ಹುಬ್ಬಳ್ಳಿ ರಸ್ತೆ ಮಧ್ಯದ ಮ್ಯಾನ್ ಹೋಲ್ ನೊಳಗೆ ಬಿದ್ದ ಹಸು. ಮ್ಯಾನ್ ಹೋಲ್‌ನಲ್ಲಿ ಬಿದ್ದು ಮೇಲಕ್ಕೆ ಬರಲಾಗದೇ ಒದ್ದಾಡಿದ ಹಸು. ಹುಬ್ಬಳ್ಳಿಯ ವಿದ್ಯಾನಗರದ ಚೇತನಾ ಕಾಲೇಜ ಬಳಿ ನಡೆದ ಘಟನೆ. ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮ್ಯಾನ್ ಹೋಲ್ ಮುಚ್ಚದ ಬೇಜವಾಬ್ದಾರಿ. ಗುತ್ತಗೆದಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು. ೧ ವರ್ಷದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ. ಹಸುಬಿದ್ದು ಒದ್ದಾಡುತ್ತಿದ್ರೂ ಸಂಬಂಧಿಸಿದವರು ಯಾರೂ ಇನ್ನೂ ಸ್ಥಳಕ್ಕೆ ಬಂದಿಲ್ಲ. ಹಸುವಿನ ಒದ್ದಾಟ …
Read More »ಮಹಾರಾಷ್ಟ್ರದಲ್ಲಿ ಸರ್ಕಾರದಿಂದ ಮನೆ ಬಾಗಿಲಿಗೆ ಸಾರಾಯಿ ಪೂರೈಕೆ..
ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಸರ್ಕಾರವೇ ಮದ್ಯವನ್ನು ನಿಮ್ಮ ಮನೆಗೆ ಸಾರಾಯಿಯನ್ನು ಪೂರೈಸುವ ಯೋಜನೆಯನ್ನು ರೂಪಿಸುತ್ತಿದೆ.ಈ ಮೂಲಕ ದೇಶದಲ್ಲೇ ಈ ಕಾನೂನು ಜಾರಿಗೆ ತಂದ ಮೊದಲ ರಾಜ್ಯ ಎನ್ನುವ ಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಲಿದೆ. ಈ ಕುರಿತಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಅಬಕಾರಿ ಸಚಿವ ಚಂದ್ರಶೇಖರ್ ಬವಾನ್ಕುಲೇ” ಡ್ರಂಕ್ ಮಾಡಿ ವಾಹನ ಚಾಲನೆ ಮಾಡುತ್ತಿರುವುದರಿಂದಾಗಿ ಅಪಘಾತದ ಪ್ರಕರಣಗಳು ಹೆಚ್ಚುತ್ತಿವೆ, ಆದ್ದರಿಂದ ಈಗ ಇ-ಕಾಮರ್ಸ್ ಉದ್ಯಮದ ಮೂಲಕ ಸಾರಾಯಿಯನ್ನು ಸಹ ಮನೆಗೆ ಪೂರೈಸುವ …
Read More »ಸೇಬು ತಿನ್ನುವ ಮೊದಲು ಈ ವಿಷಯಗಳೊಮ್ಮೆ ತಿಳಿಯಿರಿ
ದಿನಕ್ಕೆ ಒಂದು ಸೇಬು, ವೈದ್ಯರನ್ನು ದೂರವಿರಿಸುತ್ತದೆ. ಅಂದರೆ ಪ್ರತಿದಿನ ಸೇಬನ್ನು ಸೇವಿಸುವುದರಿಂದ ನೀವು ಎಲ್ಲಾ ರೋಗಗಳಿಂದ ದೂರವಿರುತ್ತೀರಿ. ಸೇಬು ನಿಮ್ಮ ಜೀರ್ಣಕ್ರಿಯೆಯನ್ನು ಸರಿಯಾಗಿರಿಸುತ್ತದೆ. ಸೇಬು ತಿನ್ನುವುದು ನಿಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆಪಲ್ ಬಳಕೆ ದೇಹಕ್ಕೆ ಹೇಗೆ ಪ್ರಯೋಜನಕಾರಿಯಾಗುತ್ತದೆ ಎಂದು ನಾವು ನಿಮಗೆ ತಿಳಿಸುತ್ತೇವೆ. ಡಯಾಬಿಟಿಸ್ ನಿಯಂತ್ರಣ: ಆಪಲ್ ಸೇವನೆಯು ದೇಹದಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಗ್ಲೂಕೋಸ್ನ ಕೊರತೆಯನ್ನು ಸರಿದೂಗಿಸುವ ಅಂಶ ಸೇಬಿನಲ್ಲಿ …
Read More »ಮಧ್ಯವರ್ತಿಗಳದ್ದೇ ಎಪಿಎಂಸಿಯಲ್ಲಿ ಹಾವಳಿ.. ರೇಟ್ ಇಲ್ಲದೇ ಬೆಳೆದ ರೈತರಿಗೇ ಕಣ್ಣೀರು ತರಿಸುತ್ತದೆ ಈರುಳ್ಳಿ..
ಬೇಸಾಯ ಅಂದ್ರೇನೇ ನೀ ಸಾಯಾ, ನಾ ಸಾಯಾ ಅನ್ನೋವಂತಾಗ್ಬಿಟ್ಟಿದೆ. ತಿಂಗಳಾನುಗಟ್ಟಲೇ ಹಗಲು ರಾತ್ರಿ ಅನ್ನದೇ ರೈತರು ಈರುಳ್ಳಿ ಬೆಳೆಯನ್ನ ಬೆಳೆದಿದ್ರು. ಅದಕ್ಕಾಗಿ ಹಾಕಿದ ಶ್ರಮ ಅಷ್ಟಿಷ್ಟಲ್ಲ. ರೈತರ ಬೆಳೆ ಬರೋಕು ಮೊದಲು ಮಾರ್ಕೆಟ್ ನಲ್ಲಿ ಒಳ್ಳೇ ಬೆಲೆ ಏನೋ ಇರುತ್ತೆ. ಆದ್ರೇ, ಮಾರ್ಕೆಟ್ ಗೆ ಯಾವಾಗ ಈರುಳ್ಳಿ ಬಂತೋ ಈಗ ಬೆಲೆ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಅನ್ನದಾತನ ಕಣ್ಣಲ್ಲಿ ನೀರು ತರಿಸಿದೆ ಈರುಳ್ಳಿ.ನಮ್ಮ ಉಳ್ಳಾಗಡ್ಡಿಯನ್ನೇ ಕ್ವಿಂಟಲ್‌ಗೆ 500 ರೂ. ಅಂತೆ …
Read More »ವಿಕಾಸ್ ಬಹ್ಲ್ ಮಾಜಿ ಪತ್ನಿ, ಕಂಗನಾ ನಡುವೆ ಟಾಕ್ ವಾರ್
ದೆಹಲಿ: ಮಾಜಿ ಪತಿ, ನಿರ್ದೇಶಕ ವಿಕಾಸ್ ಬಹ್ಲ್ ನೆರವಿಗೆ ಬಂದಿದ್ದ ರೀಚಾ ದುಬೆ ವಿರುದ್ಧ ನಟಿ ಕಂಗನಾ ರಾಣಾವತ್ ಹರಿಹಾಯ್ದಿದ್ದಾರೆ. ಕ್ವಿನ್ ಚಿತ್ರದ ನಿರ್ದೇಶಕ ವಿಕಾಸ್ ಬಹ್ಲ್ ನನಗೆ ಕಿರುಕುಳ ನೀಡಿದ್ದ ಅಂತ ಕಂಗನಾ ಆರೋಪಿಸಿದ್ದರು. ಆದ್ರೆ, ಇದಕ್ಕೆ ವಿಕಾಸ್ರ ಮಾಜಿ ಪತ್ನಿ ರಿಚಾ ಟ್ವಿಟರ್ನಲ್ಲಿ ಕಂಗನಾ ವಿರುದ್ಧ ಹರಿಹಾಯ್ದಿದ್ದರು. ನಿಮಗೆ ಒಬ್ಬ ವ್ಯಕ್ತಿ ಜೊತೆ ಅಸೌಕರ್ಯವೆನಿಸಿದರೆ ಅಥವಾ ಆತ ನಿಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ರೆ, ಆತನೊಂದಿಗೆ ಉತ್ತಮ ಸಂಬಂಧ …
Read More »ನಾನಾ’ ಅಂತಿದ್ದಾರೆ, ಲೈ ಡಿಟೆಕ್ಟಿಂಗ್ ಟೆಸ್ಟ್ ಮಾಡಿ.
ಮುಂಬೈ: ತನುಶ್ರೀ ದತ್ತಾ ಆರೋಪಿಸಿರುವ ಒಂದೇ ಒಂದು ಲೈಂಗಿಕ ದೌರ್ಜನ್ಯದ ಆರೋಪ ಇಂದು ಬಾಲಿವುಡ್ ಚಿತ್ರರಂಗವನ್ನೇ ತಲೆಕೆಳಗೆ ಮಾಡಿದೆ. ಕೆಲ ದಿನಗಳ ಹಿಂದೆ ಹಿರಿಯ ನಟ, ನಿರ್ದೇಶಕ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ದೌರ್ಜನ್ಯ ಕೇಸ್ನ್ನು ಮುಂಬೈನ ಒಶೀವರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು. ಐಪಿಸಿ ಸೆಕ್ಷನ್ 354, 509 ಅಡಿ ಪೊಲೀಸರು ಕೇಸ್ ಕೂಡ ದಾಖಲಿಸಿಕೊಂಡಿದ್ದಾರೆ. ಇದರ ಎಫ್ಐಆರ್ ಕಾಪಿ ಹಾಗೂ ತಮ್ಮ ಹೇಳಿಕೆಯ ಪ್ರತಿಗಳನ್ನ …
Read More »ಸಾಜಿದ್ ಖಾನ್ ವಿರುದ್ಧ ಸಿಡಿದೆದ್ದ ಮಂದನಾ..
ದೆಹಲಿ: ಮೀಟೂ ಅಭಿಯಾನ ಶುರುವಾದಾಗಿನಿಂದ ಹಲವು ಗಣ್ಯರ ಕಾಮದಾಟದ ಬಗ್ಗೆ ಆರೋಪಗಳು ಕೇಳಿ ಬರ್ತಾನೆ ಇವೆ. ಇದ್ರಲ್ಲಿ ಬಾಲಿವುಡ್ನ ಹಿಟ್ ನಿರ್ದೇಶಕ ಸಾಜಿದ್ ಖಾನ್ ಕೂಡ ಇದ್ದಾರೆ. ಈಗಾಗಲೇ ಸಾಜಿದ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೊಂದು ಆರೋಪ ಅವರ ವಿರುದ್ಧ ಕೇಳಿ ಬಂದಿದೆ. ನಟಿ ಮಂದನಾ ಕರಿಮಿ ತಮಗೂ ಸಾಜಿದ್ ಖಾನ್ರಿಂದ ಇಂಥ ಪರಿಸ್ಥಿತಿ ಎದುರಾಗಿತ್ತು ಅಂತ ಆರೋಪ ಮಾಡಿದ್ದಾರೆ. 2014ರಲ್ಲಿ ಹಮ್ಶಕಲ್ಸ್ ಸಿನಿಮಾದಲ್ಲಿ …
Read More »ಮೀಟೂ’ ಅಂತ ಹೇಳಿದ ಆಯುಷ್ಮಾನ್ ಪತ್ನಿ.
ಮುಂಬೈ: ಮೀಟೂ ಎಂದರೆ ಈಗ ಭಾರತದಲ್ಲಿ ಗೊತ್ತಿಲ್ಲದವರೇ ಇಲ್ಲದಂತಾಗಿದೆ. ಅಷ್ಟೊಂದು ಬೇಗ ಪ್ರಚಾರ ಪಡೆದುಕೊಂಡಿತು. ಇದರ ಮೂಲಕ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು, ಪತ್ರಕರ್ತೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರ ಬಗ್ಗೆ ಆರೋಪಿಸಿದ್ರು. ಆದರೆ ಇದರ ಬಗ್ಗೆ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಾಪ್ ಮೀಟೂ ಕೇವಲ ಜನಪ್ರಿಯ ಹೊಂದಿರುವ ಮಹಿಳೆಯರಿಗೆ ಮಾತ್ರ ಮೀಟೂ ಸೀಮಿತವಲ್ಲ. ಈ ಬಗ್ಗೆ ತಾಹಿರಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಹತ್ತಿರದ ನೆಂಟರು, ಸಂಬಂಧಿಕರಿಂದಲೇ ಮಕ್ಕಳು ಲೈಂಗಿಕ …
Read More »ಕಪಾಲಿ ಮೋಹನ್ ನಡೆಸ್ತಿದ್ದ ಜೂಜು ಅಡ್ಡೆ ಮೇಲೆ ರೇಡ್..
ಬೆಂಗಳೂರು: ಸ್ಯಾಂಡಲ್ವುಡ್ ಚಿತ್ರ ನಿರ್ಮಾಪಕ ಕಪಾಲಿ ಮೋಹನ್ ನಡೆಸುತ್ತಿದ್ದ ಗ್ಯಾಂಬ್ಲಿಂಗ್ ಅಡ್ಡೆಯ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಅಡ್ಡೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಜೂಜಾಡುತ್ತಿದ್ದ ಆಂಧ್ರ ಮತ್ತು ತೆಲಂಗಾಣ ಮೂಲದ 47 ಜನರನ್ನ ಬಂಧಿಸಿದ್ದಾರೆ. ಸ್ಥಳದಲ್ಲಿ ನಕಲಿ ಐಡಿ ಕಾರ್ಡ್ಗಳು ಹಾಗೂ ಮದ್ಯ ಪತ್ತೆಯಾಗಿದ್ದು, 3.5 ಕೋಟಿ ರೂಪಾಯಿ ಬೆಲೆ ಬಾಳುವ ಗ್ಯಾಂಬ್ಲಿಂಗ್ ಟೋಕನ್ ಮತ್ತು 9 ಲಕ್ಷ ರೂಪಾಯಿಯನ್ನ ಸಿಸಿಬಿ ಅಧಿಕಾರಿಗಳು …
Read More »ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಓರ್ವ ಉಗ್ರ ಸಾವು..
ಜಮ್ಮು ಮತ್ತು ಕಾಶ್ಮೀರ: ಉಗ್ರರು ವಿರುದ್ಧ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆ ಮತ್ತೊಬ್ಬ ಉಗ್ರನನ್ನ ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಿನ್ನೆ ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಭಾರತೀಯ ಸೇನೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನೊಬ್ಬನನ್ನ ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಬಾಗ್ಬುಂದ್ ಪ್ರದೇಶದಲ್ಲಿ ನಿನ್ನೆ ಸೇನೆ ಸರ್ಚ್ ಆಪರೇಷನ್ ನಡೆಸುತ್ತಿತ್ತು. ಈ ವೇಳೆ ಅಡಗಿದ್ದ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





