಯ ೨ ಲಕ್ಷ ೮೦ ಸಾವಿರ ಕ್ಯೂಸೇಕ್ ನೀರು ಹರಿದು ಬರುತ್ತಿದೆ. ಇನ್ನು ೫೦ ಸಾವಿರ ಕ್ಯೂಸೆಕ್ ನೀರು ಬಂದರೆ ಯಾವುದೇ ಕ್ಷಣದಲ್ಲಾದರೂ ಅಪಾಯ ಎದುರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಎನ್ ಡಿ ಆರ್ ಎಫ್ ಹಾಗೂ ಸೈನ್ಯದಿಂದ ಕಾರ್ಯಾಚರಣೆ ಪ್ರಾರಂಭವಾಗಿದ್ದು, ೯೯ ಸೈನಿಕರು ೪೫ ಕ್ಕೂ ಹೆಚ್ಚು ಎನ್ ಡಿ ಆರ್ ಎಫ್ ಸಿಬ್ಬಂಧಿಗಳಿಂದ ಕಾರ್ಯಾಚರಣೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. …

Read More »

ವಿದ್ಯುತ್ ತಂತಿ ತುಳಿದು ರೈತ ಸಾವು ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ

ಮಂಡ್ಯ: ಕೃಷಿ ಪಂಪ್ ಸೆಟ್ ಚಾಲನೆ ಮಾಡಲು ಹೋಗಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಸ್ಪರ್ಷಗೊಂಡು ರೈತ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮಂದಗೆರೆ ಗ್ರಾಮದಲ್ಲಿ ನಡೆದಿದೆ. ‌ ಮಂದಗೆರೆ ಗ್ರಾಮದ ಲೇಟ್ ರಂಗಶೆಟ್ಟಿ ಅವರ ಮಗ ಎಂ.ಆರ್. ರವಿ(35) ಮೃತ ರೈತ. ಇಂದು ಬೆಳಿಗ್ಗೆ ಮಂದಗೆರೆ ಗ್ರಾಮದಲ್ಲಿರುವ ಕೃಷಿ ಪಂಪ್ ಸೆಟ್ ಚಾಲನೆ ಮಾಡಲು ಮುಂದಾಗಿದ್ದಾರೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಗೊತ್ತಿಲ್ಲದೆ ತುಳಿದ …

Read More »