Breaking News

BigTv News

ಒಮಿಕ್ರಾನ್ ತಳಿ ಕುರಿತು ಮಹತ್ವದ ಮಾಹಿತಿ

ನವದೆಹಲಿ: ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್-19 ಮಹಾಮಾರಿ ಇನ್ನೂ ಸಂಪೂರ್ಣ ವಾಗಿ ಕೊನೆಯಾಗದಿರುವ ಹೊತ್ತಿನಲ್ಲಿ ಕರೊನಾದ ಒಮಿಕ್ರಾನ್ ಪ್ರಭೇದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ತಳಿಯೊಂದು ಪತ್ತೆಯಾಗಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ಮೂರು ವರ್ಷಗಳ ಹಿಂದೆ ದಾಂಗುಡಿಯಿಟ್ಟ ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದ ಮನುಕುಲಕ್ಕೆ ದುಃಸ್ವಪ್ನವಾಗಿ ಕಾಡಿತ್ತು. ಬಹುತೇಕ ವಾರಕ್ಕೊಂದು ಎನ್ನುವಂತೆ ಅದರ ಹೊಸ ಹೊಸ ತಳಿಗಳು ಪತ್ತೆಯಾಗಿ ವಿಜ್ಞಾನ ಹಾಗೂ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿತ್ತು. ಇದೀಗ ಅದಕ್ಕಿಂತಲೂ ಅಧಿಕ ಅಪಾಯಕಾರಿಯಾದ ವೈರಸ್ …

Read More »

ನವೀಕೃತ ವಿರೋಧ ಪಕ್ಷದ ನಾಯಕರ ಕಚೇರಿ ಉದ್ಘಾಟನೆ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹುಬ್ಬಳ್ಳಿ ಕೇಂದ್ರ ಕಛೇರಿಯಲ್ಲಿ ನಿರ್ಮಿಸಿದ ನವೀಕೃತ ವಿರೋಧ ಪಕ್ಷದ ನಾಯಕರ ಕಚೇರಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು, ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ವಿರೋಧ ಪಕ್ಷದ ನಾಯಕರಾದ ದೊರಾಜ್ ಮನ್ನೆಕುಂಟ್ಲಾ, ಉಪಮೇಯರ್ ಉಮಾ ಮುಕುಂದ, ಪಾಲಿಕೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ನಿರಂಜನ ಹಿರೇಮಠ, ಇಮ್ರಾನ್ ಎಲಿಗಾರ, ಸಂದೀಲ್ ಕುಮಾರ್, ರೂಪಾ ಶೆಟ್ಟಿ,ಪ್ರಕಾಶ ಬುರಬುರೆ, …

Read More »

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ‌: ಇಂದು ಸಿಎಂ ಚರ್ಚೆ

ಬೆಂಗಳೂರು: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಪ್ರಕರಣ ಇದೇ 30 ರಂದು ಸುಪ್ರೀಂ ಕೋರ್ಟ್‌ ನಲ್ಲಿ ವಿಚಾರಣೆಗೆ ಬರಲಿದೆ. ನ್ಯಾಯಾಲಯದಲ್ಲಿ ರಾಜ್ಯದ ನಿಲು ವನ್ನು ಪ್ರತಿಪಾದಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮುಕುಲ್ ರೋಹಟಗಿ ಜತೆ ಮಂಗಳವಾರ ಚರ್ಚೆ ನಡೆಸಲಿದ್ದಾರೆ. ಸಭೆಯ ಬಳಿಕ ಬೊಮ್ಮಾಯಿ ಅವರು ಕೇಂದ್ರ ಸಚಿವ ಪೀಯೂಷ್ ಗೋಯೆಲ್‌ ಮತ್ತು ಒಂದಿಬ್ಬರು ಕೇಂದ್ರ ಸಚಿವರನ್ನೂ ಭೇಟಿ ಮಾಡಲಿದ್ದಾರೆ. ಪಕ್ಷದ …

Read More »

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ಬಂಧನ

ಆಂಧ್ರಪ್ರದೇಶ: ಇಲ್ಲಿಯ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನ ಪೊಲೀಸರು ಬಂಧಿಸಿದ್ದಾರೆ. YSRTP ಅವ್ರ ಬೆಂಬಲಿಗರು ಮತ್ತು ಕೆಸಿಆರ್ ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆ ನಡೆದಿದ್ದು, ನಂತ್ರ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವ್ರ ಸಹೋದರಿ ವೈ.ಎಸ್.ಶರ್ಮಿಳಾ ಅವರನ್ನ ಬಂಧಿಸಿದ್ದಾರೆ. ವೈಎಸ್ ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ಶರ್ಮಿಳಾ ಅವರನ್ನ ಪೊಲೀಸರು ಬಂಧಿಸಿದ್ದಾರೆ. ಪಾದಾಯಾತ್ರೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ಈ ನಿರ್ಧಾರವನ್ನ ಮೊದಲೇ …

Read More »


ಚೆನ್ನೈನ ಯುಎಸ್ ಕಾನ್ಸುಲೇಟ್‌ನ ಅಧಿಕಾರಿ ಮಾಜಿ ಪ್ರಧಾನಿ ಭೇಟಿ

ಬೆಂಗಳೂರು: ಚೆನ್ನೈನ ಯುಎಸ್ ಕಾನ್ಸುಲೇಟ್‌ನ ರಾಜಕೀಯ ಮತ್ತು ಆರ್ಥಿಕ ಮುಖ್ಯಸ್ಥರಾದ ವಿರ್ಸಾ ಪರ್ಕಿನ್ಸ್ ಅವರು ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ನಿನ್ನೆ ಸಂಜೆ ಆಗಮಿಸಿ, ಗೌಡರ ಆರೋಗ್ಯ ವಿಚಾರಿಸಿದ ನಂತರ ಕೆಲ ಸಮಯ ಚರ್ಚಿಸಿದರು. ವಿರ್ಸಾ ಪರ್ಕಿನ್ಸ್ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು ಎಂದು ಹೇಳಿದ ಗೌಡರು, ತಮ್ಮ ಆತ್ಮಚರಿತ್ರೆ ಪುಸ್ತಕವನ್ನು ವಿರ್ಸಾ ಪರ್ಕಿನ್ಸ್ ಅವರಿಗೆ ನೀಡಿದರು.

Read More »

ಭಾರತದಲ್ಲಿ ಕೊರೋನಾ  ಪ್ರಕರಣ ಇಳಿಕೆ

ನವದೆಹಲಿ: ಭಾರತದಲ್ಲಿ ಕೊರೋನಾ ಇಳಿಕೆ ಪ್ರಕರಣ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 215 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,72,068ಕ್ಕೆ ಏರಿಕೆಯಾಗಿದೆ. ಅಲ್ಲದೇ, ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,30,615ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,982ಕ್ಕೆ ಇಳಿಕೆಯಾಗಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 355 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ …

Read More »

ಕಬ್ಬಿಣದ ರಾಡಗಳು ಕಳ್ಳತನ : ಆರೋಪಿಗಳು ಪೋಲಿಸ್ ರ ಬಲೆಗೆ

ಹುಬ್ಬಳ್ಳಿ : ನಗರದ ಗ್ರಾಮೀಣ ಪೊಲೀಸ್ ಠಾಣೆ ಹುಬ್ಬಳ್ಳಿಯ ವರವಲಯದಲ್ಲಿ ಕಟ್ಟಡ ಕಾಮಗಾರಿ ಗೆಂದು ತಂದು ಹಾಕಿರುವ ಕಬ್ಬಿಣದ ರಾಡಗಳು ಕಳ್ಳತನ ಮಾಡುವವರ ಬಂಧನ ಆರೋಪಿಗಳನ್ನು ಬಂಧಿಸಲಾಗಿದೆ. ಮಾರುತಿ ಬಸಪ್ಪ ಅರಣ ಶಿಕಾರಿ ಹಾಗೂ ಪೀರ್ ಸಾಬ್ ಮಾಬುಸಾಬ್ ಕೊಲ್ಕರ್ ಇವರ ಕಡೆಯಿಂದ ಸುಮಾರು 85,000 ಬೆಲೆಬಾಳುವ ಕಬ್ಬಿಣದ ರಾಡುಗಳು ಮತ್ತು ಸುಮಾರು ಐದು ಲಕ್ಷ ಬೆಲೆಬಾಳುವ ಟಾಟಾ ಇಂಟ್ರಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ …

Read More »

ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡ ಚೀನಾ

ಬೀಜಿಂಗ್‌: ದೇಶದಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಉಲ್ಬಣಿಸುತ್ತಿರುವ ನಡುವೆ ಕಠಿಣ ಲಾಕ್‌ಡೌನ್‌ ವಿರೋಧಿಸಿ ನಾಗರಿಕರು ಅಧ್ಯಕ್ಷ ಷಿ ಜಿನ್‌ಪಿಂಗ್‌ ಆಡಳಿತದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ತಣ್ಣಗಾಗಿಲ್ಲ. ಆದರೂ ನಾಗರಿಕರ ಒತ್ತಡಕ್ಕೆ ಮಣಿಯದ ಸರ್ಕಾರ, ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡಿದೆ. ಕಠಿಣ ಲಾಕ್‌ಡೌನ್‌ ಹೇರಿದ್ದ ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅ‍ಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡು 10 ಜನರು ‌ಮೃತಪಟ್ಟಿದ್ದರು. ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್‌ ಮುಸ್ಲಿಮರು …

Read More »

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಅಗ್ನಿಸಾಕ್ಷಿ ವೈಷ್ಣವಿ

ಬೆಂಗಳೂರು : ಅಗ್ನಿಸಾಕ್ಷಿ’ ಹಾಗೂ `ಬಿಗ್ ಬಾಸ್’ ನಲ್ಲಿ ಖ್ಯಾತಿ ಘಳಿಸಿದ್ದ ಕಿರುತೆರೆ ನಟಿ ವೈಷ್ಣವಿ ಗೌಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಾಕಷ್ಟು ಸಮಯದ ಬಳಿಕ ವೈಷ್ಣವಿ ಗೌಡ ಕಿರುತೆರೆಯತ್ತ ಮತ್ತೆ ಮುಖ ಮಾಡಿದ್ದಾರೆ. ಹೊಚ್ಚ ಹೊಸ ಪಾತ್ರದ ಮೂಲಕ ಟಿವಿ ಪರದೆಯಲ್ಲಿ ಮಿಂಚಲು ವೈಷ್ಣವಿ ಗೌಡ ರೆಡಿಯಾಗಿದ್ದಾರೆ. ಕಿರುತೆರೆಯ ಟಾಪ್ ಒನ್ ಸೀರಿಯಲ್ ಅಗ್ನಿಸಾಕ್ಷಿ ನಾಯಕಿಯಾಗಿ ಮೋಡಿ ಮಾಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಲಗ್ಗೆ ಕನ್ನಡಿಗರ …

Read More »

ಸುಮಲತಾ ಅಂಬರೀಶ್ ಅವರ ಆಪ್ತ ಸಚ್ಚಿದಾನಂದ ಮೂರ್ತಿ ಬಿಜೆಪಿಗೆ ಸೇರ್ಪಡೆ

ಬೆಂಗಳೂರು-ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಿ ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸಿರುವ ಬಿಜೆಪಿ, ಸಂಸದೆ ಸುಮಲತಾ ಅಂಬರೀಶ್ ಅವರ ಆಪ್ತ ಸಚ್ಚಿದಾನಂದ ಮೂರ್ತಿ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿದೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಡ್ಯ ಜಿಲ್ಲೆ ಸಂಸದೆ ಸುಮಲತಾ ಅಂಬರೀಶ್ ಅವರ ಬಲಗೈ ಬಂಟ ಎಂದು ಗುರುತಿಸಿಕೊಂಡಿದ್ದ ಸಚ್ಚಿದಾನಂದ ಅವರನ್ನು ಪಕ್ಷದ ಮುಖಂಡರು ಶಾಲು ಹೊದಿಸಿ ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಸಚಿವರಾದ ನಾರಾಯಣ …

Read More »