ಟೈಯರ್ ಸ್ಪೋಟಗೊಂಡು ಮಾವಿನ ಕಾಯಿ ತುಂಬಿದ್ದ ಟೆಂಪೋ ಪಟ್ಟಿಯಾದ ಘಟನೆ ಚಿಂತಾಮಣಿ ತಾಲ್ಲೂಕಿನ ಎನ್ ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸಕೋಟೆ ತಾಲ್ಲೂಕಿನ ಮಲ್ಲಿಮಾಕಲಪುರದ ನವೀನ್ ಎಂಬುವರಿಗೆ ಸೇರಿದ ಟೆಂಪೋವಾಗಿದ್ದು, ಚಿಂತಾಮಣಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ಟೆಂಪೋ ಪಲ್ಟಿಯಾದ ಘಟನೆ ಸಂಭವಿಸಿದೆ. ಈ ಕುರಿತುಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ತ್ರಿಭಾಷಾ ನೀತಿಗೆ ಕುಂ.ವೀರಭದ್ರಪ್ಪ ವಿರೋಧ
ತ್ರಿಬಾಷಾ ನೀತಿಗೆ ಕುಂ.ವೀರಭದ್ರಪ್ಪ ವಿರೋಧ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಜೀವನ ಕನ್ನಡ ಭಾಷೆ ಮೇಲೆ ಅವಲಂಬಿಸಿದೆ. ಹಾಗಾಗಿ ಕನ್ನಡ ರಕ್ಷಿಸಿ ಹಿಂದಿ ವಿರೋಧಿಸಿ ಎಂದರು. ಹಿಂದಿ ಯಾವುದೇ ಕಾರಣಕ್ಕೂ ನಮ್ಮ ಗಡಿ ದಾಟದಂತೆ ನೋಡಿಕೊಳ್ಳಬೇಕು. ನಮ್ಮ ಕೆಂಪು-ಬಿಳಿ ರಕ್ತ ಕಣಗಳನ್ನ ಇನ್ನೊಂದು ಭಾಷೆ ಆಕ್ರಮಿಸದಂತೆ ನೋಡಿಕೊಳ್ಳಬೇಕು. ಹಿಂದಿ ಸಾಹಿತ್ಯವನ್ನ ನಾವು ಓದಿದ್ದೇವೆ. ಕನ್ನಡ ನಾಶವಾದರೆ ನಮ್ಮ ಜೀವನ ನಾಶವಾಗುತ್ತದೆ. …
Read More »ರಾಮಲಿಂಗರೆಡ್ಡಿ ಪಕ್ಷ ತೊರೆದು ಬೇರೆ ಪಕ್ಷ ಸೇರುತ್ತರಾ..!
ಅತಿ ಶೀಘ್ರದಲ್ಲಿ ರಾಜ್ಯ ರಾಜಕಾರಣದಲ್ಲಿ ಬೃಹತ್ ಬೆಳವಣಿಗೆಯಾಗುವ ಲಕ್ಷಣಗಳು ಪ್ರತಿನಿತ್ಯ ಗೋಚರಿಸುತ್ತಿವೆ. ಇದಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗರೆಡ್ಡಿ ಪಕ್ಷ ತೊರೆದು ಬೇರೆ ಪಕ್ಷ ಸೇರುತ್ತಾರೆ ಎಂಬುವ ವದಂತಿ ಹರಿದಾಡುತ್ತಿದೆ. ರಾಮಲಿಂಗರೆಡ್ಡಿಯವರ ಹುಟ್ಟೂರು ಆನೇಕಲ್ ತಾಲ್ಲೂಕಿನ ಅಭಿಮಾನಿಗಳು ಹಾಗು ಕಾರ್ಯಕರ್ತರಿಂದ ಪೇಸ್ ಬುಕ್ ಪೋಸ್ಟ್ ನಲ್ಲಿ ಈ ವದಂತಿಗಳು ಶೇರ್ ಆಗುತ್ತಿದೆ. ಅತಿ ಶೀಘ್ರದಲ್ಲಿ ರಾಮಲಿಂಗರೆಡ್ಡಿಯವರು ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಮಲಿಂಗರೆಡ್ಡಿ …
Read More »ರಂಜನ್ ಹಬ್ಬದ ಪ್ರಯುಕ್ತ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್
ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ಜಾಮಿಯ ಮಸೀದಿಯ ಆವರಣದಲ್ಲಿ ಬಡ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ಗಳನ್ನು ವಿತರಿಸಲಾಯಿತು. ಪುರಸಭೆ ಸದಸ್ಯೆ ಖಮ್ಮರ್ ಬೇಗಂ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು…ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್ ಖಾನ್, ಪುರಸಭೆ ಮಾಜಿಸದಸ್ಯೆ ತಂಜೀಮಾಕೌಸರ್, ಮುಸ್ಲಿಂ ಸಮಾಜದ ಮುಖಂಡರಾದ ಹಾಫೀಜುಲ್ಲಾಶರೀಫ್, ನವೀದ್ ಅಹಮದ್, ಚಾಂದ್ ಪಾಶ, ಅಕ್ಬರ್ ಪಾಶ, ಶಬೀರ್ …
Read More »ಭೇಟೆಗೆ ಸಜ್ಜಾದ ಭಾರತದ ಹುಲಿಗಳು, ಗರ್ಜನೆಗೆ ಹೆದರಿದ ಹರಿಣಗಳು
ಲಂಡನ್: ರಂಜಾನ್ ಹಬ್ಬದ ದಿನವಾದ ಇಂದಿನಿಂದಲ್ಲೇ ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಡವಡವಆರಂಭವಾಗಿದೆ. ಒಂದು ಕಡೆ ಇಂದಿನಿಂದ ಕ್ರಿಕೆಟ್ ಹಬ್ಬ ಶುರುವಾಗಲಿದ್ದು, ಈ ಭಾರಿ ಕಪ್ ನಮ್ದೆ ಎಂಬ ಅಭಿಮಾನ ವ್ಯಕ್ತವಾಗುತ್ತಿದೆ. ಕ್ರಿಕೇಟ್ ಮಹಾಯುದ್ಧದಲ್ಲಿ ಶುಭಾರಂಭ ಮಾಡಲು ಕೊಹ್ಲಿ ಪಡೆ ಸಜ್ಜಾಗಿದ್ರೆ, ಮತ್ತೊಂದೆಡೆ ಸೋತು ಸುಣ್ಣವಾಗಿರುವ ಹರಿಣಗಳು ಕಮ್ ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಮಹಾಸಮರ ಸೌತಾಂಪ್ಟನ್ನ ದಿ ವೇಜಸ್ ಬೌಲ್ ಸ್ಟೇಡಿಯಂನಲ್ಲಿ ಬಲಿಷ್ಠ …
Read More »ಮುಸ್ಲಿಂ ಭಾಂಧವರ ಪವಿತ್ರ ರಂಜಾನ್ ಹಬ್ಬದ ಆಚರಣೆ
ಮುಸ್ಲಿಂ ಭಾಂಧವರ ಪವಿತ್ರ ರಂಜಾನ್ ಹಬ್ಬದ ಆಚರಣೆಯು ಇಂದು ದೇಶದ ಎಲ್ಲಾ ಕಡೆಯೂ ಭಕ್ತಿ ಸಡಗರ ಮಧ್ಯೆ ನಡೆಯಿತು. ದೇಶದೆಲ್ಲೆಡೆ ಸಮೂಹಿಕ ಪ್ರಾರ್ಥನೆಯಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ಭಾಗಿಯಾಗಿದ್ರು. ನಂತರ ಪರಸ್ಪರ ಒಬ್ಬರಿಗೊಬ್ಬರು ಶುಭಾಶಯ ಕೋರಿದರು. ತಿಂಗಳ ಪರ್ಯಂತ ನಡೆದ ಉಪವಾಸ ವ್ರತ ಆಚರಣೆ ರೋಜಾ ಇಂದಿಗೆ ಕೊನೆಗೊಂಡಿದೆ. ಹೀಗಾಗಿಬಗೆಬಗೆಯ ಸಿಹಿ ಖಾದ್ಯ. ಮಾಂಸಹಾರದ ಭೊಜನ ಸವಿದರು. ಪ್ರತಿಯೊಬ್ಬರುಶ್ರದ್ದೆ ಮತ್ತು ನಿಷ್ಠೆಯಿಂದ ಕೈಗೊಳ್ಳುವತಿಂಗಳಲ್ಲಿ ನಮ್ಮಿಂದ ಆದ ತಪ್ಪುಗಳನ್ನು ತಿದ್ದಿ ಕೊಳ್ಳುವ …
Read More »ಫೈಲ್ವಾನ್ ಚಿತ್ರದ ಮತ್ತೊಂದು ಪೋಸ್ಟ್ ಟ್ವಿಟರ್ ನಲ್ಲಿ ಬಿಡುಗಡೆ
ಹೊಸ ಲುಕ್ ನಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಭಿಮಾನ ಮತ್ತಷ್ಟು ಹುಚ್ಚೆಬ್ಬಿಸಿದೆ. ನಟ ಸುದೀಪ್ ರವರು ತಮ್ಮ ಫೈಲ್ವಾನ್ ಚಿತ್ರದ ಮತ್ತೊಂದು ಪೋಸ್ಟ್ ಅನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದರು. ಇದರಲ್ಲಿ ಚಿತ್ರಕ್ಕಾಗಿ ಸುದೀಪ್ ಭಾರಿ ತಯಾರಿ ನಡೆಸಿ ದೇಹವನ್ನು ದಂಡಿಸಿದ್ದು ಪೋಸ್ಟ್ ನಲ್ಲಿ ಎದ್ದು ಕಾಣುತ್ತದೆ. ಫೈಲ್ವಾನ್ ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆರಂಭದಿಂದಲ್ಲೂ ಕುತೂಹಲ ಮೂಡಿಸಿರುವ ಚಿತ್ರ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. …
Read More »ಕೋಟೆನಾಡಿನಲ್ಲಿ ಯುವಕನ ಮೇಲೆ ಬ್ಲೇಡ್ ದಾಳಿ
ಕೋಟೆ ನಾಡು ಚಿತ್ರದುರ್ಗದಲ್ಲಿ ದುಶ್ಚಟ ವ್ಯಸನಿಗಳ ಕಾಟ ಹೆಚ್ಚಾಗಿದ್ದು, ಪುಂಡರ ಬ್ಲೇಡ್ ದಾಳಿಗೆ ಸಿಲುಕಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಸಲ್ಯೂಷನ್ ವ್ಯಸನಿಗಳ ಆರು ಮಂದಿ ತಂಡ ಬಡೇಮಕಾನ್ ನಿವಾಸಿ ಕರೀಂ ಎಂಬ ಯುವಕನ ಮೇಲೆ ಬ್ಲೇಡ್ ನಿಂದ ದಾಳಿಮಾಡಿ, ಮೂರು ಸಾವಿರ ರೂಪಾಯಿ ನಗದು ಹಾಗು ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ. ದುಶ್ಚಟ ವ್ಯಸನಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಕರೀಂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ …
Read More »ಆಹಾರ ಪದಾರ್ಥಗಳನ್ನು ಕದ್ದೋತ್ತಿದ್ದಾಗ ಸಿಕ್ಕಿಬಿದ್ದ ಅಂಗನವಾಡಿ ಕಾರ್ಯಕರ್ತೆ
ಅಂಗನವಾಡಿ ಮಕ್ಕಳಿಗೆ ಪೂರೈಕೆ ಮಾಡಬೆಕಿದ್ದ ಆಹಾರ ಪದಾರ್ಥಗಳನ್ನು ಕದ್ದು ಒಯ್ಯುತ್ತಿದ್ದ ಕಾರ್ಯಕರ್ತೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನಡೆದಿದೆ. ಅಂಗನವಾಡಿ ಆಹಾರ ಕದ್ದು ಸಾಗಿಸುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕಾಗವಾಡದ ಅಂಗನವಾಡಿ ಸಂಖ್ಯೆ ಏಳರಲ್ಲಿ ಘಟನೆ ಸಂಭವಿಸಿದ್ದು, ಲೂನಾ ಎಕ್ಸ ಎಲ್ ಬೈಕ್ ನಲ್ಲಿ ಆಹಾರ ಸಾಗಿಸುವಾಗ ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದು ಅಂಗನವಾಡಿ ಕಾರ್ಯಕರ್ತೆಯ …
Read More »ಸಿಬ್ಬಂದಿ ನಿರ್ಲಕ್ಷಕ್ಕೆ ಲಕ್ಷಾಂತರ ಮೌಲ್ಯದ ಔಷಧಿ ನಾಶ
ಸಿಬ್ಬಂದಿ ನಿರ್ಲಕ್ಷಕ್ಕೆ ಲಕ್ಷಾಂತರ ಮೌಲ್ಯದ ಔಷಧಿ ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದ ಉಪ ಆರೊಗ್ಯ ಕೆಂದ್ರದಲ್ಲಿ ಕಂಡು ಬಂದಿದೆ. ರಾಶಿ ರಾಶಿ ಔಷಧಿಯು ಅವಧಿ ಮುಗಿಯುತ್ತ ಬಂದರೂ ವಿತರಣೆಯಾಗದೆ ಹಾಗೇ ಉಳಿದಿತ್ತು. ಬಡವರಿಗೆ ಹಂಚಲು ತಂದ ಔಷಧಿ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷಕ್ಕೆ ಬಳಕೆ ಆಗದೆ ಉಳಿದ ವಿಟಮಿನ್, ಐರನ್ ಕ್ಯಾಪ್ಸೂಲ್ ಔಷಧಿಗಳು ಎಂದು ತಿಳಿದು ಬಂದಿದೆ. ಈ ಕುರಿತು ಅಥಣಿ ಪೊಲಿಸ್ ಠಾಣೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





