ನವದೆಹಲಿ: ತ್ರಿವಳಿ ತಲಾಖ್ ನಿಷೇಧಕ್ಕೆ ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಕಳೆದ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ, ತ್ರಿವಳಿ ತಲಾಖ್ ನಿಷೇಧಕ್ಕೆ ಸುಗ್ರೀವಾಜ್ಞೆ ಹೊರಡಿಸಿತ್ತು. ಇದು ಸಂವಿಧಾನದ ಆರ್ಟಿಕಲ್ 14, 15 ಹಾಗೂ 21ರ ಉಲ್ಲಂಘನೆಯಾಗುತ್ತದೆ. ಇದನ್ನು ರದ್ದು ಮಾಡಬೇಕು ಎಂದು ಕೋರಿ ಸಮಸ್ತ ಕೇರಳ ಕಮಾಯ್ತ್ ಉಲೀಮಾ ಎಂಬ ಮುಸ್ಲಿಂ ಸಂಘಟನೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವ …
Read More »ಮೋದಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಇರೋ ಚಿಂತೆ ರಾಮ ಮಂದಿರದ ಬಗ್ಗೆ ಇಲ್ಲ : ಸಿಎಂ ಇಬ್ರಾಹಿಂ
ಹುಬ್ಬಳ್ಳಿ: ಪ್ರಧಾನಿ ಮೋದಿಗೆ ಮುಸ್ಲಿಮರ ಹೆಂಡ್ತಿಯರ ಚಿಂತೆ. ರಾಮ ಮಂದಿರ ಚಿಂತೆ ಇಲ್ಲ. ಮೋದಿಗೆ ತನ್ನ ಹೆಂಡತಿ ಬಗ್ಗೆಯೇ ಗೊತ್ತಿಲ್ಲ. ಮುಸ್ಲಿಂಮರ ಹೆಂಡ್ತಿ ಬಗ್ಗೆ ಮಾತನಾಡುತ್ತಾರೆ. ಮೋದಿ ಹೆಂಡತಿಗೆ ಜೀವನಾಂಶ ಕೊಡ್ತಾ ಇದ್ದಾರಾ ಏನು ಎಂದು ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಯೋಧ್ಯೆ ವಿವಾದವನ್ನು ಬಗೆಹರಿಸುವ ಇಚ್ಛಾ ಶಕ್ತಿ ಬಿಜೆಪಿಗಿಲ್ಲ. ಅಯೋಧ್ಯೆ ವಿಷಯ ಇಟ್ಟುಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನವನ್ನ ಇಟ್ಟುಕೊಂಡು ಬಿಜೆಪಿಯವರು …
Read More »ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲು..
ಶಿವಮೊಗ್ಗ: ಸಿಎಂ ಕುಮಾರಸ್ವಾಮಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜಿಲ್ಲಾ ಚುನಾವಣಾಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಆ ಭಾಗದ ಜನರಿಗೆ ನೀರಾವರಿ ಯೋಜನೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಜಿಲ್ಲಾ ಬಿಜೆಪಿ ಘಟಕದಿಂದ ಸಿಎಂ ಕುಮಾರಸ್ವಾಮಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲಾಗಿದೆ. ಮಧು ಬಂಗಾರಪ್ಪನಿಗೆ ಮತ ಹಾಕಿ, ಈ ಭಾಗದ ನೀರಾವರಿ …
Read More »ಪತ್ರಕರ್ತೆ ಅತ್ಯಾಚಾರ ಆರೋಪಕ್ಕೆ ಸಂಬಂಧ 'ಸಮ್ಮತ'ವಾದದ್ದು ಎಂದ ಅಕ್ಬರ್
ನವದೆಹಲಿ: ಮಾಜಿ ಕೇಂದ್ರ ಸಚಿವ ಎಂ.ಜೆ ಅಕ್ಬರ್ ಅವರ ವಿರುದ್ಧ ಅಮೇರಿಕಾ ಮೂಲದ ಪತ್ರಕರ್ತೆ ಪಲ್ಲವಿ ಗೊಗೋಯಿ ಅತ್ಯಾಚಾರ ಆರೋಪ ಮಾಡಿದ ಹಿನ್ನೆಲೆಯಲ್ಲಿ, ಅಕ್ಬರ್ ಪ್ರತಿಕ್ರಿಯೆ ನೀಡಿದ್ದಾರೆ. ನಾವಿಬ್ಬರೂ ಪರಸ್ಪರ ಒಮ್ಮತದಿಂದ ಸಂಬಂಧದಲ್ಲಿದ್ದೆವು. ಆದ್ರೆ ಆ ಸಂಬಂಧ ಸರಿಯಾಗಿ ಅಂತ್ಯವಾಗಲಿಲ್ಲ ಎಂದು ಅಕ್ಬರ್ ಹೇಳಿದ್ದಾರೆ.1994ರ ಸಮಯದಲ್ಲಿ ನಾನು ಹಾಗೂ ಪಲ್ಲವಿ ಪರಸ್ಪರ ಸಹಮತದೊಂದಿಗೆ ಸಂಬಂಧ ಆರಂಭಿಸಿದೆವು. ಈ ಸಂಬಂಧ ಕೆಲವು ತಿಂಗಳವರೆಗೆ ಇತ್ತು. ಇದರಿಂದ ನನ್ನ ಸಾಂಸಾರಿಕ ಜೀವನಕ್ಕೂ ತೊಂದರೆಯಾಯಿತು. …
Read More »ಸರ್ಜಾ ವಿರುದ್ಧ ಆರೋಪ ಮಾಡಲೆಂದೇ ಕೇಸ್ ದಾಖಲು: ವಕೀಲ ಶ್ಯಾಮ್ ಸುಂದರ್..
ಬೆಂಗಳೂರು: ಭಜನ್ ಲಾಲ್ ಕೇಸ್ ಅನ್ನು ಸರ್ವೊಚ್ಛ ನ್ಯಾಯಾಲಯದ ಆದೇಶದಂತೆ ರದ್ದುಗೊಳಿಸಲಾಗಿತ್ತು. ಈ ಕೇಸ್ ಕೂಡಾ ಅಂತಹದ್ದೇ. ಸರ್ಜಾ ವಿರುದ್ಧ ಆರೋಪ ಮಾಡಲೆಂದೇ ಈ ಕೇಸ್ ದಾಖಲಿಸಲಾಗಿದೆ ಅಂತಾ ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್ ಸುಂದರ್ ಅಭಿಪ್ರಾಯ ಪಟ್ಟಿದ್ದಾರೆ.ಹೈಕೋರ್ಟ್‌ನಲ್ಲಿ ಎಫ್ಐಆರ್ ರದ್ದು ಕೋರಿ ಸಲ್ಲಿಸಿರುವ ವಿಚಾರಣೆ ಮುಗಿದ ಬಳಿಕ ಮಾತನಾಡಿದ ಅವರು, ಶೃತಿಹರಿಹರನ್ ಸಲ್ಲಿಸಿರುವ ದೂರು ಕಾನೂನು ವಿರುದ್ಧವಾಗಿದೆ. ಹಗೆತನದದ್ದಾಗಿದೆ ಅನ್ನೋದನ್ನು ಎಳೆಎಳೆಯಾಗಿ ವಕೀಲ ಬಿ.ವಿ ಆಚಾರ್ಯ ಅವರು …
Read More »#Metoo ನಮ್ ಕಾಲದಲ್ಲೇ ಆಗಿ ಹೋಗಿತ್ತು: ನರ್ಸ್ ಜಯಲಕ್ಷ್ಮೀ
ಬೆಂಗಳೂರು: ಜಯಲಕ್ಷ್ಮೀ… ಈ ಹೆಸರು ಕೇಳಿದ ಕೂಡಲೇ ಥಟ್ ಅಂತ ಇವ್ರು ಯಾರು ಅನ್ನೋದು ಗೊತ್ತಾಗುತ್ತೋ ಇಲ್ವೋ. ಆದ್ರೆ ನರ್ಸ್ ಜಯಲಕ್ಷ್ಮೀ, ಬಿಗ್ ಬಾಸ್ ಜಯಲಕ್ಷ್ಮೀ ಅಂದ್ರೆ ಹಂಗೆ ಕಣ್ಮುಂದೆ ಸುಳಿದು ಹೋಗ್ತಾರೆ. ಅರೇ ಆ ಜಯಲಕ್ಷ್ಮೀನಾ, ಇಷ್ಟ್ ದಿನ ಎಲ್ ಇದ್ರು, ಏನ್ ಮಾಡ್ತಾ ಇದ್ರು ಅನ್ನೋ ಪ್ರಶ್ನೆ ಮೂಡದೇ ಇರಲ್ಲ. ಅದೆಲ್ಲಕ್ಕೂ ಉತ್ತರ ಇಲ್ಲಿದೆ.ಜಯಲಕ್ಷ್ಮೀ ರಾಜಕಾರಣಿಯೊಬ್ಬರ ಜೊತೆಗಿದ್ದ ಫೋಟೋದಿಂದ ಸುದ್ದಿಯಾದವರು. ನಂತರ ಅದೆಲ್ಲಾ ಏನಾಯ್ತು ಅನ್ನೋದು ಇಡೀ …
Read More »ಬಾವಿಯನ್ನು ಸ್ವಚ್ಚಗೊಳಿಸುವ ವೇಳೆ ಉಸಿರುಗಟ್ಟಿ ಐವರ ಸಾವು
ಮಹಾರಾಷ್ಟ್ರ: ಬಾವಿಯನ್ನ ಸ್ವಚ್ಛಗೊಳಿಸಲು ಇಳಿದಿದ್ದ ಕಾರ್ಮಿಕ ಸೇರಿದಂತೆ ಐವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಬಾವಿಯೊಳಗಿದ್ದ ಕಸ ಕಡ್ಡಿ ತೆಗೆಯಲು ಇಳಿದಿದ್ದ ಕಾರ್ಮಿಕ ಉಸಿರುಗಟ್ಟಿ ಬಾವಿಯೊಳಗೆ ಸಾವನಪ್ಪಿದ್ದಾನೆ. ಬಳಿಕ ಆತನ ಮೃತ ದೇಹ ತೆಗೆಯಲು ಬಾವಿಯೊಳಕ್ಕೆ ಇಳಿದಿದ್ದ ಇಬ್ಬರು ಟ್ರಸ್ಟಿಗಳು ಹಾಗೂ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಹ ಮೃತಪಟ್ಟಿದ್ದಾರೆ ಅಂತಾ ಮಹಾರಾಷ್ಟ್ರದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ದಿಘಾವ್ಕರ್ ಹೇಳಿದ್ದಾರೆ. ಈಗಾಗಲೇ ಬಾವಿಯೊಳಗಿದ್ದ ನಾಲ್ವರ ಮೃತದೇಹಗಳನ್ನ ಹೊರತೆಗೆಯಲಾಗಿದೆ. …
Read More »ಮಗುವಿನ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್
ನವದೆಹಲಿ: ದೆಹಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನವಜಾತ ಹೆಣ್ಣುಮಗುವೊಂದನ್ನ ರಕ್ಷಿಸಿದ್ದಾರೆ. ಇಲ್ಲಿನ ಆರ್.ಕೆ ಖನ್ನಾ ಟೆನ್ನಿಸ್ ಸ್ಟೇಡಿಯಂ ಬಳಿ ಪೊದೆಯೊಂದರಲ್ಲಿ ಮಗು ಪತ್ತೆಯಾಗಿತ್ತು. ಟ್ರಾಫಿಕ್ ಪೊಲೀಸರು ಆ ಮಗುವನ್ನ ಎತ್ತಿಕೊಂಡು ಬಂದಿದ್ದು, ಮರುಜೀವ ನೀಡಿದ್ದಾರೆ.ಅಕ್ಟೋಬರ್ 31ರಂದು ಹೆಡ್ ಕಾನ್ಸ್ಟೇಬಲ್ ಅನಿಲ್ ಹಾಗೂ ಕಾನ್ಸ್ಟೇನಲ್ ಪರ್ವೀನ್ ಆಫ್ರಿಕಾ ಅವೆನ್ಯೂ ರೋಡ್ನ ಸ್ಟೇಡಿಯಂ ಬಳಿ ಕಾರ್ಯ ನಿರ್ವಹಿಸುತ್ತಿದ್ರು. ಸಂಜೆ ಸುಮಾರು 4 ಗಂಟೆ ವೇಳೆಗೆ ಮಗುವೊಂದು ಅಳುವ ಶಬ್ದ ಕೇಳಿಸುತ್ತಿತ್ತು. ಸ್ಟೇಡಿಯಂ ಬಳಿ …
Read More »ರಾಜಸ್ಥಾನ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ‘ಕೈ’ಗೆ ಸಿಗುತ್ತಂತೆ ಅಧಿಕಾರ..
2018ರ ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಮಾಜಿ ಸಚಿವ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಲಿದ್ದಾರೆಂದು ಟೈಮ್ಸ್ ನೌ ಮತ್ತು ಸಿಎನ್‌ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಒಟ್ಟು 200 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿನ ಜನರನ್ನು ಸಮೀಕ್ಷೆಗೆ ಒಳಪಡಿಸಿಕೊಳ್ಳಲಾಗಿತ್ತು. ಪ್ರತಿ ಚುನಾವಣಾ ಕ್ಷೇತ್ರಕ್ಕೆ 120 ಮಾದರಿಗಳನ್ನ ಬಳಸಿಕೊಳ್ಳಲಾಗಿದೆ. ಒಟ್ಟು 8,040 ಮಂದಿ ಈ ಸರ್ವೆಯಲ್ಲಿ ಪಾಲ್ಗೊಂಡಿದ್ದು ಇದರಲ್ಲಿ 4,250 ಮಹಿಳೆಯರು ಹಾಗೂ 3,790 ಪುರುಷರು …
Read More »ಅಸ್ಸಾಂನಲ್ಲಿ ಉಗ್ರರ ಅಟ್ಟಹಾಸಕ್ಕೆ ಐವರು ಬಲಿ
ಗುವಾಹಟಿ: ದೇಶದಲ್ಲಿ ಮತ್ತೆ ಉಗ್ರರು ಬಾಲ ಬಿಚ್ಚಿದ್ದು, ಅಸ್ಸಾಂನಲ್ಲಿ ನೆತ್ತರ ಹೊಳೆಯನ್ನ ಹರಿಸಿದ್ದಾರೆ. ಅಸ್ಸಾಂನ ಕೆರಾಬಾರಿ ಪ್ರದೇಶದ ದ್ಹೋಲಾ ಸದಿಯಾ ಬ್ರಿಡ್ಜ್ ಬಳಿ ಬೆಂಗಾಲಿ ಸಮುದಾಯದ 6 ಮಂದಿ ಮೇಲೆ ಶಂಕಿತ ಉಲ್ಫಾ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡಿರುವ ಮತ್ತೋರ್ವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಶ್ಯಾಮ್ಲಾಲ್ ಬಿಸ್ವಾಸ್, ಅನಂತ ಬಿಸ್ವಾಸ್, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





