Breaking News

BigTv News

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರಿಗೆ ಕೋವಿಡ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕೋವಿಡ್ ದೃಢಪಟ್ಟ ಕಾರಣದಿಂದಾಗಿ ಹೋಂ ಕ್ವಾರಂಟೈನ್ ಆಗಿರೋದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವಂತ ಅವರು ನನಗೂ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನನ್ನ ಆರೋಗ್ಯ ಚೆನ್ನಾಗಿದ್ದು, ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಂತ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಗಾಗಿ. ಜೊತೆಗೆ ಸ್ವಯಂ ಐಸೋಲೇಷನ್ ನಲ್ಲಿ ಇರುವಂತೆ ಮನವಿ ಮಾಡಿದ್ದಾರೆ.

Read More »

ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಡಿಕೆಶಿ

ಅವತ್ತು ಬ್ರಿಟಿಷರ ವಿರುದ್ಧ ಮೇಕೆದಾಟುಗಾಗಿ ಹೋರಾಟ ನಡೆದಿತ್ತು. ಇವತ್ತು ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ನಡೀತಾ ಇದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಇಲ್ಲಿರೋ ಎಲ್ಲರ ವಿಡಿಯೋ, ಅಡ್ರೆಸ್ ಕಳುಹಿಸಿಕೊಡ್ತೀನಿ. ಎಸ್​​ಪಿಗಳೇ, ಗೃಹಸಚಿವರೇ ನಿಮಗೆ ತಾಕತ್ ಇದ್ರೆ ಕ್ರಮ ತಗೊಳ್ಳಿ ಅಂತ ಸವಾಲ್ ಎಸೆದ್ರು.. ಯಾಕಂದ್ರೆ ನಿಮ್ಮ ನಿರ್ಬಂಧವೇ ಅನ್ಯಾಯ.. ಸಂವಿಧಾನಕ್ಕೆ ವಿರುದ್ಧವಾಗಿದ್ದಾಗಿದೆ. ಹೀಗಾಗಿ ಅದಕ್ಕೆಲ್ಲಾ ಹೆದರೋ ಮಕ್ಕಳು ನಾವಲ್ಲ ಅಂತ ಹೇಳಿದ್ದಾರೆ. ಜೊತೆಗೆ …

Read More »

ಡಿಕೆಶಿಗೆ ಯೋಗೇಶ್ವರ್‌ ಟಾಂಗ್‌

ಬೆಂಗಳೂರು : ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ವರಿಷ್ಟರು ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತಾರೋ ಅಲ್ಲಿಂದ ಸ್ಪರ್ಧೆಮಾಡುವುದಕ್ಕೆ ಸಿದ್ದನಿದ್ದೇನೆ. ಒಂದು ವೇಳೆ ಕನಕಪುರದಿಂದ ಸ್ಪರ್ಧೆ ಮಾಡು ಎಂದರೂ ಸ್ಪರ್ಧಿಸಲು ನಾನು ಸಿದ್ಧ ಎಂದು ಹೇಳುವ ಮೂಲಕ ಮೇಲ್ಮನೆ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಟಾಂಗ್‌ ನೀಡಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

Read More »

ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್

ಬೆಳಗಾವಿ : ಮಹಾರಾಷ್ಟ್ರದಲ್ಲಿ ಪೊಲೀಸರು ಪ್ರತಿ ವಾಹನವನ್ನೂ ತಪಾಸಣೆಗೆ ಒಳಪಡಿಸಿದ ನಂತರವೇ ರಾಜ್ಯ ಪ್ರವೇಶಿಸಲು ಅನುವು ಮಾಡಿಕೊಡುತ್ತಿದ್ದಾರೆ.ಕೋವಿಡ್ ಪ್ರಕರಣಗಳು ಹೆಚ್ಚಳಗೊಂಡಿದ್ದು ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಇದೆ. ಬೆಳಗಾವಿ ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ, ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಚೆಕ್​ಪೋಸ್ಟ್​ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.

Read More »

ಕ್ರೀಡೆ ಏಕಾಗ್ರತೆ ಹಾಗೂ ಸ್ವಾಸ್ಥ್ಯಚಿತ್ತದಿಂದ ಕೆಲಸ ಮಾಡಲು ಸಹಕಾರಿ

ಹುಬ್ಬಳ್ಳಿ: ಪೊಲೀಸ್ ಇಲಾಖೆ ಕ್ರೀಡೆಗಳನ್ನು ಆಡಲು ಅವಕಾಶ ನೀಡಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಕ್ರೀಡೆ ಏಕಾಗ್ರತೆ ಹಾಗೂ ಸ್ವಾಸ್ಥ್ಯಚಿತ್ತದಿಂದ ಕೆಲಸ ಮಾಡಲು ಸಹಕಾರಿ. ಒಲಂಪಿಕ್ ಕ್ರೀಡಾ ಕೂಟದಲ್ಲಿ ಒಂದು ನಿಮಿಷದ ಸಾಧನೆ ತೋರಲು ಹಲವು ವರ್ಷಗಳ ಪ್ರಯತ್ನಬೇಕು. ಜನರ ಸುರಕ್ಷತೆಯ ಜವಬ್ದಾರಿ ಪೊಲೀಸರ ಹೆಗಲ ಮೇಲಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಉಮೇಶ ಎಂ ಅಡಿಗ ಹೇಳಿದರು. ನಗರದ ಹೊಸ ಸಿ.ಆರ್. ಮೈದಾನದಲ್ಲಿಂದು ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ …

Read More »

ಮಕ್ಕಳ್ಳಿಗೆ ಕೋವಿಡ್ ಲಸಿಕೆ : 3 ನೇ ಸ್ಥಾನದಲ್ಲಿ ಬೀದರ್

ಬೀದರ್: ಕೊರೋನಾ ಮತ್ತು ಓಮ್ರಿಕಾನ್ ನಿಯಂತ್ರಣ ಮಾಡಲು ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.ಶಾಲಾ, ಕಾಲೇಜುಗಳಲ್ಲಿನ 15ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆಚಾಲನೆ ನೀಡಿದ್ದು,ಜಿಲ್ಲೆಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಯಾನದ ಮೊದಲ ದಿನವಾದ ಸೋಮವಾರ ಶೇಕಡ 26.76 ರಷ್ಟು ವಿದ್ಯಾರ್ಥಿಗಳು ಮಾತ್ರ ಲಸಿಕೆ ಪಡೆದುಕೊಂಡರು. ಮಕ್ಕಳ ಲಸಿಕಾಕರಣದಲ್ಲಿ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಬೀದರ್‌ ಮೂರನೇ ಸ್ಥಾನದಲ್ಲಿ ಇದೆ.

Read More »

ಪುಂಡಾಟಿಕೆ ಡಿಕೆ ಬ್ರದರ್ಸ ಗಳು ಕಲಿತ ಬಂದ ಕಲೆ

ರಾಮನಗರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಆಗಮಿಸಿದ್ದರು. ಸಿಎಂ ಎದುರಲ್ಲೇ ವೇದಿಕೆಯಲ್ಲಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಸಂಸದ ಡಿ. ಕೆ. ಸುರೇಶ್ ನಡುವಣ ಕಿತ್ತಾಟ ಘಟನೆ ಖಂಡಿನಿಯವಾಗಿದೆ. ಈ ಕುರಿತು ಟ್ಟೀಟರ್ ನಲ್ಲಿ ಪ್ರತಿಕ್ರಿಯಿಸಿದ ಡಾ. ಅಶ್ವಥ ನಾರಾಯಣ, ಇಂದಿನ ಕಾರ್ಯಕ್ರಮದಲ್ಲಿ ಡಿ.ಕೆ. ಸುರೇಶ ಮತ್ತವರ ಗುಂಪು ತೋರಿದ ಗೂಂಡಾ ವರ್ತನೆ ಹಾಗೂ ಅದನ್ನು ಡಿ.ಕೆ. ಶಿವಕುಮಾರ ಅವರು ಸಮರ್ಥಸಿಕೊಂಡು ರೀತಿ …

Read More »

ಬೀಸಿದ ಮೋಸದ ಬೆಲೆಗೆ ಬಿದ್ದ ಹುಬ್ಬಳ್ಳಿ ಗಂಡು

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಂಚನೆ ಮಾಡುವುದು ಹೊಸತೇನೂ ಅಲ್ಲ ಸಾಕಷ್ಟು ಮೋಸದ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಫೇಸ್‌ಬುಕ್‌ ಮೂಲಕ ಯುವಕನನ್ನು ಪರಿಚಿಯಿಸಿಕೊಂಡು ಅಮೆರಿಕದಿಂದ ಬರುತ್ತಿದ್ದೇನೆಂದು ನಂಬಿಸಿ ಯುವತಿ59,200 ರೂ. ವರ್ಗಾಯಿಸಿಕೊಂಡು ಆತನಿಗೆ ನಂಬಿಸಿ ನಂಬಿಸಿ ಕುತ್ತಿಗೆಯನ್ನು ಮುರಿದಿರುವ ಘಟನೆ ನಡೆದಿದೆ. ಇಲ್ಲಿಯ ಶಾಂತಿನಗರದ ನಿಖಿಲ್ ಶಾಹ ಅವರಿಗೆ ಅಶರ್ ಡಾಮಿನ್ ಎಂಬ ಯುವತಿ ಫೇಸ್‌ಬುಕ್ ರಿಕ್ವೆಸ್ಟ್ ಕಳುಹಿಸಿದ್ದಳು. ರಿಕ್ವೆಸ್ಟ್‌ಗೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು. ಬಳಿಕ ನಿಖಿಲ್ ಸ್ನೇಹ ಸಂಪಾದಿಸಿದ …

Read More »

ತಜ್ಞರ ಸಮಿತಿ ಸಲಹೆ ಮೇರೆಗೆ ನಿರ್ಧಾರ : ಹಾಲಪ್ಪ ಆಚಾರ್‌

ಕೊಪ್ಪಳ: ಕೊರೋನಾ ಮತ್ತು   ಓಮಿಕ್ರಾನ್‌ ಉಲ್ಬಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಂದ್ ಮಾಡುವುದಾಗಿ ಚರ್ಚೆ ಮಾಡಲಾಗುತ್ತಿದ್ದು, ಅಂಗನವಾಡಿ ಬಂದ್‌ ಮಾಡುವ ಪ್ರಸ್ತಾಪ ಇಲ್ಲ.  ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ತಜ್ಞರ ಸಮಿತಿ ಅಭಿಪ್ರಾಯ, ಸಲಹೆ ಪಡೆಯಬೇಕಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವ್ಯಾರೂ ವೈದ್ಯರು, ವಿಜ್ಞಾನಿಗಳಲ್ಲ. ತಜ್ಞರ ಸಮಿತಿ ನೀಡುವ ವರದಿ ಮೇಲೆ ನಾವು ನಿರ್ಧಾರ …

Read More »

ಓಮ್ರಿಕಾನ್ ಪತ್ತೆ: ಮನೆಯಲ್ಲಿ ಆರೈಕೆ

ಧಾರವಾಡ: ಜಿಲ್ಲೆಯಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ ಎಂಬುವುದು ಎಲ್ಲರಿಗೂ ಭಯವನ್ನು ಉಂಟಿಸಿದೆ. ಎಲ್ಲರೂ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಮಾಹಿತಿ ನೀಡಿದರು, “ಸೋಂಕಿತ 53 ವರ್ಷದ ಮಹಿಳೆ ಹಾಗೂ 14 ವರ್ಷದ ಬಾಲಕಿಗೆ ಈಗಾಗಲೇ ಅಗತ್ಯ ಚಿಕಿತ್ಸೆ ನೀಡಿ ಆರೋಗ್ಯದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ” .ಸೋಂಕಿತರಿಗೆ ಹೋಂ ಐಸೋಲೇಷ್‍ನ್‍ದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ ಎಂದರು.

Read More »