Breaking News

BigTv News

ಮನೆಗಳಿಗೆ ನುಗ್ಗುತ್ತಿದೆ ಚರಂಡಿ ನೀರು : ಪಾಲಿಕೆ ನಿಷ್ಕಾಳಜಿಗೆ ಜನಜೀವನ ತತ್ತರ

ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆಯಿಂದ ನಮ್ಮ ವಠಾರಗಳೆಲ್ಲ ಸ್ಮಾರ್ಟ್ ಆಗುತ್ತೆ ಅಂದುಕೊಂಡವರು ಈಗ ಮನೆ ಬಿಟ್ಟು ಮಠ ಸೇರುವಂತಾಗಿದೆ . ಪಾಲಿಕೆಯ ನಿಷ್ಕಾಳಜಿಯಿಂದ ಜನರು ಆಸ್ಪತ್ರೆಗೆ ಅಲೆದಾಡುವಂತಾಗಿದೆ . ವಾರ್ಡ್ ನಂಬರ್ 47 ರಲ್ಲಿ ಬರುವ ವಿದ್ಯಾನಗರದಲ್ಲಿ ಸುಮಾರು ದಿನಗಳಿಂದ ಒಳಚರಂಡಿ ನೀರು ಮನೆಗೆ ಹೊಕ್ಕು ಮನೆ ಮಂದಿಯೆಲ್ಲ ಮನೆ ಬಿಟ್ಟು ಮಠ ಸೇರುವಂತಾಗಿದೆ . ಇಷ್ಟು ದಿನ ನಾವೆಲ್ಲರೂ ಮನೆಗೆ ಮಳೆ ನೀರು ನುಗ್ಗಿರುವುದನ್ನು ನೋಡಿದ್ದೇವೆ . …

Read More »

ವರುಣನ ಆರ್ಭಟಕ್ಕೆ ಪೇಡಾ ನಗರಿ ಜನತೆ ಚಲ್ಲಾಪಿಲ್ಲಿ

ಧಾರವಾಡ: ಬಿಸಿಲಿನ ಬೇಗೆಯಿಂದ ಬೇಸತ್ತಿದ್ದ ಪೇಡಾ ನಗರಿ ಧಾರವಾಡದ ಜನತೆಗೆ ಇಂದು ಮಧ್ಯಾಹ್ನವೇ ಮಳೆರಾಯ ತಂಪೇರೆದಿದ್ದಾನೆ. ಮುಂಜಾನೆಯಿಂದಲ್ಲೇ ನಗರದಲ್ಲಿ ಮೋಡ ಮುಸುಕಿನ ವಾತಾವರಣ ಕಂಡುಬಂದಿತ್ತು. ಆದರೆ ಮದ್ಯಾಹ್ನದ ವೇಳೆ ಗುಡುಗು ಸಹಿತ ಮಳೆಯಾಗಿದ್ದು, ಮಳೆರಾಯನಿಂದ ತಪ್ಪಿಸಿಕೊಳ್ಳಲು ಕೆಲಕಾಲ ವಾಹನ ಸವಾರರ ಓಡಾಟ ನಡೆಸಿದರು. ನಗರದ ಜಿಲ್ಲಾಧಿಕಾರಿ ಆವರಣ, ಹೊಸಯಲ್ಲಾಪುರ, ಮಾಳಮಡ್ಡಿ, ತೇಜಸ್ವಿ‌ನಗರ, ಕಲ್ಯಾಣ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಗುಡುಗು ಸಹಿತ ವರುಣ ಅರ್ಭಟಿಸಿದ್ದಾನೆ. ಇನ್ನೂ ಮಳೆರಾಯನ ಅರ್ಭಟಕ್ಕೆ ಕಚೇರಿ …

Read More »

ವಿಶೇಷ ವಾಗಿ ಶಾಲಾ ಆರಂಭೋತ್ಸವ ಚಾಲನೆ

ಹೆಬ್ಬಳ್ಳಿ : ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಜನತಾ ಪ್ಲಾಟ ಹೆಬ್ಬಳ್ಳಿ, ಸದ್ಯದಲ್ಲೇ ದತ್ತಿನಿಧಿ ಸ್ಥಾಪನೆ, ಶಾಲಾ ಆರಂಭೋತ್ಸವದಲ್ಲಿ ಮುಖ್ಯ ಶಿಕ್ಷಕಿ ಗೀತಾ ದೊಡಮನಿ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಜನತಾ ಪ್ಲಾಟಿನಲ್ಲರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರಂಭೋತ್ಸವಕ್ಕೆ ನಿನ್ನೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ವಾಸಂಬಿ ಹಾಜರಿದ್ದು ಮಕ್ಕಳಿಗೆ ಸಿಹಿ ಹಂಚಿದರು, ಮಳೆಬಿಲ್ಲು ಕಾರ್ಯಕ್ರಮ ಮತ್ತು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ …

Read More »

ಆನ್ ನಲ್ಲಿ ಕಾರು ಬಾಡಿಗೆ ಹುಡುಕಾಡುವ ಮುನ್ನ ಎಚ್ಚರ ಎಚ್ಚರ

ಹುಬ್ಬಳ್ಳಿ : ಪುಣೆಯಲ್ಲಿ ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆ ನೀಡುವುದಾಗಿ ನಂಬಿಸಿ ನಗರದ ಮಹಿಳೆಯೊಬ್ಬರಿಂದ 32,000 ರೂ . ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಉಣಕಲ್‌ನ ಲಲಿತಾ ಎಂಬುವರು ಪುಣೆಗೆ ಹೋಗಿ ಸ್ಥಳೀಯವಾಗಿ ಸುತ್ತಾಡುವ ಸಲುವಾಗಿ ಸೆಲ್ಫ್ ಡ್ರೈವಿಂಗ್ ಕಾರು ಬೇಕೆಂದು ಗೂಗಲ್‌ನಲ್ಲಿ ಹುಡುಕಾಡಿದ್ದರು . ಅದರಲ್ಲಿ ಸಿಕ್ಕ ಕೃಷ್ಣ ಕಾರ್ ರೆಂಟಲ್ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ಹೆಸರು ವಿಳಾಸ ದಾಖಲಿಸಿ ಸಬ್‌ಮಿಟ್ …

Read More »

ಹುಬ್ಬಳ್ಳಿ ಗಲಭೆ : 7 ಜನರಿಗೆ ಜಾಮೀನು

ಹುಬ್ಬಳ್ಳಿ : ನಗರದ ಶಾಂತಿಯನ್ನು ಹಾಳು ಮಾಡಿದ್ದ ಕೋಮುಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದವರಲ್ಲಿ ಏಳು ಜನರಿಗೆ ಜಾಮೀನು ದೊರೆತಿದೆ , ತಿಂಗಳ ಹಿಂದೆಯಷ್ಟೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ನಡೆದ ಗಲಭೆ ಪ್ರಕರಣದಲ್ಲಿ ಬಂಧಿತರಾದ 156 ಆರೋಪಿಗಳಲ್ಲಿ ಏಳು ಮಂದಿಗೆ ಜಾಮೀನು ದೊರೆತಿದ್ದು , ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿದ್ಯಾರ್ಥಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ. ಜಾಮೀನಿಗೆ 148 ಮಂದಿಯಿಂದ ಅರ್ಜಿ ಸಲ್ಲಿಸಲ್ಲಿಸಲಾಗಿತ್ತುಅರ್ಜಿ …

Read More »

ಗ್ರಾಮ ದೇವತೆಯರ ಮೂರ್ತಿ ಪ್ರತಿಷ್ಠಾಪನೆಗೆ ಉದ್ಘಾಟಿಸಿದ ಕೇಂದ್ರ ಸಚಿವ

ಕಲಘಟಗಿ : ಮತಕ್ಷೇತ್ರದ ದ್ಯಾವನಕೊಂಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದೇವತೆ ದೇವಸ್ಥಾನ ಹಾಗೂ ಗ್ರಾಮ ದೇವತೆಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನೇರವೇರಿಸಿದರು . ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಿಂಗಪ್ಪಸುತಗಟ್ಟಿ , ಶಿವನಗೌಡ ಪಾಟೀಲ , ಪುರದನಗೌಡರ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸದಸ್ಯರು ಹಾಗೂ ಅಪಾರ ದೇವಿಯ ಭಕ್ತರು ಉಪಸ್ಥಿತರಿದ್ದರು .

Read More »

ಕರಕುಶಲ ವಸ್ತುಗಳ ಮಳಿಗೆಗೆ ಚಾಲನೆ

ಹುಬ್ಬಳ್ಳಿ: ಸ್ಥಳೀಯ ಕುಶಲಕರ್ಮಿ ಗಳು , ಉತ್ಪನ್ನಗಳು ಹಾಗೂ ಕೈಗಾರಿಕೆ ಗಳಿಗೆ ಉತ್ತೇಜನ ನೀಡುವ ಕೇಂದ್ರ ಸರ್ಕಾರದ ಒಂದು ನಿಲ್ದಾಣ , ಒಂದು ಉತ್ಪನ್ನ ‘ ಯೋಜನೆಯಡಿ ನಗರದ ಸಿದ್ಧಾರೂಢ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಕರಕುಶಲ ವಸ್ತುಗಳ ಮಳಿಗೆಗೆ ಚಾಲನೆ ನೀಡಲಾಯಿತು. ವಾರ ಗ್ರಾಮೋದ್ಯೋಗ ಆಯೋಗದ ಬೆಳಗಾವಿಯ ಖಾನಾಪುರದ ಕೇಂದ್ರ ಖಾದಿ ಮತ್ತು ಗ್ರಾಮೀಣ ಕುಂಬಾರಿಕೆ ಕುಂಬಾರಿಕೆ ಸಂಸ್ಥೆಮಳಿಗೆ ತೆರೆದಿದ್ದು , 15 ದಿನಗಳ ಕಾಲ ಉತ್ಪನ್ನಗಳ ಪ್ರದರ್ಶನ ಹಾಗೂ …

Read More »

ಜಾತ್ರಾ ಮಹೋತ್ಸವಕ್ಕೆ ಮುನೇನಕೊಪ್ಪ ಚಾಲನೆ

l ನವಲಗುಂದ : ತಾಲೂಕಿನ ಆರೇಕೂರಟ್ಟಿ ಗ್ರಾಮದಲ್ಲಿನ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ಸಚಿವ ಎಸ್ಪಿ ಮುನೇನಕೊಪ್ಪ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರಿಗೆ ಸನ್ಮಾನ ಮಾಡಿದರು . ಶ್ರೀ ಶಿವಭಸವ ಮಾಹಾಸ್ವಾಮಿಗಳಿಂದ ಆಶಿರ್ವಾದ ಸಚಿವರು ಆರ್ಶಿವಾದ ಪಡೆದರು . ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ದಾನಪ್ಪ ಗೌಡ , ಕೆಎಂಸಿ ನಿರ್ದೇಶಕ ರಾಜೂ ಕಂಪ್ಲಿ ಮತ್ತಿತರರು ಉಪಸ್ಥಿತರಿದ್ದರು .

Read More »

38 ಇನ್ಸ್‍ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಜಾರಿ

ಬೆಂಗಳೂರು :ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಪೊಲೀಸ್ ಠಾಣೆಗಳ 37 (ಸಿವಿಲ್) ಇನ್ಸ್‍ಪೆಕ್ಟರ್‍ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ ಸ್ಪೆಕ್ಟರ್ ಮುಹಮ್ಮದ್ ಎಂ.ಎ.-ಪಿಟಿಎಸ್ ಥಣಿಸಂದ್ರ, ಅಂಬರೀಷ್-ಹೊಸಕೋಟೆ ಬೆಸ್ಕಾಂ, ಶಿವನಗೌಡ-ತೀರ್ಥಹಳ್ಳಿ ಪೊಲೀಸ್ ಠಾಣೆ, ಕೊಟ್ರೇಶ್-ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ವೆಂಕಟಾಚಲಯ್ಯ-ಜಾಲಹಳ್ಳಿ ಪೊಲೀಸ್ ಠಾಣೆ, ಸತ್ಯನಾರಾಯಣ ಸಿಟಿ -ಕೆಪಿಸಿಟಿ ಎಸ್‍ಬಿ ಬೆಂಗಳೂರು ಸೇರಿ 37 ಇನ್ಸ್‍ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಲಾಗಿದೆ. ಮತ್ತೊಂದೆಡೆ, ವರ್ಗಾವಣೆಯಾದರೂ ವರದಿ ಮಾಡಿಕೊಳ್ಳದ 38 ಇನ್ಸ್‍ಪೆಕ್ಟರ್ ಗಳಿಗೆ ವಿವರಣೆ ನೀಡುವಂತೆ …

Read More »

ರಸ್ತೆಯ ಮಧ್ಯೆದಲ್ಲಿ ಹೊತ್ತು ಉರಿದಿದ್ದ ಬಿಎಂಟಿಸಿ ಬಸ್‌ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

ಬೆಂಗಳೂರು: ನಡುರಸ್ತೆಯಲ್ಲಿ ಹೊತ್ತು ಉರಿದಿದ್ದ ಬಿಎಂಟಿಸಿ ಬಸ್‌ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಘಟನೆಗೆ ಟೆಕ್ನಿಕಲ್ ಎಡವಟ್ಟೇ ಕಾರಣ ಅಂತಿದ್ದ ಬಿಎಂಟಿಸಿ ಈಗ ಉಲ್ಟಾ ಹೊಡೆದಿದೆ. ನಿಗಮದಿಂದ 5 ಸಿಬ್ಬಂದಿಗೆ ಬಿಎಂಟಿಸಿ ನೊಟೀಸ್ ನೀಡಿದೆ. ಸಿಬ್ಬಂದಿಯ ಕರ್ತವ್ಯ ಲೋಪವೇ ಈ ಘಟನೆಗೆ ಕಾರಣ ಎಂದಿದೆ. ಈ ಘಟನೆಗೆ ಸೂಕ್ತ ಉತ್ತರ ಕೊಡಬೇಕು, ಇಲ್ಲದಿದ್ದಲ್ಲಿ 13 ಲಕ್ಷ ರೂ ದಂಡ ಕಟ್ಟಬೇಕು ಎಂದು ಸೂಚನೆ ನೀಡಲಾಗಿದೆ.

Read More »