ಬೆಂಗಳೂರು ; ರಾಜ್ಯದಲ್ಲಿ ನಕಲಿ ನೋಟುಗಳ ಹಾವಳಿ ಮತ್ತೆ ಆರಂಭವಾಗಿದೆ. ಕಳೆದ ಎರಡು ದಿನಗಳ ಅಂತರದಲ್ಲಿ 100 ರೂಪಾಯಿ ಬೆಲೆಯ ಒಟ್ಟು 30 ನೋಟುಗಳು ಪತ್ತೆಯಾಗಿವೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ನಾಲ್ಕು ಎಫ್ಐಆರ್ ದಾಖಲಾಗಿದೆ. ಆರ್ ಬಿಐ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ, ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ಗಳು ಪ್ರತ್ಯೇಕವಾಗಿ ದೂರು ನೀಡಿದ್ದಾರೆ. ಉಡುಪಿ, ಮಣಿಪಾಲ, ಹುಬ್ಬಳ್ಳಿ ಹಾಗೂ ಮಲ್ಲೇಶ್ವರ ಬ್ರಾಂಚ್ ನ …
Read More »ಮಹಾರಾಷ್ಟ್ರ ಬಸ್ ದುರಂತ 25 ಜನರು ಸಜೀವ ದಹನ ಕಂಬನಿ ಮೀಡಿದ ಸಚಿವ ಸಂತೋಷ ಲಾಡ್
ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 25 ಜನ ಪ್ರಯಾಣಿಕರು ಸಜೀವ ದಹನವಾಗಿರುವ ವಿಷಯ ಕೇಳಿ ಆಘಾತವಾಗಿದೆ. ಎಂದು ಸಚಿವ ಸಂತೋಷ ಲಾಡ್ ಸಂತಾಪ ಸೂಚಿಸಿದ್ದಾರೆ, ನಿನ್ನೆ ತಡರಾತ್ರ ನಡೆದ ಈ ದುರಂತದಲ್ಲಿ 25 ಜನರು ಮೃತ ಸಜೀವ ದಹನ ಹೊಂದಿದ್ದಾರೆ ಎಂದು ತಿಳಿದು ಬಂದಿದ್ದ ಈ ಹಿನ್ನಲೆ ಸಚಿವ ಸಂತೋಷ ಲಾಡ ಕಂಬನಿ ಮೀಡಿದಿದ್ದಾರೆ, ಇನ್ನು ಈ ದುರಂತದಲ್ಲಿ ಸಾವಿಗೀಡಾದವರ ಆತ್ಮಕ್ಕೆ ಶಾಂತಿಕೋರುತ್ತ, ಅವರ ಕುಟುಂಬಸ್ಥರಿಗೆ ಈ …
Read More »ಮಹಾರಾಷ್ಟ್ರದಲ್ಲಿ ಅಪಘಾತ ಕಲಬುರಗಿಯ 8 ಜನರು ಮೃತ
ಮಹಾರಾಷ್ಟ್ರದಲ್ಲಿ ನಡೆದ ಭೀಕರ ಅಪಘಾತದಿಂದ ಕಲಬುರಗಿಯ ಎಂಟು ಜನರ ದಾರುಣ ಸಾವಾಗಿರುವ ಘಟನೆ ಮಹಾರಾಷ್ಟ್ರದ ಅಕ್ಕಲಕೋಟ ತಾಲ್ಲೂಕಿನ ಶಿರವಾಳ ವಾಡಿಕಲ ಬಳಿ ನಡೆದಿದೆ. ಕ್ರೂಸರ್ ವಾಹನ ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತ ಇದಾಗಿದ್ದು, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಅಣೂರ ಗ್ರಾಮದ ನಿವಾಸಿಗಳು ಸಾವನ್ನಪ್ಪಿವರು ಎನ್ನಲಾಗಿದೆ. ಮಹಾರಾಷ್ಟ್ರದ ತಿರ್ಥ ಕ್ಷೇತ್ರಗಳಿಗೆ ಪ್ರವಾಸ ತೆರಳಿ ವಾಪಸ್ ಆಗುವಾಗ ಅಪಘಾತ ಸಂಭವಿಸಿದೆ. ಅಪಘಾತದಿಂದ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ದೇವಸ್ಥಾನಕ್ಕೆ …
Read More »ಮೃತ ಸನ್ಯಾಸಿ ಬಳಿ ಲಕ್ಷಾಂತರ ರೂಪಾಯಿ ಹಣ ಪತ್ತೆ !
ಚಿತ್ರದುರ್ಗ ; ಮೃತ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಮನೆಯಲ್ಲಿ ವಿವಿಧೆಡೆ ಇರಿಸಿದ್ದ 30 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಹೊಳಲ್ಕೆರೆಯಲ್ಲಿ ವಾರದ ಹಿಂದೆ ಗಂಗಾಧರ ಶಾಸ್ತ್ರಿ(70) ಎಂಬುವವರು ಮೃತಪಟ್ಟಿದ್ರು. ಒಂಟಿಯಾಗಿ ಬದುಕು ಸವೆಸಿದ್ದ ಗಂಗಾಧರ ಶಾಸ್ತ್ರಿ ಅವರು, ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. ಶಾಸ್ತ್ರಿ ಹೆಸರಲ್ಲಿ 16 ಎಕರೆ ಜಮೀನಿದ್ದು, 4ಎಕರೆ ತೆಂಗಿನ ತೋಟ, ಗದ್ದೆ …
Read More »ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪೋಲಿಸರ್ ಗೆ ಒಂದು ಪಾಲು ಆರೋಪ ಮಾಡಿದ ಶಾಸಕ ;
ರಾಯಚೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳು ದಂಧೆಕೋರರು ಕೋಟಿ ಕೋಟಿ ರೂ ಸಂಪಾದಿಸುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯನ್ನು ಸಹಜವಾಗಿ ಶಾಸಕರ ಹಿಂಬಾಲಕರು ಗುತ್ತಿಗೆದಾರರು ಅಥವಾ ಇನ್ನಿತರ ವ್ಯಕ್ತಿಗಳು ಮಾಫಿಯಾದಲ್ಲಿ ಪಾಲ್ಗೊಳ್ತಾರೆ. ಆದ್ರೆ ರಾಯಚೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಸಹ ತಮ್ಮ ಕೆಲಸಕ್ಕೆ ವ್ಯಾಲೆಂಟರಿ ರಿಟೈರ್ಡ್ ಮೆಂಟ್ ಕೊಟ್ಟು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರಂತೆ. ಈ ಮಾತನ್ನ ಕೇವಲ ಯಾರೋ ಹೇಳಿದ ಮಾತಲ್ಲ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಈ ಬಗ್ಗೆ …
Read More »ನರಗುಂದ ಠಾಣೆ ಮೆಟ್ಟಿಲು ಏರಿದ ಅಣ್ಣ – ತಮ್ಮಂದಿರ ಜಗಳ …
ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ 112 ತುರ್ತು ಸಹಾಯವಾಣಿಗೆ ಚಿಕ್ಕನರಗುಂದ ಗ್ರಾಮದಲ್ಲಿ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಅಣ್ಣ ತಮ್ಮಂದಿರ ನಡುವೆ ಜಗಳವಾಗಿದ್ದು, ಸ್ಥಳದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಮುಂದಿನ ಕ್ರಮಕ್ಕಾಗಿ ನರಗುಂದ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಂತರಿಸಲಾಗಿದೆ. ಕ್ಷುಲಕ ಕಾರಣಕ್ಕಾಗಿ ಜಗಳವಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಧ್ಯ ಪ್ರಕರಣ ನರಗುಂದ ಪೋಲಿಸ್ ಠಾಣೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ,
Read More »ಹು – ಧಾರವಾಡ ಪೋಲಿಸ್ ಕಮೀಷನರೇಟ್ ಘಟಕದ ಆಯುಕ್ತರಾಗಿ ಸಂತೋಷ್ ಬಾಬು ಅಧಿಕಾರ ಸ್ವೀಕಾರ
ಮಾನ್ಯ ಶ್ರೀ K ಸಂತೋಷ್ ಬಾಬು, IPS ರವರು ಇಂದು ಹು-ಧಾ ನಗರ ಪೊಲೀಸ್ ಕಮೀಷನರೇಟ್ ಘಟಕದ ಆಯುಕ್ತರಾಗಿ ಹೆಚ್ಚುವರಿ ಅಧಿಕಾರ ಸ್ವೀಕರಿಸಿ ಶುಕ್ರವಾರ ಘಟಕದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ- ಸಿಬ್ಬಂದಿಗಳಿಗೆ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಲಾಯಿತು. ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡಲ್ಲಿನ ಎಲ್ಲಾ …
Read More »ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮವನ್ನು
ಹುಬ್ಬಳ್ಳಿ ನಗರದ ಮದುರಾ ಕಾಲೋನಿಯಲ್ಲಿ ಇಂದು ಸಸಿ ನೆಡುವ ಕಾರ್ಯಕ್ರಮವನ್ನು ಹುಬ್ಬಳ್ಳಿ ತಾಲೂಕಿನ ವತಿಯಿಂದ ಇಂದು ಜಿಲ್ಲಾಧ್ಯಕ್ಷರಾದ ಬಸವರಾಜ ಜೋಗಣ್ಣವರ ಹಾಗೂ ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಜಗದೀಶ ಕೋಟುರ ನೇತೃತ್ವದಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷರಾದ ಬಸವರಾಜ ಬಡಿಗೇರ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ಹಿರೇಮಠಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀಕಾಂತ ನೆಟೆಗಲ್ ಜಿಲ್ಲಾ ಉಪಾಧ್ಯಕ್ಷರಾದ ಈರಣ್ಣ ಜೀರಿಗವಾಡ ಹುಬ್ಬಳ್ಳಿತಾಲೂಕು ಗೌರವ ಅಧ್ಯಕ್ಷರು ಮೆಹಬೂಬ್ ಮಕಾನದಾರ ಹುಬ್ಬಳ್ಳಿ ತಾಲೂಕು ಕಾರ್ಯಧ್ಯಕ್ಷರಾದ ವಿರೂಪಾಕ್ಷ …
Read More »ವರ್ಗಾವಣೆಗೊಂಡ ಶಾಲಾ ಶಿಕ್ಷಕಿ, ಗಳಗಳನೆ ಕಣ್ಣೀರ ಇಟ್ಟ ಮಕ್ಕಳು,
ಧಾರವಾಡ ; ವರ್ಗಾವಣೆಗೊಂಡ ಹುಬ್ಬಳ್ಳಿಯ ಹೆಬಸೂರು ಶಾಲೆಯ ಪ್ರಧಾನ ಗುರುಮಾತೆಗೆ ವಿದ್ಯಾರ್ಥಿನಿಯರು ಕಣ್ಣೀರು ಸುರಿಸುತ್ತಾ ವಿದಾಯ ಹೇಳಿದ್ದಾರೆ. ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಕಣ್ಣೀರ ಕೋಡಿ ಹರಿದಿದೆ. ಶಾಲೆಯ ಪ್ರಧಾನ ಗುರುಮಾತೆ ರತ್ನಾ ಗ್ರಾಮಪುರೋಹಿತ ಅವರ ವರ್ಗಾವಣೆಯಾಗಿತ್ತು. ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮರು ಹೊಂದಾಣಿಕೆ ವರ್ಗಾವಣೆ ಅಧಿನಿಯಮದ ಅಡಿಯಲ್ಲಿ ಕುಂದಗೋಳಕ್ಕೆ ವರ್ಗಾವಣೆ ಮಾಡಿದೆ. ಶಾಲೆಯಿಂದ ಹೊರಟಿದ್ದ ಶಿಕ್ಷಕಿ ರತ್ನಾ ಅವರನ್ನು ವಿದ್ಯಾರ್ಥಿನಿಯರು ಸುತ್ತುವರಿದಿದ್ದಾರೆ. …
Read More »ಆಸ್ತಿಗಾಗಿ ಅಣ್ಣನಿಂದ ತಮ್ಮನ ಕೊಲೆ
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ತಮ್ಮನನ್ನೇ ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ. ಗದಗ ಜಿಲ್ಲೆಯ ರೋಣ ಪಟ್ಟಣದ ಬಳಿಯ ಜಮೀನಿನಲ್ಲಿ ಇಂದು ಮಧ್ಯಾಹ್ನ ಜರುಗಿದ್ದು, ಶೇಕಪ್ಪ ನವಲಗುಂದ (36) ಎಂಬಾತನೇ ಕೊಲೆಗೀಡಾದ ವ್ಯಕ್ತಿ. ಮೃತ ಶೇಕಪ್ಪ ಹುಬ್ಬಳ್ಳಿಯ ಬಿ ಆರ್ ಟಿಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಕಲಹ ನಡೆದಿತ್ತು ಎನ್ನಲಾಗಿದ್ದು, ಇಂದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





