ಕೊಳ್ಳೇಗಾಲ: ತಾಲ್ಲೂಕಿನ ಟಗರುಪುರ ಮೋಳೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹರಿದು ರಂಗಶೆಟ್ಟಿ ಅವರಿಗೆ ಸೇರಿದ 6 ಕುರಿಗಳು ಸೋಮವಾರ ಸ್ಥಳದಲ್ಲೇ ಮೃತಪಟ್ಟಿವೆ. ರಂಗಶೆಟ್ಟಿ ತಮ್ಮ 19 ಕುರಿಗಳನ್ನು ಕಾಡಿಗೆ ಮೇಯಿಸುವ ಸಲುವಾಗಿ ಹೊರಟ್ಟಿದ್ದ ಈ ವೇಳೆ ರಾಷ್ಟ್ರೀಯ ಹೆದ್ದಾರಿಯನ್ನು ಕುರಿಗಳು ದಾಟುವಾಗ ಮೈಸೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ವೇಗವಾಗಿ ಬಂದು ಕುರಿಗಳ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟವು. ಸ್ಥಳೀಯರು 112ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ …
Read More »ಜಿಂಕೆ ಮಾಂಸ ಮಾರಾಟ: ಬಂಧನ
ಗುಂಡ್ಲುಪೇಟೆ: ತಾಲ್ಲೂಕಿನ ಕೂತನೂರು ಗ್ರಾಮದಲ್ಲಿ ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಂಡ್ಲುಪೇಟೆ ಬಫರ್ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ತಾಲ್ಲೂಕಿನ ಕೂತನೂರು ಗ್ರಾಮದ ಲಕ್ಷ್ಮಣ್(30) ಬಂಧಿತ. ಮಾಹಿತಿ ಅರಿತ ಪೊಲೀಸರು ಮನೆಯ ಪಕ್ಕದ ಹಿತ್ತಲಿನಲ್ಲಿ ಜಿಂಕೆ ಮಾಂಸವನ್ನು ಕತ್ತರಿಸಿ ಮಾರಾಟ ಮಾಡುತ್ತಿದ್ದಾಗ ಅರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಮಾಂಸದ ಜೊತೆಗೆ ಜಿಂಕೆಯ ತಲೆ, ಕಾಲುಗಳು ಸಿಕ್ಕಿವೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಮುಂದಿನ ಕ್ರಮ …
Read More »ನಕಲಿ ಟ್ರೇಡಿಂಗ್ ಆಯಪಿಂದ 100 ಕೋಟಿ ರೂ. ವಂಚನೆ!
ನವದೆಹಲಿ: ನಕಲಿ ಟ್ರೇಡಿಂಗ್ ಮೊಬೈಲ್ ಆಯಪ್ ಹಾಗೂ ವೆಬ್ಸೈಟ್ಅನ್ನು ಸೃಷ್ಟಿಸುವ ಮೂಲಕ ಬರೋಬ್ಬರಿ 100 ಕೋಟಿ ರೂ. ವಂಚಿಸಿದ ಜಾಲವೊಂದನ್ನು ದೆಹಲಿ ಸೈಬರ್ ಪೊಲೀಸರು ಭೇದಿಸಿದ್ದಾರೆ. ಪಹರ್ಗಂಜ್ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಪ್ರಮುಖ ಆರೋಪಿ ಸಾಫ್ಟ್ವೇರ್ ಎಂಜಿನಿಯರ್ ರವಿ ರಾಥೋಡ್ನನ್ನು ಬೆಂಗಳೂರಿನಲ್ಲಿ ಹಾಗೂ ಆತನ ಇಬ್ಬರು ಸಹಚರರನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರವಿ ಹಣದಾಸೆಗೆ ಈ ರೀತಿ ಮಾಡಿದ್ದಾನೆ …
Read More »ಶಿಡ್ಲಘಟ್ಟ: ರೇಷ್ಮೆಗೆ ವಿಷವಿಕ್ಕಿದ ದುಷ್ಕರ್ಮಿಗಳು
ಶಿಡ್ಲಘಟ್ಟ: ತಾಲ್ಲೂಕಿನ ಕನ್ನಮಂಗಲದ ಗಂಗರಾಜು ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸತ್ತಿವೆ. ಹಣ್ಣಾದ ಹಂತದಲ್ಲಿದ್ದ ಒಟ್ಟಾರೆ 150 ಮೊಟ್ಟೆಗಳ ಹುಳುಗಳು ಸತ್ತಿರುವುದರಿಂದ ರೈತರಿಗೆ ನಷ್ಟವಾಗಿದೆ. ಗಂಗರಾಜು ಅವರ ಹಿಪ್ಪುನೇರಳೆ ತೋಟದಲ್ಲಿ ಸೊಪ್ಪಿಗೆ ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದು, ಆ ಸೊಪ್ಪನ್ನು ಹುಳುಗಳಿಗೆ ತಿನ್ನಲು ಹಾಕಿದ್ದರಿಂದ ಸಂಪೂರ್ಣ ಬೆಳೆ ನಾಶವಾಗಿದೆ.ಈ ಹಿಂದೆಯೂ ಕಿಡಿಗೇಡಿಗಳು ತೋಟಕ್ಕೆ ವಿಷ ಹಾಕಿದ್ದರು. ಆಗ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಆರೋಪಿತರನ್ನು …
Read More »ಗಂಗಾವತಿ: 10 ಬೈಕ್ ಕಳ್ಳತನ ಮಾಡಿದ ಆರೋಪಿ ಬಂಧನ
ಗಂಗಾವತಿ: ಕಳೆದ ಒಂದು ವರ್ಷದಲ್ಲಿ 10 ದ್ವಿಚಕ್ರ ವಾಹನ ಕಳ್ಳತನ ( ₹4.50ಲಕ್ಷ ಮೌಲ್ಯ) ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಗಂಗಾವತಿ ನಗರದ ಸಾಯಿನಗರದ ನಿವಾಸಿ ಪ್ರಕಾಶ ಈರಣ್ಣ ತಳವಾರ (41) ಬೈಕ್ ಕಳ್ಳತನ ಮಾಡಿದ ಆರೋಪಿ. ಏ 28 ರಂದು ಗಂಗಾವತಿ ತಾಲ್ಲೂಕಿನ ಬಸಾ ಪಟ್ಟಣ ಗ್ರಾಮದ ಮಲ್ಲಪ್ಪ ಬಸಪ್ಪ ಎಂಬ ವ್ಯಕ್ತಿ ತಮ್ಮ ಮನೆ ಕಳ್ಳತನ ಆಗಿರುವ ಬಗ್ಗೆ ಠಾಣೆಗೆ ದೂರು …
Read More »ಲೋಕಾ ಬಲೆಗೆ ಪಿಐ, ನನಗೆ ಜೀವಭಯ
ಗುರುಮಠಕಲ್: ಪಟ್ಟಣದ ಪೊಲೀಸ್ ಠಾಣೆ ಪಿಐಯನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ ಹಿನ್ನೆಲೆಯಲ್ಲಿ ನನಗೆ ಜೀವಬೆದರಿಕೆ ಕರೆ ಬರುತ್ತಿದ್ದು, ರಕ್ಷಣೆ ನೀಡಬೇಕು ಎಂದು ದೂರುದಾರ ಆನಂದ ಭಜಂತ್ರಿ ಮನವಿ ಮಾಡಿದ್ದಾರೆ. ನಮ್ಮ ಹಿರಿಯರ ಆಸ್ತಿ ವಿವಾದ 1983ರಿಂದ ನಡೆಯುತ್ತಿದ್ದು, ಪೊಲೀಸ್ ಠಾಣೆಯಿಂದ ನೊಂದಿದ್ದೇನೆ. ಇತ್ತೀಚೆಗೆ ಅಟ್ರಾಸಿಟಿ ಕೇಸ್ನಲ್ಲಿ ಪಿಐ ದಿಕ್ಕುತಪ್ಪಿಸಲು ನೋಡಿ ನೊಂದವರಿಂದಲೇ 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು. ನಮ್ಮಂತಹ ಬಡ ಪರಿಶಿಷ್ಟ ಜಾತಿಯವರಿಗೆ ಪಿಐ ಬಹಳಷ್ಟು ತೊಂದರೆ …
Read More »ಆಸ್ತಿ ವಿಚಾರ : ಮಗನಿಂದ ತಂದೆಗೆ ಹಲ್ಲೆ
ಕುಂದಾಪುರ: ಮನೆ ಮಾರಿ ಹಣ ಕೊಡುವಂತೆ ಒತ್ತಾಯಿಸಿ ತಂದೆಯ ಮೇಲೆ ಮಗ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದಿರುವ ಘಟನೆ ಬಳ್ಕೂರಿನಲ್ಲಿ ಸಂಭವಿಸಿದೆ. ಬಳ್ಕೂರಿನ ರಘು ಪೂಜಾರಿ (68) ಹಲ್ಲೆಗೊಳಗಾದವರು. ಅವರ ಪುತ್ರ ನವೀನ್ ಆರೋಪಿ. ರಘು ಬಳ್ಕೂರಿನ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು, ಪುತ್ರ ಹಾಗೂ ಪುತ್ರಿಯ ಮದುವೆಗೆ ಸೊಸೈಟಿಯಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಹರಾಜಿಗೆ ಬಂದಿದ್ದು, ಆಗ ಪುತ್ರಿ ಪ್ರಮೀಳಾ ಅವರು ತಮ್ಮ ಸ್ವಂತ ಹಣದಿಂದ …
Read More »ಜಾಲಹಳ್ಳಿ: ಮನೆ ಬೀಗ ಮುರಿದು ಚಿನ್ನ, ನಗದು ಕಳವು
ಜಾಲಹಳ್ಳಿ: ಸಮೀಪದ ವಂದಲಿ ಗ್ರಾಮದಲ್ಲಿ ಕಳ್ಳರು ಮನೆಯೊಂದರ ಬೀಗ ಮುರಿದು 10 ಗ್ರಾಂ ಚಿನ್ನ, ₹50 ಸಾವಿರ ನಗದು ಕಳವು ಮಾಡಿದ್ದಾರೆ. ಅಲಾಮ್ ಖಾನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಲಾಮ್ ಖಾನ್ ಅವರು ರಾಯಚೂರಿನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರ ಆರೋಗ್ಯ ವಿಚಾರಿ ಸಿಕೊಂಡು ಬರಲು ಹೋಗಿದ್ದರು. ಯಾರೂ ಇಲ್ಲದ್ದನ್ನು ಗಮನಿಸಿ, ಕಳ್ಳರು ಮನೆ ಬೀಗ ಮುರಿದು ಕಳವು ಮಾಡಿದ್ದಾರೆ. ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪಿಎಸ್ಐ ವೈಶಾಲಿ ಝಳಕಿ …
Read More »ಯಾದಗಿರಿ ಪೊಲೀಸ್ ಅಧಿಕಾರಿ ಲೋಕಾಯುಕ್ತ ಬಲೆಗೆ; 1 ಲಕ್ಷ ರೂ. ಸ್ವೀಕರಿಸುತಿರುವಾಗಲೇ ದಾಳಿ
ಯಾದಗಿರಿ: ಇತ್ತೀಚೆಗೆ ಲೋಕಾಯುಕ್ತವು ಪೊಲೀಸ್ ಮೇಲೆ ಜಾಸ್ತಿ ಕಣ್ಣಿಡುತ್ತಿದೆ. ಲಂಚ ಪಡೆಯುತ್ತಿರುವ ಸಂದರ್ಭದಲ್ಲೇ ಲೋಕಾಯಕ್ತ ಕೈಯಲ್ಲಿ ಸಿಕ್ಕಿಬೀಳುವ ಪೊಲೀಸ್ ಸಿಬ್ಬಂದಿ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದೀಗ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೀರಣ್ಣ ದೊಡ್ಡಮನಿ ಲೋಕಾಯುಕ್ತರ ಕೈಯಿಗೆ ಸಿಕ್ಕಿಬಿದ್ದಿದ್ದಾರೆ. ಇವರು ಸುಮಾರು 1 ಲಕ್ಷ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ವೀರಣ್ಣ ದೊಡ್ಡಮನಿ ಅವರು ಕ್ರಿಮಿನಲ್ ಕೇಸ್ವೊಂದರ ತನಿಖೆ ಕೈಗೆತ್ತಿಕೊಂಡಿದ್ದರು. ಆದರೆ ಆರೋಪಿಗಳನ್ನ …
Read More »ಹುಕ್ಕೇರಿ | ಗೋಮಾಂಸ ಅಕ್ರಮ ಸಾಗಾಟ: ಪ್ರಕರಣ ದಾಖಲು
ಬೆಳಗಾವಿ ತಾಲ್ಲೂಕಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಕ್ಕೇರಿ ಮೂಲಕ ಅಕ್ರಮವಾಗಿ ಗೋಮಾಂಸದ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಶ್ರೀರಾಮ ಸೇನೆಯ ಕಾರ್ಯಕರ್ತರು ಕೋರ್ಟ್ ಸರ್ಕಲ್ ಬಳಿ ನಿಗಾ ಇರಿಸಿದ್ದರು. ಈ ವೇಳೆ ಟಾಟಾ ಏಸ್ (ಇಂಟ್ರಾ) ವಾಹನ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಸಂಶಯಗೊಂಡ ಕಾರ್ಯಕರ್ತರು ಗೂಡ್ಸ್ ಗಾಡಿ ಬೆನ್ನತ್ತಿ ರಕ್ಷಿ ಕ್ರಾಸ್ ಬಳಿ ಸಂಜೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





