Breaking News

BigTv News

ಹುಬ್ಬಳ್ಳಿಯಲ್ಲಿ ಬನಾರಸ್ ಸಿನಿಮಾ ವೀಕ್ಷಿಸಿದ ಝೈನದ ಖಾನ್

ಹುಬ್ಬಳ್ಳಿ: ಬನಾರಸ್ ಸಿನಿಮಾ ಭರ್ಜರಿ ಎಂಟ್ರಿಕೊಟ್ಟಿದ್ದು, ಚೊಚ್ಚಲ ಎಂಟ್ರಿಯಲ್ಲೇ ಝೈನದ ಖಾನ್ ಜೈಕಾರ ಹಾಕಿಸಿಕೊಂಡಿದ್ದಾರೆ. ಇಂದು ಚಿತ್ರದ ತಂಡ ಹುಬ್ಬಳ್ಳಿಯಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಇಲ್ಲಿನ ಸ್ಟೇಷನ್‌ ರಸ್ತೆಯ ಚಂದ್ರಕಲಾ ಚಿತ್ರಮಂದಿರದಲ್ಲಿ ಝೈನ್ ಖಾನ್ ಫ್ಯಾನ್ ಇಂಡಿಯಾ ಸಿನಿಮಾಗೆ ಭರ್ಜರಿ ವೆಲ್ ಕಮ್ ಮಾಡಲಾಗಿದೆ. ಥೀಯೇಟರ್ ಗಳ ಮುಂದೆ ಫ್ಯಾನ್ಸ್ ಕಿಕ್ಕಿರಿದು ಸೇರಿ ಪಟಾಕಿ ಸಿಡಿಸಿ, ಚಿತ್ರದ ನಾಯಕ ಹಾಗೂ ನಾಯಕಿಗೆ ಹೂಮಳೆ ಸೂರಿಸಿದ್ದಾರೆ. ಇನ್ನು ಶಾಸಕ ಜಮೀರ್ ಅಹ್ಮದ್ …

Read More »

ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘ ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರ ಕುರಿತಂತೆ ದಲಿತ ವಿರೋಧಿ ಹಾಗೂ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಕಳೆದ 15 ವರ್ಷಗಳು ಗತಿಸುತ್ತಿದ್ದರು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸಭೆಯ ನಡಾವಳಿ ಅನುಷ್ಠಾನ ಮಾಡದೇ ಇರುವುದು ಖಂಡನೀಯ. ಕೂಡಲೇ ಪಾಲಿಕೆ ಪೌರಕಾರ್ಮಿಕ …

Read More »

ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಮಾಜಿ ಸಿಎಂ ಗರಂ

ಹುಬ್ಬಳ್ಳಿ: ತನ್ನ ಪರ ಘೋಷಣೆ ಕೂಗಿದವರ ವಿರುದ್ಧವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸಿದ್ದರಾಮಯ್ಯ ಅವರು ಮಂಗಳವಾರ ಬೆಳಗ್ಗೆ ನಗರದ ಹೊಟೇಲ್‌ವೊಂದಕ್ಕೆ ಆಗಮಿಸಿದ್ದರು. ಈ ವೇಳೆ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಕಾಂಗ್ರೆಸ್ ಸ್ಥಳೀಯ ಮುಖಂಡ ಗಿರೀಶ ಗದಿಗೆಪ್ಪಗೌಡರ ಅವರು ‘ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಗದಿಗೆಪ್ಪಗೌಡರ ಜತೆ ಬಂದವರು ‘ಹೌದೋ ಹುಲಿಯಾ’ ಎಂದು ಪ್ರತಿಕ್ರಿಯಿಸಿದರು. ಈ ಸಂಗತಿ ಸಿದ್ದರಾಮಯ್ಯ ಅವರನ್ನು …

Read More »

ಬೆಂಗಳೂರುರಿಗೆ ಪ್ರಧಾನಿ ಆಗಮನ : 4000 ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜನೆ

ಬೆಂಗಳೂರು: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಬಂದೋಬಸ್ತ್‌ ವ್ಯವಸ್ಥೆಯ ಸಿದ್ಧತೆ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ಪ್ರಧಾನ ಮಂತ್ರಿಗಳ ಕಾರ್ಯಕ್ರಮ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು …

Read More »

ʻಆರ್ಥಿಕ ಸುಧಾರಣೆಗಳಿಗಾಗಿ ದೇಶವು ಮಾಜಿ ಪ್ರಧಾನಿ ಅವರಿಗೆ ಋಣಿಯಾಗಿದೆ : ನಿತಿನ್ ಗಡ್ಕರಿ

ನವದೆಹಲಿ: ʻಆರ್ಥಿಕ ಸುಧಾರಣೆಗಳಿಗಾಗಿ ದೇಶವು ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆʼ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಟಿಐಒಎಲ್ ಅವಾರ್ಡ್ಸ್ 2022 ಈವೆಂಟ್‌ನಲ್ಲಿ ಮಾತನಾಡಿದ ಗಡ್ಕರಿ, 1991 ರಲ್ಲಿ ವಿತ್ತ ಸಚಿವರಾಗಿದ್ದ ಮನ್‌ಮೋಹನ್ ಸಿಂಗ್ ಅವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು ಮತ್ತು ಅದು ಉದಾರ ಆರ್ಥಿಕತೆಗೆ ನಾಂದಿ ಹಾಡಿತು. ಈ ಎಲ್ಲಾ ಕಾರಣಕ್ಕೆ ದೇಶವು ಮನಮೋಹನ್ …

Read More »

ಶಾಸಕ ಸತೀಶ್‌ ಜಾರಕಿಹೊಳಿ ವಿರುದ್ಧ ಸಿಡಿದೆದ್ದ
ಬಿಜೆಪಿ ನಾಯಕರು

ಬೆಂಗಳೂರು: ಹಿಂದೂ ಧರ್ಮದ ಬಗ್ಗೆ ಸತೀಶ್‌ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಸತೀಶ್‌ ಜಾರಕಿಹೊಳಿ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಗರದ ಮೈಸೂರು ಬ್ಯಾಂಕ್‌ ಸರ್ಕಲ್‌ ನಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಪ್ರತಿಭಟನೆ ನಡೆಸಲಿದ್ದಾರೆ. ಇತ್ತ, ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ಕೊತಕೊತ ಕುದಿಯುತ್ತಿದೆ. ಬೆಳಗಾವಿಯಲ್ಲೂ ಸಹ ಪ್ರತಿಭಟನೆಯ ಕಾವು …

Read More »

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ  : ಶಿಕ್ಷಕ‌ ಬಂಧನ

ಹೆಬ್ಬಾಳ : ನಗರದ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ದೈಹಿಕ ಶಿಕ್ಷಕನನ್ನು ಬಂಧಿಸಲಾಗಿದೆ. ಪೋಕ್ಸೊ ಕಾಯಿದೆಯಡಿ ಬಂಧಿತನಾಗಿರುವ ಶಿಕ್ಷಕನನ್ನು ಆಂಜಿನಪ್ಪ (೫೦) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಮನೆಯಲ್ಲಿ ಮಂಕಾಗಿದ್ದ ಸಂದರ್ಭದಲ್ಲಿ ವಿಚಾರಿಸಿದ ಈ ಸಂಗತಿ ಬೆಳಕಿಗೆ ಬಂದಿದ್ದು, ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈಗ ಆರೋಪಿಯನ್ನು ಬಂಧಿಸಲಾಗಿದೆ. ಈ ನಡುವೆ ಇದೇ ಶಿಕ್ಷಕ ಇನ್ನೂ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು, …

Read More »

ಸಿಎಂಗೆ ತಿರುಗೇಟು ನೀಡಿದ  ಸಿ.ಎಂ.ಇಬ್ರಾಹಿಂ

ಬೆಂಗಳೂರು: ಬಾಯಿಯ ಬಂಡವಾಳ ಇಟ್ಟುಕೊಂಡೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರ ಪರ ಭಾಷಣ ಮಾಡಿದಾಗ ನಮ್ಮ ಬಾಯಿಯೇ ಬಂಡವಾಳ ಆಗಿರಲಿಲ್ಲವೇ ಎಂದು ಜೆಡಿಎಸ್‌ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಬ್ರಾಹಿಂಗೆ ಬಾಯಿಯೇ ಬಂಡವಾಳ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ಪಾದಯಾತ್ರೆಯಲ್ಲಿ ನನ್ನ ಕ್ಯಾಸೆಟ್‌ ಹಾಕಿಕೊಂಡು ಮತ ಕೇಳಲಿಲ್ಲವೇ? ಸುತ್ತೂರು ಮಠದ ಶ್ರೀಗಳ ಸಹಾಯ ಇಲ್ಲದೆ ವರುಣಾದಲ್ಲಿಯೂ ಜಯ ಗಳಿಸುವುದಿಲ್ಲ. ಸಿದ್ದರಾಮಯ್ಯರನ್ನು ನೋಡಿದರೆ ಅಯ್ಯೋ …

Read More »

ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ತಲುಪಿದ ಭಾರತ್‌ ಜೋಡೊ ಯಾತ್ರೆ

ನಾಂದೇಡ್‌, ಮಹಾರಾಷ್ಟ್ರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯು ತೆಲಂಗಾಣದಿಂದ ಮಹಾರಾಷ್ಟ್ರ ತಲುಪಿತು. ದೊಂದಿಯೊಂದನ್ನು ಹಿಡಿದು ಮಹಾರಾಷ್ಟ್ರ ಪ್ರವೇಶಿಸಿದ ರಾಹುಲ್‌, ಮುಂದಿನ 15 ದಿನಗಳ ಮಹಾರಾಷ್ಟ್ರ ಯಾತ್ರೆಯಲ್ಲಿ ರಾಜ್ಯದ ಜನರ ಕಷ್ಟಗಳನ್ನು ಆಲಿಸುವುದಾಗಿ ಹೇಳಿದ್ದಾರೆ. ಗುರುನಾನಕ್‌ ಜಯಂತಿ ಅಂಗವಾಗಿ ನಾಂದೇಡ್‌ನ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ರಾಹುಲ್‌ ಅವರು 62ನೇ ದಿನದ ಯಾತ್ರೆಗೆ ಚಾಲನೆ ನೀಡಿದರು. ‘ಭ್ರಾತೃತ್ವ ಮತ್ತು ಸಮಾನತೆಗಾಗಿ ರಾಹುಲ್‌ ಅವರು …

Read More »

ವಂದೇ ಭಾರತ್ ರೈಲು ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ

ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ವಂದೇ ಭಾರತ್ ರೈಲು  ಚೆನ್ನೈನಿಂದ ಮೈಸೂರಿಗೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದ್ದು ಎಲ್ಲರ ಗಮನಸೆಳೆದಿದೆ. ದಕ್ಷಿಣ ಭಾರತದ ಮೊದಲ, ದೇಶದ ಅತ್ಯಂತ ವೇಗದ ರೈಲು ಎಂದೇ ಹೆಸರಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ರೈಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಅಗತ್ಯ …

Read More »