Breaking News

admin

ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ಭ್ರಷ್ಟರ ಮೇಲೆ ದಾಳಿ

ಕೋಲಾರ ನಗರದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಭ್ರಷ್ಟರ ಮೇಲೆ ದಾಳಿ ಮಾಡುವ ಮೂಲಕ ಶಾಕ್ ನೀಡಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕರ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ‌ ನಿರ್ದೇಶಕ ನಾರಾಯಣಸ್ವಾಮಿ ಸಂಬಂಧಿಕರು ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವಮನೆಗಳ ಮೇಲೆ ದಾಳಿಯಾಗಿದೆ. ಅಧಿಕಾರಿ ನಾರಾಯಣಸ್ವಾಮಿ ಮಾವ ಶಿವಪ್ಪ, ತಾಯಿ ತುಳಸಮ್ಮ ನಿವಾಸಗಳ ಮೇಲೆ ಹಾಗೂ ಬೆಂಗಳೂರಿನ‌ ಜಯನಗರ ನಿವಾಸ ಮತ್ತು ಚಿಂತಾಮಣಿ …

Read More »

ಖೈದಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರುಪಡಿಸುವ ಕಾರ್ಯಶುರು

ಹುಬ್ಬಳ್ಳಿಯ ನೂತನ ನ್ಯಾಯಾಲಯದಲ್ಲಿ ಇಂದು ವಿಚಾರಣಾಧೀನ ಖೈದಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸುವ ಕಾರ್ಯಶುರುವಾಗಿದೆ. ಸಬ್ ಜೈಲಿನಲ್ಲಿರುವ ಸೆಷನ್ ಪ್ರಕರಣದ ವಿಚಾರಣಾಧೀನ ಖೈದಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಗಂಗಾಧರ ಅವರು ವಿಚಾರಣೆ ನಡೆಸಿದರು. ಖೈದಿಗಳನ್ನು ಭದ್ರತೆಯಲ್ಲಿ ನ್ಯಾಯಾಲಯಗಳಿಗೆ ಹಾಜರು ಪಡಿಸಬೇಕು. ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಗಳು ಲಭ್ಯವಿಲ್ಲದಿದ್ದಾಗ ಅವರನ್ನು ಕೋರ್ಟ್ ಗೆ ಹಾಜರು ಪಡಿಸಲಾಗುದಿಲ್ಲ. ಇದರಿಂದಾಗಿ ವಿಚಾರಣೆ ತೊಂದರೆಯಾಗುತ್ತದೆ. ಕೆಲವೊಮ್ಮ ಸಾಕ್ಷೀಗಳನ್ನು ಸಹ …

Read More »

ಫುಟ್‌ಪಾತ್ ವ್ಯಾಪಾರಸ್ಥರ ತೆರವು

ಸಿಲಿಕಾನ್ ಸಿಟಿಯ ವಾಣಿಜ್ಯ ಕೇಂದ್ರ ಸಿಟಿ ಮಾರುಕಟ್ಟೆ. ಇಂತಹ ನಗರ , ರಸ್ತೆಯಲ್ಲಿ ವಾಹನವಿರಲೀ ಮನುಷ್ಯರು ಓಡಾಡುವುದೇ ಕಷ್ಟ. ಇದರಿಂದಾಗಿ ಮಾರುಕಟ್ಟೆಯ ಪ್ರಮುಖ ರಸ್ತೆಯಿಂದ ನಗರದ ಬಸ್ ನಿಲ್ದಾಣದಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಪಾದಚಾರಿಗಳು ಸಂಚರಿಸುವ ರಸ್ತೆ ಬದಿಯ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಮಹಾನಗರ ಪಾಲಿಕೆ ಹಾಗೂ ನಗರಠಾಣೆ ಪೊಲೀಸ್ ಸಿಬ್ಬಂದಿ ಇಂದು ತೆರವುಗೊಳಿಸಿದರು. ಫುಟ್‌ಪಾತ್ ವ್ಯಾಪಾರಸ್ಥರ ತೆರವು ಕಾಮಗಾರಿಗೆ ಚಾಲನೆ ನೀಡಿದ …

Read More »

5ಎಕರೆ ಪ್ರದೇಶವನ್ನು ಪ್ತವಾಸೋದ್ಯಮಕ್ಕೆ ಮೀಸಲಿಡಲಾಗಿದೆ-ಸಾರಾ ಮಹೇಶ್

ಚನ್ನಪಟ್ಟಣ ತಾಲ್ಲೂಕಿನ ಕಣ್ವ ಬಳಿ 5ಎಕರೆ ಪ್ರದೇಶವನ್ನು ಪ್ತವಾಸೋದ್ಯಮಕ್ಕೆ ಮೀಸಲಿಡಲಾಗಿದೆ ಎಂದು ಸಚಿವ ಸಾರಾ ಮಹೇಶ್ ಹೇಳಿಕೆ ನೀಡಿದರು.10 ಕೋಟಿ ಪ್ರಸ್ತಾವನೆಯಲ್ಲಿ 8 ಕೋಟಿ ಬಿಡುಗಡೆ ಮಾಡಲಾಗುವುದು . ಕಣ್ವಾ ಬಳಿ ಚಿಲ್ಡ್ರನ್ಸ್ ಪಾರ್ಕ್ ಗೆ 2 ಕೋಟಿ ಸಾಲುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು. ರೇಷ್ಮೆಯನ್ನು ವಿದೇಶಗಳಿಂದ ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿದೆ. ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ. ರೇಷ್ಮೆ ಬೆಲೆ ಹೆಚ್ಚಿಸಲು …

Read More »

ಕೋಲಾರ ನಗರಸಭೆಗೆ ಡಿಸಿ ಮಂಜುನಾಥ್ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ

ಕೋಲಾರ ನಗರಸಭೆಗೆ ಡಿಸಿ ಮಂಜುನಾಥ್ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಿದರು. ಕೋಲಾರ ನಗರಸಭೆ ಆಡಳಿತಾಧಿಕಾರಿಯಾಗಿರುವ ಡಿಸಿ ಮಂಜುನಾಥ್ ರವರು ನಗರಸಭೆ ಎಇ, ಎಇಇ ಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಟೆಂಡರ್ ಆಗಿದ್ದರು ಗುತ್ತಿಗೆದಾರರಿಂದ ಕೆಲಸ ಮಾಡಿಸದ ಇಂಜಿನಿಯರ್ ಗಳು ಬಗ್ಗೆ ತೀವ್ರ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇನ್ನೂ ಡಿಸಿಗೆ ತಪ್ಪು ಮಾಹಿತಿ ನೀಡಿದ ಎಇಇ ಪೂಜಾರಪ್ಪ ಗೆ ತೀವ್ರ ತರಾಟೆ ತೆಗೆದುಕೊಂಡು, ಟೆಂಡರ್ ಕರೆದು ಎರಡು …

Read More »

ಊಟಕ್ಕಾಗಿ ಕಿತ್ತಾಡಿದ ಸದಸ್ಯಳ ಪತಿರಾಯ…!

ಬೆಳಗಾವಿ ಜಿಲ್ಲಾ ಪಂಚಾಯತ್ ಸದಸ್ಯಳ ಪತಿರಾಯ ಊಟಕ್ಕಾಗಿ ತನ್ನ ದರ್ಪ ತೋರಿದ್ದಾನೆ. ಮಾದ್ಯಮದವರಿಗೆ ಏಕೆ ಊಟ ಕೊಡುತ್ತಿರಿ ನಮಗೆಕೆ ಕೊಡಲ್ಲ ಎಂದು ಅಡುಗೆ ಕೆಲಸಗಾರರ ಮೇಲೆ ದರ್ಪ ತೋರಿರುವ ಈತ ಚಿಕ್ಕೋಡಿ ತಾಲೂಕಿನ ಕರೋಶಿ ಜಿಲ್ಲಾ ಪಂಚಾಯತ್ ಸದಸ್ಯ ಲಕ್ಷ್ಮಿ ಕುರಬರ ಗಂಡ ನಿಂಗಪ್ಪ ಕುರಬರ. ತಮ್ಮ ಪಂಚಾಯತ್ ವ್ಯಪ್ತಿಯಲ್ಲಿನ ಸಮಸ್ಯೆ ಬಗೆಹರಿಸುವ ಚಿಂತೆಗಿಂತ ಊಟದ ಮೇಲೆ ಅತಿಯಾದ ಮೋಹ. ಹೀಗಾಗಿ ಊಟಕ್ಕಾಗಿ ಕಿರಾಚಾಡಿದ ಈತ ನಂತರ ಬಳಿಕ ಸರತಿ‌ …

Read More »

ನಾಯಕ ಇಯಾನ್​ ಮಾರ್ಗನ್​ ವಿಶ್ವದಾಖಲೆಯ ಆಟಕ್ಕೆ ಆಂಗ್ಲರಿಗೆ ಶರಣಾದ ಆಫ್ಘನ್​: ಸಿಕ್ಸರ್​ ಒಂದರಲ್ಲೇ ಮಾರ್ಗನ್​ ಗಳಿಸಿದ್ದು 102 ರನ್!​

ಮ್ಯಾಂಚೆಸ್ಟರ್​: ನಾಯಕ ಇಯಾನ್​​​ ಮಾರ್ಗನ್(148 ರನ್​, 71 ಎಸೆತ, 4 ಬೌಂಡರಿ, 17 ಸಿಕ್ಸರ್​)​ ಅವರ ವಿಶ್ವದಾಖಲೆಯ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್​ ತಂಡ ಎದುರಾಳಿ ಅಫ್ಘಾನಿಸ್ತಾನ ತಂಡವನ್ನು 150 ರನ್​ ಅಂತರದಿಂದ ಮಣಿಸಿದೆ.ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 24ನೇ ಪಂದ್ಯದಲ್ಲಿ ಆಂಗ್ಲ ಪಡೆ ನೀಡಿದ 397ರನ್​ಗಳ ಬೃಹತ್​ ಮೊತ್ತದ ಗುರಿಯನ್ನು ಬೆನ್ನತ್ತಿದ ಆಫ್ಘನ್, ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 247 ರನ್​ ಕಲೆಹಾಕಲಷ್ಟೇ …

Read More »

ಹೌದಿನಿ ಸ್ಟಂಟ್‌ ಮಾಡಲು ಹೋದ ಜಾದೂಗಾರ ಹೆಣವಾಗಿ ಪತ್ತೆ

ಕೋಲ್ಕೊತಾ: ಸಂಪೂರ್ಣ ಬಂಧಿತರಾಗಿ ನೀರಿನೊಳಗೆ ಧುಮುಕಿ, ನೆರೆದವರು ನಿಬ್ಬೆರಗಾಗುವಂತೆ ಕ್ಷಣದಲ್ಲಿ ಬಂಧನ ಬಿಡಿಸಿಕೊಂಡು ನೀರಿನಿಂದ ಮೇಲೆಳುವ ಹ್ಯಾರಿ ಹೌದಿನಿ ಸ್ಟಂಟ್‌ ಮಾಡಲು ವಿಫಲವಾದ ಪಶ್ಚಿಮ ಬಂಗಾಳದ ಜಾದೂಗಾರ ಮಾಂಡ್ರೇಕ್‌ ಶವ ಕೊನೆಗೂ ಪತ್ತೆಯಾಗಿದೆ. 40 ವರ್ಷದ ಜಾದೂಗಾರ್‌ ಮಾಂಡ್ರೆಕ್‌ ಅಲಿಯಾಸ್‌ ಚಂಚಲ್‌ ಲಹಿರಿ ಹೂಗ್ಲಿ ನದಿಗೆ ತಮ್ಮ ಕೈಗಳು ಮತ್ತು ಕಾಲುಗಳಿಗೆ ಸರಪಳಿ ಬಿಗಿದುಕೊಂಡು ಸ್ಟಂಟ್‌ ತೋರಿಸುವುದಾಗಿ ಹೇಳಿ ಭಾನುವಾರ ಧುಮುಕಿದರು. ನಿಮಿಷದೊಳಗೆ ಬಂಧನ ಕಳಚಿ ನೀರಿನಿಂದ ಹೊರಬರಬೇಕಿದ್ದ ಲಹಿರಿ …

Read More »

ಪುಲ್ವಾಮ ದಾಳಿಗೆ ಕಾರು ಕೊಟ್ಟಿದ್ದ ಉಗ್ರ ಸಜ್ಜದ್‌ ಹತ್ಯೆ

ಶ್ರೀನಗರ:ದಕ್ಷಿಣ ಕಾಶ್ಮೀರದ ಬಿಜ್‌ಬಿಹಾರಾ ಪ್ರದೇಶದಲ್ಲಿ ಅಡಗಿದ್ದ ಭಟ್‌ ಹಾಗೂ ಆತನ ಸಹಚರ ತೌಸೀಫ್‌ ಭಟ್‌ ಅಡಗಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಯೋಧರು ಇಬ್ಬರನ್ನೂ ಬಲಿ ಪಡೆದಿದ್ದಾರೆ. ಫೆ.14ರಂದು ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿ ಹೆದ್ದಾರಿಯಲ್ಲಿ ಬಾಂಬ್‌ ತುಂಬಿದ್ದ ಕಾರನ್ನು ಅಪ್ಪಳಿಸಿ ಉಗ್ರರು ನಡೆಸಿದ್ದ ದಾಳಿಯ ಸಂಚುಕೋರ ಹಾಗೂ ಕೃತ್ಯಕ್ಕೆ ಕಾರು ನೀಡಿದ್ದ ಉಗ್ರ ಸಜ್ಜದ್‌ ಭಟ್‌ನನ್ನು ಭದ್ರತಾ ಪಡೆಗಳು ಮಂಗಳವಾರ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ದಕ್ಷಿಣ ಕಾಶ್ಮೀರದ ಬಿಜ್‌ಬಿಹಾರಾ ಪ್ರದೇಶದಲ್ಲಿ …

Read More »

ಮದುವೆಗೆ ಬನ್ನಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ…!

ಮದುವೆಗೆ ಬಂದು ಆಶೀರ್ವಾದ ಮಾಡಿ ಎಂಬುದು ಹಿಂದಿನಿಂದಲೂ ಕರೆಯೋಲೆ ಕೊಡುವುದು ಸಾಮಾನ್ಯ. ಆದ್ರೇ ಇಲ್ಲೊಬ್ಬರು ಮಾತ್ರ ಡಿಫೆರೆಂಟ್ ಆಗಿ ಕರೆಯೋಲೆ ನೀಡಿದ್ದಾರೆ. ಅಂತಹ ಕೂತಹಲ ಎನಾಪ್ಪ ಅಂದರೆಮದುವೆಗೆ ಬನ್ನಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಿಂಟ್ ಮಾಡಿಸಿದ್ದಾರೆ. ಈ ರೀತಿ ಪ್ರಿಂಟ್ ಮಾಡಿಸಿರುವುದು ಚಿತ್ರದುರ್ಗದಲ್ಲಿ ನಡೆದಿದೆ.ಚಳ್ಳಕೆರೆಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದ್ದು ಆರತಕ್ಷತೆಯ ಸಮಯದಲ್ಲಿ ಗುಂಡು ಪಾರ್ಟಿ ವ್ಯವಸ್ಥೆ ಕಲ್ಪಿಸಲಾಗಿ ಎಂದು ನಮೂದಿಸಲಾಗಿದೆ.ಎಣ್ನೆಗಾಗಿ ಕೆಲವು ವ್ಯಕ್ತಿಗಳನ್ನು ಸಂಪರ್ಕಸಿ ಎಂದು ಪ್ರಿಂಟ್ …

Read More »