ಮಂಡ್ಯ ಜಿಲ್ಲೆ ಕಿಕ್ಕೇರಿ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ರಾಮ ಬಿನ್ ಲೇಟ್.ಪುಟ್ಟೇಗೌಡ(48) ರೈತಾಪಿ ಕೆಲಸ ಮಾಡಿಕೊಂಡಿದ್ದು ಮಂಗಳೂರು ಹೆಂಚಿನ ಮನೆಯ ಸ್ನಾನದ ಕೊಠಡಿಯಲ್ಲಿ ಒಣ ಹುಲ್ಲನ್ನು ಶೇಖರಣೆ ಮಾಡಿದ್ದು, ಇದನ್ನು ಜಾನುವಾರುಗಳಿಗೆ ಹಾಕಲು ಹೋದಾಗ ಮನೆಗೆ ಕರೆಂಟ್ ಡಿಸ್ ಕನೆಕ್ಟ್ ಮಾಡಿದ್ದರಿಂದ ದೀಪ ಹಚ್ಚಲು ಹೋದಾಗ ಆಕಸ್ಮಿಕವಾಗಿ ಬೆಂಕಿ ಒಣ ಹುಲ್ಲಿಗೆ ತಗುಲಿ ತಕ್ಷಣ ಬೆಂಕಿ ಆವರಿಸಿಕೊಂಡಿದೆ. ಈತ ಇದೇ ಕೊಠಡಿ ಯಿಂದ ಹೊರಬರಲು ದಿಕ್ಕು …
Read More »ಯೋಗಗುರು ಗೋ ಪಶುಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು
ವಿಶ್ವ ಯೋಗ ದಿನದ ಅಂಗವಾಗಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಯೋಗಗುರು ಗೋ ಪಶುಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಸಲಾಗಿದ್ದು,.ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಜೂನ್ 21ರಂದು ವಿಶ್ವಯೋಗ ದಿನದ ಅಂಗವಾಗಿ ವೇದಬ್ರಹ್ಮ ಯೋಗಪಟು ಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ ಯೋಗಾಭ್ಯಾಸ ತಾಲೀಮು ನಡೆಯಿತು.ಜೂನ್ 21ರಂದು ವಿಶ್ವ ಯೋಗದಿನದ ಅಂಗವಾಗಿ 5 …
Read More »ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಸೊಮಲಿಂಗ ಅಪ್ಪಣ್ಣಾ ಮಳಗಲಿ ನಿಧನ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಸೊಮಲಿಂಗ ಅಪ್ಪಣ್ಣಾ ಮಳಗಲಿಯವರು ಇಂದು ಬೆಳಗಿನ ಜಾವ ನಿಧನರಾದರು. ಮೂಲತಃ ಬೆಳಗಾವಿ ಜಿಲ್ಲೆಯವರಾದ ಅವರ ಅಂತಿಮ ದರ್ಶನಕ್ಕೆ ತುಮ್ಮರಗುದ್ದಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ವ್ಯವಸ್ಥೆ ಮಾಡಲಾಗಿದೆ. ವಿಧಿವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆಯನ್ನು ಹುದಲಿ ಗ್ರಾಮದ ರುಧ್ರಬೂಮಿಯಲ್ಲಿ ನಡೆಯಲಿದೆ.
Read More »ಮೂರು ವರ್ಷದ ಮಗುವಿಗೆ ಬರೆ ಹಾಕಿದ ಅಂಗನವಾಡಿ ಶಿಕ್ಷಕಿ
ಮೂರು ವರ್ಷದ ಮಗುವಿಗೆ ಅಂಗನವಾಡಿ ಶಿಕ್ಷಕಿ ಬರೆ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಾಲದಾರಗಲ್ಲಿ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಮಗು ಅಳುತ್ತಿದೆ ಎಂಬ ಕಾರಣಕ್ಕೆ ಶಿಕ್ಷಕಿ ಬರೆ ಹಾಕಿದ್ದಾರೆ. ಇದರಿಂದ ನೊಂದ ಪೋಷಕರು ಶಿಕ್ಷಕಿ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದರು. ದೂರು ಆದರಿಸಿ ಅಂಗನವಾಡಿ ಶಿಕ್ಷಕಿಗೆ ಇಲಾಖೆ ನೋಟಿಸ್ ನೀಡಿದೆ.
Read More »ಉಳ್ಳಾಲದಲ್ಲಿ ಕಡಲ ಕೊರೆತ ಹಾವಳಿ
ರಾಜ್ಯದ ಕರಾವಳಿಯಲ್ಲಿ ಮಳೆ ಆರ್ಭಟ ಮುಂದುವರಿದಿದೆ . ಉಳ್ಳಾಲದಲ್ಲಿ ಕಡಲ ಕೊರೆತ ಹಾವಳಿ ತೀವ್ರ ಗೊಂಡಿದೆ .ಹಲವು ಮನೆಗಳಿಗೆ ಹಾನಿ ಆಗಿದೆ .ಇನ್ನೂ ಕೆಲವು ಮನೆಗಳು ಅಪಾಯದ ಅಂಚಿನಲ್ಲಿವೆ .ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಉಳ್ಳಾಲ ದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು . ಈ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಯು ಟಿ ಖಾದರ್ ಚಂಡಮಾರುತದ ಪ್ರಭಾವದಿಂದಾಗಿ ಈ …
Read More »ಬೆತ್ತಲೆ ಮೆರವಣಿಗೆ ಮಾಡಿರುವ ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ ಬಿಎಸ್ ಪಿ
ದಲಿತ ಯುವಕನನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಬಿಎಸ್ ಪಿ ಕಾರ್ಯಕರ್ತರು ಚಾಮರಾಜನಗರ ದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಬಿ ಎಸ್ ಪಿ ರಾಜ್ಯ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ವ್ಯಾಪ್ತಿಗೆ ಬರುವ …
Read More »ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ಕಷ್ಟ
ಸರ್ಕಾರದಲ್ಲಿ ನಾಯಕರು ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ನಷ್ಟವಾಗುತ್ತದೆ . ಹೋಗೋ ಬರೋ ಪಕ್ಷೇತರ ಶಾಸಕರನ್ನು ಪಕ್ಷಕ್ಕೆ ಸರ್ಪಡೆ ಮಾಡಿಕೊಳ್ಳುವುದರಿಂದ ಸರ್ಕಾರಕ್ಕೆ ಗೌರವ ಇರುವುದಿಲ್ಲ ಎಂದು ಮಾಜಿ ಸಂಸದ ಕೆ ಎಚ್ ಮುನಿಯಪ್ಪ ಚಿಂತಾಮಣಿ ನಗರದಲ್ಲಿ ಹೇಳಿಕೆ ನೀಡಿದರು. ಸಿಎಲ್ ಪಿ ಅಧ್ಯಕ್ಷರ ಬದಲಾವಣೆ ಬಗ್ಗೆ 22 ತಾರಿಖು ವೇಣುಗೋಪಾಲ್ ಮತ್ತು ಹಿರಿಯ ನಾಯಕರು ಕುರಿತು ಸಭೆಯ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ 21 ಹಾಗೂ ಜೆಡಿಎಸ್ …
Read More »ಕೋಳಿವಾಡ ಹೇಳಿಕೆಗೆ ಟಾಂಗ್ ನೀಡಿದ ಸಣ್ಣ ನೀರಾವರಿ ಸಚಿವ
ಮೈತ್ರಿ ಸರ್ಕಾರ ಬಹಳ ದಿನ ಇರೋದಿಲ್ಲ ಎಂಬ ಕೋಳಿವಾಡ ಹೇಳಿಕೆಗೆ ಟಾಂಗ್ ನೀಡಿದ ಸಣ್ಣ ನೀರಾವರಿ ಸಚಿವ ಸಿಎಸ್.ಪುಟ್ಟರಾಜುರವರು ಬಹಳಷ್ಟು ಮಂದಿ ಸೋತವರು ಅದೇ ತರ ಹೇಳ್ತಾರೆ ಎಂದು ಮಾಜಿ ಸ್ಪೀಕರ್ ಕೆಬಿ.ಕೋಳಿವಾಡ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಹಾಗೂ ಮಂಡ್ಯ ಬಸ್ ದುರಂತದಲ್ಲಿ ಮಡಿದವರಿಗೆ ಹೆಚ್ಚು ಪರಿಹಾರ ಕೊಡಿಸಿದ ಹಿರಿಮೆ ಶಿವರಾಮೇಗೌಡರಿಗೆ ಸಲ್ಲಬೇಕು. ಸರ್ಕಾರದ ಉಳಿವಿಗೆ ಬಿಜೆಪಿಯವರು ಹಿಂದೆ ಮಣೆ ಹಾಕಿದ್ದಂತೆ ನಾವೂ ಪಕ್ಷೇತರರಿಗೆ ಸಚಿವ ಪದವಿ ಕೊಟ್ಡಿದ್ದೇವೆ. ಕೆಸಿ …
Read More »ಮರ್ಯಾದೆಗೆ ಅಂಜಿ ಪತಿ-ಪತ್ನಿ ಆತ್ಮಹತ್ಯೆ ಯತ್ನ
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ವಿಡಿಯೊ ವೈರಲ್ ಮಾಡಿದ್ದ ಹಿನ್ನಲೆಯಲ್ಲಿ ಮರ್ಯಾದೆಗೆ ಅಂಜಿ ಪತಿ-ಪತ್ನಿ ಆತ್ಮಹತ್ಯೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೊಂಡಾಪುರದಲ್ಲಿ ನಡೆದಿದೆ. ಪತಿ ಮೈಲಾರಪ್ಪ ಸಾವನ್ನಪ್ಪಿದು, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಪತಿ ಮೈಲಾರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಪತ್ನಿ ಸರೋಜಾ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಗೆ ದಾಖಲು ಮಾಡಿ …
Read More »ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ನಾರಾಯಣಗೌಡ ಚಾಲನೆ
ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕಿಕ್ಕೇರಿ ಹೋಬಳಿ ಕೇಂದ್ರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ನಾರಾಯಣಗೌಡ ಚಾಲನೆ ನೀಡಿದರು. ಕಳೆದ ಐದಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಿಕ್ಕೇರಿ ಬಸ್ ನಿಲ್ದಾಣದ ಆವರಣದ ಕಾಂಕ್ರೀಟ್ ನೆಲಹಾಸಿನ ಅಭಿವೃದ್ಧಿಯನ್ನು ಒಂದು ಕೋಟಿರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ನಾರಾಯಣಗೌಡ ತಿಳಿಸಿದರು. ಕಿಕ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಜಯರಾಮಣ್ಣ, ಸದಸ್ಯ ಏಜಾಜ್ ಪಾಶ, ಜಿ.ಪಂ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





